ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: tarlesubba (Jul 25 2008 - 11:02am)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: tarlesubba (Jul 25 2008 - 11:52am)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: ಸಂಗನಗೌಡ (Jul 25 2008 - 2:17pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: tarlesubba (Jul 25 2008 - 11:52am)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: rasheedgm (Jul 20 2008 - 4:49pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: ಸಂಗನಗೌಡ (Jul 25 2008 - 2:19pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: sathishcv (Jul 20 2008 - 8:40pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: sreekrishna (Jul 18 2008 - 4:01pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: kalpana (Jul 17 2008 - 9:21pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: varunbhatbm (Jul 18 2008 - 5:24am)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: ಸಂಗನಗೌಡ (Jul 17 2008 - 6:30pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: vikashegde (Jul 17 2008 - 3:29pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: ಸಂಗನಗೌಡ (Jul 17 2008 - 6:08pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: varunbhatbm (Jul 17 2008 - 6:05pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: varunbhatbm (Jul 17 2008 - 2:21pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: mahesha (Jul 17 2008 - 12:52pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: roopablrao (Jul 17 2008 - 1:11pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: mahesha (Jul 17 2008 - 1:20pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: roopablrao (Jul 17 2008 - 1:11pm)

RSS:
ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
ನನಗೇನೋ ಒಟ್ಟಾರೆ ವ್ಯವಸ್ಥೆಯಲ್ಲೇ ತಪ್ಪಿದೆ ಅನ್ನಿಸುತ್ತೆ.
ಹೈಫೈ ಇಂಗ್ಲೀಷ್ ಮಾತಾಡಕ್ಕೆ ಬರದಿದ್ರೆ ಅವರನ್ನು ಕಡೆಗಣಿಸೋದು ಸರಿಯಲ್ಲ. ಇಂತಹ ಸ್ಥಿತಿ ಬೆಂಗಳೂರಿನಂತ ಕಡೆ ಜಾಸ್ತಿ.
ನಾನು ಕನ್ನಡದಲ್ಲಿ ಚೆನ್ನಾಗಿ ಮಾತಾಡ್ತೀನಿ, ಬರೀತೀನಿ ಅಂತ ನಮ್ಮ ಶಾಲೆಯಿಂದ ಚರ್ಚೆ, ಕ್ವಿಜ್, ಪ್ರಬಂಧ ಎಲ್ಲಾ ಕಡೆ ನನ್ನನ್ನೇ ಕಳಿಸುತ್ತಿದ್ದರು.
ಯಾಕಂದ್ರೆ ನಮ್ಮ ಸಹಜವಾದ ಭಾಷೆ ಕನ್ನಡ ಆಗಿತ್ತು. ಇಂಗ್ಲೀಷ್ ಮೀಡಿಯಂ ಸ್ಕೂಲುಗಳಲ್ಲೂ ಕೂಡ ಇವೆಲ್ಲಾ ಕನ್ನಡದಲ್ಲೇ ನೆಡೆಯುತ್ತಿತ್ತು.
ಆದ್ದರಿಂದ ನನಗನಿಸುವುದು ಕನ್ನಡ ಮಾಧ್ಯಮದಲ್ಲೇ ಓದಿದರೂ ಕೂಡ ಇಂಗ್ಲೀಷ್ ಮಾತಾಡುವುದೊಂದನ್ನು ಸರಿಯಾಗಿ ಕಲಿಸಿದರೆ ಆಯಿತು ಎಂದು.
ಕನ್ನಡ ಮಾಧ್ಯಮದವರು ಅನವಶ್ಯಕ ಕೀಳರಿಮೆಯಿಂದ ನಲುಗುವಂತೆ ಮಾಡಿರುವುದು ಈ ಸಮಾಜ, ವ್ಯವಸ್ಥೆಯೇ ಹೊರತು ಇನ್ನೇನಲ್ಲ.
ಒಳ್ಳೆಯ ಇಂಗ್ಲೀಷ್ ಮಾತಾಡಿದರೆ ಬುದ್ಧಿವಂತ ಎಂಬ ತಪ್ಪು ತಿಳುವಳಿಕೆಯೂ ಕಾರಣ ಇದಕ್ಕೆ.
ಈಗ ನೋಡಿ, ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಜೊತೆ ಪುಸ್ಸಿ ಕ್ಯಾಟ್ ಕಲಿಸುವ ಬದಲು ಪುಸ್ಸಿ ಕ್ಯಾಟ್ ಜೊತೆಗೆ ಬೆಕ್ಕೆ ಬೆಕ್ಕೆ ಕಲಿಸುವಂತಾಗಿದೆ.
ಮಕ್ಕಳಿಗೆ ಬೆಕ್ಕು ಅಂದರೆ ಕ್ಯಾಟ್ ಅಂದರೇ ಅರ್ಥಾಗೋದು, ಅಂದರೆ ಮೊದಲು ಕ್ಯಾಟ್ ಕಲಿತಾರೆ ನಂತರೆ ಬೇಕೆಂದರೆ ಬೆಕ್ಕು ಕಲಿಸಬೇಕು.
ಎಲ್ಲ ತಂದೆ ತಾಯಂದಿರೂ ರೂಪಕ್ಕನ ತರ ಮಕ್ಕಳನ್ನು ಕನ್ನಡಿಗರಾಗಿ ಬೆಳೆಸೋರು ಇರೋಲ್ಲ. ಆದ್ದರಿಂದ ಕ್ರಮೇಣ ಎಲ್ಲರ ಮನೆಗಳಲ್ಲಿ ಕನ್ನಡ ಬರೀ ಮಾತಾಡುವ(ಅದರಲ್ಲೂFM ಕನ್ನಡ) ಮಕ್ಕಳನ್ನು ಮುಂದಿನ ಪೀಳಿಗೆಯಲ್ಲಿ ಕಾಣಬಹುದಾಗಿದೆ. ಓದೋದು ಬರೆಯೋದು ಕೇಳುವಂತಿಲ್ಲ. ಅವರಿಗೆ ಕನ್ನಡವೂ ಸರಿಯಾಗಿ ಗೊತ್ತಿರೋಲ್ಲ, ತನ್ನದು ಕನ್ನಡ ’ಎತ್ತಿನಿಕ್ಕು’ ಅಂತನೂ ಗೊತ್ತಿರಲ್ಲ.
*************************
http://vikasavada.blogspot.com/
**************************