ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ!
- ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: ಚೈತನ್ಯ ಎಸ್ (Jul 18 2008 - 6:25pm)
- ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: Aravind M.S (Jul 18 2008 - 1:28pm)
- ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: shashikannada (Jul 18 2008 - 11:08am)
- ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: roshan_netla (Jul 18 2008 - 2:54pm)

RSS:
ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ!
ಮಾನ್ಯರೇ,
ನಮಸ್ಕಾರ. ನಿಮ್ಮ ಲೇಖನ ಚೆನ್ನಾಗಿದೆ. ಆದರೆ, "ಕಳೆದ ಚುನಾವಣೆಗಳಲ್ಲಿ ಸರ್ಕಾರ ರಚಿಸುವಷ್ಟು ಬಹುಮತವಿಲ್ಲದೆ ಒದ್ದಾಡುತ್ತಿದ್ದಾಗ ಬೆಂಬಲ ನೀಡಿ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಲು ಸಹಕರಿಸಿದ ಎಡ ಪಕ್ಷಗಳ ಸ್ನೇಹಕ್ಕಿಂತ, ಈಗ ತನ್ನ ಅಧಿಕಾರಾವಧಿ ಮುಗಿಯುವ ಹೊತ್ತಿನಲ್ಲಿ ಮನಮೋಹನ ಸಿಂಗರಿಗೆ ಅಮೆರಿಕಾದ ಅಧ್ಯಕ್ಷ ಬುಷ್‌ರೊಡನೆಯ ವೈಯುಕ್ತಿಕ ಸ್ನೇಹವೇ ಹೆಚ್ಚು ಪವಿತ್ರವೆನಿಸತೊಡಗಿದೆ!" ಎಂದು ಹೇಳಿದ್ದೀರಿ. ಅದರರ್ಥ ಎಡಪಕ್ಷಗಳು ಮಾಡುತ್ತಿರುವುದು ಸರಿ ಎನ್ನುವುದು ನಿಮ್ಮ ಅರ್ಥವೇ? ಮಾಜಿ ರಾಷ್ಟ್ರಪತಿ, ವಿಜ್ಞಾನಿ ಅಬ್ದುಲ್ ಕಲಾಂ ಒಳಗೊಂಡಂತೆ ಅನೇಕ ಚಿಂತಕರು ಅಣು ಒಪ್ಪಂದವನ್ನು ಬೆಂಬಲಿಸುತ್ತ, ಎಡಪಕ್ಷಗಳ ಬೂಟಾಟಿಕೆ ರಾಜಕಾರಣದ ಬಗ್ಗೆ ಟೀಕೆ ಮಾಡುತ್ತಿರುವಾಗ ನೀವು ಹೇಳುತ್ತಿರುವುದು ಎಷ್ಟು ಸಮಂಜಸ?ನನಗೆ ಇದರ ಬಗ್ಗೆ ವಿವರವಾದ ಜ್ಞಾನ ಇರದಿದ್ದರೂ, ನಾನು ಗ್ರಹಿಸಿರುವ ಹಾಗೆ ಈ ಒಪ್ಪಂದದಿಂದ ಜಾಗತಿಕವಾಗಿ ಹಾಗೂ ದೇಶೀಯವಾಗಿ ನಮ್ಮ ದೇಶಕ್ಕೆ ಲಾಭವಿದೆ ಎಂದು ಭಾವಿಸುತ್ತೇನೆ. ಬುಶ್ ಆಡಳಿತವನ್ನ, ನಿಲುವು, ಧೋರಣೆಗಳನ್ನ ವಿರೋಧಿಸಬಹುದಾದರೂ, ಈ ಒಪ್ಪಂದವನ್ನ ವಿರೋಧಿಸುವುದು ಸರಿಯೇ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ! ಈ ಒಪ್ಪಂದವನ್ನ ವಿರೋಧಿಸುವುದಕ್ಕಾಗಿ ಕೋಮುವಾದಿ ಪಕ್ಷವಾದ ಬಿಜೆಪಿಯ ಜತೆ ಕೈಜೋಡಿಸಲು ಸಿದ್ಧವಾಗಿರುವ "ಸೋ ಕಾಲ್ಡ್ ಸೆಕ್ಯುಲರ್" ಎಡಪಕ್ಷಗಳ ವರ್ತನೆ ವಿರೋಧಾಭಾಸಗಳಿಂದ ಕೂಡಿಲ್ಲವೇ? ಅದಕ್ಕಾಗಿ ಎಡಪಕ್ಷಗಳು ತಮ್ಮಲ್ಲಿಯೇ ಭಿನ್ನಮತವನ್ನು ಎದುರಿಸುತ್ತಿಲ್ಲವೇ? ತಾವು ದಯಮಾಡಿ ಈ ಕುರಿತು ವಿವರಿಸುತ್ತೀರಾ ಎಂದು ವಿನಯಪೂರ್ವಕವಾಗಿ ಕೋರುತ್ತೇನೆ.
ವಿಶ್ವಾಸದಿಂದ,
ಶಶಿ