ಉ: ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ:
- ಉ: ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ: By: shashikannada (Jul 18 2008 - 11:52am)
- ಉ: ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ: By: ಸಂಗನಗೌಡ (Jul 14 2008 - 10:09pm)
- ಉ: ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ: By: sreekrishna (Jul 15 2008 - 12:41pm)
- ಉ: ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ: By: ರಾಮಕುಮಾರ್ (Jul 14 2008 - 7:48pm)
- ಉ: ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ: By: Aravind M.S (Jul 14 2008 - 4:32pm)

RSS:
ಉ: ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ:
ಎಲ್ಲ ಕನ್ನಡಾಭಿಮಾನಿಗಳು ಕನ್ನಡ ಮಾಧ್ಯಮ ಶಿಕ್ಷಣವನ್ನ ಬೆಂಬಲಿಸುತ್ತಾ, ಆಂಗ್ಲ ಮಾಧ್ಯಮ ಶಿಕ್ಷಣವನ್ನ ತಿರಸ್ಕರಿಸುತ್ತಾ ಇರೋದು ಕನ್ನಡದ ಮಟ್ಟಿಗೆ ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ, "ಕನ್ನಡ ಮಾಧ್ಯಮ ಶಿಕ್ಷಣ" ಎಷ್ಟು ಚೆನ್ನಾಗಿದೆ ಎಂದರೆ ಆ ಕನ್ನಡಾಂಬೆಗೇ ಪ್ರೀತಿಯಾಗಬೇಕು! ಇದರರ್ಥ ಇಂಗ್ಲೀಶ್ ಶಿಕ್ಷಣ ಚೆನ್ನಾಗಿದೆ ಎಂದರ್ಥವಲ್ಲ! ಕನ್ನಡ ಮಾಧ್ಯಮದ ಪ್ರಶ್ನೆ ಎದುರಾದಾಗಲೆಲ್ಲ ಕನ್ನಡ ಮಾಧ್ಯಮ ಬೆಂಬಲಿಸುವ ಎಷ್ಟು ಜನರ ಮಕ್ಕಳು ಅದೇ ಮಾಧ್ಯಮದಲ್ಲಿ ಓದಿದ್ದಾರೆ ಎನ್ನುವ ನೈತಿಕ ಪ್ರಶ್ನೆ ಧುತ್ತನೆ ಎದುರಾಗುತ್ತದೆ! "ಹೇಳೋದು ವೇದಾಂತ, ತಿನ್ನೋದು ಬದನೇಕಾಯಿ" ಅನ್ನೋ ರೀತಿ ಆಗ್ಬಾರದಲ್ವ?
ನಾನು ಓದಿದ್ದು ಆಂಗ್ಲ ಮಾಧ್ಯಮದಲ್ಲೇ. ಆದರೆ, ನನ್ನ ಕನ್ನಡಾಭಿಮಾನ, ಕನ್ನಡ ತಿಳುವಳಿಕೆ ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದಿರುವ ನನ್ನ ಒಡಹುಟ್ಟಿದವರಿಗಿಂತ, ಸ್ನಾತಕೋತ್ತರ ಪದವಿ ಪಡೆದಿರುವ ನನ್ನ ಎಷ್ಟೋ ಮಂದಿ ಗೆಳೆಯರಿಗಿಂತ ಚೆನ್ನಾಗಿಯೇ ಇದೆ. ಮುಖ್ಯವಾಗಿ, ಮೂಲ ಕನ್ನಡ ಶಿಕ್ಷಣ, ಅಂದರೆ, ಕನ್ನಡದಲ್ಲಿ ಯೋಚಿಸುವ, ಬರೆಯುವ, ಓದುವ, ಮಾತನಾಡುವ ಕಲೆಯನ್ನ ಸಿದ್ಧಿಸಿಕೊಳ್ಳುವ ಹಾಗೆ ಮಾಡಬೇಕಾದ ಜವಾಬ್ದಾರಿ ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲಿದೆ. ನಮ್ಮ ಕನ್ನಡ ಸಾಹಿತ್ಯದ ಮೇರು ಪರ್ವತಗಳೆಲ್ಲ ಇಂಗ್ಲೀಶ್ ಸಾಹಿತ್ಯವನ್ನು ವ್ಯಾಸಂಗ ಮಾಡಿದವರೇ. ಇದರರ್ಥ ಕನ್ನಡ ಕೀಳು, ಇಂಗ್ಲೀಶ್ ಮೇಲು ಎನ್ನುವ ಅರ್ಥವಲ್ಲ. ಮುಖ್ಯವಾಗಿ, ಕನ್ನಡದಲ್ಲಿ "ಯೋಚಿಸುವುದನ್ನು" ನಾವು ಕಲಿಯಬೇಕಿದೆ, ಕಲಿಸಬೇಕಿದೆ. ಮೂಲಭೂತವಾಗಿ, ನಮ್ಮ ಕನ್ನಡ ಶಿಕ್ಷಣ ವ್ಯವಸ್ಥೆಯಲ್ಲಿನ ದೋಷವನ್ನ ಸರಿಪಡಿಸಬೇಕಿದೆಯಷ್ಟೆ. ಈಗಲಾದರೂ ನಾವೆಲ್ಲ "ಕನ್ನಡಿಗರು" ಎಚ್ಚೆತ್ತುಕೊಳ್ಳಬೇಕಿದೆ. ಏಕೆಂದರೆ, ಇದು ನಮ್ಮೆಲ್ಲರ ಕರ್ತವ್ಯ, ಧರ್ಮ.
ಸಿರಿಗನ್ನಡಂ ಗೆಲ್ಗೆ
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/