ಉ: ನನ್ನಿ
- ಉ: ನನ್ನಿ By: madhava_hs (Jul 23 2008 - 4:29pm)
- ಉ: ನನ್ನಿ By: mahesha (Jul 23 2008 - 4:53pm)
- ಉ: ನನ್ನಿ By: srinivasps (Jul 21 2008 - 1:13pm)
- ಉ: ನನ್ನಿ By: cmariejoseph (Jul 21 2008 - 5:17pm)
- ಉ: ನನ್ನಿ By: mahesha (Jul 22 2008 - 9:12am)
- ಉ: ನನ್ನಿ By: srinivasps (Jul 23 2008 - 12:46pm)
- ಉ: ನನ್ನಿ By: mahesha (Jul 23 2008 - 3:17pm)
- ಉ: ನನ್ನಿ By: kannadakanda (Jul 23 2008 - 3:37pm)
- ಉ: ನನ್ನಿ By: mahesha (Jul 23 2008 - 3:39pm)
- ಉ: ನನ್ನಿ By: srinivasps (Jul 23 2008 - 3:29pm)
- ಉ: ನನ್ನಿ By: mahesha (Jul 23 2008 - 3:38pm)
- ಉ: ನನ್ನಿ By: srinivasps (Jul 23 2008 - 8:14pm)
- ಉ: ನನ್ನಿ By: mahesha (Jul 23 2008 - 3:38pm)
- ಉ: ನನ್ನಿ By: kannadakanda (Jul 23 2008 - 3:37pm)
- ಉ: ನನ್ನಿ By: mahesha (Jul 23 2008 - 3:17pm)
- ಉ: ನನ್ನಿ By: cmariejoseph (Jul 22 2008 - 7:49pm)
- ಉ: ನನ್ನಿ By: mahesha (Jul 23 2008 - 9:18am)
- ಉ: ನನ್ನಿ By: srinivasps (Jul 23 2008 - 12:46pm)
- ಉ: ನನ್ನಿ By: Sunil Jayaprakash (Jul 21 2008 - 11:17pm)
- ಉ: ನನ್ನಿ By: cmariejoseph (Jul 22 2008 - 7:35pm)
- ಉ: ನನ್ನಿ By: kannadakanda (Jul 21 2008 - 11:49pm)
- ಉ: ನನ್ನಿ By: mahesha (Jul 22 2008 - 9:12am)
- ಉ: ನನ್ನಿ By: cmariejoseph (Jul 21 2008 - 5:17pm)

RSS:
ಉ: ನನ್ನಿ
ಹ್ಮ್. ಮರಿಜೋಸೇಫರೆ, "ನನ್ನಿ" ಪದವನ್ನು "ಧನ್ಯವಾದ"ಕ್ಕೆ ಸಮನಾಗಿ ಬಳಸುತ್ತಿರುವುದಕ್ಕೆ, ನಾನು ಮಹೇಶ ಮುಂತಾದವರು ತಮಿಳಿನ ಮೊರೆಹೋಗಿಲ್ಲ.
ಮರಿಜೋಸೇಫರು ಬರೆದದ್ದು
ಈಗ ಹೇಳಿ, ಒಬ್ಬರಿಗೆ ನಾವು thanks ಹೇಳುವಾಗ ನಮ್ಮ ಮನಸ್ಸಿನಲ್ಲಿ ಸತ್ಯವಂತಿಕೆ, ಅಕ್ಕರೆ, ಪ್ರೀತಿ ಇರೋದಿಲ್ವೇ ? ಇದಕ್ಕೂ ನನ್ನಿಗೂ ತಮಿಳಿಗೂ ನಂಟು ಹಾಕಬೇಡಿ. ಧನ್ಯವಾದಕ್ಕೆ "ನನ್ನಿ" ಬಳಸುವುದಕ್ಕೂ ಮೊದಲು ಸವಿಯೊದಗು (ಸವಿ + ಒದಗು - ಸರಿಯಾದ ಸಮಯದಲ್ಲಿ ನಮಗೆ ಒದಗಿಬಂದ ಸಹಾಯ ನಮಗೆ ಸಂತೋಷವನ್ನುಂಟುಮಾಡಿದಾಗ ನಮ್ಮಲ್ಲಿರಬಹುದಾದ ಭಾವನೆ - ಸವಿಯೊದಗು) ಬಳಸ್ತಾ ಇದ್ವಿ. ಆದರೆ ಆಮೇಲೆ ಒಂದು ದಿನ, "ಅನ್ನವನು ಇಕ್ಕುವದು, ನನ್ನಿಯನು ನುಡಿಯುವುದು" - ಇದರಿಂದ ಆರಂಭವಾದ ಒಂದು ಚರ್ಚೆ, ನಮಗೆ "ನನ್ನಿ ಅಂದರೆ ಬರೀ ಸತ್ಯ ಅಷ್ಟೇ ಅಲ್ಲ, ಪ್ರೀತಿ, ವಿಶ್ವಾಸ, ಮಮತೆ" ಅಂತಲೂ ಅರಿತಗಳಿವೆ ಎಂಬುದು ತಿಳಿಯಿತು. ಹಾಗಾಗಿ, ಧನ್ಯತಾ ಭಾವನೆಯನ್ನು ಪ್ರಕಟಪಡಿಸುವಾಗಲೂ ಬಳಸಬಹುದು ಎಂದೆಣಿಸಿ ಬಳಸುತ್ತಿದ್ದೇವೆ. ಇದಕ್ಕೆ, ಸರಿಯಾಗಿ ಮಲಯಾಳದಲ್ಲಿ "ನನ್ನಿ" ಈಗಲೂ ಇದೆ ಎಂಬುದು, ಅಥ್ವಾ ತಮಿಳಿನಲ್ಲಿ ನಣ್ರಿ ಇರುವುದು, ನಮ್ಮ ಮಟ್ಟಿಗೆ ಹೇಳುವುದಾದರೆ ಅದು ಕಾಕತಾಳೀಯವಾಗಿ ನಂಟಾದದ್ದೇ ಹೊರತು, ಅದನ್ನೇ ಆಧಾರವಾಗಿ ಪರಿಗಣಿಸಿಲ್ಲ. ಆ ಪದಕ್ಕೆ ಆ ಅರ್ಥವನ್ನು ಹುಟ್ಟಹಾಕಲು ಬರೀ ಕನ್ನಡದ ನೆಲೆಗಟ್ಟನ್ನಷ್ಟೇ ಬಳಸಿದ್ದೇವೆ.
ಹಳೆಯ ನಿಘಂಟುಗಳಲ್ಲಿ ಇಲ್ಲದಿರಬಹುದು, ಆದರೆ ನಿಘಂಟುಗಳೇನು ನಿಂತ ನೀರಾಗ ಬೇಕಿಲ್ಲವಲ್ಲ, ಹಳೆ ಪದಗಳನ್ನು ತಪ್ಪಲ್ಲದ ರೀತಿಯಲ್ಲಿ ಹೊಸ ಅರ್ಥದಲ್ಲಿ ಬರುವಂತೆ ನಾವೇಕೆ ಬಳಸಬಾರದು.