ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ನನ್ನ ಲೋಕಲ್ ಅನುಭವ ಕೇಳಿ; ಆದರೆ ಯಾರಿಗೂ ಹೇಳ್ಬೇಡಿ. ನೀವೂ ಕಣ್ಣು ಬಿಡಬೇಡಿ

April 10, 2006 - 7:06pm — shreekant.mishrikoti

ನನ್ನ ಲೋಕಲ್ ಅನುಭವ ಕೇಳಿ; ಆದರೆ ಯಾರಿಗೂ ಹೇಳ್ಬೇಡಿ. ನೀವೂ ಕಣ್ಣು ಬಿಡಬೇಡಿ

shreekant.mishrikoti's picture

ಈಗ ನನ್ನ ಲೋಕಲ್ ಅನುಭವ ಕೇಳಿ; ಆದರೆ ಯಾರಿಗೂ ಹೇಳ್ಬೇಡಿ. ನೀವೂ ಕಣ್ಣು ಬಿಡಬೇಡಿ ಮತ್ತೆ.

ನಮ್ಮ ಕಛೇರಿ ೧೧ ಗಂಟೆಗೆ ಶುರುವಾಗುತ್ತದೆ. ಕೆಲಸ ಅಷ್ಟಕ್ಕಷ್ಟೆ. ಬಾಸೂ ಒಳ್ಳೆಯವರು , ದೇವರ ಹಾಗೆ ತಮ್ಮ ಗರ್ಭಗುಡಿಯಲ್ಲಿ ಕಲ್ಲಾಗಿ ಇರುವರು , ಸುಮಾರು ೩ ತಿಂಗಳಿಗೊಮ್ಮೆ ಮಾತಾಡಿಸುವರು , ಯಾರ ತಂಟೆಗೆ ಬರುವರಲ್ಲ . ಅವರ್‍ಏ ಹಾಗಿದ್ದ ಮೇಲೆ ಉಳಿದವರೂ ಅಂತೆಯೇ ಅಲ್ಲವೇ ? ಕಿರಿಕಿರಿ ಮಾಡಬಹುದಾದವರೂ ತೆಪ್ಪಗೆ ಇರುತ್ತಾರೆ. ಮುಂಬೈಯಲ್ಲಿ ಇನ್ನೊಂದು ಪದ್ಧತಿಯೆಂದರೆ. ನೀವು ಯಾರ ತಂಟೆಗೆ ಹೋಗದಿದ್ದರೆ ಯಾರೂ ನಿಮ್ಮ ತಂಟೆಗೆ ಬರುವದಿಲ್ಲ. ಅವರಿಗೆ ತೊಂದರೆಯಾಗದಿದ್ದರೆ ಆಯಿತು. ನೀವು ಏನಾದರೂ ಮಾಡಿಕೊಳ್ಳಿ. ತಲೆ ಕೆಡಿಸಿಕೊಳ್ಳುವದಿಲ್ಲ.

ಹೀಗಾಗಿ ನಾನು ಮುಂಜಾನೆ ೯-೩೦ ಹೊತ್ತಿಗೆ ನನ್ನ ಈ-ಟೀವಿಯಲ್ಲಿ ಯಾವ ಕನ್ನಡ ಸಿನೆಮ ಇದೆಯೆಂದು ನೋಡಿಕೊಂಡು ( ಯಾಕೆಂದರೆ ರಾತ್ರಿ ೨.೩೦ಗೆ ಪುನರ್ಪ್ರಸಾರ ಆಗುತ್ತದೆ . ಎದ್ದು ನೋಡಬೇಕೋ ಬೇಡವೋ ನಿರ್ಧರಿಸಲು ತಿಳಿದುಕೊಳ್ಳಬೇಕಲ್ಲ ? ) ಹೆಂಡತಿಯಿಂದ ' ಎಲ್ಲರೂ ಆಫೀಸು ತಲುಪಿದರು ; ನೀವಿನ್ನೂ ಇಲ್ಲೇ ಇದ್ದೀರಿ ; ಯಾರಾದರೂ ನೋಡಿದರೆ ಚೆನ್ನಾಗಿರಲ್ಲ ' ಅಂತ ಬೈಸಿಕೊಂಡು ಮನೆಯಿಂದ ಹೊರ ಹಾಕಿಸಿಕೊಂಡು ಮನೆ ಹತ್ತಿರದ ಸ್ಟಾಪಿಗೆ ಬರುತ್ತೇನೆ . ಹತ್ತಿರದಿಂದಲೇ ಹೊರಡುವ ಅನೇಕ ಬಸ್ಸುಗಳು ಒಂದರ ಹಿಂದೆ ಒಂದು , ಖಾಲಿಯಾಗಿಯೇ ಬರುವದರಿಂದ ನಿಧಾನಕ್ಕೆ ಕಾಲೆಳೆದುಕೊಂಡು ಬರುತ್ತೇನೆ . ಸ್ವಲ್ಪ ಅವಸರಿಸಿದರೆ ಸಿಗಬಹುದಾದ ಬಸ್ಸಿಗೆ ಓಡುವದಿರಲಿ , ಬೇಗ ಬೇಗ ಓಡುವದೂ ಇಲ್ಲ. ಬಸ್ಸು ರೈಲು ನಿಲ್ದಾಣದ ಹತ್ತಿರದ ಬಸ್ ನಿಲ್ದಾಣಕ್ಕೆ ಬರುತ್ತದೆ. ಅವಸರಿಸದೆ ಎಲ್ಲರೂ ಇಳಿದ ಮೇಲೆ ಇಳಿಯಬಹುದು. ನಂತರ ರೈಲು ನಿಲ್ದಾಣಕ್ಕೆ ಬರುವೆ. ಅಲ್ಲಿ ೭-೧೦ ನಿಮಿಷಕ್ಕೆ ಒಂದು ಸ್ಲೋ ರೈಲು ಹೊರಟು ಚರ್ಚ್ ಗೇಟ್ ಗೆ ಬರುತ್ತದೆ . ಪ್ರಾರಂಭ ಅಲ್ಲಿಯೇ ಆದ್ದರಿಂದ ಬಂದು ೫ ನಿಮಿಷ ನಿಂತು ಹೊರಡುತ್ತದೆ . ಆರಾಮವಾಗಿ ಹತ್ತಬಹುದು ಎಲ್ಲರೂ ಹತ್ತಿ ಕುಳಿತುಕೊಂಡ ಮೇಲೂ ನಿಧಾನವಾಗಿ ಹತ್ತಿದರೂ ಸೀಟು ಸಿಗುತ್ತದೆ!. ( ಅದೇ ವೇಗದ ಟ್ರೈನುಗಳು ತುಂಬಿಕೊಂಡೇ ಬರುತ್ತವೆ , ಮೂವತ್ತು ಸೆಕಂಡ್ ಮಾತ್ರ ನಿಲ್ಲುತ್ತವೆ , ಇಳಿಯುವವರೂ ಹತ್ತುವವರೂ ಇರುತ್ತಾರೆ ಮತ್ತು ಎಲ್ಲ ಕಡೆ ನಿಂತು ಬರುವದರಿಂದ , ಸಂಕೋಚದವನೂ , ಅಷ್ಟೊಂದು ಅಗ್ರೆಸ್ಸಿವ್ ಅಲ್ಲದ ನನಗೆ ಅವು ಹೇಳಿದ್ದಲ್ಲ!) . ರೈಲಿನಲ್ಲೂ ಅಷ್ಟೇ . ಅವಸರ ಮಾಡುವದಿಲ್ಲ . ಟ್ರೈನು ಬಿಡುತ್ತಿದ್ದರೆ ಹತ್ತುವದಿಲ್ಲ , ಇನ್ನೊಂದು ಟ್ರೇನು ಬರುತ್ತದೆ ಅಲ್ಲವೆ ? ಜೀವಂ ಭದ್ರಾಣಿ ... ಅಲ್ಲವೆ? ನಮ್ಮಲ್ಲಿ ಒಬ್ಬರು ಟ್ರೇನು ಹತ್ತಲು ಹೋಗಿ ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಈ ಸ್ಲೋ ಟ್ರೈನು ೧೫ ನಿಮಿಷ ಹೆಚ್ಚಿಗೆ ತೆಗೆದುಕೊಂಡರೂ ಪರವಾಗಿಲ್ಲ ; ಸೀಟೂ ಸಿಕ್ಕಿರುತ್ತದೆ , ನಿದ್ದೆ ಮಾಡಬಹುದು ರಾತ್ರಿ ನಿದ್ದೆಗೆಟ್ಟೂ ಟೀವಿ ನೋಡಿದ್ದರೆ ; ಏನಾದರೂ ಓದಬಹುದು . ಬೇಕಾದರೆ ಧ್ಯಾನ ಮಾಡಿ/ಭಜನೆ ಮಾಡಿ . ಏನು ಬೇಕಾದರೂ ಮಾಡಿ . ನಮಗೆ ಬಿಟ್ಟದ್ದು . ಚರ್ಚ್ ಗೇಟು ನಿಲ್ದಾಣ ಕೂಡ ಒಂದು ಕೊನೆಯಾಗಿರುವದರಿಂದ ಸಂಜೆ ಪ್ರಯಾಣವೂ ಬೆಳಗಿನದರ ಹಾಗೆಯೇ . ಐದೂವರೆಗೆ ಕಚೇರಿ ಬಿಟ್ಟು ಏಳೂವರೆಗೆ ಮನೆಗೆ ಬರುತ್ತೇನೆ. ಒಮ್ಮೊಮ್ಮೆ ಹೀಗೆ ಲೆಕ್ಕ ಹಾಕುತ್ತೇನೆ . ಕನ್ನಡ ೧೦೦ ಪುಟ ಒಂದು ದಿನಕ್ಕೆ ಓದಿದರೆ ೩೬೫ ದಿನಕ್ಕೆ ೩೬,೫೦೦ ಪುಟ ಓದಬಹುದು . ನನ್ನ ಕೆಲಸ / ಕಛೇರಿ ಹೀಗೆಯೇ ಮುಂದುವರಿದರೆ ( ಲಕ್ಷಣಗಳು ಹಾಗೇ ಇವೆ!) ಇನ್ನೂ ಹದಿನಾರು ವರ್ಷ ಹೀಗೆಯೇ ಪ್ರಯಾಣ ಮಾಡಿಕೊಂಡು ೩೬೫೦೦*೧೬ =೫೮೪೦೦೦ ಪುಟ ಓದಬಹುದು!

ಒಂದು ಸಲ ನೆರೆಮನೆಯಾತ ಕೇಳಿದರು ಯಾವ ಟ್ರೇನಿಗೆ ಬಂದಿರಿ? ಅಂತ. ' ನನಗೇನು ಗೊತ್ತು? ಸ್ಟೇಷನ್‍ಗೆ ಬಂದಾಗ , ಇದ್ದ ಟ್ರೇನು ಹತ್ತಿ ಬರುವೆ. ೫-೧೦ ನಿಮಿಷಕ್ಕೆ ಒಂದು ಟ್ರೇನಿರುವಾಗ ವಾಚನ್ನಾಗಲೀ ಟ್ರೇನಿನ ಟೈಮನ್ನಗಲೀ ನೋಡುವ ಅಗತ್ಯ ಏನಿದೆ ? ' ಗೊತ್ತಿಲ್ಲ , ಇದ್ದ ಟ್ರೇನಿಗೆ ಬಂದೆ' ಅಂತ ಹೇಳಿದೆ!
'ನಿಮಗೆ ಮುಂಬೈ ನೀರು ಹತ್ತಿಲ್ಲ! ' ಅಂದರು!
' ಬಹುಶ: ಹತ್ತುವದೂ ಇಲ್ಲ!! ' ಅಂದುಕೊಂಡೆ ನನ್ನಲ್ಲೇ!

ನೋಡಿ - ಸ್ವಗತ :- ತಿರುಗ ಹೋಗೋಣು ಬಾರೋ ಶ್ರೀಕಾ http://sampada.net/node/1053

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಲೋಕಲ್ ಅನುಭವ By: tvsrinivas41 (3 replies) April 8, 2006 - 5:29am
  • ನನ್ನ ಲೋಕಲ್ ಅನುಭವ ಕೇಳಿ; ಆದರೆ ಯಾರಿಗೂ ಹೇಳ್ಬೇಡಿ. ನೀವೂ ಕಣ್ಣು ಬಿಡಬೇಡಿ By: shreekant.mishrikoti (Apr 10 2006 - 7:06pm)
    • ಪುಣ್ಯವಂತರು! By: tvsrinivas41 (Apr 10 2006 - 8:22pm)
  • ಲೋಕಲ್ ಟ್ರೇನ್ By: venkatesh (Apr 8 2006 - 1:00pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • vidhata
    ಉ: ನಮ್ಮ ಬಾಳು
    October 8, 2008 - 7:52am
  • shylaswamy
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 7:50am
  • shylaswamy
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 7:38am
  • rameshbalaganchi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 7:22am
  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
ಇನ್ನಷ್ಟು


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator