ನಿನ್ನೆಯ ದಿನ ಬೆಳಗ್ಗೆ ಬ್ಯಾಂಕಿಗೆ ಹೋಗುವಾಗಲೇ, ಇವತ್ತೂ ಏನೂ ಕೆಲಸವಾಗೋಲ್ಲ ಎಂದುಕೊಂಡೇ ಹೋಗಿದ್ದೆನು. ಆದರೇನು ಅಲ್ಲಿ ಹೋಗಿ ನೋಡಿದರೆ, ಎಲ್ಲವೂ ಮಾಮೂಲಿನಂತಾಗಿತ್ತು. ನಮ್ಮ ಬ್ಯಾಂಕಿನ ವಿಭಾಗಗಳಲ್ಲೊಂದಾದ ಎಸ್ಟೇಟ್ ಡಿಪಾರ್ಟ್‍ಮೆಂಟಿನವರ ಕರಾರುವಕ್ಕಾದ ಕೆಲಸದಿಂದ, ಹಿಂದಿನ ದಿನ ಸಂದು ಗೊಂದುಗಳಲ್ಲಿ ತುಂಬಿದ್ದ ನೀರೆಲ್ಲವನ್ನೂ ಸೆಳೆದು, ನೆಲವನ್ನು ಒಣಗಿಸಿದ್ದರು. ವಿದ್ಯುತ್ ಇಲಾಖೆಯವರು ಬಂದು ಎಲ್ಲವೂ ಸರಿಯಾಗಿದೆ ಎಂದು ಅಧಿಕೃತಗೊಳಿಸಬೇಕಿತ್ತಷ್ಟೆ. ಮಧ್ಯಾಹ್ನದ ಊಟದ ವೇಳೆಯವರೆಗೆ ವಿದ್ಯುತ್ ಸಂಪರ್ಕ ಒದಗಿರಲಿಲ್ಲವಾದರೂ, ನಂತರ ವಿದ್ಯುತ್ ಇಲಾಖೆಯವರು ಬಂದು ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದ್ದರು. ಮೊದಲಿಗೆ ದೀಪಗಳು ಹೊತ್ತಿಕೊಂಡವು. ಅದಾದ ಒಂದು ಘಂಟೆಯ ನಂತರ ಕಂಪ್ಯೂಟರ್‌ಗಳು, ಹವಾನಿಯಂತ್ರಣ ಕೆಲಸ ಮಾಡಲು ಪ್ರಾರಂಭವಾಯಿತು. ವಿಭಾಗದಲ್ಲಿರುವ ಎಲ್ಲರಲ್ಲೂ ನವ ಚೈತನ್ಯ ತುಂಬಿದಂತಾಗಿ, ಹೆಚ್ಚಿನ ಕೆಲಸವನ್ನು ಗೊಣಗಾಡದೇ ಮಾಡಿದರು. ಇದರಿಂದ ಎಲ್ಲರ ಮನದಲ್ಲೂ ಆನಂದವೋ ಆನಂದ. ಈಗ ಎಲ್ಲವೂ ಮಾಮೂಲಿನಂತಾಗಿದೆ. ಸ್ವಲ್ಪ ವ್ಯತ್ಯಯವಾಗಿ ನಂತರ ಮಾಮೂಲಾಗಿ ಕೆಲಸ ಪ್ರಾರಂಭವಾದಾಗ ನಮಗಾಗುವ ಆನಂದವೇ ಬೇರೆ.
ಪ್ರತಿನಿತ್ಯ ಉಟ ಮಾಡುವವರಿಗೆ ಊಟದ ಆನಂದ ತಿಳಿಯುವುದಿಲ್ಲ. ಅದೇ ಒಮ್ಮೆ ಉಪವಾಸವಾಗಿ, ಹೊಟ್ಟೆ ಚುರುಗುಟ್ಟಿದ ನಂತರ ಹೊಟ್ಟೆಗೆ ಹಿಟ್ಟು ಬಿದ್ದರೆ ಆಗುವ ಆನಂದವೇ ಬೇರೆ. ಸರ್ವಶಕ್ತನ ಅನುಭವವಾಗಲೂ ಇದರ ಅವಶ್ಯಕತೆ ಇದೆ ಎಂದು ನನಗನ್ನಿಸುತ್ತಿದೆ.
ಎಲ್ಲ ಸರಿ ಹೋಯಿತು
13/05/2006

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net