ಸುನಿಲರೇ,
ನನಗೆನಿಸುವಂತೆ ಕವಿ ಇಲ್ಲಿ ಹೇಳಹೊರಟಿದ್ದು ಆಧ್ಯಾತ್ಮದ ಮಾತನ್ನು:
ಬಹುಶಃ ನನಗೆ ಈ ನಾಲ್ಕು ಸಾಲುಗಳು ಇಷ್ಟವಾಗಲು ಅದೇ ಕಾರಣವಿರಬಹುದು.
ಅಮ್ಮನ ಪ್ರೀತಿಯ ಕಿಮ್ಮತ್ತು
ಮರಣದ ನಂತರ ಗೊತ್ತಾಯ್ತು
ಗೀತೆಯ ಮಾತು ಗೊತ್ತಿತ್ತು
ಆದರೂ ದುಃಖವು ಒಡೆದಿತ್ತು/೨/
ಇಲ್ಲಿ ಆಪ್ತರ ಸಾವಿನ ಮಾತಿದೆ; ಸಾವಿನ ದುಃಖವಿದೆ. ಸಮಾಧಾನಿಸಿಕೊಳ್ಳಲು ಕವಿಗೆ
ತೋಚಿದ್ದು ಗೀತೆಯ ಮಾತು: ಅಂದರೆ ಭಗವದ್ಗೀತೆಯ ಸಾರ; ಅದ್ಭುತ!
ಆ ಗೀತೆಯ ಮಾತು ಇನ್ನೇನೂ ಅಲ್ಲ ಇಷ್ಟೇ: ಆತ್ಮಕ್ಕೆ ಸಾವಿಲ್ಲ!
ನೈನಂ ಛಿಂದಂತಿ ಶಸ್ತ್ರಾಣಿ
ನೈನಂ ದಹತಿ ಪಾವಕಃ
ನಚೈನಂ ಕ್ಲೇದಯಂತ್ಯಾಪೋ
ನ ಶೋಷಯತಿ ಮಾರುತಃ
ಅಂದರೆ:
ಸೀಳದಿದನು ಆಯುಧವು
ಸುಡದು ಇದನು ಬೆಂಕಿ
ತೋಯಿಸದು ನೀರು ಕೂಡಾ
ಇದನೊಣಗಿಸದು ಗಾಳಿ
ಗೀತೆಯ ಮಾತು

ಭಲಾ! ಒಳ್ಳೆಯ ಸಾಲು!
ನಿಮ್ಮವ
ಬೆನಕ