ಹೋರಾಟ
- ವ್ಯಾಕರಣ By: benaka (May 26 2006 - 12:49pm)
- ಕೆಂದೆಳೆನೀರು By: ಮಹೇಶ ಭೋಗಾದಿ (May 26 2006 - 2:02pm)
- ಹೋರಾಟ By: benaka (May 26 2006 - 2:59pm)
- ಮೇಲುದ - ಮೇಲುಡೆ ಇರಬಹುದೇ? By: shreekant.mishrikoti (May 27 2006 - 12:32pm)
- ಭಲೆ ಚದುರರೇ! By: ಮಹೇಶ ಭೋಗಾದಿ (May 26 2006 - 6:42pm)
- ಮಗುಗಳು !! By: benaka (May 26 2006 - 11:22pm)
- ಜ್ಞಾನ ಭಂಡಾರ, By: ahoratra (May 27 2006 - 6:03am)
- ಸಾಹಿತ್ಯ ಭಂಡಾರ By: tvsrinivas41 (May 27 2006 - 6:39am)
- ತಮ್ಮ ಆಶಿರ್ವಾದ 'ಶ್ರೀ' ನಿವಾಸರೆ. By: ahoratra (May 27 2006 - 6:53am)
- ಸಾಹಿತ್ಯ ಭಂಡಾರ By: tvsrinivas41 (May 27 2006 - 6:39am)
- ಜ್ಞಾನ ಭಂಡಾರ, By: ahoratra (May 27 2006 - 6:03am)
- ಮಗುಗಳು !! By: benaka (May 26 2006 - 11:22pm)
- ಹೋರಾಟ By: benaka (May 26 2006 - 2:59pm)
- ಕೆಂದೆಳೆನೀರು By: ಮಹೇಶ ಭೋಗಾದಿ (May 26 2006 - 2:02pm)

RSS:
ಹೋರಾಟ
ಮಹೇಶರೇ,
ಹೋರಾಟ ಎಂಬುದನ್ನು ಹೋರ + ಆಟ ಎಂದು ಬಿಡಿಸುವುದು ಆಭಾಸ!
ನಿಜವಾಗಿ ಅದು ಹೋರು + ಆಟ = ಹೋರಾಟ (ಲೋಪಸಂಧಿ)
ಪೋರ್ - ಹೋರ್ - ಹೋರು = ಕಾದು, ಸೆಣೆಸು ಎಂದರ್ಥ.
ಇದೊಂದು ಅಪರೂಪದ ಪದ. ಕ್ರಿಯೆಗಿಂತ ಅದರ ನಾಮಪದದ ರೂಪವೇ ಹೆಚ್ಚು ಬಳಕೆಯಲ್ಲಿದೆ.ಕನ್ನಡ ತದ್ಧಿತವೇ ಇರಬಹುದು.
ಕೆಲವಕ್ಕೆ ಬಿಡಿಯರ್ಥ ತಿಳಿಯಲು ಹಳೆಗನ್ನಡ ಚೆನ್ನಾಗಿ ಗೊತ್ತಿರಬೇಕಾಗುತ್ತದೆ; ಈಗದು ಬಹಳ ಕಷ್ಟ!
ಉದಾಹರಣೆಗೆ ನಡುಗನ್ನಡದ 'ಮೇಲುದ' ಎಂಬ ಪದವನ್ನೇ ನೋಡಿ. ಹೊದಿಕೆ/ಉತ್ತರೀಯಕ್ಕೆ ಸರಿಯಾದ ಪದ.
ಬಿಡಿಸಿದರೆ ಮೇಲ್ + ಉದ = ಮೇಲಿನ ನೀರು ಎಂದಾಗುತ್ತದೆ! ಈ ಪದ ನೆನೆಪಾದಾಗಲೆಲ್ಲ ಕುಮಾರವ್ಯಾಸನ ಈ ಸಾಲುಗಳು ನೆನಪಾಗುತ್ತವೆ:
ಜವನ ಮೀಸೆಯನೆಳೆದನೋ ಭೈ
ರವನ ದಾಡೆಯಲುಗಿಸಿದನೋ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೋ !
(ವಿರಾಟಪರ್ವ)
ನಿಮ್ಮವ
ಬೆನಕ