ನಾವೇನು ಮಾಡಬಹುದು
- ಉ: ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ? By: kannadakanda (Jul 30 2008 - 3:44pm)
- ಕನ್ನಡದ ಈಗಿನ ಕವಿಗಳು ! By: venkatesh (May 31 2006 - 8:25am)
- ನಮ್ಮ ಮನೆಯಿಂದಲೇ ಶುರುಮಾಡೋಣ By: benaka (May 31 2006 - 8:16am)
- ಕನ್ನಡ ಸಾಹಿತ್ಯದ ಬಗ್ಯೆ ಅರಿವು..........! By: venkatesh (May 31 2006 - 1:37pm)
- ನಾವೇನು ಮಾಡಬಹುದು By: tksbhat (May 30 2006 - 1:36pm)
- ಕನ್ನಡದ ಈಗಿನ ಕವಿಗಳು By: ಮಹೇಶ ಭೋಗಾದಿ (May 31 2006 - 7:22am)
- ನನಗೂ ಒಬ್ಬರು ಕೇಳಿದರು; ಸಿ. ಅಶ್ವತ್ಥ ? ಯಾರದು? By: shreekant.mishrikoti (May 30 2006 - 11:59am)
- ವಿಕಿಪೀಡಿಯದಲ್ಲಿ ಬರೆಯಿರಿ! By: hpn (May 30 2006 - 10:57am)


RSS:
ನಾವೇನು ಮಾಡಬಹುದು
ಕುವೆಂಪು ಯಾರು? ಬೇಂದ್ರೆ ಯಾರು? ಎಂದು ಕೇಳಿದರೂ ಆಶ್ಚರ್ಯ ಪಡದಂಥ ಸ್ಥಿತಿಗೆ ನಾವು ತಲುಪಿದ್ದೇವೆ. ನಮ್ಮ ಇತಿಹಾಸದಿಂದ ದೂರವಾಗುವ ಒಂದು ಪ್ರಕ್ರಿಯೆಯನ್ನು ನಾವು ಬಹಳ ಹಿಂದೆಯೇ ಆರಂಭಿಸಿದ್ದೇವೆ. ಸಾಮಾನ್ಯವಾಗಿ ನಾವೆಲ್ಲರೂ ರಾಮಾಯಣ, ಮಹಾಭಾರತಗಳನ್ನು ಓದಿ ತಿಳಿದುಕೊಳ್ಳುತ್ತಿರಲಿಲ್ಲ. ಟಿ.ವಿ ನೋಡಿಯೂ ಇವುಗಳನ್ನು ತಿಳಿದುಕೊಳ್ಳಬೇಕಿರಲಿಲ್ಲ. ಹಿರಿಯರು ಹೇಳುವ ಕತೆ, ನಾವೇ ನೋಡಿದ ಯಕ್ಷಗಾನ, ಬಯಲಾಟಗಳ ಮೂಲಕ ನಮ್ಮ ರಾಮಾಯಣ, ಮಹಾಭಾರತಗಳ ಜ್ಞಾನ ಬೆಳೆಯುತ್ತಿತ್ತು. ಇದರ ಜತೆಗೆ ಚಂದಮಾಮ, ಅಮರಚಿತ್ರ ಕತೆಗಳು ಈ ಜ್ಞಾನವನ್ನು ಹೆಚ್ಚು ಸ್ಪಷ್ಟಗೊಳಿಸುತ್ತಿದ್ದವು. ಪ್ರೌಢರಾದ ಮೇಲೆ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚು ತಿಳಿದುಕೊಳ್ಳಬೇಕು ಎಂದಾದಾಗ ರಾಮಾಯಣ ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಿದ್ದೆವು. ಈಗ ನಮ್ಮ ಮಕ್ಕಳಿಗೇ ನಾವು ಇಂಗ್ಲಿಷ್ ನಲ್ಲಿ ಬರೆದಿರುವ ರಾಮಾಯಣ, ಮಹಾಭಾರತದ ಕತೆಗಳನ್ನು ತಂದುಕೊಟ್ಟರೂ ಅವರು ಓದದಂಥ ಸ್ಥಿತಿ ಇದೆ. ನಮ್ಮ ಹಿರಿಯರು ನಮಗೆ ಪುರಾಣ, ಇತಿಹಾಸಗಳ ಬಗ್ಗೆ ಕಲಿಸಲು ಅನುಸರಿಸಿದ ತಂತ್ರಗಳನ್ನು ನಾವೇ ಮರೆತೇ ಬಿಟ್ಟಿದ್ದೇವೆ. ಅಥವಾ ಅದನ್ನು ಪಾಲಿಸುವಂಥ ವಾತಾವರಣ ನಮ್ಮ ಸುತ್ತ ಮುತ್ತ ಇಲ್ಲ.
ಕನ್ನಡದ ವಿಷಯವೂ ಅಷ್ಟೇ. ಮಗು ಹುಟ್ಟುತ್ತಲೇ ಅದನ್ನು ಡಾಕ್ಟರ್, ಇಂಜಿನಿಯರ್ ಅಥವಾ ಮ್ಯಾನೇಜರ್, ಸಿಇಓ ಮಾಡುವ ಧಾವಂತದಲ್ಲಿ ನಮಗೆ ಮಗು ಹಾವರ್ಡ್ ಬಿಸಿನೆಸ್ ರಿವ್ಯೂ ಓದಿದರೇ ಒಳ್ಳೆಯದು ಎನಿಸುತ್ತಿರುತ್ತದೆ. ಸಾಹಿತಿಗಳ ಮಾಹಿತಿಯನ್ನು ವಿಕಿಪೀಡಿಯಾದಲ್ಲಿ ಬರೆಯುವುದು ಮುಂತಾದ ಕೆಲಸಗಳ ಜತೆಗೇ ನಾವು ಈ ಜ್ಞಾನವನ್ನು ಪಡೆದುಕೊಂಡಂತೆ ನಮ್ಮ ಮಕ್ಕಳಿಗೂ ಇದನ್ನು ಒದಗಿಸಲು ಸಾಧ್ಯವೇ ಎಂಬುದರ ಬಗ್ಗೆ ಯೋಚಿಸಬೇಕು.