'ಮಹಾ' ವಿಶೇಷಣ
- 'ಮಹಾ' ವಿಶೇಷಣ By: srivathsajoshi (Jun 1 2006 - 9:08pm)
- ವಕ್ರೋಕ್ತಿ By: ಮಹೇಶ ಭೋಗಾದಿ (Jun 1 2006 - 9:42pm)
- ಧನ್ಯವಾದ By: ಮಹೇಶ ಭೋಗಾದಿ (Jun 1 2006 - 6:15am)
- ಉ:ಕಾರಣಗಳು : ಸಂಪದದಲ್ಲಿ ಬರೆಯುವುದು ಕಡಮೆಯಾಗಿದೆ. By: shreekant.mishrikoti (Jun 1 2006 - 10:51am)
- ಶ್ರೀಕಾಂತ್ ರವರಿಗೆ By: venkatesh (Jun 1 2006 - 1:30pm)
- ಉ:ಕಾರಣಗಳು : ಸಂಪದದಲ್ಲಿ ಬರೆಯುವುದು ಕಡಮೆಯಾಗಿದೆ. By: shreekant.mishrikoti (Jun 1 2006 - 10:51am)

RSS:
'ಮಹಾ' ವಿಶೇಷಣ
ಶ್ರೀಕಾಂತ್:
ನೀವೆಂದಂತೆ, ಟಿವಿಯಲ್ಲಿ ಮಹಾಭಾರತ ಬಂದ ನಂತರ ಈ 'ಮಹಾ' ವಿಶೇಷಣ ಜಾಸ್ತಿಯಾದದ್ದು ಹೌದು. RIN detergent cakeಗೆ ಸಹ ರಿನ್ 'ಮಹಾ' ಬಾರ್ ಎಂಬ ಜಾಹೀರಾತು ಬರುತ್ತಿದ್ದದ್ದು ನನಗೆ ನೆನಪಿದೆ.
ಆದರೆ, 'ಮಹಾ' ಒಂದು ಮಜಾ ಆಗಿ ಅದಕ್ಕಿಂತ ಮೊದಲೇ ಇತ್ತು ಎಂದು ನನ್ನ ಅಂಬೋಣ. ಸಂಧ್ಯಾವಂದನೆ ಮಾಡುವಾಗ ತಿಪ್ಪಾಭಟ್ಟರು ಬೇಕಂತಲೇ, "ಕೇಶವ ಏನು ಮಹಾ, ನಾರಾಯಣ ಏನು ಮಹಾ, ಮಾಧವ ಏನು ಮಹಾ...' ಎಂದು ತನ್ನ ಪ್ರತಿಸ್ಪರ್ಧಿ ಪುರೋಹಿತರಾದ ಕೇಶವಭಟ್ಟ, ನಾರಾಯಣಭಟ್ಟ, ಮಾಧವಭಟ್ಟ ಇತ್ಯಾದಿಯವರ ಮೇಲೆ 'ಮಂತ್ರಕ್ಕಿಂತ ಜಾಸ್ತಿ ಉಗುಳು'ತ್ತಿದ್ದರಂತೆ!
-ಶ್ರೀವತ್ಸ ಜೋಶಿ