ಶ್ರಾವಣ
- ಶ್ರಾವಣ By: benaka (Jun 5 2006 - 10:58am)
- ಬೆನಕನಿಗೆ ಇಪ್ಪತ್ತೊಂದೇ ನಮಸ್ಕಾರಗಳು By: ಮಹೇಶ ಭೋಗಾದಿ (Jun 5 2006 - 11:24am)
- 'ನಮಸ್ಕಾರ' ಕನ್ನಡ ಪದವೇ? By: ahoratra (Jun 5 2006 - 10:41pm)
- ನಮಸ್ಕಾರ ಸಂಸ್ಕೃತಪದ. By: ಮಹೇಶ ಭೋಗಾದಿ (Jun 6 2006 - 12:34am)
- ನಾವೇನೋ ಹೀಗೆ ಹೇಳಬಹುದು..ಆದರೆ By: Sunil Jayaprakash (Jun 5 2006 - 2:54pm)
- ಸರಕಾರ ಮತ್ತು ಅಚ್ಚಕನ್ನಡ By: ಮಹೇಶ ಭೋಗಾದಿ (Jun 5 2006 - 7:26pm)
- 'ನಮಸ್ಕಾರ' ಕನ್ನಡ ಪದವೇ? By: ahoratra (Jun 5 2006 - 10:41pm)
- ಬೆನಕನಿಗೆ ಇಪ್ಪತ್ತೊಂದೇ ನಮಸ್ಕಾರಗಳು By: ಮಹೇಶ ಭೋಗಾದಿ (Jun 5 2006 - 11:24am)
- ಮಲ್ಲಿಗೆ ಮಗು ? By: ಮಹೇಶ ಭೋಗಾದಿ (Jun 4 2006 - 10:35am)
- ಗುರುವಂದನೆ By: ahoratra (Jun 4 2006 - 11:31am)
- ಧನ್ಯವಾದ By: ಮಹೇಶ ಭೋಗಾದಿ (Jun 4 2006 - 12:10pm)
- ಗುರುವಂದನೆ By: ahoratra (Jun 4 2006 - 11:31am)

RSS:
ಶ್ರಾವಣ
ಮಹೇಶರೇ,
ವಾಕ್ಸಿರಿ ಒಳ್ಳೆಯ ಬಳಕೆ; ವಾಕ್ಕಿಗೆ ಕನ್ನಡ ಬಳಸಲೇ ಬೇಕಾದಲ್ಲಿ 'ಸಿರಿಮಾತು' ಎನ್ನಬಹುದು.
ಅಥವಾ ನಲ್ + ಮಾತು = ನಲ್ವಾತು ಆಗಬಹುದೇನೋ. ಈ ನಲ್ವಾತು, ಮೆಲ್ವಾತು ಅರಿತಿರುವ ಜನ ಬಹಳ ಕಡಿಮೆ.
ಕವಿಗಳೇ,
ಒಂದು ಸಣ್ಣ ಸಲಹೆ ನೀಡಬಹುದೇ? ಈ ಸಾಲನ್ನು ಗಮನಿಸಿ:
ಮನೆಯ ಹಸಿರು ತೋರಣ
ಮನೆಗೆ ಬಂದ ಶ್ರಾವಣ
ತುಂಬ ಒಳ್ಳೆಯ ಪ್ರಯೋಗ; ಆದರೆ ಕವನದ ಸಣ್ಣ ಪರಿಮಿತಿಯೊಳಗೆ ಒಂದೇ ಪದವನ್ನು(ಮನೆ) ಬಹಳ ಬಾರಿ ಉಪಯೋಗಿಸದಿರುವುದು ಉತ್ತಮ.
ಮೇಲಿನ ಸಾಲುಗಳನ್ನು ಹೀಗೆನ್ನಬಹುದೇ:
ಮನೆಯ ಹಸಿರು ತೋರಣ
ಮನಕೆ ಬಂದ ಶ್ರಾವಣ
ಅಥವಾ
ಮನೆಯ ಹಸಿರು ತೋರಣ
ಬುವಿಗೆ ಬಂದ ಶ್ರಾವಣ
ಏಕೆಂದರೆ, ಶ್ರಾವಣ ಕೇವಲ ಒಂದು ಮನೆಗೆ ಬರುವುದಿಲ್ಲ; ಅದು ಇಡೀ ಪರಿಸರಕ್ಕೆ ಸಂಬಂಧಿಸಿದ್ದು; ಅಲ್ಲವೇ? ಮನಕೆ ಬಂದ ಶ್ರಾವಣ ಎಂಬಲ್ಲಿ ಮನಸ್ಸಿಗೆ ಹೊಸ ಋತುವಿನ ಕಳೆಯನ್ನು ಕೊಡುತ್ತದೆ; ಹಾಗೆಯೇ ಬುವಿಯ ಹಬ್ಬದ ಮಾಸ.
ಇದು ಕೇವಲ ಸಲಹೆ; ನೋಯದಿರಿ!
ನಿಮ್ಮವ
ಬೆನಕ