ಕನ್ನಡದ ಮೊದಲ ಅಂತರಜಾಲ ತಾಣ
- ಸಂಪದವನ್ನು ಹೊಗಳಿದರೆ ಮಾತ್ರ ಪರಾಮರ್ಶೆಯಾಗುತ್ತದೆಯೆ..? By: ravee... (Jun 8 2006 - 7:55pm)
- ನನಗೊಂದು By: ರವಿ (Jun 12 2006 - 8:58pm)
- ನಿಲ್ಲಿಸಿ... By: ಮಹೇಶ ಭೋಗಾದಿ (Jun 8 2006 - 8:28pm)
- ಜಗಳ ಬೇಡ By: tksbhat (Jun 8 2006 - 10:01pm)
- ಆಶ್ರಯ ಸಂಪದದ ಭಾಗವಾಗಲಿ By: tvsrinivas41 (Jun 7 2006 - 3:31pm)
- ಕನ್ನಡದ ಪ್ರಥಮ ಅಂತರಜಾಲ ತಾಣ By: pavanaja (Jun 7 2006 - 8:46pm)
- ಕನ್ನಡ ಅಂತರಜಾಲದಲ್ಲಿನ ಮೊದಲನೇ ತಾಣ By: ವಕ್ರ (Jun 7 2006 - 10:59pm)
- ಕನ್ನಡದ ಮೊದಲ ಅಂತರಜಾಲ ತಾಣ By: pavanaja (Jun 8 2006 - 8:46am)
- ನಿಮ್ಮದು By: ರವಿ (Jun 8 2006 - 9:45am)
- ವಿಶ್ವಕನ್ನಡ By: tvsrinivas41 (Jun 8 2006 - 9:15am)
- ಕನ್ನಡಕ್ಕೆ ಸೇವೆ ! ಅಭಿನಂದನೆಗಳು. ಭೇಷ್ !! By: venkatesh (Jun 8 2006 - 10:41am)
- ಕನ್ನಡದ ಮೊದಲ ಅಂತರಜಾಲ ತಾಣ By: pavanaja (Jun 8 2006 - 8:46am)
- ಕನ್ನಡ ಅಂತರಜಾಲದಲ್ಲಿನ ಮೊದಲನೇ ತಾಣ By: ವಕ್ರ (Jun 7 2006 - 10:59pm)
- ಕನ್ನಡದ ಪ್ರಥಮ ಅಂತರಜಾಲ ತಾಣ By: pavanaja (Jun 7 2006 - 8:46pm)

RSS:
ಕನ್ನಡದ ಮೊದಲ ಅಂತರಜಾಲ ತಾಣ
ರೀ ವಕ್ರರೇ,
ನಾನು ವಿಶ್ವಕನ್ನಡ ಶ್ರೇಷ್ಠ ಎಂದು ಪ್ರತಿಪಾದಿಸಲು ಹೊರಟಿಲ್ಲ. ತ ವಿ ಶ್ರೀನಿವಾಸರು ನೀಡಿದ ಮಾಹಿತಿ ತಪ್ಪು ಎಂಬುದನ್ನು ತೋರಿಸಿದೆ, ಅಷ್ಟೇ. ಈಗ ಕನ್ನಡದಲ್ಲಿ ಮೊದಲನೆಯ ಸ್ಥಾನದಲ್ಲಿರುವ ತಾಣ ಯಾವುದು ಎಂಬುದರ ಬಗ್ಗೆಯೂ ನಾನು ಚರ್ಚಿಸುತ್ತಿಲ್ಲ. ನನಗೆ ಅದರಲ್ಲಿ ಆಸಕ್ತಿಯೂ ಇಲ್ಲ. ವಿಶ್ವಕನ್ನಡವೇ ಅಂತರಜಾಲದಲ್ಲಿ, ಜನಪ್ರಿಯತೆಯಲ್ಲಿ, ಪ್ರಥಮ ಸ್ಥಾನದಲ್ಲಿರುವ ತಾಣವಾಗಬೇಕು ಎಂದು ನಾನೇನೂ ಸ್ಪರ್ಧೆಗೆ ನಿಂತಿಲ್ಲ. ಜನಪ್ರಿಯವಾದುದೆಲ್ಲ ಶ್ರೇಷ್ಠವಾಗಬೇಕಾಗಿಯೂ ಇಲ್ಲ.
ಕನ್ನದಲ್ಲಿ ಹೆಚ್ಚು ಹೆಚ್ಚು ಜಾಲತಾಣಗಳು ನಿರ್ಮಾಣವಾದರೆ ನನಗೆ ಸಂತಸವೇ. ಇನ್ನೊಂದು ಕನ್ನದ ತಾಣವನ್ನು ನಾನೆಂದೂ ನನಗೆ ಸ್ಪರ್ಧಿ ಎಂದು ಭಾವಿಸಿಯೇ ಇಲ್ಲ. ಇದಕ್ಕೆ ಉದಾಹರಣೆಗಳು:- ನನ್ನ ತಾಣದಲ್ಲಿ ಇತರೆ ಕನ್ನಡ ತಾಣಗಳಿಗೆ ನಾನು ಸಂಪರ್ಕ ನೀಡಿದ್ದೇನೆ. ಸಂಪದದ ಬಗೆಗೆ ಸುಧಾ ಪತ್ರಿಕೆಗೆ ಲೇಖನ ಬರೆದು ಪ್ರಚಾರ ಮಾಡಿದ್ದೇನೆ. ಈಗಲೂ ನನ್ನ ಬ್ಲಾಗ್‌ನಲ್ಲಿ ಸಂಪದ ಬಗ್ಗೆ ಕೊಂಡಿ ನೀಡಿದ್ದೇನೆ. ಸಂಪದದಲ್ಲೇ ನನ್ನ ಹಲವು ಲೇಖನ, ಬ್ಲಾಗ್, ಟಿಪ್ಪಣಿ -ಇತ್ಯಾದಿಗಳಿವೆ. ನನ್ನದೇ ಸ್ವಂತ ತಾಣವಿದ್ದುಕೊಂಡು ಇನ್ನೊಂದು ತಾಣದಲ್ಲಿ ನಾನು ಯಾಕೆ ಬರೆಯಬೇಕು? ಅದಕ್ಕೆ ನಾನು ಯಾಕೆ ಪ್ರಚಾರ ಕೊಡಬೇಕು? ಇವುಗಳು ಏನನ್ನು ತೋರಿಸುತ್ತವೆ? ನನ್ನ ಬುದ್ಧಿ ನೇರವಾಗಿಯೇ ಇದೆ, ವಕ್ರವಾಗಿಲ್ಲ ಎಂದು ತಾನೆ?
ಸಿಗೋಣ,
ಪವನಜ
-----------
Vishva Kannada
Think globally, Act locally