ಹೌದೌದು, ಎಲ್ಲೆಡೆಯಿಂದ ಬರಲಿ ಈ ರೀತಿಯ ಸಂದರ್ಶನಗಳು
- ಹೌದೌದು, ಎಲ್ಲೆಡೆಯಿಂದ ಬರಲಿ ಈ ರೀತಿಯ ಸಂದರ್ಶನಗಳು By: bhatpp (Jun 13 2006 - 10:47am)
- ಜ್ಞಾನಕ್ಕೆ ಮಿತಿ ಯೆಲ್ಲಿದೆ ? By: venkatesh (Jun 13 2006 - 2:07pm)
- ಹೆಚ್ಚು ಮಿತಿಗಳುಳ್ಳದ್ದು ಅಮಿತವಾಗುವುದಿಲ್ಲ. By: ahoratra (Jun 13 2006 - 11:24am)
- ಯಾವ ಬಗೆಯ ಮಾತು ಕತೆಗಳು.......... By: venkatesh (Jun 13 2006 - 7:29am)
- ಪ್ರಚಂಡ ವಿದ್ವತ್ತಿನ, ಗಾಯನೋಪನ್ಯಾಸಗಳನ್ನು ಕರ್ನಾಟಕ ಸಂಗೀತದ ಬಗ್ಯೆ....... By: venkatesh (Jun 12 2006 - 4:23pm)
- ಯಾವ ಬಗೆಯ ಮಾತುಕತೆಗಳು ಸಂಪದದಲ್ಲಿ ಹೊಮ್ಮಬೇಕು. By: ಮಹೇಶ ಭೋಗಾದಿ (Jun 13 2006 - 4:56am)
- ಶ್ರೀ. ಸೀತಾರಾಂ ಜೊತೆಗೆ ಸಂದರ್ಶನ !! By: venkatesh (Jun 11 2006 - 8:16am)
- ಮುಂದಿನ ಬಾರಿ ಸರಿಪಡಿಸುತ್ತೇವೆ. By: ismail (Jun 11 2006 - 3:06pm)
- ಮತ್ತೊಂದು ಗರಿ By: tvsrinivas41 (May 26 2006 - 5:11pm)
- ಸಂದರ್ಶನಗಳ ಬರೆಹ ರೂಪ By: ismail (May 27 2006 - 6:09pm)
- ಟ್ರಾನ್ಸ್ ಸ್ಕ್ರೈಬ್ By: ಮಹೇಶ ಭೋಗಾದಿ (May 29 2006 - 10:00pm)
- ತಮ್ಮ ಪ್ರಶ್ನೆ ಅರ್ಥವಾಗಲಿಲ್ಲ. By: ismail (May 30 2006 - 12:35pm)
- ಟ್ರಾನ್ಸ್ ಸ್ಕ್ರೈಬ್ By: ಮಹೇಶ ಭೋಗಾದಿ (May 29 2006 - 10:00pm)
- ಸಂದರ್ಶನಗಳ ಬರೆಹ ರೂಪ By: ismail (May 27 2006 - 6:09pm)
- ಟಿ.ಎನ್.ಸೀತಾರಾಮ್ ಸಂದರ್ಶನ By: srivathsajoshi (May 26 2006 - 12:51am)

RSS:
ಹೌದೌದು, ಎಲ್ಲೆಡೆಯಿಂದ ಬರಲಿ ಈ ರೀತಿಯ ಸಂದರ್ಶನಗಳು
ವೆಂಕಟೇಶರೆ,
ನೀವು ಹೇಳಿದ್ದು ಅಕ್ಷರಶಃ ನೆರವೇರಲಿ! ಎಲ್ಲೆಡೆಯಿಂದ ಬರಲಿ ಈ ರೀತಿಯ ಸಂದರ್ಶನಗಳು, ಶ್ರಾವ್ಯಗಳು!
ನಾಟಕಕಾರನೋ, ಕವಿಯೋ, ಪ್ರಬಂಧಕರ್ತೃವೋ, ಯಕ್ಷಗಾನ ಕಲಾವಿದನೋ, ಟೀಕಾಕಾರನೋ, ಚಲನಚಿತ್ರ ನಿರ್ದೇಶಕನೋ, ನಟನೋ, ನಟಿಯೋ, ವರ್ತಕನೋ, ರಾಜಕಾರಣಿಯೋ, ಅಥವಾ ಯಾವುದೇ ವಿಶೇಷಣವಿಲ್ಲದ ಸಾಮಾನ್ಯ ಪ್ರಜೆಯೋ, ಯಾರೇ ಇರಲಿ, ಬರಲಿ ಇಂತಹ ಸಂದರ್ಶನಗಳು! ಎಲ್ಲರ ಅಭಿಪ್ರಾಯಗಳನ್ನು ಆಲಿಸೋಣ, ಅರಿಯೋಣ, ಅವರಿಂದ ಕಲಿಯಲು ಏನಾದರೂ ಇದ್ದರೆ ಕಲಿಯೋಣ! ಇದರಿಂದ ನಮ್ಮ ಅರಿವು ಹೆಚ್ಚುವುದೇ ಹೊರತು ಕುಂದುವುದಿಲ್ಲ!
"ಆನೋ ಭದ್ರಾಃ ಕೃತವೋ ಯಂತು ವಿಶ್ವತಃ", ಎಲ್ಲೆಡೆಯಿಂದ ಬರಲಿ ಜ್ಞಾನ ಭಂಡಾರ, ಅದನ್ನು ಸೂರೆಗೊಳ್ಳುವ! ಕುವೆಂಪುರವರ ನುಡಿಯಂತೆ,
ಎಲ್ಲಿಯೂ ನಿಲ್ಲದಿರೋಣ, ಮನೆಯನೆಂದೂ ಕಟ್ಟದಿರೋಣ, ಕೊನೆಯನೆಂದೂ ಮುಟ್ಟದಿರೋಣ!