ಫುಟ್ಬಾಲ್ ಲೇಖನಗಳು
- ಬ್ಲಾಗು By: tvsrinivas41 (Jun 23 2006 - 8:55pm)
- ಬೆಸ್ಟ್ ಮತ್ತು ಬೀಸ್ಟ್ ಒಂದು ಒಳ್ಳೆಯ ಸಾಮ್ಯ ! By: venkatesh (Jun 22 2006 - 9:34am)
- ಕೊಳಕು ಎಸ್ ಟಿ By: tvsrinivas41 (Jun 23 2006 - 1:39pm)
- ಹೇಳೋದಕ್ಕೆ ಬೆಸ್ಟು- ! By: venkatesh (Jun 23 2006 - 8:20pm)
- ಫುಟ್‌ಬಾಲ್ ಲೇಖನಗಳು By: hpn (Jun 24 2006 - 12:29am)
- ಕಾಲ್ಚೆಂಡಿನಾಟದ ಬಗ್ಗೆ ! By: venkatesh (Jun 24 2006 - 12:37pm)
- ಫುಟ್ಬಾಲ್ ಲೇಖನಗಳು By: hpn (Jun 24 2006 - 12:29am)
- ಹೇಳೋದಕ್ಕೆ ಬೆಸ್ಟು- ! By: venkatesh (Jun 23 2006 - 8:20pm)
- ಕೊಳಕು ಎಸ್ ಟಿ By: tvsrinivas41 (Jun 23 2006 - 1:39pm)
- ಬೆಸ್ಟು ಮತ್ತು ಬೀಸ್ಟು By: vnag (Jun 21 2006 - 5:45pm)

RSS:
ಫುಟ್ಬಾಲ್ ಲೇಖನಗಳು
ವೆಂಕಟೇಶ್ ರವರೆ, ನೀವು ಬರೆಯುತ್ತಿರುವ ಪ್ರತಿನಿತ್ಯದ ಫುಟ್ಬಾಲ್ ವಿಶ್ವಕಪ್ ಕುರಿತ ಲೇಖನಗಳು ಬಹಳ enjoyable ಎಂದು ನನಗನ್ನಿಸಿತು. ಏಕೆಂದರೆ ಪ್ರತಿದಿನದ ಫುಟ್ ಬಾಲ್ ಸುದ್ದಿ ಓದಲು ಐಬಿ ಎನ್ ಲೈವ್ ಗೆ ಹೋಗುವ ಮುನ್ನ ಸುದ್ದಿ ಕನ್ನಡದಲ್ಲೇ ಇಲ್ಲಿ ಓದಲು ಸಿಗುತ್ತಿದೆ. ಫುಟ್ ಬಾಲ್ ಅಷ್ಟಾಗಿ ಇಷ್ಟವಾಗದವರಿಗೆ, ಅದರ ಪರಿಚಯ ಅಷ್ಟಾಗಿ ಇಲ್ಲದವರಿಗೆ ಮ್ಯಾಚುಗಳ ಬಗ್ಗೆ ಸವಿವರ ಲೇಖನಗಳು ಅಷ್ಟಾಗಿ ಇಷ್ಟವಾಗದೇ ಇರಬಹುದು - ಆದ್ದರಿಂದ ಯಾರಿಗೂ ಬೋರ್ ಹೊಡೆಸೋದಿಲ್ಲ ಎಂದು ಹೇಳಲಾಗುವುದಿಲ್ಲವಾದರೂ ನನಗಂತೂ ಇದುವರೆಗೂ ಬೋರ್ ಹೊಡೆದಿಲ್ಲವೆಂದು ಹೇಳಬಲ್ಲೆ.
ಫುಟ್‌ಬಾಲ್ ಬಹಳ ಇಷ್ಟವಾದರೂ ಸಮಯಾಭಾವದಿಂದ ಪ್ರತಿಯೊಂದು ಮ್ಯಾಚನ್ನೂ ನೋಡಲಾಗುತ್ತಿಲ್ಲವಾದ್ದರಿಂದ ಆಟಗಳನ್ನು ನೋಡದೆ miss ಮಾಡಿಕೊಂಡದ್ದನ್ನು ಲೇಖನಗಳಿಂದಲೋ, ಟಿ ವಿ ಹೈಲೈಟ್ಸ್‌ನಿಂದಲೇ ಪಡೆಯಲು ಪ್ರಯತ್ನ ನಡೆಯುತ್ತಲೇ ಇರುತ್ತದೆ. ಹೀಗಿರುವಾಗ ನಿಮ್ಮ ಲೇಖನಗಳು ನಮಗೆಲ್ಲ ಸಾಕಷ್ಟು ಉಪಯುಕ್ತವಾಗುವಂಥವು!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"