ವಾಸ್ತವವಲ್ಲ
- ಹೊಸ ಸಿಎಂಎಸ್ ಜಿಪಿಎಲ್ ನಲ್ಲಿ ದೊರೆಯುತ್ತದೆಯೇ? By: tksbhat (Jun 26 2006 - 4:41pm)
- ವಾಸ್ತವವಲ್ಲ By: Rohit (Jun 26 2006 - 9:09pm)
- ಜಿಪಿಎಲ್ ಯಾಕೆ ಬೇಕು? By: tksbhat (Jun 27 2006 - 3:27pm)
- ಯೋಗ್ಯತೆ ಕಡಿಮೆಯೇ By: Rohit (Jun 27 2006 - 4:29pm)
- ಇದೆಂಥ ಚರ್ಚೆ? By: tksbhat (Jun 27 2006 - 6:32pm)
- ಯೋಗ್ಯತೆ ಕಡಿಮೆಯೇ By: Rohit (Jun 27 2006 - 4:29pm)
- ಏನಿದು CMS By: anjali (Jun 27 2006 - 12:51pm)
- ಮ + ಊ ಬಗ್ಗೆ By: hpn (Jun 27 2006 - 5:22pm)
- CMS - ಕಂಟೆಂಟ್ ನಿರ್ವಹಣಾ ವ್ಯವಸ್ಥೆ By: Rohit (Jun 27 2006 - 2:10pm)
- ತಪ್ಪು ಮಾಹಿತಿ ನೀಡದಿರಿ... ಕಾಮೆಂಟುಗಳಲ್ಲಿ ದೂಷಣೆ ಬೇಡ By: hpn (Jun 27 2006 - 5:07pm)
- ನಿಂತ ನೆಲ ನೋಡಿಕೊಳ್ಳೋಣ By: ismail (Jun 27 2006 - 6:24pm)
- ಧನ್ಯವಾದಗಳು - ದೂಷಣೆಯ ಆಶಯವಿಲ್ಲ By: Rohit (Jun 28 2006 - 11:17am)
- ನಿಂತ ನೆಲ ನೋಡಿಕೊಳ್ಳೋಣ By: ismail (Jun 27 2006 - 6:24pm)
- ತಪ್ಪು ಮಾಹಿತಿ ನೀಡದಿರಿ... ಕಾಮೆಂಟುಗಳಲ್ಲಿ ದೂಷಣೆ ಬೇಡ By: hpn (Jun 27 2006 - 5:07pm)
- ಜಿಪಿಎಲ್ ಯಾಕೆ ಬೇಕು? By: tksbhat (Jun 27 2006 - 3:27pm)
- ವಾಸ್ತವವಲ್ಲ By: Rohit (Jun 26 2006 - 9:09pm)
- `ಸಂಪೂರ್ಣ' ಬಗ್ಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ By: Rohit (Jun 25 2006 - 4:39pm)
- ಲಾಗಿನ್ ಆಗಿ ಪರೀಕ್ಷಿಸಿ By: Rohit (May 29 2006 - 11:52am)

RSS:
ವಾಸ್ತವವಲ್ಲ
ಗೆಳೆಯ ಭಟ್ಟ ರವರೆ,
customise ಮಾಡಬಹುದೆ? ಹೇಗೆ? ಮಾಡಬಹುದಾದರೆ ಇನ್ನೂ ಏಕೆ ಯಾರೂ ಮಾಡಿಲ್ಲ? ಅಗತ್ಯವನ್ನು ಉಪೇಕ್ಷಿಸಲಾಗಿದೆಯೆ.. windows 98 ಹಳ್ಳಿಗಳಲ್ಲೇ ಏಕೆ..ದೊಡ್ಡ ದೊಡ್ಡ ಪ್ರೆಸ್ಸುಗಳಲ್ಲೂ ಇನ್ನೂ ಬಳಕೆಯಲ್ಲಿ ಇರುವುದು windows 98 ಹಾಗು windows 2000 server..ಒಪ್ಪದಿದ್ದರೆ ಇರುವ ಸತ್ಯ ಬೇರೆಯಾಗುವುದಿಲ್ಲ.
(ಗಮನಿಸಿ: ನಮ್ಮ ಸರ್ಕಾರದವರು ನಮ್ಮ ಗ್ರಾಮೀಣ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸಲು ಮೈಕ್ರೋಸಾಫ್ಟಿನವರೊಂದಿಗೆ ಮಾಡಿಕೊಂಡಿರುವ "Project Shiksha" ಒಡಂಬಡಿಕೆಯ ಮೂಲಕ ಈಗ ಆ ಗಂಕಗಳಲ್ಲಿ ಅನುಸ್ಥಾಪಿಸಲಾಗಿರುವುದು Windows 98 !!! ನಮ್ಮ ಲಕ್ಷಗಟ್ಟಳೆ ಗ್ರಾಮೀಣ ಮಕ್ಕಳು ಕಲಿಯುತ್ತಿರುವುದು ಅದರ ಮೂಲಕವೇ...
ಅಷ್ಟೇಕೆ ಇಲ್ಲಿ ನಾನಿರುವ ಮುಂಬಯಿಯಲ್ಲಿಯೂ ಸಹ ನಾನು ಎಡತಾಕಿದ ಬಹುತೇಕ ಇಂಟರ್‍ನೆಟ್ ಕೆಫೆಗಳಲ್ಲಿರುವುದೂ Windows 98. ಮಂಬಯಿಯಲ್ಲೇ ಹೀಗಿರುವಾಗ, ನಮ್ಮ ಮಧುಗಿರಿಯೋ, ಮುಧೋಳವೋ ಇವುಗಳ ಕತೆ ಏನು...)
ಸಂಪೂರ್ಣ ತಂತ್ರಾಂಶದ ಬೆಳವಣಿಗೆ ಹಾಗು ವಿಸ್ತರಣೆಗೆ "developers community" ಸಜ್ಜಾಗುವುದಾದರೆ ಅದನ್ನು "ಮುಕ್ತವಾಗಿ" ತೆರೆದಿಡಲು ಆಲೋಚಿಸಬಹುದು. ಹತ್ತು ವರ್ಷಗಳೇ ಕಳೆದಿದ್ದರೂ ಕನ್ನಡದಲ್ಲಿ ಬರಹ, ನುಡಿ ಹೊರತಾದ ತಂತ್ರಾಂಶಗಳೇಕೆ ಬಿಡುಗಡೆಯಾಗಿಲ್ಲ...? ಇಂತಹ ಸನ್ನಿವೇಶದ ನಡುವೆ, "committed developers community" ರೂಪಿತವಾಗದಿದ್ದರೆ, ಮುಕ್ತವಾಗಿ ತೆರೆದಿಟ್ಟು ಏನು ಪ್ರಯೋಜನ. ಕನಿಷ್ಟ "proprietorial" ಆಗಿ ಉಳಿಸಿಕೊಂಡಿದ್ದರೆ, "ಕನಿಷ್ಟ" ಯಾರಿಗಾದರೂ ಪ್ರಯೋಜನವಾಗಬಹುದು..
ದ್ರುಪಾಲ್ ಅನ್ನು ಯಾವುದೇ ಭಾಷೆಗೆ ಒಗ್ಗಿಸಬಹುದು. ಆದರೆ ಬಹುಭಾಷೆಗೆ ಒಗ್ಗಿಸಲು ಸಾಕಷ್ಟು ಶ್ರಮವಹಿಸಬೇಕಾಗುತ್ತದೆ. ಸಂಪೂರ್ಣ "ದ್ರುಪಾಲ್, textpattern, wordpress ಮುಂತಾದ CMSಗಳನ್ನೇ ಬಳಸುವವರು ಬಳಸಲಿ..ಅದು ಮುಕ್ತವಾಗಿ ಲಭ್ಯವಿದೆ. ಭಿನ್ನವೆಂದರೆ, multicharacter encoding ಹಾಗು multi-linguitic feature ಅವುಗಳಲ್ಲಿ ಸಿಗುವುದಿಲ್ಲ. ಒಂದೊಂದು ಭಾಷೆಗೂ ಒಂದೊಂದು CMS ಸ್ಥಾಪಿಸಿವುವ ಗೋಜಲು..
ದ್ರುಪಾಲ್ ನವರು advanced characterset ಗೆ ಮಾತ್ರ CMS ನಿರ್ಮಿಸುವುದು ಸಹಜವಾದದ್ದೆ. ಆದರೆ, ಅದನ್ನು opensourceನಲ್ಲಿ ಬಿಟ್ಟಿದ್ದರೂ ನಮ್ಮವರು ಅದನ್ನು customise ಮಾಡದಿರುವುದು ದಿವ್ಯ ನಿರ್ಲಕ್ಶ್ಯವನ್ನಷ್ಟೇ ತೋರಿಸುತ್ತದೆ..
ಸಂಪೂರ್ಣದ ರೂವಾರಿಯಾದ ಶೇಖರ್ ಪೂರ್ಣರ ಅನಿಸಿಕೆಗಳೂ ಮೇಲಿನ ವಾಕ್ಯಗಳಲ್ಲಿ ಸೇರಿವೆ.
ವಂದನೆಗಳು,
ರೋಹಿತ್