ಯೋಗ್ಯತೆ ಕಡಿಮೆಯೇ
- ಹೊಸ ಸಿಎಂಎಸ್ ಜಿಪಿಎಲ್ ನಲ್ಲಿ ದೊರೆಯುತ್ತದೆಯೇ? By: tksbhat (Jun 26 2006 - 4:41pm)
- ವಾಸ್ತವವಲ್ಲ By: Rohit (Jun 26 2006 - 9:09pm)
- ಜಿಪಿಎಲ್ ಯಾಕೆ ಬೇಕು? By: tksbhat (Jun 27 2006 - 3:27pm)
- ಯೋಗ್ಯತೆ ಕಡಿಮೆಯೇ By: Rohit (Jun 27 2006 - 4:29pm)
- ಇದೆಂಥ ಚರ್ಚೆ? By: tksbhat (Jun 27 2006 - 6:32pm)
- ಯೋಗ್ಯತೆ ಕಡಿಮೆಯೇ By: Rohit (Jun 27 2006 - 4:29pm)
- ಏನಿದು CMS By: anjali (Jun 27 2006 - 12:51pm)
- ಮ + ಊ ಬಗ್ಗೆ By: hpn (Jun 27 2006 - 5:22pm)
- CMS - ಕಂಟೆಂಟ್ ನಿರ್ವಹಣಾ ವ್ಯವಸ್ಥೆ By: Rohit (Jun 27 2006 - 2:10pm)
- ತಪ್ಪು ಮಾಹಿತಿ ನೀಡದಿರಿ... ಕಾಮೆಂಟುಗಳಲ್ಲಿ ದೂಷಣೆ ಬೇಡ By: hpn (Jun 27 2006 - 5:07pm)
- ನಿಂತ ನೆಲ ನೋಡಿಕೊಳ್ಳೋಣ By: ismail (Jun 27 2006 - 6:24pm)
- ಧನ್ಯವಾದಗಳು - ದೂಷಣೆಯ ಆಶಯವಿಲ್ಲ By: Rohit (Jun 28 2006 - 11:17am)
- ನಿಂತ ನೆಲ ನೋಡಿಕೊಳ್ಳೋಣ By: ismail (Jun 27 2006 - 6:24pm)
- ತಪ್ಪು ಮಾಹಿತಿ ನೀಡದಿರಿ... ಕಾಮೆಂಟುಗಳಲ್ಲಿ ದೂಷಣೆ ಬೇಡ By: hpn (Jun 27 2006 - 5:07pm)
- ಜಿಪಿಎಲ್ ಯಾಕೆ ಬೇಕು? By: tksbhat (Jun 27 2006 - 3:27pm)
- ವಾಸ್ತವವಲ್ಲ By: Rohit (Jun 26 2006 - 9:09pm)
- `ಸಂಪೂರ್ಣ' ಬಗ್ಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ By: Rohit (Jun 25 2006 - 4:39pm)
- ಲಾಗಿನ್ ಆಗಿ ಪರೀಕ್ಷಿಸಿ By: Rohit (May 29 2006 - 11:52am)

RSS:
ಯೋಗ್ಯತೆ ಕಡಿಮೆಯೇ
ಪ್ರತಿಕ್ರಿಯೆಗೆ ಧನ್ಯವಾದಗಳು ಭಟ್ ರವರೆ.
ತಮ್ಮ ಅಭಿಪ್ರಾಯ ಸೂಕ್ತವಾಗಿಯೇ ಇದೆ. ಆದರೆ ಒಂದು ವಿಷಯ ಗಮನಿಸಿ, ಈ ವಿಚಾರದ ಕುರಿತು ವಿಚಾರವಿಮರ್ಶೆ ನಡೆಯಬೇಕಿರುವುದ ಆಸಕ್ತ ಡೆವಲಪರ್‍ಗಳ ನಡುವೆಯೇ. ಆಸಕ್ತರ ನಡುವೆ ಸಂಪರ್ಕಕ್ಕೆ ಈ-ಮೈಲ್ ವಿಳಾಸವು ಲಭ್ಯವಿದೆ. ಅಲ್ಲೇಕೆ ಬರೆಯಬಾರದು....?
ಗಮನಿಸಿ ನನ್ನ ಹಿಂದಿನ ಪತ್ರದಲ್ಲಿ ನಾನು ಯಾರನ್ನು ಬೊಟ್ಟು ಮಾಡಿತೋರಿಸುವ ಪ್ರಯತ್ನ ಮಾಡಿಲ್ಲ. ಬದಲಿಗೆ ನಮ್ಮ ಒಟ್ಟೂ ಕನ್ನಡ ತಂತ್ರಜ್ಞರ ನಿರಾಸಕ್ತಿ, ಉಪೇಕ್ಷೆಯ ಕಡೆಗೆ ಬೆಳಕು ಹರಿಸಲು ಪ್ರಯತ್ನಿಸಿದ್ದೆ.
ಇನ್ನು windows 98/2000 ಬಗ್ಗೆ ಶುರುವಾಗಿದ್ದ ತಮ್ಮ ಅನಿಸಿಕೆಗಳು ಒಮ್ಮೆಲೇ ಮ್ಯಾಕ್ ನತ್ತ ಹಾರಿದ್ದು ನೋಡಿ ಆಶ್ಚರ್ಯವಾಯಿತು. ಮ್ಯಾಕ್ ನ ಬಳಕೆ ಈಗಿನ ಸಂದರ್ಭದಲ್ಲಿ ಕನ್ನಡಿಗರಲ್ಲಿ ಎಷ್ಟಿದೆ. ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಲ್ಲವೆ....ಅತ್ಯಂತ ಅಗತ್ಯವಿರುವುದನ್ನು ಕಡೆಗಣಿಸಿ ಜುಟ್ಟಿಗೆ ಮಲ್ಲಿಗೆ ಹೂವು ಎಂದದಾದರೆ ಏನು ಪ್ರಯೋಜನ...
ಇನ್ನು ದ್ರುಪಾಲ್ ನ ವಿಷಯಕ್ಕೆ ಬರೋಣ. ದ್ರುಪಾಲ್ ಸಹ ಮುಕ್ತವಾಗಿ ಲಭ್ಯವಿರುವ ಆಸಕ್ತರಿಂದ ರೂಪಿಸಲ್ಪಟ್ಟಿರುವ ಒಂದು CMS. ಗೆದ್ದತ್ತಿನ ಬಾಲವನ್ನು ಹಿಡಿಯುವಂತೆ ಕೇವಲ ಇಂಗ್ಲೀಷ್ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಅಂತಹ ಒಂದು ವರ್ಗದವರಿಂದ ರೂಪಿಸಲ್ಪಟ್ಟಿರುವ ತಂತ್ರಾಂಶ ಅದು. ಅಲ್ಲದೆ ಅದನ್ನು ಕಸ್ಟಮೈಸ್ ಮಾಡಿಕೊಳ್ಳಲೂ ಇನ್ನೂ ಯಾವ ಪ್ರಯತ್ನಗಳೂ ಇಲ್ಲ. ಕನ್ನಡಕ್ಕೆ ಬೇಕಾದ ತಂತ್ರಾಂಶಗಳನ್ನು ರೂಪಿಸಿ ಅಭಿವೃದ್ಧಿ ಪಡಿಸುವಲ್ಲಿ ಕನ್ನಡಿಗರು ಅಶಕ್ತರೇ....ಮತ್ತೊಬ್ಬರು ತಮ್ಮ ಅನುಕೂಲಕ್ಕೆ ರೂಪಿಸಿಕೊಂಡ ತಂತ್ರಾಂಶದೊಳಕ್ಕೆ ಕನ್ನಡವನ್ನು ತುರುಕುವ ಅನಿವಾರ್ಯತೆಗೆ ನಮ್ಮನ್ನು ನಾವೇಕೆ ದೂಡಿಕೊಳ್ಳಬೇಕು....
ಇಂತಹ ಪ್ರಸ್ತುತ ಸನ್ನಿವೇಶದಲ್ಲಿ ' ಸಂಪೂರ್ಣ ' ಒಂದು ಯಶಸ್ವಿ ಗುರುತರ ಪ್ರಯತ್ನ ಎಂಬ ವಿಚಾರದತ್ತ ತಮ್ಮ ಹಾಗೂ ಇತರ ಆಸಕ್ತ ಓದುಗರ ಗಮನ ಸೆಳೆಯಲಷ್ಟೇ ಈ ಮೇಲಿನ ಪತ್ರಗಳನ್ನು ಇಲ್ಲಿ ಹಾಕಿದ್ದು.
ವಿಶ್ವಾಸಿ,
ರೋಹಿತ್.