ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಧನ್ಯವಾದಗಳು - ದೂಷಣೆಯ ಆಶಯವಿಲ್ಲ

June 28, 2006 - 11:17am — Rohit

ಧನ್ಯವಾದಗಳು - ದೂಷಣೆಯ ಆಶಯವಿಲ್ಲ

Rohit's picture

ಧನ್ಯವಾದಗಳು ಇಸ್ಮಾಯಿಲ್ ರವರೆ.
ನನ್ನ ಈ ಮೊದಲಿನ ಪ್ರತಿಕ್ರಿಯೆಗಳಲ್ಲಿ [Quote]ಒಂದು ಸೈದ್ಧಾಂತಿಕ ಬದ್ಧತೆಯೊಂದಿಗೆ ನವ ಉದಾರವಾದೀ ಜಾಗತೀಕರಣ ಜ್ಞಾನದ ಪ್ರಸರಣಕ್ಕೆ ಅಡ್ಡಿಯಾಗುವಂತೆ ರೂಪಿಸುತ್ತಿರುವ ನೀತಿಗಳ ವಿರುದ್ಧ ತಮ್ಮದೇ ಆದ ಮಾರ್ಗದಲ್ಲಿ ಸೆಣಸುತ್ತಿರುವ ಮುಕ್ತ ತಂತ್ರಾಂಶ ಕಾರ್ಯಕರ್ತರನ್ನು ದೂಷಿಸಿದ್ದು[/Quote] - ಈ ರೀತಿ ಯಾರತ್ತಲೂ ಬೊಟ್ಟು ಮಾಡಿ ತೋರಿಸಿ ನಾನು ಹೇಳುತ್ತಿರುವುದಷ್ಟೇ ಸರಿ ಎಂದು ಸಾಧಿಸುವುದಷ್ಟೇ ನನ್ನ ಉದ್ದೇಶವಾಗಿರಲಿಲ್ಲ. ನನ್ನ ಆಶಯ ಕೇವಲ "ಅತ್ಯಂತ ಅಗತ್ಯವಿರುವುದು ಆಗಿಲ್ಲ" ಎಂಬುದರ ಬಗ್ಗೆ ಗಮನ ಸೆಳೆಯುವುದಷ್ಟೇ ಆಗಿತ್ತು. ಸಮಾನಾಸಕ್ತರ ನಡುವೆ Reflective ಆದಂತಹ ಒಂದು ಆರೋಗ್ಯಕರ ಸಂವಾದವನ್ನು ಹುಟ್ಟುಹಾಕುವುದಷ್ಟೇ ನನ್ನ ಉದ್ದೇಶವಾಗಿತ್ತು. ಈ ಆಶಯವನ್ನು ಸಮರ್ಥವಾಗಿ ಕಟ್ಟಿಕೊಡುವಲ್ಲಿ ನಾನು ಎಡವಿದ್ದರೆ ಅದಕ್ಕೆ ಕ್ಷಮೆ ಕೋರುತ್ತೇನೆ.
ದ್ರುಪಾಲ್ ನ ವಿಷಯದಲ್ಲೂ ತಪ್ಪು ನುಸುಳಿದೆ. ಕ್ಷಮೆಯಿರಲಿ. ಆದರೆ ನಮ್ಮ ನೆಲದ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಆದಂತಹ ಪ್ರಯತ್ನ ಇದಲ್ಲ ಎಂಬುದು ನನ್ನ ವಾದವಷ್ಟೇ. ಇದನ್ನು ಸಂಪೂರ್ಣವಾಗಿ ಕನ್ನಡಕ್ಕೆ ಕಸ್ಟಮೈಸ್ ಮಾಡುವುದಾದರೆ ಅದಕ್ಕಿಂತ ಸಂತೋಷದ ವಿಷಯ ಮತ್ತೇನಿದೆ. ಅಂತಹ ಪ್ರಯತ್ನಗಳನ್ನು ನಾನೂ ಸ್ವಾಗತಿಸುತ್ತೇನೆ. ಆದರೆ ಇಲ್ಲಿಯವರೆಗೂ ಅದು ಆಗಿಲ್ಲ ಎಂಬುದು ಸತ್ಯ.
ಇನ್ನು ಜಿಪಿಎಲ್ ವಿಚಾರಕ್ಕೆ ಬಂದಾಗ ಈ ಹಿಂದೆ ಹೇಳಿದಂತೆ ಇದು ಡೆವಲಪರ್‍ಗಳ ಸಮುದಾಯದಲ್ಲಿ ಚರ್ಚಿತವಾಗಬೇಕದ್ದಷ್ಟೇ. ಹಾಗೆಂದೇನು ಜಿಪಿಎಲ್ ನಲ್ಲಿ ಹೊರತರುವ ಯೋಚನೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿಯೇನು ಇಲ್ಲ. ಯಾವುದೇ ರೀತಿಯ "dedicated ಸಮುದಾಯ" ರೂಪುಗೊಳ್ಳದೆ ಇದನ್ನು ತಂದು ಜಿಪಿಎಲ್ ನಲ್ಲಿ ಬಿಡುಗಡೆ ಮಾಡಿದರೆ, ಅದನ್ನಭಿವೃದ್ಧಿಪಡಿಸಿದವರಿಗೂ ನ್ಯಾಯ ಸಲ್ಲುವುದೇ... ಓಪನ್ ಸೋರ್ಸ್ ಕಮ್ಯುನಿಟಿಯ ಕಾರ್ಯಗಳೂ ನಮ್ಮ ಅತ್ಯಂತ ಜರೂರಾದ ಅಗತ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳುವಲ್ಲಿ ಎಡವಿದರೆ ಅಷ್ಟರ ಮಟ್ಟಿಗೆ Technical Elitismಗೆ ನಾಂದಿ ಹಾಡಿದಂತಲ್ಲವೇ...
Open Office ತಂತ್ರಾಂಶದ ಮೂಲಕ ಕನ್ನಡದಲ್ಲಿ ಕಚೇರಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವ ಪ್ರಯತ್ನವಾಗಿರುವುದನ್ನು ಗಮನಿಸಿದ್ದೇನೆ. ಅದರ ಬಗ್ಗೆ ನನ್ನ ಅನುಭವವನ್ನೂ ಹೇಳಿಬಿಡುತ್ತೇನೆ. ಸದ್ಯಕ್ಕಂತೂ ಅದರಲ್ಲಿ ಒಂದು ಡಾಕ್ಯುಮೆಂಟ್ ತೆರೆದರೆ ಅದು ನುಂಗುವ ರಿಸೋರ್‍ಸುಗಳು ಇತರ ಯಾವುದೇ ಅಪ್ಲಿಕೇಷನ್ ತೆರೆಯಲು ಬಿಡುವುದಿಲ್ಲ. ನುಡಿ/ಬರಹದ ಹೊರತಾದ ಆಪ್ಷನ್ನುಗಳು ಕನ್ನಡದಲ್ಲಿ ನನಗೀಗಲೂ ಇಲ್ಲ ಎಂಬುದು ಸತ್ಯ. ಇನ್ನು ಯೂನಿಕೋಡಿನ ಕಡೆಗೊಮ್ಮೆ ನೋಡಿದರೆ, ಎದ್ದು ಕಾಣುವ ಫಾಂಟುಗಳ ಕೊರತೆ... ಸಂಪಿಗೆ, ಕೇದಗೆ ಇದ್ದಾವೆ...ಆದರೆ ಅವೂ ಬಗ್ ಗಳಿಂದ ಹೊರತಾಗಿಲ್ಲ. ಅಷ್ಟರ ಮಟ್ಟಿಗೆ ಒಂದು ಬಗ್ ಫ್ರೀ ಫಾಂಟಿನ ಅಗತ್ಯವನ್ನು ಬದಿಗಿರಿಸಿದಂತಲ್ಲವೆ... ಈ ದಿಸೆಯಲ್ಲಿ ಯೋಚನೆ ಹರಿದರೆ ಚೆನ್ನ.

ರೋಹಿತ್.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡಕ್ಕೊಂದು CMS By: Rohit (13 replies) May 23, 2006 - 8:24pm
  • ಹೊಸ ಸಿಎಂಎಸ್ ಜಿಪಿಎಲ್ ನಲ್ಲಿ ದೊರೆಯುತ್ತದೆಯೇ? By: tksbhat (Jun 26 2006 - 4:41pm)
    • ವಾಸ್ತವವಲ್ಲ By: Rohit (Jun 26 2006 - 9:09pm)
      • ಜಿಪಿಎಲ್ ಯಾಕೆ ಬೇಕು? By: tksbhat (Jun 27 2006 - 3:27pm)
        • ಯೋಗ್ಯತೆ ಕಡಿಮೆಯೇ By: Rohit (Jun 27 2006 - 4:29pm)
          • ಇದೆಂಥ ಚರ್ಚೆ? By: tksbhat (Jun 27 2006 - 6:32pm)
      • ಏನಿದು CMS By: anjali (Jun 27 2006 - 12:51pm)
        • ಮ + ಊ ಬಗ್ಗೆ By: hpn (Jun 27 2006 - 5:22pm)
        • CMS - ಕಂಟೆಂಟ್ ನಿರ್ವಹಣಾ ವ್ಯವಸ್ಥೆ By: Rohit (Jun 27 2006 - 2:10pm)
          • ತಪ್ಪು ಮಾಹಿತಿ ನೀಡದಿರಿ... ಕಾಮೆಂಟುಗಳಲ್ಲಿ ದೂಷಣೆ ಬೇಡ By: hpn (Jun 27 2006 - 5:07pm)
            • ನಿಂತ ನೆಲ ನೋಡಿಕೊಳ್ಳೋಣ By: ismail (Jun 27 2006 - 6:24pm)
              • ಧನ್ಯವಾದಗಳು - ದೂಷಣೆಯ ಆಶಯವಿಲ್ಲ By: Rohit (Jun 28 2006 - 11:17am)
  • `ಸಂಪೂರ್ಣ' ಬಗ್ಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ By: Rohit (Jun 25 2006 - 4:39pm)
  • ಲಾಗಿನ್ ಆಗಿ ಪರೀಕ್ಷಿಸಿ By: Rohit (May 29 2006 - 11:52am)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 6:05pm
  • makrumanju
    ಉ: "ನಾನು-ನೀನು
    October 13, 2008 - 5:46pm
  • makrumanju
    ಉ: ಕನಸು ಕದ್ದ ಹುಡುಗಿ...
    October 13, 2008 - 5:45pm
  • makrumanju
    ಉ: ರಸ ಪ್ರಶ್ನೆಗಳು ಭಾಗ - ೨
    October 13, 2008 - 5:44pm
  • makrumanju
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:40pm
  • makrumanju
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:40pm
  • Aravind M.S
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 5:39pm
  • veena
    ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ
    October 13, 2008 - 5:36pm
  • veena
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 13, 2008 - 5:15pm
  • prashy.mh
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:11pm
ಇನ್ನಷ್ಟು


ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator