ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉಳಿಸಿಕೊಳ್ಳುವಿಕೆ-ಕೆಲವು ವಿಚಾರಗಳು

July 11, 2006 - 5:10pm — ರಾಮಕುಮಾರ್

ಉಳಿಸಿಕೊಳ್ಳುವಿಕೆ-ಕೆಲವು ವಿಚಾರಗಳು

ರಾಮಕುಮಾರ್'s picture

ಈ ಚರ್ಚೆಯನ್ನು ಓದಿದಾಗ ನನ್ನ ಮನಸ್ಸಿಗೆ ಹೊಳೆದ ಕೆಲ ವಿಚಾರಗಳಿವು,ವಿಷಯಾಂತರವೆಂದು ಅನ್ನಿಸಿದರೆ ಕ್ಷಮಿಸಿ...

ಕನ್ನಡ ಉಳಿಸಬೇಕೆಂಬ ಪರಿಕಲ್ಪನೆಯೇ ತೀರ್ಥಹಳ್ಳಿ, ಆಗುಂಬೆ, ಶೃಂಗೇರಿ ಸುತ್ತಲಿನ ಹಳ್ಳಿಗಳಲ್ಲಿ ಅಸಂಗತವಾಗುತ್ತದೆ.ನಮ್ಮೂರಿನ ಜನ ಕನ್ನಡದಲ್ಲಿ(ಕನ್ನಡದಲ್ಲಿ ಮಾತ್ರ) ಸಲೀಸಾಗಿ ಮಾತನಾಡುತ್ತಾರೆ.ಬಸ್ಸು, ಕಾರು, ಪೋಲೀಸು ಇತ್ಯಾದಿಗಳನ್ನು ಕನ್ನಡ, ಇಂಗ್ಲೀಷುಗಳ ಗೊಡವೆ ಇಲ್ಲದೆ ಬಳಸುತ್ತಾರೆ.ನಮ್ಮ ಮನೆಯ ಅಡಿಕೆ ತೋಟಕ್ಕೆ ಕೆಲಸಕ್ಕೆ ಬರುವವನೊಬ್ಬ "ಅಪೆಂಡಿಕ್ಸ್" ಪದವನ್ನು ಸುಧಾರಿಸಿ "ಅಪ್ಪಣ್ಣಯ್ಯನ ಸರ" ಎಂದು ಹೇಳುತ್ತಾನೆ. ಅವನೇ ಬಳಸುವ " ಬುರ್ನಾಸು" ಪದದ ಮೂಲ "Born ass" ಇರಬೇಕೆಂದು ನನ್ನ ಗುಮಾನಿ.

ಸುನಿಲರವರು ಉದಾಹರಿಸಿದ ತೆರನಾಗಿ ಕನ್ನಡ ಮಾತನಾಡುವವರು ಬೆಂಗಳೂರಿನಂತಹ ಮಹಾನಗರದಲ್ಲಿ ಹೇರಳವಾಗಿದ್ದಾರೆ ಅನ್ಸುತ್ತೆ.ಈಟಿವಿ, ಉದಯಟಿವಿಗಳಲ್ಲಿ ಬರುವ ನಮ್ಮ ನಟೀಮಣಿಗಳ ಸಂದರ್ಶನಗಳನ್ನು ನೋಡಿದರೆ ಇಂತಹ ಸ್ಯಾಂಪಲ್ಲುಗಳು ಹೇರಳವಾಗಿ ಸಿಗುತ್ತವೆ.ಆದರೆ ಇದರಿಂದ ಕನ್ನಡದ ಗತಿ ಎಲ್ಲ ಕಡೆ ಹೀಗೆ ಆಗಿದೆ ಎಂದು ನಿರ್ಧರಿಸಲಾಗದು.ಮೇಲಾಗಿ ಬಹಳಷ್ಟು ಜನರಿಗೆ ಇಂಗ್ಲಿಷಿನ ಅಜ್ಞಾನವೇ ಮುಳುವಾಗಿದೆ.ಹಳ್ಳಿಯ ಹಿನ್ನಲೆಯಿಂದ ಬಂದ ಸುಮಾರು ಜನ ನನ್ನ ಸ್ನೇಹಿತರು ಒಳ್ಳೆಯ ಅಂಕ ಹೊಂದಿದ್ದು, ತಾರ್ಕಿಕವಾಗಿ ಆಲೋಚಿಸುವ ಸಾಮರ್ಥ್ಯ ಇದ್ದರೂ ಸಹ ಇಂಗ್ಲಿಷಿನಲ್ಲಿ ಸುಲಲಿತವಾಗಿ ಮಾತನಾಡಲು ಬರದ ಕಾರಣ ಕ್ಯಾಂಪಸ್ ಇಂಟರ್ವ್ಯೂಗಳಲ್ಲಿ ಆಯ್ಕೆಯಾಗಲಿಲ್ಲ.

ನನ್ನ ಕೆಲ ಸಹೋದ್ಯೋಗಿ ಮಿತ್ರರು ಹಟಕ್ಕೆ ಬಿದ್ದವರಂತೆ ತಮ್ಮ ಖಾಸಗಿ ಹರಟೆಗಳನ್ನು ಇಂಗ್ಲೀಷಿನಲ್ಲಿ ತೊಡಗುವುದನ್ನು ನೋಡಿ ಕನಿಕರ ಪಡುತ್ತೇನೆ. ಆ ಭಾಷೆ ಎಷ್ಟೆಂದರೂ ಅವರಿಗೆ ಪರಕೀಯವಾದುದರಿಂದ ಆ ಸಂಭಾಷಣೆಯಲ್ಲಿ ಜೀವಂತಿಕೆ, ತೀವ್ರತೆ ಇರೋಲ್ಲ.ಗೆಳೆಯರ ಗುಂಪಿನ ಹರಟೆಯ ತರಲೆ, ಕುಚೋದ್ಯ, ಗೇಲಿ ಇವೆಲ್ಲ ಮಾಯ.ಗಹನವಾದದ್ದು, ಭಾವ ತೀವ್ರತೆಯನ್ನ ಅಪೇಕ್ಷಿಸುವ ವಿಷಯಗಳ ಪ್ರಸ್ತಾಪವೂ ಇಲ್ಲ,ಎಲ್ಲ ಅದೇ ಚರ್ವಿತ ಚರ್ವಣ.
ಇದನ್ನೆಲ್ಲ ಗಮನಿಸಿದಾಗ ಭಾಷಾ ಶುದ್ಧಿಗಿಂತ ಸಂವಹನ ಸಾಧ್ಯವಾಗುವ, ಸಂವೇದನೆಗಳ ಅಭಿವ್ಯಕ್ತಿ ಸಾಧ್ಯವಾಗುವ ಭಾಷಾ ಬಳಕೆ ಮುಖ್ಯ ಅನ್ನಿಸುತ್ತೆ.
ನಮಗೆ ಯಾವ ಭಾಷೆಯಲ್ಲಿ ಮನಸ್ಸೋ ಇಚ್ಛೆ ಬಯ್ಯಲು ಬರುತ್ತದೆಯೋ, ಹರಟೆ, ಗೇಲಿ ಸಾಧ್ಯವಾಗುತ್ತದೆಯೋ,ಹೇಳಲಾರದ್ದನ್ನ ಹೇಳಲು ಸಾಧ್ಯವಾಗುತ್ತದೆಯೋ ಆ ಭಾಷೆಯನ್ನೆ ಸಾಧ್ಯವಾದಷ್ಟು ಬಳಸುವುದು ಸೂಕ್ತವಲ್ಲವೇ?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡ ಉಳಿಸುವಿಕೆ: ಭಿನ್ನ ನಿಲುವು By: ismail (11 replies) July 11, 2006 - 1:11pm
  • ಉ: ಕನ್ನಡ ಉಳಿಸುವಿಕೆ: ಭಿನ್ನ ನಿಲುವು By: kannadakanda (Jul 21 2008 - 2:14pm)
  • ಉ: ಕನ್ನಡ ಉಳಿಸುವಿಕೆ: ಭಿನ್ನ ನಿಲುವು By: mahesha (Jul 21 2008 - 10:30am)
  • ಕನ್ನಡ ಉಳಿಸುವದು ಹೇಗೆ? By: anant (Oct 31 2006 - 9:29am)
  • ಗುತ್ತಿಗೆ By: bhatpp (Jul 12 2006 - 8:39am)
  • ಅನಿವಾಸಿಗಳ ತಪ್ಪೇನು? By: benaka (Jul 12 2006 - 7:27am)
    • ಕಾಫಿ ಶಾಪ್ ಸೋಷಿಯಲಿಸಂ. By: ismail (Jul 12 2006 - 1:56pm)
  • ಭೌದ್ಧಿಕ ಸರ್ಕಸ್! By: bhatpp (Jul 11 2006 - 8:48pm)
  • ಉಳಿಸಿಕೊಳ್ಳುವಿಕೆ-ಕೆಲವು ವಿಚಾರಗಳು By: ರಾಮಕುಮಾರ್ (Jul 11 2006 - 5:10pm)
    • ಎನ್ ಆರ್ ಐ ಕನ್ನಡಿಗರ ಕನ್ನಡ ಉಳಿಸುವಿಕೆ By: ismail (Jul 11 2006 - 6:29pm)
  • ಸರಿ ಒಪ್ಪಿದೆ. ಕೆಲವು ಪ್ರಶ್ನೆಗಳು By: Sunil Jayaprakash (Jul 11 2006 - 2:18pm)
    • ಇಂಗ್ಲಿಷ್ ಸೇರಿಸುವುದು ಯಾರು? By: ismail (Jul 11 2006 - 3:45pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • makrumanju
    ಉ: "ನಾನು-ನೀನು
    October 13, 2008 - 5:46pm
  • makrumanju
    ಉ: ಕನಸು ಕದ್ದ ಹುಡುಗಿ...
    October 13, 2008 - 5:45pm
  • makrumanju
    ಉ: ರಸ ಪ್ರಶ್ನೆಗಳು ಭಾಗ - ೨
    October 13, 2008 - 5:44pm
  • makrumanju
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:40pm
  • makrumanju
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:40pm
  • Aravind M.S
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 5:39pm
  • veena
    ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ
    October 13, 2008 - 5:36pm
  • veena
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 13, 2008 - 5:15pm
  • prashy.mh
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:11pm
  • prashy.mh
    ಉ: ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
    October 13, 2008 - 5:09pm
ಇನ್ನಷ್ಟು


ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator