ಭೌದ್ಧಿಕ ಸರ್ಕಸ್!
- ಉ: ಕನ್ನಡ ಉಳಿಸುವಿಕೆ: ಭಿನ್ನ ನಿಲುವು By: kannadakanda (Jul 21 2008 - 2:14pm)
- ಉ: ಕನ್ನಡ ಉಳಿಸುವಿಕೆ: ಭಿನ್ನ ನಿಲುವು By: mahesha (Jul 21 2008 - 10:30am)
- ಕನ್ನಡ ಉಳಿಸುವದು ಹೇಗೆ? By: anant (Oct 31 2006 - 9:29am)
- ಗುತ್ತಿಗೆ By: bhatpp (Jul 12 2006 - 8:39am)
- ಅನಿವಾಸಿಗಳ ತಪ್ಪೇನು? By: benaka (Jul 12 2006 - 7:27am)
- ಕಾಫಿ ಶಾಪ್ ಸೋಷಿಯಲಿಸಂ. By: ismail (Jul 12 2006 - 1:56pm)
- ಭೌದ್ಧಿಕ ಸರ್ಕಸ್! By: bhatpp (Jul 11 2006 - 8:48pm)
- ಉಳಿಸಿಕೊಳ್ಳುವಿಕೆ-ಕೆಲವು ವಿಚಾರಗಳು By: ರಾಮಕುಮಾರ್ (Jul 11 2006 - 5:10pm)
- ಎನ್ ಆರ್ ಐ ಕನ್ನಡಿಗರ ಕನ್ನಡ ಉಳಿಸುವಿಕೆ By: ismail (Jul 11 2006 - 6:29pm)
- ಸರಿ ಒಪ್ಪಿದೆ. ಕೆಲವು ಪ್ರಶ್ನೆಗಳು By: Sunil Jayaprakash (Jul 11 2006 - 2:18pm)
- ಇಂಗ್ಲಿಷ್ ಸೇರಿಸುವುದು ಯಾರು? By: ismail (Jul 11 2006 - 3:45pm)

RSS:
ಭೌದ್ಧಿಕ ಸರ್ಕಸ್!
ಅಂತೆಯೇ,
"ಶುದ್ಧ" ಭಾಷಾ ಪ್ರಯೋಗದ ಭರಾಟೆಯಲ್ಲಿ ನಮಗೆ ಬೇಕಾಗಿರುವುದು ವ್ಯಾಕರಣದ ಕುರಿತು (ತಲೆದೋರುವ) ಚರ್ಚೆಯೇ (ತನ್ಮೂಲಕ ದೊರೆಯುವ ಭೌದ್ಧಿಕ ಸರ್ಕಸ್ ನ ಆನಂದ) ಹೊರತು, ನಿಜವಾದ ಪದ (ಭಾಷಾ) ಪ್ರಯೋಗವಲ್ಲ ಅಂತ ಹೇಳಬಹುದೇ?
ಬಸವಣ್ಣನೇ ಹೇಳಿದಂತೆ,
"ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ.
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ."
ನಮ್ಮೀ ಭಾಷೆಯ ಉಳಿವಿನ ಕುರಿತ ಚರ್ಚೆಯು (ಅರ್ಥಾತ್, ಭೌದ್ಧಿಕ ಸರ್ಕಸ್) ಕೇವಲ ತೋರಿಕೆಗೋ ಎಂದು ಹಲವಾರು ಬಾರಿ ಮನಸ್ಸಿನಲ್ಲಿ ಅನುಮಾನವೇಳುತ್ತದೆ! ಈ ಮೊದಲೇ ಉಳಿದವರು ಹೇಳಿದಂತೆ, ಕನ್ನಡವನ್ನು ಯಾವ ಯೋಚನೆಗಳಿಲ್ಲದೆ ಬಳಸುವರು, internet ನಲ್ಲಿ ನಡೆಯುತ್ತಿರುವ ಈ ಎಲ್ಲಾ ವಾದ-ಪ್ರತಿವಾದಗಳ ಅರಿವೂ ಇಲ್ಲದೆ, ವ್ಯಾಕರಣಬದ್ಧವಾಗಿಯೋ ಅಥವಾ ಇಲ್ಲವಾಗಿಯೋ, ನಿಶ್ಚಿಂತರಾಗಿ, ಬಳಸುತ್ತಿದ್ದಾರೆ. ಎಲ್ಲಿಯವರೆಗೆ ಜನಸಾಮಾನ್ಯರು ಹೀಗೆ ಕನ್ನಡವನ್ನು ಬಳಸುವರೋ, ಅಲ್ಲಿಯವರೆಗೆ ಕನ್ನಡಕ್ಕೆ ಅಳಿವಿಲ್ಲ!