ಧನ್ಯವಾದಗಳು ಮತ್ತು 'ಮೈ ಫೇರ್ ಲೇಡಿ'
- ನಿದ್ದೆ ಹತ್ತಿತ್ತು By: ಸಂಗನಗೌಡ (Aug 20 2006 - 8:11pm)
- ನಮ್ಮ ಕೈಲಾದ್ದನ್ನು ಮಾಡೋಣ By: benaka (Aug 14 2006 - 3:03pm)
- ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
- ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
- ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
- "ಉಳಿಸುವ, ಬೆಳೆಸುವ ಗೋಳು" ಒಂದು non-existent entity By: hpn (Aug 16 2006 - 11:28am)
- ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
- ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
- ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
- ಮಾಡಿನೋಡೋಣ! By: benaka (Aug 14 2006 - 9:54am)
- ಹೇಗೆ ಬೇರೆ ಮತ್ತು ಯಾವುದು ತುರುಕಾಟ By: ಮಹೇಶ ಭೋಗಾದಿ (Aug 14 2006 - 11:19am)
- ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
- ಇದಕ್ಕೆ ಉತ್ತರವೆಲ್ಲಿ? By: ಮಹೇಶ ಭೋಗಾದಿ (Aug 14 2006 - 2:59pm)
- ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
- ಹೇಗೆ ಬೇರೆ ಮತ್ತು ಯಾವುದು ತುರುಕಾಟ By: ಮಹೇಶ ಭೋಗಾದಿ (Aug 14 2006 - 11:19am)
- ದೆವ್ವ ದೊಡ್ಡದೈತೆ ಕಣಪ್ಪೊ! By: ಸಂಗನಗೌಡ (Aug 13 2006 - 6:20pm)
- ಸಮ್ಮೇಳನ By: ಮಹೇಶ ಭೋಗಾದಿ (Aug 14 2006 - 11:22am)
- ಸಕ್ಕದವದು ಕಲ್ಲು By: ಸಂಗನಗೌಡ (Aug 12 2006 - 11:52am)
- ಕಲ್ಲು-ಸಕ್ಕರೆ-ಹಾಲು By: ಮಹೇಶ ಭೋಗಾದಿ (Aug 12 2006 - 2:53pm)
- ಭೂತ ಚೇಷ್ಟೆ By: benaka (Aug 12 2006 - 7:35am)
- ಕನ್ನಡಂಗಳ್ By: ಸಂಗನಗೌಡ (Aug 11 2006 - 4:43pm)
- ರಸಂನೇ ರಸ ಮಾಡಿ By: ಸಂಗನಗೌಡ (Aug 11 2006 - 3:58pm)
- ರಸಂನೂ ಬೇಡ,ಸಾರೂ ಬೇಡ By: ಸಂಗನಗೌಡ (Aug 11 2006 - 3:36pm)
- ಏನ್ ಮಾಡೋದು By: nareshov (Aug 11 2006 - 7:56pm)
- ಭೂತ ಅಂದುಕೊಳ್ಳಿ By: ಸಂಗನಗೌಡ (Aug 11 2006 - 3:02pm)
- ಒರಟು By: ಮಹೇಶ ಭೋಗಾದಿ (Aug 12 2006 - 9:33am)
- ಸಂಸ್ಕೃತದ ತದ್ಭವ ಸಕ್ಕದ By: ಮಹೇಶ ಭೋಗಾದಿ (Aug 11 2006 - 3:27pm)
- ದೆವ್ವವನ್ನು ಬೇಗ ಬಿಡಿಸಿಕೊಳ್ಳಿ By: benaka (Aug 11 2006 - 1:56pm)
- ತಪ್ಪು ಮಾಹಿತಿ By: ಮಹೇಶ ಭೋಗಾದಿ (Aug 11 2006 - 2:34pm)
- - By: ಮಹೇಶ ಭೋಗಾದಿ (Aug 11 2006 - 2:30pm)
- ನನ್ನ ತಾಯ್ನುಡಿ ಕನ್ನಡ By: ಸಂಗನಗೌಡ (Aug 11 2006 - 12:52pm)
- ಸಾರು, By: nareshov (Aug 11 2006 - 7:36pm)
- ದೆವ್ವ ತೊಲಗಲಿ By: ಮಹೇಶ ಭೋಗಾದಿ (Aug 11 2006 - 1:29pm)
- ರಸಂ:ಸರಸಂ-ವಿರಸಂ! By: benaka (Aug 11 2006 - 11:35am)
- ರಸಾಭಾಸ By: ismail (Aug 11 2006 - 3:37pm)
- ಅಯ್ಯೊ ಒಂದು ಕನ್ನಡದಲ್ಲಿ ಸಾರಿಗೆ ರಸಂ ಎನ್ನುವರೇನೋ! By: ಮಹೇಶ ಭೋಗಾದಿ (Aug 11 2006 - 11:53am)
- ತಿಳಿಸಿ By: ಸಂಗನಗೌಡ (Aug 11 2006 - 8:54am)
- ಪ್ರಯತ್ನ By: ಮಹೇಶ ಭೋಗಾದಿ (Aug 11 2006 - 9:46am)
- ಟ್ರಾಯ್ ಮಾಡೋಣ By: ಸಂಗನಗೌಡ (Aug 10 2006 - 3:15pm)
- ತಿಳಿ/ಅರಿ By: ಮಹೇಶ ಭೋಗಾದಿ (Aug 10 2006 - 3:48pm)
- ಕನ್ನಡ ಬಳಸಲು ಹೆದರಿಕೆಯೇಕೆ? By: benaka (Aug 10 2006 - 8:04am)
- ಮೞೆ ಬೇಳುತ್ತಿದೆ... :P By: nareshov (Aug 11 2006 - 7:30pm)
- ಒಂದು ರಸಂ ಮೀಮಾಂಸೆ By: ismail (Aug 10 2006 - 1:30pm)
- ಧನ್ಯವಾದಗಳು ಮತ್ತು 'ಮೈ ಫೇರ್ ಲೇಡಿ' By: Rohit (Aug 9 2006 - 4:57pm)
- ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
- ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
- facts: By: nareshov (Aug 11 2006 - 2:46pm)
- ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
- ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
- ಯಾರ ಕನ್ನಡ, ಕನ್ನಡ? By: Kamalakar (Aug 9 2006 - 3:12pm)
- ಭಾಷಾಭಿಮಾನ By: ismail (Aug 9 2006 - 3:56pm)
- ಕನ್ನಡಂಗಳ್ By: ಮಹೇಶ ಭೋಗಾದಿ (Aug 9 2006 - 1:45pm)
- ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
- ಕನ್ನಂಡಂಗಳೊ ಅಂದರೆ? By: ಮಹೇಶ ಭೋಗಾದಿ (Aug 10 2006 - 11:33am)
- ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
- ಕಳಿಸು By: gvmt (Aug 8 2006 - 10:18pm)
- ಕಳುಹು. By: ಮಹೇಶ ಭೋಗಾದಿ (Aug 9 2006 - 12:34pm)

RSS:
ಧನ್ಯವಾದಗಳು ಮತ್ತು 'ಮೈ ಫೇರ್ ಲೇಡಿ'
ಓ ಎಲ್ ಎನ್ ಸರ್ ರವರಿಗೆ ತುಂಬ ಧನ್ಯವಾದಗಳು. ಇತ್ತೀಚೆಗೆಗಂತೂ ತಮ್ಮ ಸಂಪದದಲ್ಲಿ ತಮ್ಮ ಬರವಣಿಗೆ ಬಹಳ ಕಡಿಮೆಯೇ ಆಗಿದೆ. ದಯವಿಟ್ಟು ಸಮಯ ಮಾಡಿಕೊಂಡು ಆಗಾಗ ಬರೆಯುತ್ತಿರಿ.
ಇನ್ನು ತಾವು ಹೇಳಿದ ಇಂಗ್ಲೀಷಿನ ಪ್ರಭೇದಗಳ ಬಗ್ಗೆ ಸಂಪದ ಗೆಳೆಯರೊಟ್ಟಿಗೆ ನನಗೆ ತಿಳಿದಿರುವ ಸಣ್ಣ ಮಾಹಿತಿಯೊಂದನ್ನು ಹಂಚಿಕೊಳ್ಳುತ್ತೇನೆ. ಜಾರ್ಜ್ ಬರ್ನಾರ್ಡ್ ಶಾ ರವರು ಕಳೆದ ಶತಮಾನದ ಆರಂಭದಲ್ಲಿ ಇಂಗ್ಲೆಂಡಿನಲ್ಲಿದ್ದ ಇಂಗ್ಲೀಷ್ ಭಾಷಾಶುದ್ಧಿಯ ಬಗೆಗಿನ ಪಂಡಿತರ ಮೋಹವನ್ನು ಲೇವಡಿ ಮಾಡುತ್ತ 'ಪಿಗ್ಮಾಲಿಯನ್' ಎಂಬ ಹೆಸರಿನ ನಾಟಕ ರಚಿಸಿದ್ದರು. ಅದು ಬಹಳ ಜನಪ್ರಿಯವಾದ ಸಂಗೀತರೂಪಕವಾಗಿ ಪ್ರದರ್ಶಿಸಲ್ಪಡುತ್ತಿತ್ತು. ೧೯೬೦ರ ದಶಕದಲ್ಲಿ ಆಡ್ರೇ ಹೆಪ್ ಬರ್ನ್‌ಳ ಅಭಿನಯದಲ್ಲಿ 'ಮೈ ಫೇರ್ ಲೇಡಿ' ಎಂಬ ಹೆಸರಿನಲ್ಲಿ ಚಲನಚಿತ್ರವಾಯಿತು.
ಈ ಚಿತ್ರದಲ್ಲಿ ಇಂಗ್ಲೀಷಿನ ಪ್ರೊಫೆಸರನೊಬ್ಬ ಇಂಗ್ಲೆಂಡಿನ ಗ್ರಾಮೀಣ ಭಾಗದಿಂದ ಬಂದು ಲಂಡನ್ನಿನಲ್ಲಿ ಹೂಮಾರುವ ವೃತ್ತಿಯಲ್ಲಿರುವವಳೊಬ್ಬಳ ಗ್ರಾಮ್ಯ ಉಚ್ಛಾರವನ್ನು ಕಂಡು ಆಕೆಯ ಭಾಷೆಯನ್ನು ಶಿಷ್ಟಗೊಳಿಸುವ ಪಣತೊಡುತ್ತಾನೆ. ಕಡೆಗೆ ಆ ರೀತಿಯ ಪ್ರಯತ್ನದ ವ್ಯರ್ಥತೆಯನ್ನು ಮನಗಾಣುತ್ತಾನೆ. ಒಂದು ಒಳ್ಳೆಯ ಚಿತ್ರ.
ಇಂಗ್ಲೀಷಿನ ಪ್ರಭೇದಗಳ ಬಗ್ಗೆ ಮಾತು ಬಂದಾಗ ಈ ಚಿತ್ರ ನೆನಪಾಯಿತು. ಅವಕಾಶ ಸಿಕ್ಕಾಗ ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಿ. 'ಪಿಗ್ಮಾಲಿಯನ್' ನಾಟಕವು 'ಸೇವಂತಿ ಪ್ರಸಂಗ' ಎಂಬ ಹೆಸರಿನಲ್ಲಿ ಜಯಂತ ಕಾಯ್ಕಿಣಿಯವರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟಿದೆ. 'ಹೂ ಹುಡುಗಿ' ಎಂಬ ಹೆಸರಿನಲ್ಲಿ ರಂಗಕ್ಕೂ ಬಂದಿದೆ.