ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ?
- ನಿದ್ದೆ ಹತ್ತಿತ್ತು By: ಸಂಗನಗೌಡ (Aug 20 2006 - 8:11pm)
- ನಮ್ಮ ಕೈಲಾದ್ದನ್ನು ಮಾಡೋಣ By: benaka (Aug 14 2006 - 3:03pm)
- ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
- ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
- ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
- "ಉಳಿಸುವ, ಬೆಳೆಸುವ ಗೋಳು" ಒಂದು non-existent entity By: hpn (Aug 16 2006 - 11:28am)
- ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
- ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
- ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
- ಮಾಡಿನೋಡೋಣ! By: benaka (Aug 14 2006 - 9:54am)
- ಹೇಗೆ ಬೇರೆ ಮತ್ತು ಯಾವುದು ತುರುಕಾಟ By: ಮಹೇಶ ಭೋಗಾದಿ (Aug 14 2006 - 11:19am)
- ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
- ಇದಕ್ಕೆ ಉತ್ತರವೆಲ್ಲಿ? By: ಮಹೇಶ ಭೋಗಾದಿ (Aug 14 2006 - 2:59pm)
- ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
- ಹೇಗೆ ಬೇರೆ ಮತ್ತು ಯಾವುದು ತುರುಕಾಟ By: ಮಹೇಶ ಭೋಗಾದಿ (Aug 14 2006 - 11:19am)
- ದೆವ್ವ ದೊಡ್ಡದೈತೆ ಕಣಪ್ಪೊ! By: ಸಂಗನಗೌಡ (Aug 13 2006 - 6:20pm)
- ಸಮ್ಮೇಳನ By: ಮಹೇಶ ಭೋಗಾದಿ (Aug 14 2006 - 11:22am)
- ಸಕ್ಕದವದು ಕಲ್ಲು By: ಸಂಗನಗೌಡ (Aug 12 2006 - 11:52am)
- ಕಲ್ಲು-ಸಕ್ಕರೆ-ಹಾಲು By: ಮಹೇಶ ಭೋಗಾದಿ (Aug 12 2006 - 2:53pm)
- ಭೂತ ಚೇಷ್ಟೆ By: benaka (Aug 12 2006 - 7:35am)
- ಕನ್ನಡಂಗಳ್ By: ಸಂಗನಗೌಡ (Aug 11 2006 - 4:43pm)
- ರಸಂನೇ ರಸ ಮಾಡಿ By: ಸಂಗನಗೌಡ (Aug 11 2006 - 3:58pm)
- ರಸಂನೂ ಬೇಡ,ಸಾರೂ ಬೇಡ By: ಸಂಗನಗೌಡ (Aug 11 2006 - 3:36pm)
- ಏನ್ ಮಾಡೋದು By: nareshov (Aug 11 2006 - 7:56pm)
- ಭೂತ ಅಂದುಕೊಳ್ಳಿ By: ಸಂಗನಗೌಡ (Aug 11 2006 - 3:02pm)
- ಒರಟು By: ಮಹೇಶ ಭೋಗಾದಿ (Aug 12 2006 - 9:33am)
- ಸಂಸ್ಕೃತದ ತದ್ಭವ ಸಕ್ಕದ By: ಮಹೇಶ ಭೋಗಾದಿ (Aug 11 2006 - 3:27pm)
- ದೆವ್ವವನ್ನು ಬೇಗ ಬಿಡಿಸಿಕೊಳ್ಳಿ By: benaka (Aug 11 2006 - 1:56pm)
- ತಪ್ಪು ಮಾಹಿತಿ By: ಮಹೇಶ ಭೋಗಾದಿ (Aug 11 2006 - 2:34pm)
- - By: ಮಹೇಶ ಭೋಗಾದಿ (Aug 11 2006 - 2:30pm)
- ನನ್ನ ತಾಯ್ನುಡಿ ಕನ್ನಡ By: ಸಂಗನಗೌಡ (Aug 11 2006 - 12:52pm)
- ಸಾರು, By: nareshov (Aug 11 2006 - 7:36pm)
- ದೆವ್ವ ತೊಲಗಲಿ By: ಮಹೇಶ ಭೋಗಾದಿ (Aug 11 2006 - 1:29pm)
- ರಸಂ:ಸರಸಂ-ವಿರಸಂ! By: benaka (Aug 11 2006 - 11:35am)
- ರಸಾಭಾಸ By: ismail (Aug 11 2006 - 3:37pm)
- ಅಯ್ಯೊ ಒಂದು ಕನ್ನಡದಲ್ಲಿ ಸಾರಿಗೆ ರಸಂ ಎನ್ನುವರೇನೋ! By: ಮಹೇಶ ಭೋಗಾದಿ (Aug 11 2006 - 11:53am)
- ತಿಳಿಸಿ By: ಸಂಗನಗೌಡ (Aug 11 2006 - 8:54am)
- ಪ್ರಯತ್ನ By: ಮಹೇಶ ಭೋಗಾದಿ (Aug 11 2006 - 9:46am)
- ಟ್ರಾಯ್ ಮಾಡೋಣ By: ಸಂಗನಗೌಡ (Aug 10 2006 - 3:15pm)
- ತಿಳಿ/ಅರಿ By: ಮಹೇಶ ಭೋಗಾದಿ (Aug 10 2006 - 3:48pm)
- ಕನ್ನಡ ಬಳಸಲು ಹೆದರಿಕೆಯೇಕೆ? By: benaka (Aug 10 2006 - 8:04am)
- ಮೞೆ ಬೇಳುತ್ತಿದೆ... :P By: nareshov (Aug 11 2006 - 7:30pm)
- ಒಂದು ರಸಂ ಮೀಮಾಂಸೆ By: ismail (Aug 10 2006 - 1:30pm)
- ಧನ್ಯವಾದಗಳು ಮತ್ತು 'ಮೈ ಫೇರ್ ಲೇಡಿ' By: Rohit (Aug 9 2006 - 4:57pm)
- ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
- ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
- facts: By: nareshov (Aug 11 2006 - 2:46pm)
- ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
- ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
- ಯಾರ ಕನ್ನಡ, ಕನ್ನಡ? By: Kamalakar (Aug 9 2006 - 3:12pm)
- ಭಾಷಾಭಿಮಾನ By: ismail (Aug 9 2006 - 3:56pm)
- ಕನ್ನಡಂಗಳ್ By: ಮಹೇಶ ಭೋಗಾದಿ (Aug 9 2006 - 1:45pm)
- ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
- ಕನ್ನಂಡಂಗಳೊ ಅಂದರೆ? By: ಮಹೇಶ ಭೋಗಾದಿ (Aug 10 2006 - 11:33am)
- ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
- ಕಳಿಸು By: gvmt (Aug 8 2006 - 10:18pm)
- ಕಳುಹು. By: ಮಹೇಶ ಭೋಗಾದಿ (Aug 9 2006 - 12:34pm)

RSS:
ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ?
ಇಲ್ಲಿ ನೋಡಿ(ಗಮನಿಸಿ)..
ಅಚ್ಚ ಕನ್ನಡಿಗರ ನಾಲಗೆಯಲ್ಲಿ ಹೊರಳದ ಉಚ್ಚಾರಣೆಯನ್ನು ಅವರಿಂದ ಹೇಳಿಸಿದರೆ ಅದು ಹೀಗೆ ಆಗುವುದು.
ಅಚ್ಚ ಕನ್ನಡದಲ್ಲಿ "ಋ" ಕಾರವಿಲ್ಲ, ಮಹಾಪ್ರಾಣಗಳು ಕಡಮೆ, "ಶ", "ಷ" ಕಾರಗಳಿಲ್ಲ. ಹಳೆಗನ್ನಡದಲ್ಲಿ "ಹ"ಕಾರವಿರಲಿಲ್ಲವೆಂದು ಯಾರೊ ಹೇಳಿದ ನೆನಪಿದೆ.
ಆದರೂ ಎಷ್ಟೋ ಬಡಕಣ ಭಾರತದವರು ಹೇಳಲಾಗದ "ಳ"ಕಾರವನ್ನು ನಮ್ಮ ಹಳ್ಳಿ ಕನ್ನಡಿಗರು ಎನಿತು ಸಲೀಸಾಗಿ ಹೇಳುವರು, ಅವರೆಂದು "ಹಳ್ಳಿ"ಯನ್ನು "ಹಲ್ಲಿ" ಎನ್ನುವುದಿಲ್ಲ.
ಪಾಪ, ಒಬ್ಬ ಹಳ್ಳಿಯವನು "ಕನ್ನಡ ರಾಜ್ಯೋಸವ" ಎಂದರೆ ನಾವು ನಗುತ್ತೇವೆ, ಅವನ್ನು ಆಡಿಕೊಳ್ಳುತ್ತೇವೆ(ಅಪಹಾಸ್ಯ), ಆದರೆ ನಿಜವಾಗಿ ಅವನ ತಾಯಿನುಡಿಯಾದ ಕನ್ನಡದಲ್ಲಿ ಆ ಪದವೇ ಇಲ್ಲ. ಅದನ್ನು ನಾವು "ಕನ್ನಡ ನಾಡ ಹಬ್ಬ" ಎಂದರೆ ಅವನ್ನು ಸರಿಯಾಗೆ ಹೇಳನೆ?
ಅದು ಹೋಗಲಿ, ಹೃದಯವನ್ನು ತೆಲುಗಿನವರು "ರಿದಯ"(ಯಾರೊ ನನಗೆ ಹೀಗೆ ಹೇಳಿದರು) ಮಾಡಿದಂತೆ ತದ್ಭವಗಳನ್ನಾದರು ಮಾಡುವರೆ, ಅದೂ ಇಲ್ಲ. ಇವರಿಗೆ ಶುದ್ಧ ಸಕ್ಕದದ ಉಚ್ಚಾರಣೆಯೇ ಆಗಬೇಕು.
ಕನ್ನಡದವರಿಗೆ ಕನ್ನಡದ ಉಚ್ಚಾರಗಳು ಸರಿಯಾಗಿ ಬಂದೇ ಬರುವುದು, ಅವರ ಮೇಲೆ ಬೇರೆ ನುಡಿಯ ಉಚ್ಚಾರಗಳನ್ನು ತುರುಕಿದರೆ, ಅದುಮಿದರೆ, ಪಾಪ ಅವರೇನು ಮಾಡಿಯಾರು, ಹಾಗೆ ತಪ್ಪು ತಪ್ಪು ಉಚ್ಚಾರವನ್ನು ಮಾಡವುದನ್ನು ಹೊರತು ಪಡಿಸಿ.