ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಹೇಗೆ ಬೇರೆ ಮತ್ತು ಯಾವುದು ತುರುಕಾಟ

August 14, 2006 - 11:19am — ಮಹೇಶ ಭೋಗಾದಿ

ಹೇಗೆ ಬೇರೆ ಮತ್ತು ಯಾವುದು ತುರುಕಾಟ

ಮಹೇಶ ಭೋಗಾದಿ's picture

೧.ಅಚ್ಚಕನ್ನಡದ ಅಕ್ಕರಗಳಾದ ೞ,ಱ ಗಳನ್ನು 'ಉಚ್ಚಾರ' ಮಾಡಬಹುದಿತ್ತಲ್ಲ, ಅವನ್ನು ತೆಗೆದುದು, ಅವು ಹೇಳಲು(ಉಚ್ಚರ) ಸಲೀಸಲ್ಲವೆಂದು ತಾನೆ? ಹಾಗಿದ್ದಲ್ಲಿ "ಷ, ಶ, ಋ" ಮತ್ತು ದೊಡ್ಡುಸಿರು(ಮಹಾಪ್ರಾಣ)ಗಳನ್ನು ತೆಗೆಯಬೇಕಿತ್ತು.

ಆ ಕನ್ನಡದ ಅಕ್ಕರಗಳನ್ನು ತಿದ್ದಿಸುವುದೇ ಇಲ್ಲ. ಆದರೆ ದೊಡ್ಡ ಕಲಿಕೆಮನೆಯಲ್ಲಿ(ಹೈಸ್ಕೂಲು) ಹಳೆಗನ್ನಡದ ಪದ್ಯದಲ್ಲಿ ಇವು ಬಂದುಬಿಡುತ್ತವೆ. ಅಲ್ಲಿರವರೆಗೆ ಮಕ್ಕಳಿಗೆ ಈ ಅಕ್ಕರಗಳ ಬಗ್ಗೆ ಗೊತ್ತಿರುವುದಿಲ್ಲ. ಅಲ್ಲದೆ ಅದನ್ನು ಕಲಿಸುವವರಿಗೆ ಕೂಡ ಅವನ್ನು ಹೇಳಲು ಬರುವುದಿಲ್ಲ. ಆದರೆ "ಕೃತ್ರಿಮ", "ಕೃಷ್ಣ", ಮುಂತಾದ ಪದಗಳು ಅವರ ಬಾಯಿಂದ ಸಲೀಸಾಗಿ ಬರುತ್ತವೆ.

ಸಕ್ಕದ ಮತ್ತು ಕನ್ನಡ ಹೇಗೆ ಬೇರೆ ಬೇರೆ.
೧)ಸಕ್ಕದದ 'ಕ್ರಿಯಾ'ಪದಗಳು ಹೆಸರುಪದದ(ನಾಮಪದದ) 'ಲಿಂಗ'ವನ್ನು 'ಅವಲಂಬಿ'ಸಿಲ್ಲ. ಆದರೆ ಕನ್ನಡವು ಹಾಗಲ್ಲ

ಸಃ ಗಾಯತಿ - ಅವನು ಹಾಡುತ್ತಾನೆ
ಸಾ ಗಾಯತಿ - ಅವಳು ಹಾಡುತ್ತಾಳೆ
ತತ್ ಗಾಯತಿ - ಅದು ಹಾಡುತ್ತದೆ

ಕನ್ನಡವು ಸಕ್ಕದಿಂದ ಬಂದಿದ್ದರೆ, ಕನ್ನಡ "ಕೋಳಿ", "ಅರಿವು", "ಓಕುಳಿ", "ನುಸುಳು" ಮುಂತಾದ ಪದಗಳು ಯಾವ ಸಕ್ಕದದ ಪದಗಳ ತತ್ಭವಗಳು?

೨)ಅಕ್ಕರಪಟ್ಟಿಯನ್ನು ಹಿಂದಿನವರು ಸಕ್ಕದದ ಅಕ್ಕರಪಟ್ಟಿಗೆ ಹೊಂದುವಂತೆ ಮಾಡಿದ್ದಾರೆ ಹೊರತು, ಕನ್ನಡದ ಅಕ್ಕರಪಟ್ಟಿಯು ಮೊದಲಿನಿಂದಲು ಹಾಗೆ ಇರಲಿಲ್ಲ.

೩)ಕೇಶಿರಾಜನೇ ಆಗಲಿ ಇಲ್ಲವೆ ನೃಪತುಂಗನೇ ಆಗಲಿ ತಮ್ಮ ಕೃತಿಗಳಲ್ಲಿ ಸಕ್ಕದದ ಪದಗಳನ್ನು ಹೇಗೆ ಬಳಸಬೇಕೆಂದು ಹೇಳಿದ್ದಾರಂತೆ. ಅಂದರೆ ಅವರಿಗೆ ಕೂಡ ಅದು ಕನ್ನಡದಲ್ಲ, ಹೊರಗಿನಿಂದ ಬರುವ ಪದಗಳೆಂದು ಗೊತ್ತಿತ್ತು. ಅದಕ್ಕಾಗಿಯೆ ಆ ಪದಗಳ ಬಗ್ಗೆ, ಹಾಗೆ ಬರೆದುದು.

೪)ಸಕ್ಕದದ ಪದಗಳು ಕನ್ನಡದ ಪದಗಳಾಗಿದ್ದರೆ ತತ್ಸಮ, ತತ್ಭವಗಳು ಏಕೆ ಆಗುತ್ತಿದ್ದವು? ಇದುವೆ ದೊಡ್ಡ ಪುರಾವೆ. ಸಕ್ಕದದ 'ಉಚ್ಚರ'ಕ್ಕೆ ಸಲೀಸಲ್ಲದ ಪದಗಳು ಕನ್ನಡದ ಬಾಯಿಗೆ ಬಿದ್ದು ಹಾಗೆ ಆದವು, ಹೊರತು ಪಾಣಿನಿಯೆ ಅದಕ್ಕಾಗಿ ಯಾವ ಬೇಗರಣ(ವ್ಯಾಕರಣ) 'ಕಾನೂನ'ನ್ನು ಬರೆದಿಲ್ಲ.

೫)ಮಂದಿಪದ(ಜಾನಪದ)ದಲ್ಲಿ ಸಕ್ಕದದ ಪದಗಳು ಕಡಮೆ, ಅಂದರೆ ಬಹಳ ಬಹಳ ಕಡಮೆ ಏಕೆ? ಏಕೆಂದರೆ ಹಳ್ಳಿಯವರಿಗೆ(ಅಚ್ಚ ಕನ್ನಡಿಗರು, ಪಟ್ಡಣದ ಬೇರೆ ನುಡಿಯ ಗಾಳಿಯು ಸೋಕದವರು) ಆ ಪದಗಳೇ ಗೊತ್ತಿಲ್ಲ. ಮಂದಿಪದದಲ್ಲಿ ತತ್ಸಮಗಳು ಕೂಡ ಕಡಮೆ ಏಕೆ?

ಸಕ್ಕದದ ಮೇಲೆ ಒಲುಮೆಯಿರುವವರು, ಸಕ್ಕದವನ್ನು ಚೆನ್ನಾಗಿ ಓದಿ, ಕಲಿತು, ಅದರಲ್ಲೆ ಮಾತಾಡಲಿ, ಅದರಲ್ಲೇ ದೊಡ್ದ ದೊಡ್ಡ ಹೊತ್ತಿಗೆಗಳನ್ನು ಬರೆಯಲಿ, ಅದರಲ್ಲೆ ಹಾಡುಗಳನ್ನು ಹಾಡಲಿ, ಅದನ್ನು ಬೇಡವೆಂದು ಯಾರು ಎದುರು(ವಿರೋಧ) ನಿಲ್ಲುವುದಿಲ್ಲ?

ಆದರೆ ಸಿಕ್ಕಾಪಟ್ಡೆ ಸಕ್ಕದದ ಪದಗಳನ್ನು ಕನ್ನಡಕ್ಕೆ ತುರುಕಿ, ಅವರ "ಪಾಂಡಿತ್ಯವನ್ನು", "ಭಾಷಾಪ್ರೌಢಿಮೆ"ಯನ್ನು ತೋರಿಸಿ, ಇದುವೇ "ಶಿಷ್ಟ ಭಾಷೆ", "ಅತ್ಯುನ್ನತ ಕನ್ನಡ", "ಸಾಹಿತ್ಯಿಕ ಕನ್ನಡ", ಈ ಬೆರಕೆ ಕನ್ನಡಕ್ಕಿಂತ ಮಿಗಿಲಾದ ಕನ್ನಡವಿಲ್ಲ, ಮಿಕ್ಕಲ್ಲ ಕನ್ನಡವು ಕೀಳು, "ನಾಗರಿಕ ಸಂಭಾಷಣೆಗೆ" "ಯೋಗ್ಯ"ವಲ್ಲ, ಎಂದರೆ ಅದು ಸರಿಯೆ?

ಇದು ಬರಿ ಒಬ್ಬಿಬ್ಬರು ಮಾಡಬೇಕಾದುದಲ್ಲ, ದಿಟವಾಗಿ ಕನ್ನಡಿಗರಾಗಿದ್ದರೆ, ತಾಯಿನುಡಿಯೇ ನಮಗೆ ಎಲ್ಲ ನುಡಿಗಳಿಗಿಂತ ಮಿಗಿಲು ಎಂದು ಅನ್ನಿಸುವವರೆಲ್ಲರು ಮಾಡಬೇಕಾದುದು.

ಹಾಗೆ ಅನ್ನಿಸದವರು ಕನ್ನಡದ ಬಗ್ಗೆ ಆಡಿದ ಮಾತುಗಳು, ಬರಿ ಪೊಳ್ಳಮಾತುಗಳಾಗುವುವು. (ಏನು ಮಾಡುವುದು ಅಂತಹವರೇ ಎಲ್ಲಡೆ ಹೆಚ್ಚು, ಇದರಲ್ಲಿ ಕೆಲವೊಮ್ಮೆ ನಾನು ಒಬ್ಬನಿರಬಹುದು)

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಭಾಷೆಯಲ್ಲಿ ಸರಿ ಮತ್ತು ತಪ್ಪು By: olnswamy (57 replies) August 8, 2006 - 8:17am
  • ನಿದ್ದೆ ಹತ್ತಿತ್ತು By: ಸಂಗನಗೌಡ (Aug 20 2006 - 8:11pm)
  • ನಮ್ಮ ಕೈಲಾದ್ದನ್ನು ಮಾಡೋಣ By: benaka (Aug 14 2006 - 3:03pm)
    • ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
      • ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
        • ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
          • "ಉಳಿಸುವ, ಬೆಳೆಸುವ ಗೋಳು" ಒಂದು non-existent entity By: hpn (Aug 16 2006 - 11:28am)
  • ಮಾಡಿನೋಡೋಣ! By: benaka (Aug 14 2006 - 9:54am)
    • ಉ: ಮಾಡಿನೋಡೋಣ! By: kannadakanda (Jul 22 2008 - 1:16pm)
      • ಉ: ಮಾಡಿನೋಡೋಣ! By: mahesha (Jul 22 2008 - 1:37pm)
        • ಉ: ಮಾಡಿನೋಡೋಣ! By: savithru (Jul 22 2008 - 2:18pm)
          • ಉ: ಮಾಡಿನೋಡೋಣ! By: mahesha (Jul 22 2008 - 2:53pm)
            • ಉ: ಮಾಡಿನೋಡೋಣ! By: savithru (Jul 23 2008 - 2:15pm)
              • ಉ: ಮಾಡಿನೋಡೋಣ! By: mahesha (Jul 23 2008 - 3:13pm)
                • ಉ: ಮಾಡಿನೋಡೋಣ! By: savithru (Jul 24 2008 - 12:23pm)
    • ಹೇಗೆ ಬೇರೆ ಮತ್ತು ಯಾವುದು ತುರುಕಾಟ By: ಮಹೇಶ ಭೋಗಾದಿ (Aug 14 2006 - 11:19am)
      • ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
        • ಇದಕ್ಕೆ ಉತ್ತರವೆಲ್ಲಿ? By: ಮಹೇಶ ಭೋಗಾದಿ (Aug 14 2006 - 2:59pm)
  • ದೆವ್ವ ದೊಡ್ಡದೈತೆ ಕಣಪ್ಪೊ! By: ಸಂಗನಗೌಡ (Aug 13 2006 - 6:20pm)
    • ಸಮ್ಮೇಳನ By: ಮಹೇಶ ಭೋಗಾದಿ (Aug 14 2006 - 11:22am)
  • ಸಕ್ಕದವದು ಕಲ್ಲು By: ಸಂಗನಗೌಡ (Aug 12 2006 - 11:52am)
    • ಕಲ್ಲು-ಸಕ್ಕರೆ-ಹಾಲು By: ಮಹೇಶ ಭೋಗಾದಿ (Aug 12 2006 - 2:53pm)
  • ಭೂತ ಚೇಷ್ಟೆ By: benaka (Aug 12 2006 - 7:35am)
  • ಕನ್ನಡಂಗಳ್ By: ಸಂಗನಗೌಡ (Aug 11 2006 - 4:43pm)
  • ರಸಂನೇ ರಸ ಮಾಡಿ By: ಸಂಗನಗೌಡ (Aug 11 2006 - 3:58pm)
  • ರಸಂನೂ ಬೇಡ,ಸಾರೂ ಬೇಡ By: ಸಂಗನಗೌಡ (Aug 11 2006 - 3:36pm)
    • ಏನ್ ಮಾಡೋದು By: nareshov (Aug 11 2006 - 7:56pm)
  • ಭೂತ ಅಂದುಕೊಳ್ಳಿ By: ಸಂಗನಗೌಡ (Aug 11 2006 - 3:02pm)
    • ಒರಟು By: ಮಹೇಶ ಭೋಗಾದಿ (Aug 12 2006 - 9:33am)
    • ಸಂಸ್ಕೃತದ ತದ್ಭವ ಸಕ್ಕದ By: ಮಹೇಶ ಭೋಗಾದಿ (Aug 11 2006 - 3:27pm)
  • ದೆವ್ವವನ್ನು ಬೇಗ ಬಿಡಿಸಿಕೊಳ್ಳಿ By: benaka (Aug 11 2006 - 1:56pm)
    • ತಪ್ಪು ಮಾಹಿತಿ By: ಮಹೇಶ ಭೋಗಾದಿ (Aug 11 2006 - 2:34pm)
    • - By: ಮಹೇಶ ಭೋಗಾದಿ (Aug 11 2006 - 2:30pm)
  • ನನ್ನ ತಾಯ್ನುಡಿ ಕನ್ನಡ By: ಸಂಗನಗೌಡ (Aug 11 2006 - 12:52pm)
    • ಸಾರು, By: nareshov (Aug 11 2006 - 7:36pm)
    • ದೆವ್ವ ತೊಲಗಲಿ By: ಮಹೇಶ ಭೋಗಾದಿ (Aug 11 2006 - 1:29pm)
  • ರಸಂ:ಸರಸಂ-ವಿರಸಂ! By: benaka (Aug 11 2006 - 11:35am)
    • ರಸಾಭಾಸ By: ismail (Aug 11 2006 - 3:37pm)
    • ಅಯ್ಯೊ ಒಂದು ಕನ್ನಡದಲ್ಲಿ ಸಾರಿಗೆ ರಸಂ ಎನ್ನುವರೇನೋ! By: ಮಹೇಶ ಭೋಗಾದಿ (Aug 11 2006 - 11:53am)
  • ತಿಳಿಸಿ By: ಸಂಗನಗೌಡ (Aug 11 2006 - 8:54am)
    • ಪ್ರಯತ್ನ By: ಮಹೇಶ ಭೋಗಾದಿ (Aug 11 2006 - 9:46am)
  • ಟ್ರಾಯ್ ಮಾಡೋಣ By: ಸಂಗನಗೌಡ (Aug 10 2006 - 3:15pm)
    • ತಿಳಿ/ಅರಿ By: ಮಹೇಶ ಭೋಗಾದಿ (Aug 10 2006 - 3:48pm)
  • ಕನ್ನಡ ಬಳಸಲು ಹೆದರಿಕೆಯೇಕೆ? By: benaka (Aug 10 2006 - 8:04am)
    • ಮೞೆ ಬೇಳುತ್ತಿದೆ... :P By: nareshov (Aug 11 2006 - 7:30pm)
    • ಒಂದು ರಸಂ ಮೀಮಾಂಸೆ By: ismail (Aug 10 2006 - 1:30pm)
  • ಧನ್ಯವಾದಗಳು ಮತ್ತು 'ಮೈ ಫೇರ್‍ ಲೇಡಿ' By: Rohit (Aug 9 2006 - 4:57pm)
    • ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
      • ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
        • facts: By: nareshov (Aug 11 2006 - 2:46pm)
  • ಯಾರ ಕನ್ನಡ, ಕನ್ನಡ? By: Kamalakar (Aug 9 2006 - 3:12pm)
    • ಭಾಷಾಭಿಮಾನ By: ismail (Aug 9 2006 - 3:56pm)
  • ಕನ್ನಡಂಗಳ್ By: ಮಹೇಶ ಭೋಗಾದಿ (Aug 9 2006 - 1:45pm)
    • ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
      • ಕನ್ನಂಡಂಗಳೊ ಅಂದರೆ? By: ಮಹೇಶ ಭೋಗಾದಿ (Aug 10 2006 - 11:33am)
  • ಕಳಿಸು By: gvmt (Aug 8 2006 - 10:18pm)
    • ಉ: ಕಳಿಸು By: kannadakanda (Jul 21 2008 - 3:51pm)
    • ಕಳುಹು. By: ಮಹೇಶ ಭೋಗಾದಿ (Aug 9 2006 - 12:34pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • makrumanju
    ಉ: "ನಾನು-ನೀನು
    October 13, 2008 - 5:46pm
  • makrumanju
    ಉ: ಕನಸು ಕದ್ದ ಹುಡುಗಿ...
    October 13, 2008 - 5:45pm
  • makrumanju
    ಉ: ರಸ ಪ್ರಶ್ನೆಗಳು ಭಾಗ - ೨
    October 13, 2008 - 5:44pm
  • makrumanju
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:40pm
  • makrumanju
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:40pm
  • Aravind M.S
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 5:39pm
  • veena
    ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ
    October 13, 2008 - 5:36pm
  • veena
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 13, 2008 - 5:15pm
  • prashy.mh
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:11pm
  • prashy.mh
    ಉ: ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
    October 13, 2008 - 5:09pm
ಇನ್ನಷ್ಟು


ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator