ಅದನ್ನೇ ನಾನೂ ಹೇಳುತ್ತಿರುವುದು!
- ನಿದ್ದೆ ಹತ್ತಿತ್ತು By: ಸಂಗನಗೌಡ (Aug 20 2006 - 8:11pm)
- ನಮ್ಮ ಕೈಲಾದ್ದನ್ನು ಮಾಡೋಣ By: benaka (Aug 14 2006 - 3:03pm)
- ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
- ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
- ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
- "ಉಳಿಸುವ, ಬೆಳೆಸುವ ಗೋಳು" ಒಂದು non-existent entity By: hpn (Aug 16 2006 - 11:28am)
- ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
- ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
- ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
- ಮಾಡಿನೋಡೋಣ! By: benaka (Aug 14 2006 - 9:54am)
- ಉ: ಮಾಡಿನೋಡೋಣ! By: kannadakanda (Jul 22 2008 - 1:16pm)
- ಉ: ಮಾಡಿನೋಡೋಣ! By: mahesha (Jul 22 2008 - 1:37pm)
- ಉ: ಮಾಡಿನೋಡೋಣ! By: savithru (Jul 22 2008 - 2:18pm)
- ಉ: ಮಾಡಿನೋಡೋಣ! By: mahesha (Jul 22 2008 - 2:53pm)
- ಉ: ಮಾಡಿನೋಡೋಣ! By: savithru (Jul 23 2008 - 2:15pm)
- ಉ: ಮಾಡಿನೋಡೋಣ! By: mahesha (Jul 23 2008 - 3:13pm)
- ಉ: ಮಾಡಿನೋಡೋಣ! By: savithru (Jul 24 2008 - 12:23pm)
- ಉ: ಮಾಡಿನೋಡೋಣ! By: mahesha (Jul 23 2008 - 3:13pm)
- ಉ: ಮಾಡಿನೋಡೋಣ! By: savithru (Jul 23 2008 - 2:15pm)
- ಉ: ಮಾಡಿನೋಡೋಣ! By: mahesha (Jul 22 2008 - 2:53pm)
- ಉ: ಮಾಡಿನೋಡೋಣ! By: savithru (Jul 22 2008 - 2:18pm)
- ಉ: ಮಾಡಿನೋಡೋಣ! By: mahesha (Jul 22 2008 - 1:37pm)
- ಹೇಗೆ ಬೇರೆ ಮತ್ತು ಯಾವುದು ತುರುಕಾಟ By: ಮಹೇಶ ಭೋಗಾದಿ (Aug 14 2006 - 11:19am)
- ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
- ಇದಕ್ಕೆ ಉತ್ತರವೆಲ್ಲಿ? By: ಮಹೇಶ ಭೋಗಾದಿ (Aug 14 2006 - 2:59pm)
- ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
- ಉ: ಮಾಡಿನೋಡೋಣ! By: kannadakanda (Jul 22 2008 - 1:16pm)
- ದೆವ್ವ ದೊಡ್ಡದೈತೆ ಕಣಪ್ಪೊ! By: ಸಂಗನಗೌಡ (Aug 13 2006 - 6:20pm)
- ಸಮ್ಮೇಳನ By: ಮಹೇಶ ಭೋಗಾದಿ (Aug 14 2006 - 11:22am)
- ಸಕ್ಕದವದು ಕಲ್ಲು By: ಸಂಗನಗೌಡ (Aug 12 2006 - 11:52am)
- ಕಲ್ಲು-ಸಕ್ಕರೆ-ಹಾಲು By: ಮಹೇಶ ಭೋಗಾದಿ (Aug 12 2006 - 2:53pm)
- ಭೂತ ಚೇಷ್ಟೆ By: benaka (Aug 12 2006 - 7:35am)
- ಕನ್ನಡಂಗಳ್ By: ಸಂಗನಗೌಡ (Aug 11 2006 - 4:43pm)
- ರಸಂನೇ ರಸ ಮಾಡಿ By: ಸಂಗನಗೌಡ (Aug 11 2006 - 3:58pm)
- ರಸಂನೂ ಬೇಡ,ಸಾರೂ ಬೇಡ By: ಸಂಗನಗೌಡ (Aug 11 2006 - 3:36pm)
- ಏನ್ ಮಾಡೋದು By: nareshov (Aug 11 2006 - 7:56pm)
- ಭೂತ ಅಂದುಕೊಳ್ಳಿ By: ಸಂಗನಗೌಡ (Aug 11 2006 - 3:02pm)
- ಒರಟು By: ಮಹೇಶ ಭೋಗಾದಿ (Aug 12 2006 - 9:33am)
- ಸಂಸ್ಕೃತದ ತದ್ಭವ ಸಕ್ಕದ By: ಮಹೇಶ ಭೋಗಾದಿ (Aug 11 2006 - 3:27pm)
- ದೆವ್ವವನ್ನು ಬೇಗ ಬಿಡಿಸಿಕೊಳ್ಳಿ By: benaka (Aug 11 2006 - 1:56pm)
- ತಪ್ಪು ಮಾಹಿತಿ By: ಮಹೇಶ ಭೋಗಾದಿ (Aug 11 2006 - 2:34pm)
- - By: ಮಹೇಶ ಭೋಗಾದಿ (Aug 11 2006 - 2:30pm)
- ನನ್ನ ತಾಯ್ನುಡಿ ಕನ್ನಡ By: ಸಂಗನಗೌಡ (Aug 11 2006 - 12:52pm)
- ಸಾರು, By: nareshov (Aug 11 2006 - 7:36pm)
- ದೆವ್ವ ತೊಲಗಲಿ By: ಮಹೇಶ ಭೋಗಾದಿ (Aug 11 2006 - 1:29pm)
- ರಸಂ:ಸರಸಂ-ವಿರಸಂ! By: benaka (Aug 11 2006 - 11:35am)
- ರಸಾಭಾಸ By: ismail (Aug 11 2006 - 3:37pm)
- ಅಯ್ಯೊ ಒಂದು ಕನ್ನಡದಲ್ಲಿ ಸಾರಿಗೆ ರಸಂ ಎನ್ನುವರೇನೋ! By: ಮಹೇಶ ಭೋಗಾದಿ (Aug 11 2006 - 11:53am)
- ತಿಳಿಸಿ By: ಸಂಗನಗೌಡ (Aug 11 2006 - 8:54am)
- ಪ್ರಯತ್ನ By: ಮಹೇಶ ಭೋಗಾದಿ (Aug 11 2006 - 9:46am)
- ಟ್ರಾಯ್ ಮಾಡೋಣ By: ಸಂಗನಗೌಡ (Aug 10 2006 - 3:15pm)
- ತಿಳಿ/ಅರಿ By: ಮಹೇಶ ಭೋಗಾದಿ (Aug 10 2006 - 3:48pm)
- ಕನ್ನಡ ಬಳಸಲು ಹೆದರಿಕೆಯೇಕೆ? By: benaka (Aug 10 2006 - 8:04am)
- ಮೞೆ ಬೇಳುತ್ತಿದೆ... :P By: nareshov (Aug 11 2006 - 7:30pm)
- ಒಂದು ರಸಂ ಮೀಮಾಂಸೆ By: ismail (Aug 10 2006 - 1:30pm)
- ಧನ್ಯವಾದಗಳು ಮತ್ತು 'ಮೈ ಫೇರ್ ಲೇಡಿ' By: Rohit (Aug 9 2006 - 4:57pm)
- ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
- ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
- facts: By: nareshov (Aug 11 2006 - 2:46pm)
- ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
- ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
- ಯಾರ ಕನ್ನಡ, ಕನ್ನಡ? By: Kamalakar (Aug 9 2006 - 3:12pm)
- ಭಾಷಾಭಿಮಾನ By: ismail (Aug 9 2006 - 3:56pm)
- ಕನ್ನಡಂಗಳ್ By: ಮಹೇಶ ಭೋಗಾದಿ (Aug 9 2006 - 1:45pm)
- ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
- ಕನ್ನಂಡಂಗಳೊ ಅಂದರೆ? By: ಮಹೇಶ ಭೋಗಾದಿ (Aug 10 2006 - 11:33am)
- ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
- ಕಳಿಸು By: gvmt (Aug 8 2006 - 10:18pm)
- ಉ: ಕಳಿಸು By: kannadakanda (Jul 21 2008 - 3:51pm)
- ಕಳುಹು. By: ಮಹೇಶ ಭೋಗಾದಿ (Aug 9 2006 - 12:34pm)

RSS:
ಅದನ್ನೇ ನಾನೂ ಹೇಳುತ್ತಿರುವುದು!
ಮಹೇಶರೇ,
ಯಾರೂ, ಯಾವ ಅಕ್ಕರವನ್ನೂ 'ತೆಗೆದುಹಾಕಿಲ್ಲ' ಸ್ವಾಮಿ! 'ರ' ಹಾಗೂ 'ಱ' ಜೊತೆಗೆ 'ಳ' ಮತ್ತು 'ೞ'ಕಾರದ ಸದ್ದು ಒಂದೇ ರೀತಿ ಕೇಳುತ್ತಿದ್ದರಿಂದ 'ರ' ಹಾಗೂ 'ಳ'ಗಳು 'ಉಳಿದುಕೊಂಡಿವೆ' ಅಷ್ಟೆ. ಅಲ್ಲದೆ ಹೊಸಗನ್ನಡದಲ್ಲಿ ಅವೆರಡೂ ಅಕ್ಷರಗಳು ಇಲ್ಲವಾದದ್ದಕ್ಕೆ ಸಕ್ಕದವೇ ಕಾರಣ ಎಂಬ ಮಾತಿನಲ್ಲಿ ಹುರುಳಿಲ್ಲ!
೧)ಸಕ್ಕದದ 'ಕ್ರಿಯಾ'ಪದಗಳು ಹೆಸರುಪದದ(ನಾಮಪದದ) 'ಲಿಂಗ'ವನ್ನು 'ಅವಲಂಬಿ'ಸಿಲ್ಲ. ಆದರೆ ಕನ್ನಡವು ಹಾಗಲ್ಲ
ಸಃ ಗಾಯತಿ - ಅವನು ಹಾಡುತ್ತಾನೆ
ಸಾ ಗಾಯತಿ - ಅವಳು ಹಾಡುತ್ತಾಳೆ
ತತ್ ಗಾಯತಿ - ಅದು ಹಾಡುತ್ತದೆ
ನನಗೆ ಗೊತ್ತು ನೀವಿದನ್ನು ಹೇಳುತ್ತೀರಿ ಎಂದು; ಕ್ರಿಯಾಪದ ಲಿಂಗವನ್ನು ಅವಲಂಬಿಸಿರುವುದೇ ದ್ರಾವಿಡಭಾಷೆಯ ಭಿನ್ನತೆಯಲ್ಲ. ಏಕೆಂದರೆ ಸಕ್ಕದದಿಂದಲೇ ಹುಟ್ಟಿದ್ದೆಂದು ಎಲ್ಲರೂ ಒಪ್ಪಿರುವ 'ಹಿಂದೀ', ಉರ್ದು ಇತ್ಯಾದಿ ಭಾಷೆಗಳಲ್ಲೂ ಕ್ರಿಯಾಪದದ ಲಿಂಗಾವಲಂಬನೆ ಇದೆ! ಉದಾ:
ರಾಮ್ ಗಾತಾ ಹೈ - ರಾಮನು ಹಾಡುತ್ತಾನೆ.
ಸೀತಾ ಗಾತೀ ಹೈ - ಸೀತೆಯು ಹಾಡುತ್ತಾಳೆ.
ಇದಕ್ಕೇನು ಹೇಳುತ್ತೀರಿ?
ಕನ್ನಡವು ಸಕ್ಕದಿಂದ ಬಂದಿದ್ದರೆ, ಕನ್ನಡ "ಕೋಳಿ", "ಅರಿವು", "ಓಕುಳಿ", "ನುಸುಳು" ಮುಂತಾದ ಪದಗಳು ಯಾವ ಸಕ್ಕದದ ಪದಗಳ ತತ್ಭವಗಳು?
೪)ಸಕ್ಕದದ ಪದಗಳು ಕನ್ನಡದ ಪದಗಳಾಗಿದ್ದರೆ ತತ್ಸಮ, ತತ್ಭವಗಳು ಏಕೆ ಆಗುತ್ತಿದ್ದವು? ಇದುವೆ ದೊಡ್ಡ ಪುರಾವೆ. ಸಕ್ಕದದ ಉಚ್ಚರಣೆಗೆ ಸಲೀಸಲ್ಲದ ಪದಗಳು ಕನ್ನಡದ ಬಾಯಿಗೆ ಬಿದ್ದು ಹಾಗೆ ಆದವು, ಹೊರತು ಪಾಣಿನಿಯೆ ಅದಕ್ಕಾಗಿ ಯಾವ ಬೇಗರಣ(ವ್ಯಾಕರಣ) ಕಾನೂನನ್ನು ಬರೆದಿಲ್ಲ.
೫)ಮಂದಿಪದ(ಜಾನಪದ)ದಲ್ಲಿ ಸಕ್ಕದದ ಪದಗಳು ಕಡಮೆ, ಅಂದರೆ ಬಹಳ ಬಹಳ ಕಡಮೆ ಏಕೆ? ಏಕೆಂದರೆ ಹಳ್ಳಿಯವರಿಗೆ(ಅಚ್ಚ ಕನ್ನಡಿಗರು, ಪಟ್ಡಣದ ಬೇರೆ ನುಡಿಯ ಗಾಳಿಯು ಸೋಕದವರು) ಆ ಪದಗಳೇ ಗೊತ್ತಿಲ್ಲ. ಮಂದಿಪದದಲ್ಲಿ ತತ್ಸಮಗಳು ಕೂಡ ಕಡಮೆ ಏಕೆ?
ಕನ್ನಡ ಭಾಷೆಯ ಎಲ್ಲ ಪದಗಳೂ ತದ್ಭವಗಳಾಗುವ ಅವಶ್ಯಕತೆ ಏನಿದೆ? ಎಲ್ಲವೂ ತತ್ಸಮ-ತದ್ಭವವಾಗಿರುವ ಭಾಷೆ ಮೊದಲೇ ಇದ್ದವು - ಅವೇ ಪ್ರಾಕೃತ ಹಾಗೂ ಪಾಳೀ. ಎಲ್ಲವೂ ಹಾಗೆಯೇ ಇದ್ದಿದ್ದರೆ ಆಗ ಕನ್ನಡ ಹುಟ್ಟುತ್ತಲೇ ಇರಲಿಲ್ಲ ಅಲ್ಲವೇ!
ಇದಕ್ಕೆ ಸಾಕ್ಷಿ ಏನು? ಎಲ್ಲಿದೆ ಪುರಾವೆ? ಕೇವಲ ಪಂಡಿತರ ಅಭಿಪ್ರಾಯ ಅಷ್ಟೆ. ಪುರಾವೆಯಿದ್ದಲ್ಲಿ ತಿಳಿಯಲು ನಾನೂ ಕುತೂಹಲಿಯಾಗಿದ್ದೇನೆ.
ಆದರೆ ಸಿಕ್ಕಾಪಟ್ಡೆ ಸಕ್ಕದದ ಪದಗಳನ್ನು ಕನ್ನಡಕ್ಕೆ ತುರುಕಿ, ಅವರ "ಪಾಂಡಿತ್ಯವನ್ನು", "ಭಾಷಾಪ್ರೌಢಿಮೆ"ಯನ್ನು ತೋರಿಸಿ, ಇದುವೇ "ಶಿಷ್ಟ ಭಾಷೆ", "ಅತ್ಯುನ್ನತ ಕನ್ನಡ", "ಸಾಹಿತ್ಯಿಕ ಕನ್ನಡ", ಈ ಬೆರಕೆ ಕನ್ನಡಕ್ಕಿಂತ ಮಿಗಿಲಾದ ಕನ್ನಡವಿಲ್ಲ, ಮಿಕ್ಕಲ್ಲ ಕನ್ನಡವು ಕೀಳು, "ನಾಗರಿಕ ಸಂಭಾಷಣೆಗೆ" "ಯೋಗ್ಯ"ವಲ್ಲ, ಎಂದರೆ ಅದು ಸರಿಯೆ?
ಅದನ್ನೇ ನಾನೂ ಕೇಳುತ್ತಿರುವುದು!
ಅದನ್ನೇ ನಾನೂ ಹೇಳುತ್ತಿರುವುದು!
ಮಹೇಶರೇ, ಗುಟ್ಟಲ್ಲದ ಗುಟ್ಟನ್ನು ಹೇಳುತ್ತೇನೆ ಕೇಳಿ. ಸಂಸ್ಕೃತ - ದ್ರಾವಿಡ ಭಾಷೆಗಳನ್ನು ಬೇರ್ಪಡಿಸಿ ನೋಡುವ ಉದ್ದೇಶ ಯಾವ ಭಾರತೀಯನಿಗೂ ಇರಲಿಲ್ಲ; ಇದನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡು ಇಲ್ಲದ ಭೇದವನ್ನು ಕಲ್ಪಿಸಿ ತಮಾಷೆ ನೋಡಿದವರೇ ಬ್ರಿಟಿಷರು! ಇದರಿಂದ ಆರ್ಯಾವರ್ತ - ದಕ್ಷಿಣಾಪಥಗಳಲ್ಲಿ ಹಗೆತನ ಹೆಚ್ಚಿ ಹದಗೆಟ್ಟು ಈ ಪರಿಸ್ಥಿತಿಗೆ ಬಂದಿದೆ. ಊಹೆಯಲ್ಲಿದ್ದ ತೆಂಕಣದ ತಾಯ್ನುಡಿಗೆ 'ದ್ರಾವಿಡ' ಎಂಬ ಹೆಸರಿಟ್ಟವರೇ ಆಂಗ್ಲರು! ಇದಕ್ಕೆ ಅವರು 'ಸಂಶೋಧನೆ' ಎಂಬ ಹಣೆಪಟ್ಟಿ ಹಚ್ಚಿದರು ಅಷ್ಟೇ. ಇನ್ನೂ ಈ ಹಗೆತನ ಮುನ್ನಡೆಯಲಿ ಎನ್ನುವಿರಾ? ಉತ್ತರದೊಂದಿಗೆ ದಕ್ಷಿಣವನ್ನು ಬೆಸೆಯುವ ಮಹಾನ್ ಕೊಂಡಿಯೇ ಸಂಸ್ಕೃತಭಾಷೆ ಎಂಬುದನ್ನು ಮರೆಯದಿರಿ. ನಮ್ಮ-ನಿಮ್ಮೆಲ್ಲರಿಗಿಂತ ಕನ್ನಡವನ್ನು ಚೆನ್ನಾಗಿ ತಿಳಿದಿದ್ದ ಹಳೆ-ನಡು-ಹೊಸಗನ್ನಡದ ಆಗಿಹೋದ ಕವಿ-ಕಲಿಗಳು ತಮ್ಮ ಕೃತಿಗಳಲ್ಲಿ ಸಕ್ಕದವನ್ನು ಕೊಲ್ಲದೆ ಉಳಿಸಿಕೊಂಡಿದ್ದೂ ಇದೇ ಕಾರಣಕ್ಕಾಗಿಯೇ. 'ನಮಗೆ ಹಿಂದೀ ಬೇಡವೇ ಬೇಡ' ಎಂದ ನೆರೆರಾಜ್ಯದ ದುರಭಿಮಾನದ ಫಲವಾಗಿ ಆಂಗ್ಲದ ಅಟ್ಟಹಾಸ ಮೆರೆದಿರುವ ದುರ್ಗತಿ ನಮಗೂ ಬಾರದಿರಲಿ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.