ಇದಕ್ಕೆ ಉತ್ತರವೆಲ್ಲಿ?
- ನಿದ್ದೆ ಹತ್ತಿತ್ತು By: ಸಂಗನಗೌಡ (Aug 20 2006 - 8:11pm)
- ನಮ್ಮ ಕೈಲಾದ್ದನ್ನು ಮಾಡೋಣ By: benaka (Aug 14 2006 - 3:03pm)
- ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
- ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
- ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
- "ಉಳಿಸುವ, ಬೆಳೆಸುವ ಗೋಳು" ಒಂದು non-existent entity By: hpn (Aug 16 2006 - 11:28am)
- ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
- ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
- ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
- ಮಾಡಿನೋಡೋಣ! By: benaka (Aug 14 2006 - 9:54am)
- ಉ: ಮಾಡಿನೋಡೋಣ! By: kannadakanda (Jul 22 2008 - 1:16pm)
- ಉ: ಮಾಡಿನೋಡೋಣ! By: mahesha (Jul 22 2008 - 1:37pm)
- ಉ: ಮಾಡಿನೋಡೋಣ! By: savithru (Jul 22 2008 - 2:18pm)
- ಉ: ಮಾಡಿನೋಡೋಣ! By: mahesha (Jul 22 2008 - 2:53pm)
- ಉ: ಮಾಡಿನೋಡೋಣ! By: savithru (Jul 23 2008 - 2:15pm)
- ಉ: ಮಾಡಿನೋಡೋಣ! By: mahesha (Jul 23 2008 - 3:13pm)
- ಉ: ಮಾಡಿನೋಡೋಣ! By: savithru (Jul 24 2008 - 12:23pm)
- ಉ: ಮಾಡಿನೋಡೋಣ! By: mahesha (Jul 23 2008 - 3:13pm)
- ಉ: ಮಾಡಿನೋಡೋಣ! By: savithru (Jul 23 2008 - 2:15pm)
- ಉ: ಮಾಡಿನೋಡೋಣ! By: mahesha (Jul 22 2008 - 2:53pm)
- ಉ: ಮಾಡಿನೋಡೋಣ! By: savithru (Jul 22 2008 - 2:18pm)
- ಉ: ಮಾಡಿನೋಡೋಣ! By: mahesha (Jul 22 2008 - 1:37pm)
- ಹೇಗೆ ಬೇರೆ ಮತ್ತು ಯಾವುದು ತುರುಕಾಟ By: ಮಹೇಶ ಭೋಗಾದಿ (Aug 14 2006 - 11:19am)
- ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
- ಇದಕ್ಕೆ ಉತ್ತರವೆಲ್ಲಿ? By: ಮಹೇಶ ಭೋಗಾದಿ (Aug 14 2006 - 2:59pm)
- ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
- ಉ: ಮಾಡಿನೋಡೋಣ! By: kannadakanda (Jul 22 2008 - 1:16pm)
- ದೆವ್ವ ದೊಡ್ಡದೈತೆ ಕಣಪ್ಪೊ! By: ಸಂಗನಗೌಡ (Aug 13 2006 - 6:20pm)
- ಸಮ್ಮೇಳನ By: ಮಹೇಶ ಭೋಗಾದಿ (Aug 14 2006 - 11:22am)
- ಸಕ್ಕದವದು ಕಲ್ಲು By: ಸಂಗನಗೌಡ (Aug 12 2006 - 11:52am)
- ಕಲ್ಲು-ಸಕ್ಕರೆ-ಹಾಲು By: ಮಹೇಶ ಭೋಗಾದಿ (Aug 12 2006 - 2:53pm)
- ಭೂತ ಚೇಷ್ಟೆ By: benaka (Aug 12 2006 - 7:35am)
- ಕನ್ನಡಂಗಳ್ By: ಸಂಗನಗೌಡ (Aug 11 2006 - 4:43pm)
- ರಸಂನೇ ರಸ ಮಾಡಿ By: ಸಂಗನಗೌಡ (Aug 11 2006 - 3:58pm)
- ರಸಂನೂ ಬೇಡ,ಸಾರೂ ಬೇಡ By: ಸಂಗನಗೌಡ (Aug 11 2006 - 3:36pm)
- ಏನ್ ಮಾಡೋದು By: nareshov (Aug 11 2006 - 7:56pm)
- ಭೂತ ಅಂದುಕೊಳ್ಳಿ By: ಸಂಗನಗೌಡ (Aug 11 2006 - 3:02pm)
- ಒರಟು By: ಮಹೇಶ ಭೋಗಾದಿ (Aug 12 2006 - 9:33am)
- ಸಂಸ್ಕೃತದ ತದ್ಭವ ಸಕ್ಕದ By: ಮಹೇಶ ಭೋಗಾದಿ (Aug 11 2006 - 3:27pm)
- ದೆವ್ವವನ್ನು ಬೇಗ ಬಿಡಿಸಿಕೊಳ್ಳಿ By: benaka (Aug 11 2006 - 1:56pm)
- ತಪ್ಪು ಮಾಹಿತಿ By: ಮಹೇಶ ಭೋಗಾದಿ (Aug 11 2006 - 2:34pm)
- - By: ಮಹೇಶ ಭೋಗಾದಿ (Aug 11 2006 - 2:30pm)
- ನನ್ನ ತಾಯ್ನುಡಿ ಕನ್ನಡ By: ಸಂಗನಗೌಡ (Aug 11 2006 - 12:52pm)
- ಸಾರು, By: nareshov (Aug 11 2006 - 7:36pm)
- ದೆವ್ವ ತೊಲಗಲಿ By: ಮಹೇಶ ಭೋಗಾದಿ (Aug 11 2006 - 1:29pm)
- ರಸಂ:ಸರಸಂ-ವಿರಸಂ! By: benaka (Aug 11 2006 - 11:35am)
- ರಸಾಭಾಸ By: ismail (Aug 11 2006 - 3:37pm)
- ಅಯ್ಯೊ ಒಂದು ಕನ್ನಡದಲ್ಲಿ ಸಾರಿಗೆ ರಸಂ ಎನ್ನುವರೇನೋ! By: ಮಹೇಶ ಭೋಗಾದಿ (Aug 11 2006 - 11:53am)
- ತಿಳಿಸಿ By: ಸಂಗನಗೌಡ (Aug 11 2006 - 8:54am)
- ಪ್ರಯತ್ನ By: ಮಹೇಶ ಭೋಗಾದಿ (Aug 11 2006 - 9:46am)
- ಟ್ರಾಯ್ ಮಾಡೋಣ By: ಸಂಗನಗೌಡ (Aug 10 2006 - 3:15pm)
- ತಿಳಿ/ಅರಿ By: ಮಹೇಶ ಭೋಗಾದಿ (Aug 10 2006 - 3:48pm)
- ಕನ್ನಡ ಬಳಸಲು ಹೆದರಿಕೆಯೇಕೆ? By: benaka (Aug 10 2006 - 8:04am)
- ಮೞೆ ಬೇಳುತ್ತಿದೆ... :P By: nareshov (Aug 11 2006 - 7:30pm)
- ಒಂದು ರಸಂ ಮೀಮಾಂಸೆ By: ismail (Aug 10 2006 - 1:30pm)
- ಧನ್ಯವಾದಗಳು ಮತ್ತು 'ಮೈ ಫೇರ್ ಲೇಡಿ' By: Rohit (Aug 9 2006 - 4:57pm)
- ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
- ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
- facts: By: nareshov (Aug 11 2006 - 2:46pm)
- ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
- ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
- ಯಾರ ಕನ್ನಡ, ಕನ್ನಡ? By: Kamalakar (Aug 9 2006 - 3:12pm)
- ಭಾಷಾಭಿಮಾನ By: ismail (Aug 9 2006 - 3:56pm)
- ಕನ್ನಡಂಗಳ್ By: ಮಹೇಶ ಭೋಗಾದಿ (Aug 9 2006 - 1:45pm)
- ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
- ಕನ್ನಂಡಂಗಳೊ ಅಂದರೆ? By: ಮಹೇಶ ಭೋಗಾದಿ (Aug 10 2006 - 11:33am)
- ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
- ಕಳಿಸು By: gvmt (Aug 8 2006 - 10:18pm)
- ಉ: ಕಳಿಸು By: kannadakanda (Jul 21 2008 - 3:51pm)
- ಕಳುಹು. By: ಮಹೇಶ ಭೋಗಾದಿ (Aug 9 2006 - 12:34pm)


RSS:
ಇದಕ್ಕೆ ಉತ್ತರವೆಲ್ಲಿ?
ಇದು ಹಗೆತನವೂ ಅಲ್ಲ, ಜಂಭವೋ ಅಲ್ಲ, ಭಂಡತನವೂ ಅಲ್ಲ.
ಕಾವ್ಯದಲ್ಲಿ, ಕವಿತೆಯಲ್ಲಿ, ಮಹಾಪ್ರಬಂಧದಲ್ಲಿ, ಏನು ಬೇಕಾದರು ಮಾಡಲಿ, ಅದರ ಗೊಡವೆ ಬೇಡ.
ಆದರೆ ಸಾಮಾನ್ಯ ಕನ್ನಡದಲ್ಲಿ, ಅದು ಸುದ್ದಿಪತ್ರಿಕೆಗಳು, ಟಿವಿ ವಾಹಿನಿಗಳು, ಸರಕಾರಿ ಸುತ್ತೋಲೆಗಳಲ್ಲಿ, ಮುಂತಾದ ಮೂಮೂಲಿ ಜನರನ್ನು ಮುಟ್ಟುವ ಸಂಗತಿಗಳನ್ನು ಬರೆಯುವಾಗ ಅತಿಯಾದ ಶುದ್ಧ ಸಕ್ಕದದ ಬಳಕೆ ಏಕೆ?
"ಹತ್ತಿರ" - "ಸಾಮೀಪ್ಯ"
"ಆಕಳು/ಹಸು" - "ಪಶು"
"ಕೋಳಿ" - "ಕುಕ್ಕುಟ"
"ಹೆಚ್ಚು ಮಳೆ" - "ಅತಿ ವೃಷ್ಟಿ"
"ಬರ" - "ಅನಾವೃಷ್ಟಿ"
"ನಾಲ್ಕು ದಾರಿ" - "ಚತುಷ್ಪಥ"
"ಚಿನ್ನದ ಹಬ್ಬ" - "ಸುವರ್ಣಮಹೋತ್ಸವ"
"ಚಿನ್ನದ ಪದಕ" - "ಸ್ವರ್ಣ ಪದಕ"
"ಹುಡುಗರ ಸ್ಕೂಲು" - "ಬಾಲಕರ ಶಾಲೆ".
ಹೀಗೆ ಮುಂತಾದವು. ಬರಿ ೩೭%(ಸಪ್ತಾಧಿಕ ತ್ರಿಂಶತಿ) ಅಕ್ಕರಜ್ಷಾನವಿರುವ ನಮ್ಮ ರಾಜ್ಯದಲ್ಲಿ. ಹೆಚ್ಚು ಹೆಚ್ಚು ಜನರು ಕನ್ನಡವನ್ನು ಓದಬೇಡವೆ? ಪಾಪ ಅಂತಹವರು ಯಾವುದೆ ಬರೆವಣಿಗೆಯನ್ನು ತಗೆದರೂ, ಹೇರಳವಾದ ಕ್ಲಿಷ್ಟ, ಉಚ್ಚರಣೆಗೆ ಕಷ್ಟವಾದ ಸಂಸ್ಕೃತ ಪದ ಪ್ರಯೋಗಗಳು. ಇದನ್ನೇ ಬೇಡವೆಂದು ಹೇಳುತ್ತಿರುವುದು.
ಬೆನಕರೇ, ನೀವೇ ಮೊದಲು ಸಂಸ್ಕೃತವು ಕನ್ನಡದ ಅಜ್ಜಿ, ತಮಿಳು ತಾತ ಮುಂತಾದ ತಪ್ಪು ವಾದಗಳನ್ನು ಎತ್ತಿದ್ದು. ನಾವು ಕನ್ನಡದ ಅಚ್ಚಿ ತಾತರನ್ನು ನಿಂದಿಸಿದೆವು ಎಂದಿದ್ದು. ನಾನು ಅಲ್ಲಿಯವರೆಗೆ ಕೇವಲ ಕ್ಲಿಷ್ಟವಾದ ಸಂಸ್ಕೃತಪದಪ್ರಯೋಗದ ಬಗ್ಗೆ ಹೇಳುತ್ತಿದ್ದೆನು.
ಎಲ್ಲ ಪ್ರಶ್ನೆಗೆ ಕುಲಂಕುಶವಾಗಿ ವಿವರೋತ್ತರವನ್ನಿತ್ತ ನಿಮಗೆ, ಈ ಒಂದು ಪ್ರಶ್ನೆಯು ನೇತ್ರಾವಲೋನ-ಯೋಗ್ಯವಾಗಲಿಲ್ಲ. ಅಥವಾ ನಾನು ಬರೆದ ಕನ್ನಡವು ಸರಿಯಿಲ್ಲವೆ, ಅಸಾಧುವೆ. ಒಟ್ಟಿನಲ್ಲಿ ನಿಮಗೆ ಸಂಸ್ಕೃತಪದಗಳ ಅಗಾಧ ಪದಪ್ರಯೋಗದಿಂದ ಸಾಮನ್ಯ ಕನ್ನಡ ಭಾಷಿಕನಿಗೆ ಓದಲು, ಬರೆಯಲು ಕಷ್ಟವಾಗುವುದು, ಆದುದರಿಂದ ಕನ್ನಡದ ಪದಗಳನ್ನು ಕನ್ನಡದಲ್ಲಿ ಬಳಸಿರಿ ಎಂದು ಹೇಳಿದ ಮಾತ್ರಕ್ಕೆ, ಗಗನವೇ ಶಿರೋಭಾರವಾದಂತೆ ಮಾಡುವುದೇ . ನಾವು ಕಠೋರವಾಗಿರುವದರಲ್ಲಿ ನಿಷ್ಟೂರವಾಗಿರುವುದರಲ್ಲಿ ಅರ್ಥವಿದೆ, ನಮ್ಮ ಭಾಷೆಗೆ ಹಾನಿಯಾಗುತ್ತಿದೆ, ಆದರೆ ಸಂಸ್ಕೃತವೇ ಸರ್ವೋಚ್ಛವೆಂಬಂತೆ, ಅದಕ್ಕೆ ನಮ್ಮ ಮಾತುಗಳು ಅಗಾಧವಾದ ಅತ್ಯಾಚಾರವನ್ನು ಅನಾಚಾರವನ್ನು ಮಾಡುತ್ತಿದೆ ಎಂಬಂತೆ ಭಾವಿಸಿದರೆ, ಅದು ಮಾತೃಭಾಷೆಗಿಂತ ಇತರೈಕಾಭಾಷಾದಾಸ್ಯದ ತಾರಕ ಸ್ಥಿತಿ. ಅದಕ್ಕಾಗಿಯೆ ಅಗಾಧವಾದ ಸಂಸ್ಕೃತಪದಪ್ರಯೋಗದಿಂದ ವಿಜೃಂಭಿಸುವ ವಾಕ್ಯಗಳಿಂದ ಉಕ್ತವಾದುದನ್ನೆ ಹೇಳಿದ್ದೇನೆ.
ನಾನು ವಕ್ತವ್ಯವೆಂದು ಭಾವಿಸಿದ ವಚನಗಳ ಭಾವದ ಸಾರಾಂಶವು, ಅಧೋಲಿಖಿತವಾಗಿವೆ, ಕಿಞ್ಚಿತ್ತು ಅದನ್ನು ಪರಾಮರ್ಶಿಸಿಕೊಳ್ಳಿ.
ಅಂತತಃ, ನನ್ನಿಂದ ಉಕ್ತವಾದ ಚರ್ಚಾಭಾಗದ ಪೂರ್ವಭಾವನೆಗಳು.(ಪೂರ್ವ ಸಂದಾಯ ಆಟೋ ರಿಕ್ಷಾ!).
೧. ಇದು ಸಂಸ್ಕೃತಭಾಷಾ ದ್ವೇಷವಲ್ಲ.
೨. ಕನ್ನಡ-ಸಂಸ್ಕೃತ ಭಾಷಾದ್ವಯಗಳು ಜೊತೆ-ಜೊತೆಗೆ ವೃದ್ಧಿಸಬಹುದು. ಆದರೆ ಒಂದು ಇನ್ನೊಂದು ವೃದ್ಧಿಗೆ ಭಾದಕವಾಗಬಾರದು. ಒಂದು ಇನ್ನೊಂದರ ಮೇಲೆ ಸಂಪೂರ್ಣಪ್ರಭಾವಶಾಲಿನಿಯಾಗ(ಭಾಷಾ ಸ್ತ್ರೀಲಿಂಗ) ಬಾರದು.
೩. ಇಂದು ಅನ್ಯಭಾಷಿಕರು ಹೇರಳವಾಗಿರುವ ದುಸ್ಸಂದರ್ಭದಲ್ಲಿ, ಕನ್ನಡವು ಸಂಪೂರ್ಣ ಸಂಸ್ಕೃತಮಯವಾಗಿ ಕಂಡರೆ, ಅವರು ಹೇಳುವುದಿಷ್ಟೆ "ಕನ್ನಡದಲ್ಲೇನಿದೆ, ಸರ್ವವೂ ಕೇವಲ ಸಂಸ್ಕೃತದ ಪದಗಳೇ", ಇದು ನಿಜವೆ? ಇಂದಿನ ಮಟ್ಟಿಗೆ ಇದು ಅಕ್ಷರಶಃ ಶತಪ್ರತಿಶತ ಸತ್ಯ.
ನಮಗೆ ಕನ್ನಡದ ವಿಶೇಷತೆ, ಅದರದೇ ಅದ ವಿಶೇಷ ಗುಣ, ಸೌಂದರ್ಯವನ್ನು ಉಳಿಸಿ.ಬೆಳೆಸಿಕೊಂಡು ಹೋಗಬೇಕೆನ್ನಿಸಬಾರದೆ? ಈ ವಿಶೇಷತೆ, ಸೊಬಗನ್ನು ಹೆಚ್ಚು ಹೆಚ್ಚು ಕನ್ನಡದ ಪದಗಳನ್ನು ಬಳಸುವುದರಿಂದ ಉಳಿಯುವುದೋ, ಇಲ್ಲವೆ, ಹೆಚ್ಚು ಸಂಸ್ಕೃತ-ಪದ-ಪ್ರಯೋಗದಿಂದಲೋ?
ಇದು ಅವರವರ ವಿವೇಚನೆಗೆ ಬಿಟ್ಟಿದ್ದು ಎನ್ನಬಹುದು, ಆದರೆ ಇದು ಪ್ರತಿಯೊಬ್ಬ ಕನ್ನಡಭಾಷಿಕನಿಗೆ ಪರಿಣಾಮ ಬೀರುವ ಸಂಗತಿಯಲ್ಲವೆ?
ಬೆನಕ:
ಇನ್ನೇನು ಸ್ವಾಮಿ? ನೀವು ಹೇಳಹೊರಟಿದ್ದೂ ಇದೇ ತಾನೆ? ಇನ್ನು ಹೇಳಿದ್ದಾಯಿತಲ್ಲ.... ಮಾಡಿನೋಡೋಣ!
ನಾನು ಹೇಳಿದ್ದನ್ನೆಲ್ಲಾ ನೀವು ಒಪ್ಪುವಿರೆಂಬ ಭ್ರಮೆ ನನಗಿಲ್ಲ; ಕೊಂಕು ತೆಗೆಯಲೇಬೇಕೆಂದು ಪಟ್ಟು ಹಿಡಿದು ಕುಳಿತವರಿಗೆ ಏನು ಹೇಳಲೂ ಶಕ್ತನಲ್ಲ; ಗಾದೆಯ ಮಾತಿನಂತೆ, "ಅವರ ಹೆಂಡ ಅವರ ಭಂಗಿ" ಅಷ್ಟೇ! ಯಾರೇನು ಮಾಡಲು ಸಾಧ್ಯ?
ಯಾರು ಏನು ಮಾಡದಿದ್ದರು ಬೇಡ, 'ಸಂಸ್ಕೃತದ ಪಂಡಿತೊತ್ತಮ'ರು ಏನೂ ಹೀಗೆ ಮಾಡದಿದ್ದರೆ ಸಾಕು. ಅವರು ತಮ್ಮ ಪಾಂಡಿತ್ಯವನ್ನು ತೋರಿಸಲೆಂದೇ ನಮಗೆ ಸಂಸ್ಕೃತಪದರಸಾಮೃತವನ್ನು ಅಜೀರ್ಣವಾಗಿ ವಾಂತಿಬೇಧಿಯಾಗುವ ವರೆಗೂ ಬಿಡದೆ, ಮೂಗು ಹಿಡಿದು ಗಂಟಲೊಳಗೆ ತುರುಕದಿದ್ದರೆ, ಆ ದೊಡ್ಡಗೆಲಸವೇ ಸಾಕು. ಅದುವೇ ದೊಡ್ಡ ಕೋರಿಕೆ, ಅಲ್ಲ ಪ್ರಾರ್ಥನೆ.
ಅದು ಅಲ್ಲದೆ, ನಾವು "ಬೆನಕರೆ, ಇದು ನಿಮಗಾಗಿ" ಎಂದು ಬರಿ ಬೆನರನ್ನು ಕುರಿತು ಹೇಳುತ್ತಿಲ್ಲವಲ್ಲ. ಈ ಮಾತುಕತೆಯು, ಯಾರನ್ನು 'ಕೊಂಕ' ಬೇಕೆಂದರೆ, ಯಾರು ಕನ್ನಡದಲ್ಲಿ ಅಪಾರ ಅಗಾಧ ಅತಿ ಅನವಶ್ಯಕ ಅನವರತ 'ಸಂಸ್ಕೃತವೊಂದೇ ಅಲ್ಲ', ಮತ್ತೆ 'ಬೇರೆ ಯಾವ ನುಡಿಯ' ಪದಗಳನ್ನು ಕನ್ನಡದಲ್ಲಿ ತುರುಕಿ, ತಮ್ಮ "ಪಾಂಡಿತ್ಯವನ್ನು", "ಭಾಷಾಪ್ರೌಢಿಮೆ"ಯನ್ನು, "ಶಿಷ್ಟ ಭಾಷೆಯನ್ನು", "ಅತ್ಯುನ್ನತ ಕನ್ನಡವನ್ನು", "ಸಾಹಿತ್ಯಿಕ ಭಾಷೆಯನ್ನು", "ನಾಗರಿಕ ಸಂಭಾಷಣೆಯನ್ನು", ತೋರಿಸಿಕೊಳ್ಳವರೋ ಅವರಿಗೆ.