ಕನ್ನಡ ಭಾಷೆಯ ವಿಕಾಸ....
- ಮುತ್ತಾತ! By: ಸಂಗನಗೌಡ (Aug 23 2006 - 10:55am)
- ಶುಭೋದಯ By: ಸಂಗನಗೌಡ (Aug 22 2006 - 1:33pm)
- ಹೋಲಿಸಿ ನೋಡಿ By: ಸಂಗನಗೌಡ (Aug 22 2006 - 5:17pm)
- ಸರಿ By: ಸಂಗನಗೌಡ (Aug 21 2006 - 7:49pm)
- ಸ್ವಲ್ಪ ತಿಳಿಸಿ By: ಸಂಗನಗೌಡ (Aug 21 2006 - 1:11pm)
- ಅತಿರೇಕದ ಮಾತು ಇಲ್ಲಿ ಬೇಡ By: hpn (Aug 21 2006 - 7:33pm)
- ಸಲಿಗೆಯಿಂದಿರಬೇಕು. By: ರಘುನಂದನ (Aug 21 2006 - 11:16pm)
- ನಗು ತಡೆಯಲಾಗುತ್ತಿಲ್ಲ By: Sunil Jayaprakash (Aug 21 2006 - 3:32pm)
- ಅತಿರೇಕದ ಮಾತು ಇಲ್ಲಿ ಬೇಡ By: hpn (Aug 21 2006 - 7:33pm)
- ಕನ್ನಡದ ಬಳಕೆಯ ಬಗೆಗೆ By: ಪ್ರದೀಪ್ ಬೆಳಗಲ್ (Aug 18 2006 - 11:31pm)
- ದಿಟ By: ಸಂಗನಗೌಡ (Aug 23 2006 - 1:25pm)
- ತಂತ್ರಾಂಶ ಮತ್ತು ಲಘುವರ By: pavanaja (Aug 16 2006 - 4:01pm)
- ಸರಕಾರಿ ಕಛೇರಿ, ಕನ್ನಡ ಹಾಗು ಕಂಪ್ಯೂಟರ್ By: adarsh (Aug 21 2006 - 11:48pm)
- ವಿಪರ್ಯಾಸ By: hpn (Aug 16 2006 - 11:58am)
- ಕನ್ನಡ ಭಾಷೆಯ ವಿಕಾಸ.... By: venkatesh (Aug 19 2006 - 3:20pm)


RSS:
ಕನ್ನಡ ಭಾಷೆಯ ವಿಕಾಸ....
ನಾಡಿಗ್ ಹಾಗೂ ಇಸ್ಮೈಲ್ ಸೂಚಿಸಿದಂತೆ ಒಮ್ಮೊಮ್ಮೆ ನನಗೂ ಭಾಷೆಯವಿಕಾಸಕ್ಕೆ ಈ ತರಹದ ಅತಿ ಮಡಿವಂತಿಕೆ ಮುಳುವಾಗುತ್ತಿದೆಯೇನೊ ಅನ್ನಿಸುತ್ತಿದೆ.ಕನ್ನಡದಲ್ಲಿ ಹೊಸ ಹೊಸ 'ಪದಗುಛ್ಛಗಳು' ಬರಬೇಕು. 'ಅವು ಕನ್ನಡೀಕರಿಸಿದವುಗಳಾದರು' ಅಡ್ಡಿಯಿಲ್ಲ. ಆಧುನಿಕ ತಂತ್ರಜ್ಞಾನದಲ್ಲಿ (ನಮ್ಮ ಕಿಟ್ಟೆಲ್ ಶಬ್ದಕೊಶದ ಪದಗಳು ) ಎಲ್ಲಾ ಕನ್ನಡದ ಪದಗಳೆ ಬಳಸಲು ಸಾಧ್ಯವಾಗದಿರಬಹುದು. ಆ ಪದಗಳನ್ನು ನಾವೆ ಸಂದರ್ಭಾನುಸಾರ ತಯಾರಿಸಿಕೊಳ್ಳಬೇಕಾಗುತ್ತದೆ.
೧. 'ಸಂಪದ'ದಂತಹ ಪುಟದಲ್ಲಿ ಬರೆಯುವವರ ಸೂಕ್ಷ್ಮ ಪರಿಚಯ ನೊಡಿದರೆ, ಅವರೆಲ್ಲಾ ವೃತ್ತಿಪರ
ತಂತ್ರಜ್ಞರು. ಇನ್ನು ಕೆಲವರು ಕಛೇರಿಗಳಲ್ಲಿ ದುಡಿಯುವವರು. ತಮ್ಮ ಕೆಲಸದ ಜೊತೆಗೆ ಕನ್ನಡದಲ್ಲಿ
ಬರೆಯುವ ಗೀಳು ಬೆಳಸಿಕೊಂಡವರು. ಈ ಮಾಧ್ಯಮದಲ್ಲಿ ಸುಲಭವಾಗಿ ಬರೆದು ನಮ್ಮ
ಅಭಿಪ್ರಾಯಗಳನ್ನು ಕೂಡಲೇ ಮೂಡಿಸಬಹುದು ಎನ್ನುವ ಪ್ರಮುಖ ಕಾರಣದಿಂದ ಬರೆಯಲು ಸಾಹಸ
ಮಾಡಿದವರು. ನಿಯತಕಾಲಿಕಗಳಲ್ಲಿ ಒಂದು ಅಬಿಪ್ರಾಯ ತಿಳಿಸಲು ಅನಾನುಕೂಲತೆಯಿಂದ ಅದರ
ಸಹವಾಸ ಮಾಡದೆ ಸುಮ್ಮನಿರುವವರ ಸಂಖ್ಯೆ ಹೆಚ್ಚು.ಇಷ್ಟು ಬರೆಯಬಲ್ಲೆ ಎಂದು ಈಗ ನನಗೆ
ತಿಳಿಯುತ್ತಿದೆ.
ನನ್ನ ಇಂಗ್ಲಿಷ್ ಲೇಖನಗಳು ಹಲವಾರು ಬ್ಲಾಗ್ ಗಳಲ್ಲಿ ಪ್ರಕಟವಾಗಿವೆ. ಉದಾ:
ಸುಲೇಖ ಬ್ಲಾಗ್, ಹೊಳಲ್ಕೆರೆ ಗಣೇಶ,ಗಣೇಶ,ಸುಂಕದವರ್,'World of Cotton'
ಯಾಹು ೩೬೦ ಡಿಗ್ರಿ,ಇತ್ಯಾದಿ. ಒಂದು ಕನ್ನಡ ಬ್ಲಾಗ್-'ಸಿರಿಕನ್ನಡಂ ಗೆಲ್ಗೆ,
೨. ಅಲ್ಲಿ ಬರೆಯುವವರು ಹೆಚ್ಚಾಗಿ ನುರಿತ ಅಂಕಣಕಾರರು.(ನಮ್ಮ ಇಸ್ಮೈಲ್ ರವರ ತರಹ)
೩. ಬಹುಶಃ ನನ್ನ ಲೇಖನ 'ಉದಯವಾಣಿ'ಯಲ್ಲಿ ಪ್ರಕಟಗೊಳ್ಳುವ ಸಾಧ್ಯತೆಯನ್ನು ನಂಬಲಾರೆ !
೩. ಒಂದುವೇಳೆ ನುರಿತ ಬರಹಗಾರರೆಲ್ಲಾ ಈ ಕ್ಷೇತ್ರಕ್ಕೆ ಲಗ್ಗೆ ಹಾಕಿದರೆ ನನ್ನಂತಹವರ ಪಾಡು ದೇವರಿಗೆ
ಗೊತ್ತು !
ಮೇಲಿನ ಹಿನ್ನೆಲೆಯಲ್ಲಿ ನಾವೆಲ್ಲಾ ಬರೆಯುತ್ತೇವೆ. ವ್ಯಾಕರಣ, ಛಂದಸ್ಸು ನಮಗೂ ಗೊತ್ತು. ಆದರೆ ಆ ಕಡೆ ಹೆಚ್ಚು ಗಮನ ಹಾಯಿಸಲು ಸಮಯ ನಮಗೆ ಸಿಕ್ಕಿಲ್ಲ !
ಹಾಗೆ ನಾವು ಇದನ್ನು ನಿರಾಕರಿಸಿಯು ಇಲ್ಲ. ನನ್ನ ಸಾಕರ್ ಲೇಖನದಲ್ಲಿ, ಸಾಧ್ಯವಾದಷ್ಟು ಮಟ್ಟಿಗೆ ಕನ್ನಡದ ಪದಗಳನ್ನು ಹಾಕಿ ದುಡಿಸಿಕೊಂಡಿದ್ದೇನೆ. ಆದರೆ ಅದನ್ನೇ ಒಂದು ದೊಡ್ಡ 'ವ್ಯಾಕರಣದ ಕಾರ್ಯಾಗಾರ' ಮಾಡಿದರೆ ಭಾಷೆಯ ಬೆಳವಣಿಗೆ ಕುಂಠಿತವಾಗುತ್ತದೆ.
ಬೀ.ಎಮ್.ಶ್ರಿ. ರವರು ದಶಕಗಳ ಹಿಂದೆಯೆ ಇದನ್ನು ಗಮನಿಸಿ ಬರೆದ ಒಂದು ಪದ್ಯ ತುಂಬಾಚೆನ್ನಾಗಿತ್ತು.
ಸರಿಯಾಗಿ ನೆನಪಿಲ್ಲ.
'ಇವಳ ತೊಡಿಗೆ ಅವಳಿಗಿಟ್ಟು,ಅವಳ ತೊಡಿಗೆ ಇವಳಿಗಿಟ್ಟು ಸಂಭ್ರಮಿಸಿದೆ.....ಹಾಡಿದೆ'...ಅಂತ. ಇದು ಕನ್ನಡ ಮತ್ತು ಸಂಸ್ಕೃತಗಳ ಪದಗಳ ಮಿಲನ ಬೇಡ; ಪೂರ್ತಿ ಕನ್ನಡ ದಲ್ಲಿಯೆ ಬರೆಯಬೇಕು ಎಂದು ಮಾಡಿದ 'ಬೃಹತ್ ಚರ್ಚೆ'ಯಲ್ಲಿ ನುಡಿದ ಅವರ ಮಾತುಗಳು ಎಂದೂ ಮರೆಯಲಾರದಂತಿವೆ ! ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಅವರು, ಕನ್ನಡಕ್ಕಾಗಿ ದುಡಿದರು. ಅವರ ಕೊಡುಗೆ ಅಪಾರ.
'ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡುದು ನಡೆಸೆನ್ನನು'. ಅವರ ಆಂಗ್ಲ ಕವಿತೆಯ ಸುಂದರ ಅನುವಾದ ಮರೆಯಲು ಸಾಧ್ಯವೇ ?