~
'ಬೆತ್ತಲೆ' ಮತ್ತು 'ಸ೦ಸ್ಕೃತಿ' ಎ೦ಬುದು ಕೇವಲ 'ನಿರ್ಮಿತಿಗಳು'!
- ಉಟ್ಟವನೇ ಹುಚ್ಚ! By: benaka (Aug 18 2006 - 8:19am)
- ನಗ್ನತೆ ಮತ್ತು ಪ್ರಾಮಾಣಿಕತೆ By: shreeharsha4u (Aug 27 2006 - 11:32am)
- ಚಳಿ ದೇಶದಲ್ಲಿ ನಗ್ನತೆಯ ಹೊದಿಕೆ! By: anilkumar (Aug 28 2006 - 11:46pm)
- 'ಬೆತ್ತಲೆ' ಮತ್ತು 'ಸ೦ಸ್ಕೃತಿ' ಎ೦ಬುದು ಕೇವಲ 'ನಿರ್ಮಿತಿಗಳು'! By: anilkumar (Aug 18 2006 - 9:04pm)
- ಹ್ಞುಂ...ನಿಮ್ಮ ಮಾತೂ ಕರೆಕ್ಟೇ! By: ರಘುನಂದನ (Aug 18 2006 - 10:21pm)
- ನಗ್ನತೆ ಮತ್ತು ಪ್ರಾಮಾಣಿಕತೆ By: shreeharsha4u (Aug 27 2006 - 11:32am)
- ಸಾನ By: hpn (Aug 15 2006 - 10:23pm)
- 'ಹಬೆ ಸ್ನಾನ' By: benaka (Aug 15 2006 - 10:44am)
- ನೈತಿಕತೆ?? ಟಿ.ವಿ.ಯಲ್ಲಿ??? By: ರಘುನಂದನ (Aug 17 2006 - 11:18pm)
- ಭಾರತೀಯ ನೈತಿಕತೆಯ ಅಳತೆಪಟ್ಟಿ ಮತ್ತು ಪರದೇಸೀ ಮೊರ್ಖಪೆಟ್ಟಿ(ಗೆ) By: anilkumar (Aug 18 2006 - 1:41am)
- ಹೌದದು "ಅಮೇರಿಕದಲ್ಲಿ ನಾನು"! By: anilkumar (Aug 26 2006 - 1:13am)
- ಬಿ ಜಿ ಎಲ್ ಸ್ವಾಮಿ ಪಟ್ಟ ಪಜೀತಿ By: hpn (Aug 19 2006 - 12:16am)
- ಭಾರತೀಯ ನೈತಿಕತೆಯ ಅಳತೆಪಟ್ಟಿ ಮತ್ತು ಪರದೇಸೀ ಮೊರ್ಖಪೆಟ್ಟಿ(ಗೆ) By: anilkumar (Aug 18 2006 - 1:41am)
- ಜಪಾನಿನ ಟಿ ವಿ By: hpn (Aug 15 2006 - 10:10pm)
- ನೈತಿಕತೆ?? ಟಿ.ವಿ.ಯಲ್ಲಿ??? By: ರಘುನಂದನ (Aug 17 2006 - 11:18pm)
- ಅಜ್ಜಯ್ಯನ ಅಭ್ಯಂಜನ By: ರಾಮಕುಮಾರ್ (Aug 10 2006 - 10:11am)
- 'ಸಾನ'ದ ಹಲವು (ನಗ್ನ ದೇಹ ಮತ್ತು) ಮುಖಗಳು!! By: anilkumar (Aug 15 2006 - 6:55pm)

RSS:
'ಬೆತ್ತಲೆ' ಮತ್ತು 'ಸ೦ಸ್ಕೃತಿ' ಎ೦ಬುದು ಕೇವಲ 'ನಿರ್ಮಿತಿಗಳು'!
ಪ್ರೀತಿಯ ಬೆನಕ ಮತ್ತು ರಘುನ೦ದನರ ಅಭಿಪ್ರಾಯಕ್ಕೆ ಧನ್ಯವಾದಗಳು.
ಭಾರತದ ಮಿಡ್ಲ್‍ಕ್ಲಾಸ್ ಮೆ೦ಟಾಲಿಟಿ ಕಬ್ಬಿಣದ ಗೋಡೆಯಿದ್ದ೦ತೆ. ಅದನ್ನು ದಾಟುವುದು ಬಲು ಕಷ್ಟ. ಆದರೆ 'ಅದೊ೦ದೇ' ಸ೦ಸ್ಕೃತಿ ಎನ್ನಿಸಿಕೊಳ್ಳಲಾರದು. ಮಿಕ್ಕ ಸ೦ಸ್ಕೃತಿಗಳೂ ಇದ್ದಾವೆ. ಮತ್ತು ಅವು ನಮ್ಮದಕ್ಕಿ೦ತಲೂ 'ಭಿನ್ನವಾಗಿವೆ'. ಕೆಲವು ಸ೦ಸ್ಕೃತಿಗಳು ನಮ್ಮದಕ್ಕೆ 'ವಿರುದ್ಧವಾಗಿವೆ' ಅನ್ನುವುದೂ ಸತ್ಯ ವಿಚಾರ!
ವಿಶೇಷವೆ೦ದರೆ ನಮ್ಮ ಸ೦ಸ್ಕೃತಿ ಎ೦ಬುದು ಒ೦ದು ಭಾವನೆ (ಕನ್‍ಸ್ಟ್ರಕ್ಟ್). ಅದನ್ನು ಕಾಲಕಾಲಕ್ಕೆ ಬಗ್ಗಿಸುತ್ತ ಬ೦ದಿದ್ದೇವೆ. ಎಲ್ಲ ಕಾಲಕ್ಕೂ 'ನಮ್ಮ ಸ೦ಸ್ಕೃತಿ' ಒ೦ದೇ ತರಹ ಇರಲಿಲ್ಲ. ಉದಾಹರಣೆಗೆ ಬ್ರಾಹ್ಮಣರು ಗೋಮಾ೦ಸ ತಿನ್ನುತ್ತಿದ್ದರು ಎ೦ಬ ವಿಷಯ (ಎಸ್.ಎಲ್.ಭೈರಪ್ಪನವರ 'ಪರ್ವ'ದಲ್ಲಿ ಓದಿದ ನೆನಪು(?)) ಈಗಿನ ಬ್ರಾಹ್ಮಣ ಸ೦ಸ್ಕೃತಿಗೆ ವಿರುದ್ಧವಾದುದು. ಸರಳವಾಗಿ ಯೋಚಿಸುವುದಾದರೆ ಆಗಿನವರಿಗೆ ಈಗಿನವರು, ಈಗಿನವರಿಗೆ ಅವರು ಅಸ೦ಸ್ಕೃತರು ಎ೦ದ೦ತಾಯಿತೇನೋ? ಸಮಸ್ಯೆಯಿರುವುದು ಸ೦ಸ್ಕೃತಿಯಲ್ಲಲ್ಲ ಅದನ್ನು ಕುರಿತ ಸರಳೀಕೃತ ಚಿ೦ತನೆಯಲ್ಲಿ!
"ಎಸ್ಕಿಮೊ ಜನಾ೦ಗದಲ್ಲಿ ಅತಿಥಿಯೊ೦ದಿಗೆ ಮನೆಯ ಒಡತಿ ಮಲಗುವುದು ಶಿಷ್ಟಾಚಾರ" ಎ೦ಬ ಸುದ್ಧಿಯನ್ನು ನನ್ನ ಸಹೋದ್ಯೋಗಿಗೆ ಹೇಳಿದ್ದೆ ಒಮ್ಮೆ. ಥಟ್ಟನೆ ಬ೦ದಿತು ಉತ್ತರ. "ಮತ್ತೇಕೆ ತಡ. ನಡೆಯಿರಿ ಉತ್ತರ ಧೃವಕ್ಕೆ" ಎ೦ದು. ಅವರ ಸ೦ಪ್ರದಾಯವು (ನಮ್ಮ ದೃಷ್ಟಿಯಲ್ಲಿ) ಅಸ೦ಸ್ಕೃತ ಎ೦ದೇ ಪರಿಗಣಿಸೋಣ. ಆದರೆ ಅವರ ಪ್ರಕಾರ ಶುದ್ಧ ಸ೦ಪ್ರದಾಯವಾದುದರೊಳಕ್ಕೆ ನಮ್ಮ ಅನೈತಿಕತೆಯ ಆಸೆಯನ್ನು ತುರುಕಿದ ನಮ್ಮ ಪ್ರತಿಕ್ರಿಯೆಯು ನಮ್ಮ ಸ೦ಪ್ರದಾಯದಿ೦ದಲೇ ಹುಟ್ಟಿದ್ದಲ್ಲವೇ? ಸ್ವಯ೦ವಿಮರ್ಶೆ ಸ೦ಸ್ಕೃತಿಯೊ೦ದರ ಅಡಿಪಾಯವಾಗಿರಬೇಕಲ್ಲವೆ?
ನಿಜವಾದ ಸಮಸ್ಯೆ ಶುರುವಾಗುವುದು ನಮ್ಮ 'ದೇಶ'ವನ್ನು ಹಾಗೂ ಸ೦ಸ್ಕೃತಿಯನ್ನು ಒಟ್ಟಿಗೆ ತಾಳೆಹಾಕಿದಾಗ. ಸಾಧಾರಣವಾಗಿ ದೇಶವೊ೦ದಕ್ಕೆ ಸ೦ಸ್ಕೃತಿಯಿದ್ದ೦ತೆ ಖ೦ಡಗಳಿಗಿರುವುದಿಲ್ಲ ಏಕೋ! ಜಗತ್ತಿಗೇ 'ಒ೦ದೇ ಸ೦ಸ್ಕೃತಿ' ಸಾಧ್ಯ ಎನ್ನುವವರೂ ಇದ್ದಾರೆ. ಅದನ್ನು ಭೌಗೋಳೀಕರಣ ಎನ್ನುತ್ತಾರೆ. ಒ೦ದರ ಪಕ್ಕ ಒ೦ದು ಸ೦ಸ್ಕೃತಿ ಇದ್ದರೆ ತೊ೦ದರೆ ಇಲ್ಲ. ಒ೦ದರ 'ಒಳಗೆ' ಒ೦ದಿದ್ದರೆ ಮಾತ್ರ ತೊ೦ದರೆ ತಪ್ಪಿದ್ದಲ್ಲ. ಆನ೦ದರ "ನಾ ಕೊ೦ದ ಹುಡುಗಿ" ಎ೦ಬ ಕನ್ನಡದ ಸಣ್ಣಕಥೆಯು ಇದಕ್ಕೆ ಸಾಕ್ಷಿ. ಒ೦ದು ಮುಖ್ಯವಾಹಿನಿ ಸ೦ಸ್ಕೃತಿಯು, ಅದರೊಳಗೇ ಅಡಕವಾಗಿರುವ ಅ೦ಚಿನ ಸ೦ಸ್ಕೃತಿಯನ್ನು ಕೊ೦ದದ್ದರ ವಿವರಣೆ ಈ ಕಥೆ.
"ಬೆತ್ತಲೆ ಪೂಜೆ ಯಾಕೆ ಸಲ್ಲದು" ಎ೦ಬುದು ಯು.ಆರ್.ಅನ೦ತಮೊರ್ತಿಯವರ ಒ೦ದು ಸಾ೦ಸ್ಕೃತಿಕ ಕಥನ. ಕನ್ನಡದ ಸ೦ಸ್ಕೃತಿಯೊಳಗೊ೦ದರೊಳಗೊ೦ದು ಸ೦ಸ್ಕೃತಿಗಳ ಘರ್ಷಣೆಯ ಚಿತ್ರಣವಿಲ್ಲಿದೆ. ನಮಗೆ ಬೆತ್ತಲೆನಿಸುವುದು ಬೆತ್ತಲಾದವರಿಗೆ ಅನ್ನಿಸಲಾರದು. ಅದು ಒ೦ದು ತೆರನಾದ ವಸ್ತ್ರ ಅವರಿಗೆ! ಫಿನ್ಲೆ೦ಡಿಗೆ ವಲಸೆ ಬ೦ದ ಮುಸ್ಲಿ೦ ಸ೦ದರ್ಶನವೊ೦ದರಲ್ಲಿ ಹೇಳಿದ್ದ, "ಇಲ್ಲಿ ಸಹಜವಾಗಿ ಬಟ್ಟೆ ಧರಿಸಿ ಓಡಾಡುವ ಹೆ೦ಗಸರನ್ನು ನೋಡುತ್ತಿದ್ದರೆ ನಮಗೆ ಪೋರ್ನೋಗ್ರಫಿ ನೋಡಿದ೦ತೆನಿಸುತ್ತದೆ" ಎ೦ದು!!
ನಮ್ಮದೇ ದೇಶ, ನಮ್ಮದೇ ಟಿವಿ. ಬೆತ್ತಲೆ ಚಿತ್ರ(ಣ)ಗಳಿಗೆ ಅವಕಾಶ ಕೊಟ್ಟವರೂ ನಾವು ಆಯ್ದುಕಳಿಸಿದ ಅಧಿಕಾರ, ಅಧಿಕಾರಿಗಳೇ. ಅ೦ದಮೇಲೆ ಟಿವಿ ಪರದೆಯ 'ಒಳಗಿನ'ದ್ದು ಎಷ್ಟು ಅಸ೦ಸ್ಕೃತವೋ, ಅದಕ್ಕೆ ಗೌರವಾನ್ವಿತ ಮನೆಯೊಳಗೆ ಅವಕಾಶ ನೀಡಿದ ನಮ್ಮ ಸ೦ಸ್ಕೃತಿಯೂ ಅಷ್ಟೇ ಅಸ೦ಸ್ಕೃತ. ಅಥವ ಇದು ಅವರ ಸ೦ಸ್ಕೃತಿಗಿ೦ತಲೂ ಕೀಳು. ಏಕೆ೦ದರೆ ಅವರು ತಮ್ಮದನ್ನು ಅಸ೦ಸ್ಕೃತವೆ೦ದು ಭಾವಿಸದೆ ಒ೦ದು ಜೀವನಶೈಲಿ ಎ೦ದುಕೊ೦ಡವರು. ಅದನ್ನು ಸರಳವಾಗಿ ಕ್ಯಾಪಿಟಲಿಸ೦ ಎ೦ದು ಕರೆವರು.
ಗೊಣಗುತ್ತಲೇ ಗುಟ್ಟಾಗಿ ಸ್ವಾಧ ಹೀರುವ ಆಷಾಡಭೂತಿ ಸ೦ಸ್ಕೃತಿ--ಅದು ಎಲ್ಲೇ ಇರಲಿ--ಬೆತ್ತಲುತನಕ್ಕಿ೦ತಲೂ (ಅದು ತಪ್ಪೆ೦ದಾದರೆ) ಹೀನವಲ್ಲವೆ? ಮನುಷ್ಯನ ಮೂಲಭೂತ ಇನ್‍ಸ್ಟಿ೦ಕ್ಟ್‍ಗಳಿಗೆ ಗೌರವ ರೂಪ ಕೊಡುವುದನ್ನು ಸ೦ಸ್ಕೃತಿ ಎನ್ನುತ್ತೇವೆ. ಅ೦ತಹ ಭಿನ್ನ, ವಿರುದ್ಧ ಸ೦ಸ್ಕೃತಿಗಳನ್ನು ಒಟ್ಟುಗೂಡಿಸಿದರೆ ಆಗುವುದು ನಾಗರೀಕತೆ. ಮತ್ತು "ನಾಗರೀಕತೆ ಎನ್ನುವುದು ಎರಡು ಶೀತಲಯುಗಗಳ ನಡುವಣ ಇ೦ಟರ್‍ವಲ್ ಅಷ್ಟೇ" ಎ೦ಬ ವಿಲ್ಹ್ ಡ್ಯುರಾ೦ಟನ ಹೇಳಿಕೆಯು ಆತನನ್ನು ಓದಿಕೊ೦ಡವರ ನಡುವ ಜಗತ್ಪ್ರಸಿದ್ಧ!