ಪತ್ರಿಕೆಗಳ ಅಂಕಣಗಳೂ ಇದಕ್ಕೆ ಹೊರತಲ್ಲ. "ನೀವು ಕೇಳಿದಿರಿ" ಸುಧಾ ವಾರಪತ್ರಿಕೆಯ ಖ್ಯಾತ ಅಂಕಣಗಳಲ್ಲೊಂದು. ಆ ಅಂಕಣಕಾರರ ನಿಜವಾದ ಹೆಸರು ಏನೆಂದು ಯಾರಿಗಾದರೂ ತಿಳಿದಿದೆಯೇ? ಈ ರೀತಿ ಅಂಕಣಗಳು ವಿಜಯ ಕರ್ನಾಟಕ ಮುಂತಾದ ಇತರ ಪತ್ರಿಕೆಗಳಲ್ಲಿಯೂ ಇವೆ.
ಇವು ಉದಾಹರಣೆಗಳು ಮಾತ್ರ. ವಿಷಯ ಹೀಗಿರುವಾಗ ನಿಮ್ಮ ಹೆಸರನ್ನು ಹಾಕಿಯೇ ಹಾಕಬೇಕು ಎನ್ನುವ ಬಲವಂತ ಏಕೆ? ಹೆಸರುಗಳನ್ನು ಹಾಕಿಕೊಳ್ಳುವುದು, ಬಿಡುವುದು ಅವರವರ ಇಷ್ಟ.
ಅಷ್ಟಕ್ಕೂ ನಿಜ ಹೆಸರು ಎಂದರೆ ಯಾವುದು? ಹತ್ತನೇ ತರಗತಿಯ ಅಂಕಪಟ್ಟಿಯಲ್ಲಿರುವುದೇ? ಡಿಗ್ರಿ ಸರ್ಟಿಫಿಕೇಟ್ ನಲ್ಲಿ ಪ್ರಿಂಟ್ ಆದಂತಿರುವುದೇ? ಅಥವಾ ನಾಮಕರಣ ಮಾಡಿದಾಗ ಬರೆಸಿದಾಗ ಇರುವ ಜಾತಕ, ಕುಂಡಲಿಯಲ್ಲಿರುವುದೇ? "ಇದೇ ನನ್ನ ನಿಜ ಹೆಸರು" ಎಂದು ಪ್ರೂವ್ ಮಾಡಲು ಏನಾದರೂ ಸರ್ಟಿಫಿಕೇಟ್ ಕೊಡಬೇಕಿದೆಯೆ?
ಪ್ಲಾನೆಟ್ ಕನ್ನಡ, ಕನ್ನಡದ ಬ್ಲಾಗುಗಳ ಕ್ರೋಢಿಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಸಾಗಬೇಕಿದೆ ಹೊರತು, "ನಿಜ ಹೆಸರು" ಹಾಕಿಕೊಂಡಿಲ್ಲ ಎಂಬ ಕಾರಣಕ್ಕೆ ತೆಗೆಯುತ್ತಾ ಹೋಗಬಾರದು.
ನನ್ನ ಅಭಿಪ್ರಾಯದಲ್ಲಿ, ಪ್ಲಾನೆಟ್ ಕನ್ನಡದಲ್ಲಿ ತುರ್ತಾಗಿ ಆಗಬೇಕಿರುವ ಕೆಲಸ: ಕನ್ನಡೇತರ ಬ್ಲಾಗುಗಳಿಗೆ ನಿರ್ಬಂಧವನ್ನೇರುವುದು. ಹೆಸರೇ ಪ್ಲಾನೆಟ್ ಕನ್ನಡ. ಅಂದರೆ ಪ್ರಪಂಚದಾದ್ಯಂತ ಇರುವ ಕನ್ನಡ ಬ್ಲಾಗುಗಳ ಸಂಗಮ. "ಕನ್ನಡಿಗ" ಎಂಬ ಬೋರ್ಡ್ ನೇತುಹಾಕಿಕೊಂಡು ಕನ್ನಡೇತರ ಬರಹಗಳನ್ನು ಬರೆಯುವವರಿಗೆ ಏಕೆ ಮಣೆ ಹಾಕಬೇಕು?
ಪ್ಲಾನೆಟ್ ಕನ್ನಡ - "ಅನಾಮಿಕರ" ನಿರ್ಬಂಧವೇಕೆ?
ಶರಣು,
ಪ್ಲಾನೆಟ್ ಕನ್ನಡದಲ್ಲಿ "ಅನಾಮಿಕರು" ಬರೆಯುವ ಬ್ಲಾಗುಗಳನ್ನು ತೆಗೆದುಹಾಕುವ ನಿರ್ಣಯವನ್ನು ಏಕೆ ರೂಪಿಸಲಾಗಿದೆ?
ಕುವೆಂಪು ಅವರು ಕುವೆಂಪು ಎಂದೇ ಎಲ್ಲೆಲ್ಲೂ ಪರಿಚಯ (ಕೆ.ವಿ.ಪುಟ್ಟಪ್ಪ ಎಂದಲ್ಲ)
ಮುದ್ದಣ ಅವರು ಮುದ್ದಣ ಎಂದೇ ಎಲ್ಲೆಲ್ಲೂ ಪರಿಚಯ (ನಂದಳಿಕೆ ಲಕ್ಷ್ಮಿನಾರಾಯಣಪ್ಪ ಎಂದಲ್ಲ)
ಕುಮಾರವ್ಯಾಸ ಅವರು ಕುಮಾರವ್ಯಾಸ ಎಂದೇ ಎಲ್ಲೆಲ್ಲೂ ಪರಿಚಯ (ಗದುಗಿನ ವೀರನಾರಣಪ್ಪ ಎಂದಲ್ಲ)
ಇನ್ನು ತ್ರಿವೇಣಿ, ಚದುರಂಗ, ಬೀಚಿ, ಇವರುಗಳ ನಿಜ ಹೆಸರುಗಳು ತಿಳಿದವರೇ ಕಡಿಮೆ.
ಇವರೆಲ್ಲರೂ ಅನಾಮಿಕರೇ?

- ಮನ