ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಕನ್ನಡದ ಬಳಕೆಯ ಬಗೆಗೆ

August 18, 2006 - 11:31pm — ಪ್ರದೀಪ್ ಬೆಳಗಲ್

ಕನ್ನಡದ ಬಳಕೆಯ ಬಗೆಗೆ

ಪ್ರದೀಪ್ ಬೆಳಗಲ್'s picture

ಇಸ್ಮಾಯಿಲ್ ಅವರು ಹೇಳುವುದು ಸರಿಯಾಗಿಯೇ ಇದೆ. ಪರ ಭಾಷಾ ಪದಗಳು ಹಲವು ಕಾರಣಗಳಿಗೆ ನಮ್ಮ ಭಾಷಾ ವಲಯವನ್ನು ಪ್ರವೇಶಿಸುತ್ತವೆ, ಸ್ವೀಕರಿಸಲ್ಪಡುತ್ತವೆ ಹಾಗೂ ನಮ್ಮವೇ ಆಗುತ್ತವೆ. (ಅದರಲ್ಲೊಂದು ಕಾರಣ ನಮ್ಮನ್ನು ಆಳುತ್ತಿದ್ದವರು ತಮ್ಮ ಭಾಷೆಯನ್ನೇ ಆಳಲು ಬಳಸಿದುದು.) ಇಂಗ್ಲೀಷರೇನು ನಮ್ಮನ್ನು ಇಂದು ಆಳುತ್ತಿಲ್ಲ. ಆದಾಗ್ಯೂ ಆ ಭಾಷೆಯ ಪ್ರತಿಷ್ಟೆ ನಮ್ಮನಿನ್ನೂ ಆಳುತ್ತಿದೆ.

ಇತ್ತೀಚೆಗೆ ನಾನು ಅನುವಾದದಲ್ಲಿ ಬಳಸಲು spindle, frit ಪದಗಳಿಗೆ ಅರ್ಥ/ಪರ್ಯಾಯ ಹುಡುಕುತ್ತಿದ್ದೆ. ಸಿಕ್ಕ ಪರ್ಯಾಯಗಳು ಕದಿರು (ಕದಿರಣಿಗೆ), ಕಾಚಲು. ಇವೆರಡೂ ಪದಗಳು ನೇಕಾರಿಕೆ ಹಾಗೂ ಲೋಹ ತಯಾರಿಕೆಯಲ್ಲಿ ಬಳಸುವ ಪದಗಳು. ನಮ್ಮ ಜನರ ಮಧ್ಯದಲ್ಲಿ (ಕರಕುಶಲಗಾರರ, ರೈತರ ಮುಂತಾದ) ಹಲವು ಇಂತಹ ಪದಗಳು ಬಳಕೆಗೆ (ಪಾರಿಭಾಷಿಕ ಪದಗಳಾಗಿ) ಕಾಯುತ್ತಿರ ಬಹುದು ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಇಂಗ್ಲೀಷ್ ಇತಿಹಾಸ ಪುಸ್ತಕದಲ್ಲಿ Engilish bond ಎಂದು ಕರೆಯಲ್ಪಡುವ ಇಟ್ಟಿಗೆಗಳನ್ನು ಪೇರಿಸಿ ಕಟ್ಟುವ ಪದ್ಧತಿಗೆ ನಮ್ಮಲ್ಲಿರುವ ಹೆಸರು ಉದ್ದಿಟ್ಟಿಗೆ (ನಾನಾಗಲೆ ಇಂಗ್ಲೀಷ್ ಬಾಂಡ್ ಗೆ ಪರ್ಯಾಯ ಸಿಗುವುದಿಲ್ಲವೆಂದೇ ನಿರ್ದರಿಸಿ ಮುಂದುವರೆದಿದ್ದೆ). ವಾಸ್ತವದಲ್ಲಿ ಭಾರತದಾಧ್ಯಂತ ಓದಲ್ಪಡ ಬೇಕೆಂದು ಇಂಗ್ಲೀಷ್ ನಲ್ಲಿ ಪುಸ್ತಕಗಳನ್ನು ಬರೆಯುವವರು ಆ ಭಾಷೆಯ ಮೋಡಿಯನ್ನು ಆಹ್ವಾಸಿಕೊಳ್ಳುತ್ತಾರೆಂದೇ ಭಾಸವಾಗುತ್ತದೆ.(ಈ ಗುಂಪಿಗೆ ಜ್ಞಾನಕ್ಕಾಗಿ ಓದುವ ಕೆಲವರನ್ನು ಸೇರಿಸ ಬೇಕಾದ ಅಗತ್ಯವಿದೆಯೆಂದು ಕಾಣುತ್ತದೆ)  ಇದರ ಪರಿಣಾಮಗಳು ಹಲವು ಎಂದು ನಾವು ಗುರುತಿಸುವುದು ಅಗತ್ಯವೆಂದೇ ಭಾಸವಾಗುತ್ತದೆ.

 `ಈ ಮಧ್ಯಮ ವರ್ಗಕ್ಕೆ ಇಂಗ್ಲಿಷ್ ನತ್ತ ಇರುವ ಸೆಳೆತಕ್ಕೂ ವರ್ತಮಾನದ ಉದ್ಯೋಗ ಮಾರುಕಟ್ಟೆಗೂ ಇರುವ ಸಂಬಂಧವನ್ನು ನಿರಾಕರಿಸಲು ಸಾಧ್ಯವೇ?` ಎಂಬ ಇಸ್ಮಾಯಿಲ್ ಅವರ ಪ್ರಶ್ನೆ ಪ್ರಸ್ತುತವಾಗುವುದು ಈ ಹಿನ್ನೆಲೆಯಲ್ಲಿಯೇ. ಇಂದಿಗೂ ನಮ್ಮ ಕೇಂದ್ರದ ಸರಕಾರಿ ಕಚೇರಿಗಳು ಇಂಗ್ಲೀಷನ್ನೇ ಬಳುಸುತ್ತಿವೆ. ಇಲ್ಲವೆ ಹಿಂದಿಯನ್ನು. ಆಯಾ ಪ್ರಾಂತೀಯ ಕ್ಷೇತ್ರದಲ್ಲಿ ಆಯಾ ಪ್ರಾಂತೀಯ ಭಾಷೆಯನ್ನು ಬಳಸಲು ಸಾಧ್ಯವೆ?

ಈ ಪ್ರಶ್ನೆಯನ್ನು ನಾವು ಕೇಳಲೂ ತಯಾರಿಲ್ಲವೆಂದು ಕಾಣುತ್ತದೆ. (ಅದು ಅಸಾಧ್ಯವೆಂದೇ ಮಧ್ಯಮ ವರ್ಗ ಭಾವಿಸಿದೆ ಎಂದು ನನ್ನ ಅನಿಸಿಕೆ.) ಹಿಂದೆ ಕೇಂದ್ರದಲ್ಲಿ ಆಡಳಿತ ಹಿಡಿದಿದ್ದ  ಎನ್ ಡಿ ಎ ಸರಕಾರ ಹಾಗೂ ಇಂದಿನ ಯುಪಿಎ ಸರಕಾರಗಳೆರಡೂ ಕನ್ನಡನವನ್ನೂ ಒಳಗೊಂಡು ಎಲ್ಲ ಶೆಡ್ಯೂಲ್ ಎಂಟರಲ್ಲಿ ಸೇರಿಸಲ್ಪಟ್ಟ ಭಾಷೆಗಳಿಗೂ ರಾಷ್ಟ್ರ ಭಾಷೆ ಸ್ಥಾನಮಾನ ಕೊಡುವ ಸಾಧ್ಯತೆ ಪರಿಶೀಲಿಸಲು ಸಮತಿಯೊಂದನ್ನು ರಚಿಸುವುದಾಗಿ ತಮ್ಮ ಅಜೆಂಡಾದಲ್ಲಿ ಭರವಸೆ ಕೊಟ್ಟಿವೆ (ಅಥವಾ ಕೊಟ್ಟಿದ್ದವು). ಯುಪಿಎ ಈ ಅಶ್ವಾಸನೆಯ ಎರಡನೆಯ ಭಾಗವಾಗಿ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ಕೊಡುವ ಪ್ರಸ್ತಾಪ ಮಾಡಿತ್ತು. ಅಂತಹ ಪರಿಶೀಲನಾ ಸಮತಿ ರಚಿಸಲು ಎನ್ ಡಿ ಎ ಸರಕಾರಕ್ಕೆ ಸಾಧ್ಯವಾಗಲಿಲ್ಲ, ಇಂದಿನ ಯುಪಿಎ ಸರಕಾರ ಈ ಬಗೆಗೆ ಮಾತನಾಡಲೂ ತಯಾರಿಲ್ಲ. ಕನ್ನಡಕ್ಕೂ ಶಾಸ್ತ್ರೀಯ ಸ್ಥಾನಮಾನ ಕೊಡುವಂತೆ ಕೇಳುತ್ತಿರುವ ಬುದ್ಧಿಜೀವಿ ವರ್ಗ ಈ ಅಶ್ವಾಸನೆಯ ಬಗೆಗೆ ಬೇಡಿಕೆ ಮಂಡಿಸುವುದಿರಲಿ (ಸಾಧ್ಯತೆಯ ಬಗೆಗೆ ಅಧ್ಯಯನ ಸಮಿತಿಯ ಸ್ವರೂಪ ಸಹ ಬೇಡಿಕೆ ಈಡೇರುತ್ತದೆಯೇ ಇಲ್ಲವೆ ಎಂಬುದನ್ನು ನಿರ್ಧರಿಸುತ್ತದೆ) ಈ ಬಗೆಗೆ ಚರ್ಚೆಗೂ ತಯಾರಿಲ್ಲವೆಂದು ಕಾಣುತ್ತದೆ.

 ನಾವು ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತೇವೆ, ಯಾವುದರ ಬಗೆಗೆ ದಿವ್ಯ ಮೌನ ವಹಿಸುತ್ತೇವೆ ಎನ್ನುವುದು ಹೇಗೆ ನಿರ್ಧರಿಸಲ್ಪಡುತ್ತದೆ? (ಈ ಸಾಧ್ಯಸಾಧ್ಯತೆಯ ಗೃಹೀತದ ಆಧಾರದ ಮೇಲೆ ಅಲ್ಲವೆ?) ಇದು ಕನ್ನಡದ ಸಮಸ್ಯೆಯೊಂದೇ ಆಗಿ ನನಗೆ ಕಾಣುತ್ತಿಲ್ಲ, ಎಲ್ಲ ಭಾರತೀಯ ಭಾಷೆಗಳ ಸಮಸ್ಯೆಯೂ ಹೌದು. ಬೇರೆ ಭಾಷೆಯವರು ಬೇಡಿಕೆ ಮುಂದಿಟ್ಟ ನಂತರವಾದರೂ ನಮ್ಮವರೂ ಈ ಬಗೆಗೆ ಮಾತನಾಡಲು ಪ್ರಾರಂಭಿಸುತ್ತಾರೆ ಎಂದು ಭಾವಿಸೋಣವೆ?  

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಭಾಷೆ ಮತ್ತು ಸಾಮಾಜಿಕ ವಾಸ್ತವ By: ismail (14 replies) August 14, 2006 - 5:45pm
  • ಮುತ್ತಾತ! By: ಸಂಗನಗೌಡ (Aug 23 2006 - 10:55am)
  • ಶುಭೋದಯ By: ಸಂಗನಗೌಡ (Aug 22 2006 - 1:33pm)
    • ಹೋಲಿಸಿ ನೋಡಿ By: ಸಂಗನಗೌಡ (Aug 22 2006 - 5:17pm)
  • ಸರಿ By: ಸಂಗನಗೌಡ (Aug 21 2006 - 7:49pm)
  • ಸ್ವಲ್ಪ ತಿಳಿಸಿ By: ಸಂಗನಗೌಡ (Aug 21 2006 - 1:11pm)
    • ಅತಿರೇಕದ ಮಾತು ಇಲ್ಲಿ ಬೇಡ By: hpn (Aug 21 2006 - 7:33pm)
      • ಸಲಿಗೆಯಿಂದಿರಬೇಕು. By: ರಘುನಂದನ (Aug 21 2006 - 11:16pm)
    • ನಗು ತಡೆಯಲಾಗುತ್ತಿಲ್ಲ By: Sunil Jayaprakash (Aug 21 2006 - 3:32pm)
  • ಕನ್ನಡದ ಬಳಕೆಯ ಬಗೆಗೆ By: ಪ್ರದೀಪ್ ಬೆಳಗಲ್ (Aug 18 2006 - 11:31pm)
    • ದಿಟ By: ಸಂಗನಗೌಡ (Aug 23 2006 - 1:25pm)
  • ತಂತ್ರಾಂಶ ಮತ್ತು ಲಘುವರ By: pavanaja (Aug 16 2006 - 4:01pm)
    • ಸರಕಾರಿ ಕಛೇರಿ, ಕನ್ನಡ ಹಾಗು ಕಂಪ್ಯೂಟರ್ By: adarsh (Aug 21 2006 - 11:48pm)
  • ವಿಪರ್ಯಾಸ By: hpn (Aug 16 2006 - 11:58am)
    • ಕನ್ನಡ ಭಾಷೆಯ ವಿಕಾಸ.... By: venkatesh (Aug 19 2006 - 3:20pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
  • ಸಂಗನಗೌಡ
    ಉ: ನೀರವತೆ!
    September 5, 2008 - 6:13pm
  • Narayana
    ಉ: IT - ಸಿಂಪ್ಟಮ್ಸ
    September 5, 2008 - 5:43pm
  • savithasr
    ಉ: IT - ಸಿಂಪ್ಟಮ್ಸ
    September 5, 2008 - 5:17pm
ಇನ್ನಷ್ಟು


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator