ಮೌಲ್ಯಗಳು ಎಂದರೆ......
- ಉ: ಬಂತು, ಬಂತು, "ಸ್ವಾತಂತ್ರ್ಯದಿನ ದ ಹಬ್ಬ " ಮತ್ತೆ ಬಂತು ! By: thewiseant (Jul 23 2007 - 7:02pm)
- ಉ: ಬಂತು, ಬಂತು, "ಸ್ವಾತಂತ್ರ್ಯದಿನ ದ ಹಬ್ಬ " ಮತ್ತೆ ಬಂತು ! By: venkatesh (Jul 25 2007 - 5:30am)
- ಜನರೇಶನ್ By: Gopinath Rao (Aug 17 2006 - 10:05am)
- ಮೌಲ್ಯಗಳು ಎಂದರೆ...... By: venkatesh (Aug 22 2006 - 10:35am)
- ನಮ್ಮ ಯುವಕರ ಸ್ವಾತಂತ್ರ್ಯ ದಿನ ಆಚರಣೆ ಹೀಗೆ... By: Gopinath Rao (Aug 16 2006 - 9:48am)
- ಸ್ವಲ್ಪ ಹಳೆಯ ಜೆನರೇಶನ್ ಆಯ್ತು ;-) By: hpn (Aug 16 2006 - 12:09pm)
- ಹೊಸ ಚಿಗುರು, ಹಳೆಯ ಬೇರು ! By: venkatesh (Aug 16 2006 - 2:01pm)
- ಕಗ್ಗದಲ್ಲಿ By: hpn (Aug 16 2006 - 4:10pm)
- ಕಗ್ಗದಲ್ಲಿ.... By: venkatesh (Aug 16 2006 - 11:13pm)
- ಆಗಬಹುದು By: hpn (Aug 16 2006 - 2:59pm)
- ಕಗ್ಗದಲ್ಲಿ By: hpn (Aug 16 2006 - 4:10pm)
- ಹೊಸ ಚಿಗುರು, ಹಳೆಯ ಬೇರು ! By: venkatesh (Aug 16 2006 - 2:01pm)
- ಸ್ವಲ್ಪ ಹಳೆಯ ಜೆನರೇಶನ್ ಆಯ್ತು ;-) By: hpn (Aug 16 2006 - 12:09pm)
- ಹಬ್ಬ (!?) By: hpn (Aug 15 2006 - 10:51pm)
- 'ಸ್ವಾತಂತ್ರ್ಯ ದಿನೊತ್ಸವ' ಅದರ ಮೌಲ್ಯಗಳನ್ನು ಕಳೆದು ಕೊಳ್ಳುತ್ತಿದೆಯೆ ? By: venkatesh (Aug 16 2006 - 8:50am)

RSS:
ಮೌಲ್ಯಗಳು ಎಂದರೆ......
ಮೌಲ್ಯಗಳು ಸಾರ್ವಕಾಲಿಕವಾದವುಗಳು.ಕಾಲ ಕಾಲಕ್ಕೆ ಅದರ 'ಅಕ್ಕ-ಪಕ್ಕಗಳು' ಸ್ವಲ್ಪ ಬದಲಾಗಿರುವಂತೆ ಕಾಣಿಸುತ್ತವೆ. ಅವು ಒಂದು ತೊರೆಯ ತರಹ.ಅದು ಹರಿಯುವಾಗ ತನ್ನ ಪಾತ್ರವನ್ನು ಬದಲಾಯಿಸಿಕೊಳ್ಳುತ್ತಾ ಸಾಗುತ್ತದೆ. ಆದರೆ ಆ ಹಳ್ಳ ಅದರದೇ ಆದ ತನ್ನ ಪ್ರವೃತ್ತಿಯನ್ನು ಕಾಯ್ದಿಟ್ಟುಕೊಳ್ಳುತ್ತದೆ. ಈ ಗುಣವನ್ನು ನಾವು ಅದರ ಮೌಲ್ಯ ಎನ್ನಬಹುದು. ನಮ್ಮ ಹಿರಿಯರು ಪದೇ ಪದೇ ಹೇಳಿ, ಹೀಗೆ ಮಾಡಿದರೆ ಒಳ್ಳೆಯದು ಎಂದು ತಿಳಿಹೇಳಿದ್ದರು. ಏಕೆಂದರೆ ನಾವೇನೂ ಅದೇ ತಪ್ಪುಗಳನ್ನು ಮಾಡಿಯೇ ಕಲಿಯಬೇಕಾಗಿಲ್ಲ. ಈಗ, ವಿದ್ಯುತ್ ತಂತಿಯನ್ನು ಮುಟ್ಟಬೇಡ. ಅದು 'ಪ್ರಾಣಾಪಾಯಕಾರಿ' ಎಂದು ಅನುಭವಿಯೊಬ್ಬರು ಹೇಳಿದ ಮಾತು ನಮಗೆ ಸಾಕು. ಮುಟ್ಟಿ, ಆಸ್ಪತ್ರೆ ಸೇರಿ ಅದರ ಅನುಭವ ಪಡೆಯಬೇಕಿಲ್ಲ. ಅದರಂತೆಯ ಮಿಲಿಯಗಟ್ಟಲೆ ವರ್ಷಗಳ ಈ 'ಜೀವನವಾಹಿನಿ' ನಮಗೆ ಬೇಕಾದಷ್ಟು ವಿಚಾರಗಳನ್ನು ತಿಳಿಹೇಳಿದೆ. ಅವು ಮೌಲ್ಯಗಳಾಗಿರ ಬಹುದು. ಅದನ್ನು ಮೊದಲು ನಾವು ಪಾಲಿಸುವುದನ್ನು ಕಲಿಯಬೇಕು. ನಮಗೆ ಬುದ್ಧಿ ಬಂದ ಮೇಲೆ ಪರಿಶೀಲಿಸಿ ಅದರಬಗ್ಗೆ ನಿರ್ಣಯ ತೆಗೆದು ಕೊಳ್ಳುವುದು- ನಂತರ, ಸಾಕಷ್ಟು ಜ್ಞಾನಾರ್ಜನೆಯ ಬಳಿಕ !
ಕೆಲವು ನಾನು ಉದಾಹರಿಸಿದಂತೆ, "ಸ್ವಾತಂತ್ರ್ಯದಿನದ ಹಬ್ಬದ ದಿನ" -ನಮ್ಮ ಭಾರತಕ್ಕೆ ಪ್ರಾಣತ್ಯಾಗ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನುಭಾವರುಗಳನ್ನು ನೆನೆಸಿಕೊಳ್ಳುವ ದಿನ- ಅದನ್ನೆ ಮರೆತಿದ್ದೇವೆ. ಅದನ್ನು ಮತ್ತೆ ಸ್ಥಾಪಿಸುವ ಕೆಲಸ ಹಿರಿಯರದು. ಹಿರಿಯರು ಸರಿ. ಕಿರಿಯರು ತಪ್ಪು ಎನ್ನುವ ಮಾತು ಬೇರೆ. ಕೆಲವು ಹಿರಿಯರು ಇನ್ನೂ ತಾವು, ಯುವಕರೆಂದು ನಕಲಿ ವೇಷ ಭೂಷಣ ಧರಿಸಿ 'ಕ್ಲಬ್' ಗಳಿಗೆ ಹೋಗುತ್ತಾರೆ. ಹದಿ ಹರೆಯ ಯುವತಿಯರ ಜೊತೆಗೆ 'ಮೊಜು ಮಸ್ತಿ' ಮಾಡುವುದನ್ನು ನಾನು ನೋಡಿದ್ದೇನೆ. ಇದು ತಪ್ಪು. "ಯಾರು ನೊಡ್ಲಿ ಎಂಜಾಯ್ ಮಾಡಿ ಸಾರ್ . ಹಳೆದೆಲ್ಲ ಮರಿರಿ", ಎಂದು ಹೇಳುವವರೆ. ಇವರ ಸಂಖ್ಯೆ ಜಾಸ್ತಿಯಾಗಿದೆ. ಅದು, ಈ ತರಹೆಯ 'ಮಾನಸಿಕ ವಿಕಾರ'ಗಳಿಗೆ ಕಾರಣ.
ಅಮೆರಿಕ, ಒಂದು ಜಾತ್ಯಾತೀತ, ವಲಸೆಗಾರರ ದೇಶ. ಬ್ರಿಟಿಷರ ಆಡಳಿತವನ್ನು ವಿರೊಧಿಸಿ ನಿರ್ಮಾಣಗೊಂಡ ಇನ್ನೊಂದು ಬಿಳಿಯರ ದೇಶ ವಾಗಿತ್ತು. ನಂತರ ಬಣ್ಣದ ಹುಚ್ಚು ಬಿಟ್ಟು ಈಗ ಹೊಸ ದಿಕ್ಕಿನಲ್ಲಿ ನಡೆಯುತ್ತಿದೆ. ಅಮೆರಿಕೆಯ ವಿಜ್ಞಾನದಲ್ಲಿನ ಅನುಸಂಧಾನ ಪರಂಪರೆ, ವಿಶ್ವಕ್ಕೆ ಮಾದರಿ. . ಅವರ ಕರ್ತವ್ಯ ಪರಾಯಣತೆ, ಸಮಯ ಪ್ರಜ್ಞೆ, ಕಷ್ಟಪಟ್ಟು ದುಡಿಯುವ ಮನೊಭಾವ, ವೈಚಾರಿಕತೆ,ಗಳನ್ನು ಕಲಿಯೊಣ.
ಅವರ ಸ್ವಚ್ಛಂದ ಪ್ರವೃತ್ತಿ, ಲೈಂಗಿಕತೆ, ಅತಿಯಾದ ಸ್ವಾತಂತ್ರ್ಯ ಚಿಕ್ಕಮಕ್ಕಳ ಸ್ತರದಲ್ಲೆ. ಇದು ಒಳ್ಳೆಯದಲ್ಲ. ಮಕ್ಕಳನ್ನು ಲಾಲನೆ ಪಾಲನೆಮಾಡಿ ಬೆಳೆಸಬೇಕು, ಹಿರಿಯರನ್ನು, ಬಲಹೀನರನ್ನು, ಸ್ತ್ರೀಯರನ್ನು, ಪ್ರೀತಿ, ಕರುಣೆಯಿಂದ ನೊಡಬೇಕು. ಮದುವೆ ಒಂದು ದೊಡ್ದ 'ಜೀವನ ಸ್ಥರದ ಸಂಸ್ಥೆ'. ಇದನ್ನು 'ನಿಭಾಯಿಸ' ಬೇಕು. ಈ ಪದ ಅತಿ ಮುಖ್ಯ ! ಇವೆಲ್ಲಾ 'ಮೌಲ್ಯದ ಚೌಕಟ್ಟಿ'ನಲ್ಲಿಯೆ ಬರುವಂತಹವು !
ಇದನ್ನು ನಾವು ತಿಳಿದು, ನಮ್ಮ ಜೀವನಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕು. ವಿದೇಶಕ್ಕೆ ಹೋಗಬೇಡಿ ಎಂದು ಯಾರು ಹೇಳುತ್ತಾರೆ ? ಕಲಿತುಬನ್ನಿ. ಹಾಳಾಗಿ ಬರಬೇಡಿ. ನಮ್ಮ ದೇಶ, "ಭಾರತೀಯ ಸಂಸ್ಕೃತಿ"ಗೆ ಹೆಸರುವಾಸಿಯಾಗಿದೆ. ಅದನ್ನು ಅವರಿಗು ಕಲಿಸಿ ಬನ್ನಿ. ಅವರುಗಳು ಇಲ್ಲೆಗೆ ಏಕೆ ಬರುತ್ತಾರೆ ? ಸ್ವಲ್ಪ ಯೋಚಿಸಿ !!
ನನ್ನ ಮಗ 'ಇನ್ಫೊಸಿಸ್' ಕಂಪನಿಯ ವತಿಯಿಂದ ಅಮೆರಿಕಕ್ಕೆ, ಹೋದ ತಿಂಗಳು ಹೊಗಿದ್ದಾನೆ. ಇದೇ ಪಾಠವನ್ನು ನಾನು ಮತ್ತು ಅವನ 'ತಾಯಿ' ಹೇಳಿ ಕಳಿಸಿದ್ದೇವೆ. "ಅವನು ನಮ್ಮನ್ನು ನಿರಾಶೆ ಮಾಡಲ್ಲ " ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಏಕೆ ಹೇಳಿ- ಆ 'ಮೌಲ್ಯ'ಗಳು ಅವನನ್ನು ಸುಮ್ಮನೆ ಬಿಟ್ಟಾವೆ ?
ಅದೂ ಅವನು ಕೆಲಸ ಮಾಡ್ತಾ ಇರೊದು ಯಾರ ಕೈಕೆಳಗೆ ? ಭಾರತದ ಮಹಾನ್ 'ಸಾಫ್ಟ್ವೇರ್ ಇಂಜಿನಿಯರ್ ' ಡಾ.ನಾರಾಯಣ ಮುರ್ತಿಯವರ ಹತ್ತಿರ ! ಅದೊಂದು ಸುಯೊಗ ಹಾಗೂ ಸನ್ಮಾನ ಅಲ್ಲವೇ ?