ನಿದ್ದೆ ಹತ್ತಿತ್ತು
- ನಿದ್ದೆ ಹತ್ತಿತ್ತು By: ಸಂಗನಗೌಡ (Aug 20 2006 - 8:11pm)
- ನಮ್ಮ ಕೈಲಾದ್ದನ್ನು ಮಾಡೋಣ By: benaka (Aug 14 2006 - 3:03pm)
- ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
- ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
- ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
- "ಉಳಿಸುವ, ಬೆಳೆಸುವ ಗೋಳು" ಒಂದು non-existent entity By: hpn (Aug 16 2006 - 11:28am)
- ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
- ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
- ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
- ಮಾಡಿನೋಡೋಣ! By: benaka (Aug 14 2006 - 9:54am)
- ಉ: ಮಾಡಿನೋಡೋಣ! By: kannadakanda (Jul 22 2008 - 1:16pm)
- ಉ: ಮಾಡಿನೋಡೋಣ! By: mahesha (Jul 22 2008 - 1:37pm)
- ಉ: ಮಾಡಿನೋಡೋಣ! By: savithru (Jul 22 2008 - 2:18pm)
- ಉ: ಮಾಡಿನೋಡೋಣ! By: mahesha (Jul 22 2008 - 2:53pm)
- ಉ: ಮಾಡಿನೋಡೋಣ! By: savithru (Jul 23 2008 - 2:15pm)
- ಉ: ಮಾಡಿನೋಡೋಣ! By: mahesha (Jul 23 2008 - 3:13pm)
- ಉ: ಮಾಡಿನೋಡೋಣ! By: savithru (Jul 24 2008 - 12:23pm)
- ಉ: ಮಾಡಿನೋಡೋಣ! By: mahesha (Jul 23 2008 - 3:13pm)
- ಉ: ಮಾಡಿನೋಡೋಣ! By: savithru (Jul 23 2008 - 2:15pm)
- ಉ: ಮಾಡಿನೋಡೋಣ! By: mahesha (Jul 22 2008 - 2:53pm)
- ಉ: ಮಾಡಿನೋಡೋಣ! By: savithru (Jul 22 2008 - 2:18pm)
- ಉ: ಮಾಡಿನೋಡೋಣ! By: mahesha (Jul 22 2008 - 1:37pm)
- ಹೇಗೆ ಬೇರೆ ಮತ್ತು ಯಾವುದು ತುರುಕಾಟ By: ಮಹೇಶ ಭೋಗಾದಿ (Aug 14 2006 - 11:19am)
- ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
- ಇದಕ್ಕೆ ಉತ್ತರವೆಲ್ಲಿ? By: ಮಹೇಶ ಭೋಗಾದಿ (Aug 14 2006 - 2:59pm)
- ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
- ಉ: ಮಾಡಿನೋಡೋಣ! By: kannadakanda (Jul 22 2008 - 1:16pm)
- ದೆವ್ವ ದೊಡ್ಡದೈತೆ ಕಣಪ್ಪೊ! By: ಸಂಗನಗೌಡ (Aug 13 2006 - 6:20pm)
- ಸಮ್ಮೇಳನ By: ಮಹೇಶ ಭೋಗಾದಿ (Aug 14 2006 - 11:22am)
- ಸಕ್ಕದವದು ಕಲ್ಲು By: ಸಂಗನಗೌಡ (Aug 12 2006 - 11:52am)
- ಕಲ್ಲು-ಸಕ್ಕರೆ-ಹಾಲು By: ಮಹೇಶ ಭೋಗಾದಿ (Aug 12 2006 - 2:53pm)
- ಭೂತ ಚೇಷ್ಟೆ By: benaka (Aug 12 2006 - 7:35am)
- ಕನ್ನಡಂಗಳ್ By: ಸಂಗನಗೌಡ (Aug 11 2006 - 4:43pm)
- ರಸಂನೇ ರಸ ಮಾಡಿ By: ಸಂಗನಗೌಡ (Aug 11 2006 - 3:58pm)
- ರಸಂನೂ ಬೇಡ,ಸಾರೂ ಬೇಡ By: ಸಂಗನಗೌಡ (Aug 11 2006 - 3:36pm)
- ಏನ್ ಮಾಡೋದು By: nareshov (Aug 11 2006 - 7:56pm)
- ಭೂತ ಅಂದುಕೊಳ್ಳಿ By: ಸಂಗನಗೌಡ (Aug 11 2006 - 3:02pm)
- ಒರಟು By: ಮಹೇಶ ಭೋಗಾದಿ (Aug 12 2006 - 9:33am)
- ಸಂಸ್ಕೃತದ ತದ್ಭವ ಸಕ್ಕದ By: ಮಹೇಶ ಭೋಗಾದಿ (Aug 11 2006 - 3:27pm)
- ದೆವ್ವವನ್ನು ಬೇಗ ಬಿಡಿಸಿಕೊಳ್ಳಿ By: benaka (Aug 11 2006 - 1:56pm)
- ತಪ್ಪು ಮಾಹಿತಿ By: ಮಹೇಶ ಭೋಗಾದಿ (Aug 11 2006 - 2:34pm)
- - By: ಮಹೇಶ ಭೋಗಾದಿ (Aug 11 2006 - 2:30pm)
- ನನ್ನ ತಾಯ್ನುಡಿ ಕನ್ನಡ By: ಸಂಗನಗೌಡ (Aug 11 2006 - 12:52pm)
- ಸಾರು, By: nareshov (Aug 11 2006 - 7:36pm)
- ದೆವ್ವ ತೊಲಗಲಿ By: ಮಹೇಶ ಭೋಗಾದಿ (Aug 11 2006 - 1:29pm)
- ರಸಂ:ಸರಸಂ-ವಿರಸಂ! By: benaka (Aug 11 2006 - 11:35am)
- ರಸಾಭಾಸ By: ismail (Aug 11 2006 - 3:37pm)
- ಅಯ್ಯೊ ಒಂದು ಕನ್ನಡದಲ್ಲಿ ಸಾರಿಗೆ ರಸಂ ಎನ್ನುವರೇನೋ! By: ಮಹೇಶ ಭೋಗಾದಿ (Aug 11 2006 - 11:53am)
- ತಿಳಿಸಿ By: ಸಂಗನಗೌಡ (Aug 11 2006 - 8:54am)
- ಪ್ರಯತ್ನ By: ಮಹೇಶ ಭೋಗಾದಿ (Aug 11 2006 - 9:46am)
- ಟ್ರಾಯ್ ಮಾಡೋಣ By: ಸಂಗನಗೌಡ (Aug 10 2006 - 3:15pm)
- ತಿಳಿ/ಅರಿ By: ಮಹೇಶ ಭೋಗಾದಿ (Aug 10 2006 - 3:48pm)
- ಕನ್ನಡ ಬಳಸಲು ಹೆದರಿಕೆಯೇಕೆ? By: benaka (Aug 10 2006 - 8:04am)
- ಮೞೆ ಬೇಳುತ್ತಿದೆ... :P By: nareshov (Aug 11 2006 - 7:30pm)
- ಒಂದು ರಸಂ ಮೀಮಾಂಸೆ By: ismail (Aug 10 2006 - 1:30pm)
- ಧನ್ಯವಾದಗಳು ಮತ್ತು 'ಮೈ ಫೇರ್ ಲೇಡಿ' By: Rohit (Aug 9 2006 - 4:57pm)
- ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
- ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
- facts: By: nareshov (Aug 11 2006 - 2:46pm)
- ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
- ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
- ಯಾರ ಕನ್ನಡ, ಕನ್ನಡ? By: Kamalakar (Aug 9 2006 - 3:12pm)
- ಭಾಷಾಭಿಮಾನ By: ismail (Aug 9 2006 - 3:56pm)
- ಕನ್ನಡಂಗಳ್ By: ಮಹೇಶ ಭೋಗಾದಿ (Aug 9 2006 - 1:45pm)
- ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
- ಕನ್ನಂಡಂಗಳೊ ಅಂದರೆ? By: ಮಹೇಶ ಭೋಗಾದಿ (Aug 10 2006 - 11:33am)
- ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
- ಕಳಿಸು By: gvmt (Aug 8 2006 - 10:18pm)
- ಉ: ಕಳಿಸು By: kannadakanda (Jul 21 2008 - 3:51pm)
- ಕಳುಹು. By: ಮಹೇಶ ಭೋಗಾದಿ (Aug 9 2006 - 12:34pm)


RSS:
ನಿದ್ದೆ ಹತ್ತಿತ್ತು
ಕೊಂಚ ಸಮಯ ಈ ಕಡೆ ತಲೆ ಹಾಕಿರಲಿಲ್ಲ, ಮನ್ನಿಸಿ, ಆದರೆ ತಲೆಯ ಒಂದು ಮೂಲೆಯಲ್ಲಿ 'ಚರ್ಚೆ'ಯ ಈ ಹುಳು ಸುಳಿದಾಡಿಕೊಂಡೇ ಇತ್ತು. 'ಭಾವನೆ'(ಅನಿಸಿಕೆ) ಮತ್ತು 'ವಿಷಯ'ಗಳನ್ನು ಒಂದು ನುಡಿಯ ಮೂಲಕ ಹೇಳಲು ಕಲಿತದ್ದು, 'ಮಾನವ ನಾಗರಿಕತೆ' ಯ ಬೆಳವಣಿಗೆಯ ಒಂದು ದೊಡ್ಡ ಮೈಲುಗಲ್ಲು.
hpn wrote:
ಕೊನೆಗೆ ಸಂವಹನವೊಂದೇ ಮುಖ್ಯ ಅಲ್ವೆ? ಇಂಗ್ಲಿಷಿನವರು ಪದವೊಂದನ್ನು ಬಳಸುವಾಗ "ಇದು ಫ್ರೆಂಚ್ ಮೂಲದ ಶಬ್ಧ, ಬಳ್ಸೋದು ಬೇಡ", "ಇದು ಇಟಾಲಿಯನ್ ಮೂಲದ ಪದ, ಬಳಸೋದು ಬೇಡ" ಎನ್ನುತ್ತಿದ್ದರೆ ಎಷ್ಟು ತಮಾಷೆಯಾಗಿರುತ್ತಿತ್ತು?
ಬರಿ ತಿಳಿದಿದ್ದನ್ನು ತಿಳಿಸುವದಸ್ಟೇ 'ಮುಖ್ಯ'ವಾದರೆ, ಅದು ಎಲ್ಲರ ಮತವಾಗಿದ್ದರೆ, ಕನ್ನಡದಿಂದ ಹಿಡಿದು ಬೇರಾವ 'ಭಾಷೆ'ಯೂ ಬೆಳೆಯುತ್ತಿರಲಿಲ್ಲ. ಇಲ್ಲಿ ನಾನು ಮತ್ತು ಮಹೇಶರು ಬಲು ಎಚ್ಚರದಿಂದ ಕನ್ನಡದ ಪದಗಳನ್ಣೇ ಬಳಸಿ ಬರೆಯಲು ತಿನುಕಾಡುತ್ತಿರುವುದು ನಿಮಗೆಲ್ಲ ನಗೆಪಾಟಲಾಗಿ ಕಂಡಿರಬಹುದು. ಒಮ್ಮೆ ನಕ್ಕು ಬಿಡಿ, ಆದರೆ ಅದರ ಹಿಂದಿನ ಕಾಳಜಿ ತಿಳಿದು ನೋಡಿ.
ಬೇರೇ ನುಡಿಯ ಪದಗಳು ಬೇಡವೇ ಬೇಡ ಅನ್ನುವದು ನನ್ನ ವಾದವಲ್ಲ. ಅವುಗಳನ್ನು ಕನ್ನಡದ ಹದಕ್ಕೆ ಹೊಂದಿಸುವದು ಬೇಕು(ಕನ್ನಡ ಪದ ಸಿಗದಿರುವಾಗ ಅಸ್ಟೇ(ಮಾತ್ರ)). ಕನ್ನಡದ ಬೆಂಗಳೂರು ಪರಂಗಿಗಳ ಬಾಯಲ್ಲಿ 'ಬ್ಯಾಂಗಲೋರ್' ಆಯಿತು, ಆಗ ಬೆಂಗಳೂರಿಗರು ಅದಕ್ಕೆ ನಕ್ಕಿದ್ದಿರಬೇಕು, 'ಶಿಷ್ಟ'ರು ಈಗ ಹಳ್ಳಿಗರ ತಪ್ಪು ಉಚ್ಚಾರಕ್ಕೆ (ರಾಜೋಸವ) ನಗುವಂತೆ. ಕನ್ನಡದಲ್ಲಿ ಅವಸರವಾಗಿ ಮಾತಾಡುವಾಗ 'ಹೃದಯ', 'ರುದಯ'ವೇ ಆಗುತ್ತದೆ.
hpn wrote:
ಸಂಗನಗೌಡರಂತೂ "ಹೀಗೆ ಬರೆಯುವುದಾದರೆ ಬರೆಯಲೇಬೇಡಿ" ಎಂದು ಬರೆದದ್ದು ಸ್ವಲ್ಪವೂ ಸರಿ ಬೀಳುವಂತಿಲ್ಲ.
ಬರೆಯೋರು ಬರಿತಾರೆ, ತಗೋಳೋದು ಬಿಡೋದು ನಾವು ಓದುಗರಿಗೆ ಬಿಟ್ಟಿದ್ದು. ಓದುಗನಾಗಿ ನಾನು ಮರುನುಡಿಯುವ ಹಕ್ಕು ಇಲ್ಲವೇ? ಬರೆದದ್ದಕ್ಕೆಲ್ಲಾ 'ಮೂಗ ಬಸವ'ನ ಹಾಗೆ ಗೋಣು ಹಾಕಿಕೊಂಡಿರಬೇಕೇ?
hpn wrote:
ಮಾರಾಯ, ಭಾಷೆ ಹೇಗೆ ಬೆಳೆಯುತ್ತದೋ ಹಾಗೆ ಬೆಳೆಯೋದಕ್ಕೆ ಯಾಕೆ ಬಿಡಬಾರದು? ಅದು "ಹೀಗೇ ಇರಬೇಕು" ಅನ್ನೋ ಹಠ ಯಾಕೆ? ಸಂಸ್ಕೃತ ಇಷ್ಟವಿದ್ದವರು ಅದರ ಪದಗಳನ್ನು ಬಳಸುತ್ತಾರೆ, "ಆ ಪದ ಬಳಸಬೇಡಿ" ಎಂದು ಹೇಳೋಕೆ ಹೊರಡೋದು ಯಾಕೆ?
ಮೊದಲು ಕರ್ನಾಟಕ ಹರಿದು ಹಂಚಿ ಹೋಗಿತ್ತು, ಅದನ್ನು ಹಾಗೇ ಬಿಡಬಾರದಿತ್ತೆ? ಬಿಟ್ಟಿದ್ದರೆ ನಮ್ಮದೊಂದು ನಾಡು ಇತ್ತು, ಅಂತ ನಾವು ಹೇಳಿಕೊಂಡಿರಬೇಕಿತ್ತು ಅಸ್ಟೆ.
ಸಕ್ಕದವನ್ನು ನುಸುಳಿಸುವುದಕ್ಕಾಗಿಯೇ ಕನ್ನಡದ ವ್ಯಾಕರಣವನ್ನು ತಿದ್ದಲಾಗಿದೆ ಎಂದು ನಾನು ನಂಬುತ್ತೇನೆ. ಇದು ಕೊಂಚ ಗಮನಿಸಿದರೆ ಸಾಕು, ತಿಳಿಯುತ್ತದೆ. 'ಸಮಸ್ಯೆ' ದೊಡ್ಡದಿದೆ ಎಂದು ಅದು ಸುಳ್ಳು ಅನ್ನಬಾರದು. ಅದು ದೊಡ್ಡ ತಪ್ಪಾಗುವದು, ಬೆನಕರಿಗೆ ಇದರ ಸುಳಿವು ತಲುಪಿದೆ, ಬಹಳ ಒಳ್ಳೆಯದು. 'ಶಿಷ್ಟ ಭಾಷೆ' ಯ ಹೆಸರಿನಲ್ಲಿ ಆಗಿನಿಂದ ಕನ್ನಡದ ಎಲುಬು ಗೂಡಿ(ಅಸ್ತಿ ಪಂಜರ)ನಲ್ಲಿ ಕನ್ನಡದ ನೆತ್ತರು ಮಾಸ ತೆಗೆದು, ಸಕ್ಕದದ 'ರಕ್ತ ಮಾಂಸ'ಗಳನ್ನು ತುಂಬುತ್ತ ಬರಲಾಗಿದೆ, ಇದನ್ನು ಒಪ್ಪಲು ಆಗದೆ 'ಅತಿ ಮಡಿವಂತರು' ಅನ್ನೋ ಹಣೆಪಟ್ಟಿ ನಮಗೆ ಕಟ್ಟಿ, ಕನ್ನಡವನ್ನು ಕಟ್ಟುವ ಹೆಸರಿನಲ್ಲಿ ಅದನ್ನು ಕೆಡುವುತ್ತ ಸಾಗುವವರಿಗೆ ಹಾರ ತುರಾಯಿಯ 'ಸನ್ಮಾನ' ಮಾಡಿಕೊಂಡೇ ಹೋಗಬೇಕೆಂಬುದು ತಮ್ಮ ಆಸೆ. ಇದು ಸರಿಯೇ?
ಒಂದು ಉದಾಹರಣೆ: ಹಿಂದಿಯ 'ನಲ್' ಕನ್ನಡದ 'ನಳ' ಆಗಿರಬಹುದು, ಅದು ಕನ್ನಡಕ್ಕೆ ಒಪ್ಪುವಂತಿದೆ, ಆದರೂ 'ನಲ್ಲಿ' ಪದದ ಬಳಕೆ ಏಕೆ? ಕನ್ನಡದಲ್ಲಿ ಇನ್ನೊಂದು ಪದ 'ಕೊಳಾಯಿ' ಇದೆ, ಅದನ್ನು ಬಳಸಬಹುದಲ್ಲ?
ಹೊಸ ನಾಡ ಕಟ್ಟೋಣ(ಅಂದರೆ ಒಂದಾಗೋಣ ಎಂದಟ್ಟೇ)