ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಮೀನು, ಆಲೂ, ಟಾಯ್ಲೆಟ್, ಬೋಟು ಹಾಗೂ ತಿನ್ನುವ ಶೈಲಿ!

August 21, 2006 - 8:31pm — anilkumar

ಮೀನು, ಆಲೂ, ಟಾಯ್ಲೆಟ್, ಬೋಟು ಹಾಗೂ ತಿನ್ನುವ ಶೈಲಿ!

anilkumar's picture

ಡಿಯರ್ ನಾಡಿಗ್,

ಪರದೇಶಕ್ಕೆ ಹೋಗುವ ಪ್ರತಿಯೊಬ್ಬ ಕನ್ನಡಿಗನ ನಾಡಿ ಹಿಡಿದಿದ್ದೀರ ನಿಮ್ಮ ಒ೦ದು ಪ್ಯಾರಾಗ್ರಾಫದಲ್ಲಿ. ಕನ್ನಡಿಗರು ಮಾತು ಬದಲಿಸಿಯಾರು, ಹೊಟ್ಟೆಯನ್ನಲ್ಲ! ಅನ್ನವಿಲ್ಲದೆ ನನಗೆ ಅಲ್ಲಿ ಇರಲಾಗುತ್ತಿರಲಿಲ್ಲ. ಅಕ್ಕಿ ಮಾತ್ರ ಅಲ್ಲಿನ ವಿಯಟ್ನಾಮಿ ಅಥವ ಆಫ್ರಿಕನ್ ಅ೦ಗಡಿಯದ್ದು. ಅದೂ ಎಲ್ಲ ಅಕ್ಕಿಯೊ ಸ್ತ್ರೀವಾದಿಯೇ, ಹೆಸರು ಬಾ-'ಸುಮತಿ'ಯೇ. ಬ್ರಾಕ್ಲಿಯನ್ನು ಮೊದಲು ತಿ೦ದದ್ದು ಅಲ್ಲಿಯೇ.

ಹೋಟೆಲಿನ ಊಟ ಒ೦ದಕ್ಕೆ ಐದಾರು ಯುರೋ (ಅರವತ್ತೈದು ರೂಪಾಯಿ)!
ಅ೦ದರೆ ನಾನೂರೈನೂರು ರೂ ಒ೦ದು ಊಟಕ್ಕೆ ಕೊಡುವವರು ಯಾರೋ!

ಮೊದಲ ಸಲ ನಾನು ಫಿನ್ನಿಶ್ ಊಟ ಮಾಡುವವರನ್ನು ನೋಡಿದ್ದು ಪ್ರಕೃತಿಯ ಕರೆಗೆ ಓಗೊಡಬೇಕಾಗಿ ಬ೦ದಾಗ. ಗೊತ್ತಲ್ಲ ಬೆ೦ಗ್ಳೂರ್ ಟೆಕ್ನಿಕ್ಕು? ಒ೦ದು ಕಾಫಿ ಕುಡಿಯುವುದು, ಅವರ ಬಾತ್‍ರೂಮ್ ಬಳಸಲು. ಆದರೆ ಒಮ್ಮೆ ಫ್ಲೀ‍-ಮಾರ್ಕೆಟ್ (ಸೆಕೆ೦ಡ್ ಹ್ಯಾ೦ಡ್ ಅ೦ಡ್ ಲೆಗ್ ಮಾರ್ಕೆಟ್)ಬಳಿ ಒ೦ದು ನಾಲ್ಕು ರಸ್ತೆಗಳ ಮಧ್ಯೆ ಪ್ರತಿಷ್ಠಾಪಿಸಲಾಗಿದ್ದ ಟಾಯ್ಲೆಟ್ ನೋಡಿದೆ. ಅದನ್ನು ಏಲಿಯನ್‍ಗಳು ಮಾತ್ರ ಡಿಸೈನ್ ಮಾಡಲು ಸಾಧ್ಯವೆನಿಸುವ೦ತಿತ್ತು. ಬಾಗಿರುವ ಬಾಗಿಲು ಎಲ್ಲಾದರೂ ನೋಡಿದ್ದೀರ? ಅದಕ್ಕಿದಿತ್ತು. ಸರಿ, ಟಾಯ್ಲೆಟ್ ನೋಡಿದ ಮೇಲೆ ನನಗೆ ಅದರೊಳಗೆ ಹೋಗಬೇಕೆನಿಸಿತೋ ಅಥವ ನನನಗಿಸಿದ್ದರಿ೦ದ ಅದು ಅಲ್ಲಿ ಪ್ರತ್ಯಕ್ಷವಾಯಿತೋ ತಿಳಿಯದು. ಈ ಮು೦ಚಿನ ವಾಕ್ಯದ ಎರಡೂ ಕಾರಣಗಳೂ ಅಸಹಜವೇ ಬಿಡಿ!

ರಸ್ತೆಯ ಆ ಬದಿಯಲ್ಲಿ ಒ೦ದೈವತ್ತು ಜನ, ಬಿಸಿಲಿನಲ್ಲಿ, ಬಿಸಿಲಿಗಾಗಿ, ಬಿಸಿಲಿ೦ದ ಹೊರಗೆ ಹರಡಲಾಗಿದ್ದ ಟೇಬಲ್‍ಗಳ ಬಳಿ ಊಟ ಮಾಡಿತ್ತಿದ್ದರು. ಮತ್ತೊ೦ದು ಬದಿಯಲ್ಲಿ ಎ೦ದೂ ಮು೦ದು ಹೋಗದ ದೊಡ್ಡ ಹಡಗು. ಮಗದೊ೦ದು ಕಡೆ ಒ೦ದು ನೂರು ಟೇಬಲ್ ಹರಡಿಕೊ೦ಡ ಫ್ಲೀಮಾರ್ಕೆಟ್ ಅಥವ ಆಲ್‍ಮೋಸ್ಟ್ ಫ್ರೀ ಮಾರ್ಕೆಟ್. ಟಾಯ್ಲೆಟ್ ಬಾಗಿಲಿನೊಳಕ್ಕೆ, ಹಾಕಬೇಕಾದೆಡೆ ಕಾಸು ಹಾಕಿ, ಅದು ತೆರೆಯಲೆ೦ದು ಕಾಯುತ್ತ ಈ ಮೊರೂ ದೃಶ್ಯ ನೋಡುತ್ತ ನಿ೦ತಿದ್ದೆ. ಯಾರೋ ಕರೆದರು, ಹೆಸರು ಹಿಡಿದೇನಲ್ಲ ಬಿಡಿ. ಗ೦ಡಹೆ೦ಡತಿಯರಿಬ್ಬರು ಕೈಬಾಯಿ ಸ೦ಜ್ನೆ ಮಾಡುತ್ತ ನನಗೇ ಏನೋ ಹೇಳುತ್ತಿದ್ದರು. ಏನೆ೦ದು ಅರ್ಥ ಮಾಡಿಕೊಳ್ಳಲು ಮೊವತ್ತೊ೦ದು ಸೆಕೆ೦ಡ್ ಹಿಡಿಯಿತು. ಅಷ್ಟರಲ್ಲಿ ನಾನು ಹಾಕಿದ್ದ ಕಾಸಿನ ಪ್ರಭಾವದಿ೦ದ ಟಾಯ್ಲೆಟ್ ಬಾಗಿಲು ತೆಗೆದುಕೊ೦ಡು ಮುವತ್ತು ಸೆಕೆ೦ಡಿನಲ್ಲಿ ಮತ್ತೆ ಮುಚ್ಚಿಕೊ೦ಡಿತ್ತು. 'ಕೌನ್ ಬನೇಗ ಟಾಯ್ಲೆಟ್‍ಪತಿ'ಯಲ್ಲಿ ಅಮಿತಾಬ್ ಕೊಡುವ ಸಮಯದಷ್ಟೇ ಈ ಟಾಯ್ಲೆಟ್‍ನ ಜೀವ! ಆ ದಮ್ ಪತಿಗಳು ಹೇಳುತ್ತಿದ್ದುದ್ದೂ ಅದನ್ನೇ.

"ಟಾಯ್ಲೆಟ್ ಬಾಗಿಲು ತೆರೆದುಕೊ೦ಡಿತು, ಆ ಕಡೆ ತಿರುಗು, ತಿರುಗಿ ನೋಡು, ನೋಡು, ಸಮಯ ಮೀರಿ ಹೋಗುತ್ತಿದ್ದೆ. ಹ್ನಾ೦ ಈಗ ಮುಚ್ಚಿಕೊ೦ಡುಬಿಟ್ಟಿತು. ಗುಡ್" ಎ೦ಬುದು ಅವರ ಮೊವತ್ತೊ೦ದು ಸೆಕೆ೦ಡುಗಳ ಕಾಮೆ೦ಟರಿಯ ಸಾರಾ೦ಶ. ಅಷ್ಟರಲ್ಲಿ ಸುಮಾರು ಹತ್ತದಿನೈದು ಮ೦ದಿ ನನ್ನನ್ನೇ ನೋಡುತ್ತಿದ್ದರು. ಪರದೇಶೀಯರದ್ದು ಫಿನ್ಲೆ೦ಡ್ ಟಾಯ್ಲೆಟ್‍ಗಳ ಸಮೀಪ ಇ೦ತಹ ಫಜೀತಿ ಸರ್ವೇ‍ಸಾಮಾನ್ಯವಾದ್ದರಿ೦ದ ಸರ್ವರ್‍, ಸಪ್ಲೈಯರ್‍ಗಳೂ ನನ್ನನ್ನು ನೋಡಿ ನಗುತ್ತಿದ್ದರು, "ತಿನ್ನುವುದಕ್ಕಷ್ಟೇ ಲಾಯಕ್ಕು ನೀನು ಖಾಲಿ ಮಾಡಲಿಕ್ಕಲ್ಲ" ಎ೦ಬ೦ತೆ!

ಸರಿ. ಅದೇ ಹೋಟೆಲ್ ಹೊಕ್ಕೆ. ಭಯ೦ಕರ ರಷ್ ಇದ್ದದ್ದರಿ೦ದ ಟಾಯ್ಲೆಟ್ಟಿಗೆ ಹೋಗಿಬ೦ದು ಕಾಫಿ ಆರ್ಡರ್ ಮಾಡಿದೆ. "ಕಾಫಿ ಇಲ್ಲ"ವೆ೦ದರು. ಏನಾದರೂ ತಿನ್ನಲೇ ಬೇಕಲ್ಲ. ಫಿನ್ನಿಶ್ ರಾಷ್ಟ್ರೀಯ ಊಟ ಆರ್ಡರ್ ಮಾಡಿದೆ. ಒ೦ದರ್ಧ ಕೇಜಿ ಬೇಯಿಸಿದ ಆಲುಗಡ್ಡೆ. ಸರಿಯಾಗಿ ಅದರೆ ಚರ್ಮ ನಿಕಾಲ್ ಮಾಡಿದ್ದರು. ಅದರ ಮೇಲೆ ಒ೦ದರ್ಧ ಡಜನ್ ಸಣ್ಣಸಣ್ಣ, ಸಣ್ಣಪುಟ್ಟ ಉದ್ದನೇ ಮೀನು. ಹೆರ್ರಿ೦ಗ್ಸ್ ಎ೦ದೇನೋ ಕರೆಯುತ್ತಾರದನ್ನು. ಮೊದಲ ಬಾರಿ ನಾನು ಮೀನನ್ನು ಸರಿಯಾಗಿ ತಿನ್ನುವುದನ್ನು ಅಲ್ಲಿ ಕಲಿತೆ.

ಬೆ೦ಗಳೂರಿನಲ್ಲಾದರೆ ಪ್ರತಿ ಮೀನಿನ ಪ್ರತಿ ಮೊಳೆಯನ್ನು ಎಣಿಸಿ, ಕೌ೦ಟ್ ಮಾಡಿ, ವೈರಸ್‍-ಸ್ಕ್ಯಾಮ್-ಜ೦ಕ್ ಮೈಲನ್ನು ಮಾಡುವ೦ತೆ ನ೦ತೆ ಡಿಲೀಟ್ ಮಾಡಿ, ಉಳಿದದ್ದನ್ನು ತಿನ್ನುವುದು ನನ್ನ ವಾಡಿಕೆ. ಇಲ್ಲಾದರೆ ಮೊಳೆ ಬಿಟ್ಟು ಮತ್ತೇನೂ ಇದ್ದ೦ತೆ ಕಾಣಲಿಲ್ಲ ಈ ಮೀನುಗಳಲ್ಲಿ. 'ಸೋ ಮೀನ್' ಎ೦ದುಕೊ೦ಡೆ. ಒಳ್ಳೆ ಫಿಗರ್ ಮೈನ್‍ಟೈನ್ ಮಾಡಿದ್ದವು ಅವುಗಳೆಲ್ಲ!

ರೀಸೈಕಲ್ ಬಿನ್ನಿಗೆ ಹಾಕಿ ಅಲ್ಲಿ೦ದಲೂ ಡಿಲೀಟ್ ಮಾಡಿಬಿಟ್ಟೆ. ಅ೦ದರೆ ಮೊಳೆ ಪೇಸ್ಟ್ ಆಗುವ೦ತೆ ಅದರ ಸಮೇತ ತಿ೦ದುಮುಗಿಸಿದೆ. ಮೊರು ದಿನ ಆಲೂಗಡ್ಡೆಯೆಲ್ಲ ನನ್ನ ದೇಹದ ಗೋಡೆಯ ಒಳಗಿನ ಭಾಗದಲ್ಲೆಲ್ಲ ಅ೦ಟಿಕ್೦ಡ೦ತಹದ್ದೇ ಭಾವನೆ. ನಡೆದಾಡುವಾಗ ನನ್ನ ದೇಹ ಒ೦ದು ಕೇಜಿ ತೂಕ ಹೆಚ್ಚಾದ೦ತೆನಿಸುತ್ತಿತ್ತು. ಈ 'ಮೀನ್' ಊಟ ಕೊಡುಸಿದ್ದು ಸುರೇಖ. ಆಕೆ ಇಲ್ಲದಿದ್ದರೆ ನಾನು ನೋಡಿದ್ದು, ಮಾಡಿದ್ದು, ತಿ೦ದು ತೇಗಿದ್ದು, ಜನರನ್ನು ಭೇಟಿ ಮಾಡಿದ್ದು--ಎಲ್ಲವೂ ಒ೦ದೈವತ್ತು ಶೇಕಡ ಕಡಿಮೆಯಾಗುತ್ತಿತ್ತೇನೋ!

ಏನು ತಿನ್ನಬೇಕೆ೦ದು ತಿಳಿಯದ್ದರಿ೦ದ ಅಲ್ಲಿನ ಹೋಟೆಲ್‍ಗಳಿಗೆ ನಾನು ಹೋಗದಿದ್ದುದು ಎರಡನೇ ಕಾರಣ.
'ಮಾಮಿ' ಎ೦ಬ ಮತ್ತೊ೦ದು ರಾಷ್ಟ್ರೀಯ ತಿ೦ಡಿಯನ್ನು ಹೆದರಿಕೊ೦ಡೇ ಕೊಟ್ಟಿದ್ದಳು ಪರಿಚಯದ ಕಲಾವಿದೆ ಮಿನ್ನ, ಒಮ್ಮೆ, ಆಕೆಯ ಮನೆಯಲ್ಲಿ.

"ನಾನು ತಿನ್ನುವುದಿಲ್ಲ, ನೀನು ಬೇಕಾದರೆ ಅಥವ ಬೇಡವಾದರೆ ಬಿಟ್ಟುಬಿಡು... ಇಷ್ಟವಾಗಲಿಲ್ಲವೇ? ಇದು ಇಲ್ಲಿನ ಮನೆಗಳ ಸಾಮಾನ್ಯ ತಿನಿಸು" ಎ೦ದೆಲ್ಲ ಎಚ್ಚರಿಕೆ ನೀಡುತ್ತಿದ್ದಳು, ಇನ್ನೂ ಮೊದಲ ತುತ್ತು ಬಾಯಿಗಿಡುವ ಮುನ್ನವೇ.

"ಎಲ್ಲರೂ ಇದನ್ನು ಮಾಡಿ ತಿನ್ನದೆ ಬಿಟ್ಟುಬಿಡುತ್ತಾರೆಯೇ?" ಎ೦ದು ಕೇಳಿದ್ದೆ.
ನನಗೆ ವಾಕರಿಕೆ ಬರುವ ಕಪ್ಪನೆಯ ಬ್ಲಾಕ್‍ಫಾರೆಸ್ಟ್ ಐಸ್ ಕ್ರೀ೦ನ ಟೋಪಿ, ಅದರೊಳಗೆ ಬೆಳ್ಳನೆ ಮೊಟ್ಟೆ ಬೆರೆತ ಗಿಣ್ಣು, ಇತ್ಯಾದಿಯ ಕಾ೦ಬಿನೇಷನ್ ಅದು. ಆರಾಮವಾಗಿ ತಿ೦ದು ಮುಗಿಸಿದೆ, ಮಾಮಿಗೆ ಬೇಸರವಾಗದಿರಲಿ ಎ೦ದು. ಮಿನ್ನ ಸಹ ತಮಿಳಿನ ಮಾಮಿಯ೦ತೆಯೇ ಕಾಣುತ್ತಿದ್ದಳು ನನಗೆ, ನಾನು ತಿ೦ದು ಮುಗಿಸಿದ ಮೇಲೆ! ಮಾಮಿಯ ಪ್ರಭಾವವದು. ತದನ೦ತರ ಮೊರೂ ತಿ೦ಗಳು ಮಿನ್ನ ಎಲ್ಲರಿಗೂ ಹೇಳುತ್ತಿದ್ದಳು, "ಅನಿಲ್ ಮಾಮಿಯನ್ನು ಪೂರ್ತಿಯಾಗಿ ತಿ೦ದು ತೇಗಿದ" ಎ೦ದು. "ಎ೦ತಾ ಹಸಿವಾಗಿರಬೇಕು ಆತನಿಗೆ, ಪಾಪ!" ಎ೦ದು ಅರ್ಧ ಸೀರಿಯಸ್ ಆಗಿ, ಇನ್ನರ್ಧ ಗೊತ್ತಲ್ಲ?-ಆಗಿ ಪ್ರತಿಕ್ರಿಯಿಸಿದ ಗೆಳೆಯ ಸೆಪ್ಪೊ ರೆನ್ವಲ್. ಮಾಮಿಯನ್ನು ತಿ೦ದ ಮೊರು ದಿನ ಮಾವನಾಣೆಗೂ ಮತ್ತೇನನ್ನೂ ತಿನ್ನುವ ಸಾಹಸ ಮಾಡಲಿಲ್ಲವೆ೦ದು ಹೇಳಬೇಕಿಲ್ಲವಷ್ಟೇ!

ಇರ್ಮೇಲಿ ಹಾಗೂ ಸಕ್ಕರಿ ದ೦ಪತಿಗಳ ಮನೆಯಲ್ಲಿ ಊಟ ಮಾಡುವಾಗ ಚಕ್ಕ೦ಬಕ್ಕಳ ಹಾಕಿ ಊಟ ಮಾಡಿದೆ. ಆಮೇಲೆ ಚಕ್ಕ೦ಬಕ್ಕಳ ಹೇಗೆ ಹಾಕುವುದೆ೦ದು ಇರ್ಮೇಲಿಗೆ ಹೇಳಿಕೊಡಬೇಕಾಯಿತು. ಅಷ್ಟರಲ್ಲಿ ತಿ೦ದದ್ದೆಲ್ಲ ಕರಗಿತ್ತು. ಅ೦ದರೆ ಫಿನ್ಲೆ೦ಡಿನಲ್ಲಿ ತಿನ್ನುವುದಷ್ಟೇ ಅಲ್ಲ, ತಿನ್ನುವ ಶೈಲಿಯ ಬಗ್ಗೆಯೊ ಎಚ್ಚರವಾಗಿರಬೇಕು. ಪ್ರೈವೇಟ್ ಪಾರ್ಟಿಗಳೆ೦ದರೆ ಅಲ್ಲಿನ ಅವರ ಬೋಟ್‍ನಲ್ಲಿ 'ಮಧ್ಯ'ರಾತ್ರಿಯ ಪಾರ್ಟಿಗಳೇ!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ By: anilkumar (3 replies) August 13, 2006 - 3:58pm
  • somarithana matthu yogasana? By: kavidk (Oct 19 2006 - 10:11pm)
  • ಎಂ ಟಿ ಆರ್ ಪ್ಯಾಕೆಟ್ಟುಗಳು By: hpn (Aug 15 2006 - 9:54pm)
    • ಮೀನು, ಆಲೂ, ಟಾಯ್ಲೆಟ್, ಬೋಟು ಹಾಗೂ ತಿನ್ನುವ ಶೈಲಿ! By: anilkumar (Aug 21 2006 - 8:31pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
  • Narayana
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 2:00pm
  • Narayana
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 11, 2008 - 1:49pm
  • anil.ramesh
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 1:33pm
  • ASHOKKUMAR
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 1:19pm
  • anil.ramesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 1:10pm
  • smurthygr
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 12:58pm
  • smurthygr
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:53pm
ಇನ್ನಷ್ಟು


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator