~
ನಾವೆಂದು ಕನ್ನಡ ಚಿತ್ರಗಳನ್ನು ನೋಡುವುದು
- ಉ: ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ By: tarlesubba (Oct 1 2007 - 8:08am)
- ನಮಗೆ ಡಬ್ಬಿಂಗ್ ಅಗತ್ಯವೆ? By: raghavendra.s (Jul 20 2006 - 1:25pm)
- ನಾವೆಂದು ಕನ್ನಡ ಚಿತ್ರಗಳನ್ನು ನೋಡುವುದು By: adarsh (Aug 21 2006 - 3:05pm)
- ಕನ್ನಡ ಸಿನಿಮಾ By: ಸಂಗನಗೌಡ (Aug 27 2006 - 7:58pm)
- ನಾವೆಂದು ಕನ್ನಡ ಚಿತ್ರಗಳನ್ನು ನೋಡುವುದು By: adarsh (Aug 21 2006 - 3:05pm)
- ಚಿತ್ರಸಾಹಿತ್ಯದ ಅಧಃಪತನ By: benaka (Jul 18 2006 - 10:43am)
- ಅಹಾ By: anjali (Jul 2 2006 - 10:45pm)

RSS:
ನಾವೆಂದು ಕನ್ನಡ ಚಿತ್ರಗಳನ್ನು ನೋಡುವುದು
ಸ್ವಾಮಿ
ಕನ್ನಡ ಚಿತ್ರರಂಗದ ಬಗ್ಗೆ ಹಲವಾರು ಅಭಿಪ್ರಾಯಗಳನ್ನು ಓದಿದ ಮೇಲೆ ನನ್ನ ಅನಿಸಿಕೆ, ನಾವು ಕನ್ನಡಿಗರು ನಮ್ಮ ಚಿತ್ರಗಳನ್ನು ನೋಡದೆಯೆ ವಿಮರ್ಶೆ/ಪ್ರತಿಕ್ರಿಯೆ ವ್ಯಕ್ತಪಡಿಸುತ್ತೇವೆ, ನಾನೇನು ಬಿಡುಗಡೆಯಾಗುವ ಪ್ರತಿಯೊಂದು ಚಿತ್ರವನ್ನು ನೋಡಿ ಎಂದು ಹೇಳುವುದಿಲ್ಲ ಆದರೆ ಕೇವಲ ಅಂತೆ/ಕಂತೆ ಗಳಲ್ಲಿಯೇ ನಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರೆ ಹೇಗೆ,ಯಾವುದೇ ಭಾಷೆಯ ಚಿತ್ರ ವ್ಯಾಪರ ಹಾಗು ಕಲೆ ಎರಡನ್ನು ಹದವಾಗಿ ಬೆರಿಸಿದಾಗ ಒಂದು Masterpiece ಯಾಗುತ್ತದೆ, ಇಂದು ಯಾವುದೇ ಭಾಷೆಯಾಗಲಿ ಅಂತಹ Masterpiece ಚಿತ್ರಗಳ ಸಂಖ್ಯೆ ಕಡಿಮೆಯಾಗಿದೆ, ಈ ನಿಟಿನಲ್ಲಿ ಪ್ರೇಕ್ಷಕ ಮೇಕರ್ ನೊಂದಿಗೆ ಸಹಕರಿಸಿದರೆ ಮಾತ್ರ Masterpiece ಮಾಡಲು ಸಾದ್ಯ,
ಉದಾಹರಣೆಗೆ ಕನ್ನಡದ "ಚೈತ್ರದ ಚಿಗುರು" ಹಾಗು ಹಿಂದಿಯ "Swades" ಚಿತ್ರ ಗಮನಿಸಿ, ನಾಗಭರಣ ನಿರ್ದೇಶನದ ಚಿಗುರು ಅದೇ ಹೆಸರಿನ ಕಾರಂತರ ಕಾದಂಬರಿಯಿಂದ ತಯಾರದದ್ದು ಎಂದು ಹೇಳುತ್ತಾರೆ, ಆದರೆ ಹಿಂದಿಯ ಚಿತ್ರಕಥೆಯನ್ನು ಬರೆದವರು ನಮ್ಮ ಕನ್ನಡವರು, ಅವರು ಕಾರಂತರ ಕಾದಂಬರಿಯಿಂದ ತೆಗೆದುಕೊಂಡಿದ್ದು ಎಂದು ಹೇಳುವುದಿಲ್ಲ, ಎರಡು ಚಿತ್ರವನ್ನು ನೋಡಿದವರು, ಕಾದಾಂಬರಿಯನ್ನು ಓದಿದರೆ ಕಾರಂತರ ಕಾದಂಬರಿಗೆ ಎರಡು ಹತ್ತಿರವಾಗಿದೆ ಎಂದು ಗೊತ್ತಾಗುತ್ತ್ದೆ, ಆದರೂ ನಮ್ಮ ಕನ್ನಡದ ಜನ "Swades" ಗೆ ಕೊಟ್ಟ ಮನ್ನಣೆ "ಚಿಗುರು"ಗೆ ಕೊಡಲಿಲ್ಲ, ಶಿವಣ್ಣನ ಅಭಿನಯ, ಜಯಂತ್ ರ ಸಾಹಿತ್ಯ, ಕರುನಾಡಿನ ಪ್ರಕೃತಿ, ಯಾವುದು ನಮ್ಮ ಕನ್ನಡಿಗರಿಗೆ ಅಪಾಯಾಯಮಾನವಾಗಲಿಲ್ಲ, ನಮ್ಮ ಚಿತ್ರವನ್ನು ನಾವೇ ನೋಡದೆ ಇದ್ದರೆ ಕನ್ನಡ ಬರೀ ಬ್ಲಾಗ್ ನಲ್ಲಿ ಉಳಿದಿತು ಅಲ್ಲವೆ, ಇನ್ನಾದರು ಚಿತ್ರ ನೋಡಿ ಪ್ರತಿಕಿಯೆ ಕೊಡಿ, ಅಂದ ಹಾಗೆ ಹಿಂದಿಯ "ಪಹೇಲಿ" ಹಾಗು ಕನ್ನಡದ "ನಾಗಮಂಡಲ" ದ ಬಗ್ಗೆ ಮುಂದೆ ಬರೆಯುತ್ತೇನೆ