ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಆಡು ಮಾತು

August 23, 2006 - 9:07pm — Kamalakar

ಆಡು ಮಾತು

Kamalakar's picture

ನೀವು ಹೇಳುತ್ತಿರುವುದು ನಿಜ. ವ್ಯಾಕರಣದ ಮತ್ತು ಬರವಣಿಗೆಯ ಪ್ರಾಮುಖ್ಯತೆಯ ಉತ್ಪತ್ತಿಯ ಕುರಿತು ನೀವನ್ನುವ ಮಾತುಗಳು ಅರ್ಥಪೂರ್ಣವಾಗಿವೆ.   ಚರ್ಚೆಗೆಂದು ಮತ್ತೆ ಬರೆಯುತ್ತಿದ್ದೇನೆ, ಹಠವೆಂದು ತಿಳಿಯದಿರಿ.
ನಾನು ಬರವಣಿಗೆ ಎನ್ನುವುದನ್ನು ಹಾಳೆಯ ಮೇಲೆ ಮೂಡಿಸಿದ ಗುರುತುಗಳ ಹೊರತಾಗಿಯೂ ನೋಡುತ್ತ, ಮಾತಿನಲ್ಲಿ ಕೂಡ ಹೇಗೆ ಸುಸ್ಥಿರತೆಯ ಬಂಧವಿದೆ (ಬರವಣಿಗೆಯಂತೆ) ಎನ್ನುವುದರ ಕುರಿತು ಯೋಚಿಸುತ್ತಿದ್ದೆ. ಆಡು ಮಾತು ನಮಗೆ ಹತ್ತಿರವಾಗುವಾಗ (ಹೀಗೆ ಹತ್ತಿರವಾಗುವುದು ಸರಿಯೋ ತಪ್ಪೋ ಎನ್ನುವುದು ಪ್ರಸ್ತುತವಲ್ಲ ಇಲ್ಲಿ) ಅದು ಬರವಣಿಗೆ ತನ್ನ ವಿರುದ್ಧ ಪದವೆಂದು ಭಾವಿಸಿಕೊಳ್ಳುತ್ತದೆಯೇ? ಇವುಗಳ ನಡುವೆ ಪೈಪೋಟಿಯನ್ನು ನಾವು ಊಹಿಸಿಕೊಂಡರೆ ಆಗ ನಾವು ಆಡುಮಾತು ಹೆಚ್ಚು ಸಂವಹನ ಸಾಧಿಸುತ್ತದೆ ಇತ್ಯಾದಿ ವಿಚಾರಗಳಲ್ಲಿ ಸಿಲುಕಿಕೊಳ್ಳುತ್ತೇವೆಯೇ? ಮಾತು, ಆಡುಮಾತು, ಔಪಚಾರಿಕ ಮಾತು (ಭಾಷಣ ಇತ್ಯಾದಿ) ಗಳೆಲ್ಲ ಭಾಷೆಯ ಬೇರೆ ಬೇರೆ ತರನ ಉಪಯೋಗಗಳೆಂದುಕೊಂಡರೆ, ಅವುಗಳಲ್ಲಿ ಯಾವುದು ಮೊದಲು (ಹುಟ್ಟಿನಲ್ಲಿ ಅಥವಾ ಪ್ರಾಮುಖ್ಯತೆಯಲ್ಲಿ) ಎಂಬ ಪೈಪೋಟಿಗೆಡೆ ಮಾಡುವ ವಾದಗಳಿಂದ ಬಚಾವಾಗಬಹುದೇನೋ. ಬರವಣಿಗೆಗೆ ಸ್ಥಿರತೆ ಇದೆ ಎನ್ನುವುದು ಕೊಂಚ ಕಷ್ಟವೇ ಅಲ್ಲವೇ? ಅದಿದ್ದಿದ್ದರೆ, ವ್ಯಾಖ್ಯಾನದ (ಅರ್ಥವಿವರಣೆಯ) ಅವಶ್ಯಕ್ತೆಯೂ ಕಮ್ಮಿಯಿರುತ್ತಿತ್ತು. ಅದೇ ಬರವಣಿಗೆ ಅದು ಹೇಗೆ ಬೇರೆ ಕಾಲ ದೇಶ, ಓದುವ ಮನಸ್ಸಿನಲ್ಲಿ ಅದೆಷ್ಟು ಬಗೆಯ ರೂಪತಾಳುತ್ತದೆ ಎಂದರೆ ಅರ್ಥದ ಸ್ತರದಲ್ಲಿ ಸ್ಥಿರತೆ ಸಂದೇಹಾತ್ಮಕವೇ. ಆದರೆ, ಇದು ನಿಜ ಅದಕ್ಕೆ ಭೌತಿಕ ಸ್ತರದಲ್ಲಿ ಸ್ಥಿರತೆ ಇರುತ್ತದೆ, ಆಡುಮಾತಿಗೆ (ಆಡುತ್ತಿರುವಮಾತಿಗೆ) ಹಾಗಲ್ಲ. ಆದರೆ, ಆಡು ಮಾತನ್ನು ಬರೆಯಬಹುದಲ್ಲ.
ಅಂದಹಾಗೆ, ಇಸ್ಮಾಯಿಲ್ ರವರೆ, ಮಾತಿನಲ್ಲಿ ನಾವು ದೇಹಾಭಿನಯ, ಜೆಸ್ಚರ್ ಇತ್ಯಾದಿ ಬಳಸುವುದು ನಿಜ ಹಾಗೂ ಸಂವಹನದಲ್ಲಿ ಅವುಗಳ ಕೊಡುಗೆಯ ಕುರಿತು ನೀವನ್ನುವುದು ಸರಿ. ಆದರೆ ಅವು ಕೂಡ ಪ್ರತ್ಯೇಕ ಭಾಷೆಯಂತೆ, ಸಂಭಾಷಣೆಯ ಸಂದರ್ಭದಲ್ಲಿ ಸಹಕರಿಸುತ್ತವೆ. ಅಂತಹ ಸಹಕಾರ ಬರವಣಿಗೆ, ಔಪಚಾರಿಕ ಮಾತುಗಳಿಗೂ ತಮ್ಮದೇ ಇರುತ್ತವೆ. ಹಾಗಾಗಿ, ದೇಹಾಭಿನಯ, ಕಣ್ಸನ್ನೆ ಇತ್ಯಾದಿ ಹೆಚ್ಚುವರಿ ಸಾಧನಗಳು ಮಾತಿಗೆ ದೊರೆಯುತ್ತಿರುವುದು ಅದರ ಮೌಲ್ಯ ಹೆಚ್ಚಿಸುತ್ತದೆ ಎನ್ನುವ ಹೋಲಿಕೆ ಸಾಧುವಾದೀತೇ?
ಆಡು ಮಾತನ್ನು ಬರವಣಿಗೆಯಲ್ಲಿ ಉಪಯೋಗಿಸಿದಾಗ ಏನಾಗುತ್ತದೆ? (ಉಪಯೋಗಿಸಲಾದೀತೇ?) ಅಲ್ಲಿಯೂ ಇವೆರಡು ಚೌಕಟ್ಟುಗಳು ಲಭ್ಯವೇ? ಯಾಕೆಂದರೆ, ಆಡುಮಾತನ್ನು ಬರೆಯಲು (ಅಕ್ಷರೀಕರಿಸಲು) ಸಾಧ್ಯ. ಅಂದರೆ, ಬರವಣಿಗೆಯೊಳಗೇ ಆಡುಮಾತು ಸಾಧ್ಯವಿದೆ (ಸಾಹಿತ್ಯದಲ್ಲಿ ಕಾಣುತ್ತೇವೆ, ಉದಾ.). ಹಾಗೆಯೇ ಆಡುಮಾತಿನಲ್ಲಿ ಬರವಣಿಗೆ ಕೂಡ ಸಾಧ್ಯವೆನ್ನುವುದಕ್ಕೆ ಮಂತ್ರಗಳನ್ನು ಪಠಿಸುವ ಉದಾಹರಣೆ ನೋಡಬಹುದು; ಅಥವಾ ಉರುಹೊಡೆದು ಮರುಹೇಳುವ ಪದ್ಧತಿಯೆಡೆ ನೋಡಬಹುದು. ಮಂತ್ರಗಳನ್ನು (ಉದಾಹರಣೆಗೆ ಮಾತ್ರ) ಮೌಖಿಕವೆನ್ನುವುದು ಬರವಣಿಗೆಯನ್ನು ನಾವು ಹಾಳೆಯ ಮೇಲೆ ಬರೆಯುವದನ್ನಷ್ಟೇ ಬರವಣಿಗೆ ಎಂದುಕೊಂಡರೆ ಮಾತ್ರ. ಓ.ಎಲ್.ಎನ್. ಸ್ವಾಮಿಯವರು ಅನ್ನುವಂತೇ ಬರವಣಿಗೆಯನ್ನು ಅದರ ಸುಸ್ಥಿರ ಬಂಧದೊಂದಿಗೆ ಜೋಡಿಸಿದಾಗ ಹಲವು ಬಗೆಯ ಮೌಖಿಕತೆಗಳನ್ನೂ ಕೂಡ ಬರವಣಿಗೆಯಲ್ಲಿ ಕೂಡಿಸಿಕೊಳ್ಳ ಬೇಕಾಗುತ್ತದೆ ಎನಿಸುತ್ತದೆ.
ಕಮಲಾಕರ
 

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಮಡಿ ಭಾಷೆ, ಮಡಿ ಭಾಷೆ By: olnswamy (16 replies) August 23, 2006 - 11:16am
  • Quote: tksbhat By: ಸಂಗನಗೌಡ (Aug 26 2006 - 8:54pm)
    • ಹೂಂ.... By: ರಘುನಂದನ (Aug 26 2006 - 9:08pm)
      • ಉ: ಹೂಂ.... By: kpbolumbu (Oct 15 2007 - 12:49am)
  • ಮಾತು ಮೊದಲು, ಬರಹ ಆ ಮೇಲೆ By: ಸಂಗನಗೌಡ (Aug 23 2006 - 10:40pm)
    • ವಿನಯದ ಕೊರತೆ By: tksbhat (Aug 25 2006 - 2:37pm)
      • ಕಾರಣ By: ಸಂಗನಗೌಡ (Aug 25 2006 - 9:59pm)
        • ಇದ್ಯಾವ ಪರಿ By: ರಘುನಂದನ (Aug 26 2006 - 11:51am)
          • ಬಾಸೆ By: ಸಂಗನಗೌಡ (Aug 26 2006 - 9:42pm)
      • ಹೌದೌದು! By: ರಘುನಂದನ (Aug 25 2006 - 6:31pm)
        • ಬಲವಂತಿಕೆ? By: ಸಂಗನಗೌಡ (Aug 26 2006 - 9:32pm)
    • ಪ ಮತ್ತು ಹ ಮತ್ತು ಉ By: olnswamy (Aug 24 2006 - 9:37am)
      • ;-) By: ಸಂಗನಗೌಡ (Aug 24 2006 - 4:22pm)
  • ಮಡಿ ಮಡಿಯಲಿ By: Kamalakar (Aug 23 2006 - 3:42pm)
    • ಸಹಜ ಮತ್ತು ಕೃತಕ By: olnswamy (Aug 23 2006 - 5:51pm)
      • ಆಡು ಮಾತು By: Kamalakar (Aug 23 2006 - 9:07pm)
      • ನುಡಿ ಮತ್ತು ಬರೆಹ By: ismail (Aug 23 2006 - 6:42pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hariharapurasridhar
    ಉ: ಬರಿದಾದ ಭಾವನೆಗಳು
    January 9, 2009 - 9:03am
  • mahesha
    ಉ: ಬರಿದಾದ ಭಾವನೆಗಳು
    January 9, 2009 - 8:50am
  • savithasr
    ಉ: ಬರಿದಾದ ಭಾವನೆಗಳು
    January 9, 2009 - 8:38am
  • savithasr
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 8:19am
  • hariharapurasridhar
    ಉ: ಗಿಳಿಯು ಪಂಜರದೊಳಿಲ್ಲ
    January 9, 2009 - 8:18am
  • savithasr
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 8:16am
  • shaamala
    ಉ: ಅರ್ಧ ಚಂದಿರ
    January 9, 2009 - 8:13am
  • savithasr
    ಉ: ನಾನೂ ಸಮರ್ಥನಾಗುವೆ-ಭಾಗ ೧
    January 9, 2009 - 8:10am
  • hariharapurasridhar
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 7:55am
  • hariharapurasridhar
    ಉ: ಮರೆತು ಹೋದ ಪದಗಳು
    January 9, 2009 - 7:42am
ಇನ್ನಷ್ಟು


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator