ಪ ಮತ್ತು ಹ ಮತ್ತು ಉ
-
Quote:
tksbhat By: ಸಂಗನಗೌಡ (Aug 26 2006 - 8:54pm)
- ಹೂಂ.... By: ರಘುನಂದನ (Aug 26 2006 - 9:08pm)
- ಉ: ಹೂಂ.... By: kpbolumbu (Oct 15 2007 - 12:49am)
- ಹೂಂ.... By: ರಘುನಂದನ (Aug 26 2006 - 9:08pm)
- ಮಾತು ಮೊದಲು, ಬರಹ ಆ ಮೇಲೆ By: ಸಂಗನಗೌಡ (Aug 23 2006 - 10:40pm)
- ವಿನಯದ ಕೊರತೆ By: tksbhat (Aug 25 2006 - 2:37pm)
- ಕಾರಣ By: ಸಂಗನಗೌಡ (Aug 25 2006 - 9:59pm)
- ಇದ್ಯಾವ ಪರಿ By: ರಘುನಂದನ (Aug 26 2006 - 11:51am)
- ಬಾಸೆ By: ಸಂಗನಗೌಡ (Aug 26 2006 - 9:42pm)
- ಇದ್ಯಾವ ಪರಿ By: ರಘುನಂದನ (Aug 26 2006 - 11:51am)
- ಹೌದೌದು! By: ರಘುನಂದನ (Aug 25 2006 - 6:31pm)
- ಬಲವಂತಿಕೆ? By: ಸಂಗನಗೌಡ (Aug 26 2006 - 9:32pm)
- ಕಾರಣ By: ಸಂಗನಗೌಡ (Aug 25 2006 - 9:59pm)
- ಪ ಮತ್ತು ಹ ಮತ್ತು ಉ By: olnswamy (Aug 24 2006 - 9:37am)
- ;-) By: ಸಂಗನಗೌಡ (Aug 24 2006 - 4:22pm)
- ವಿನಯದ ಕೊರತೆ By: tksbhat (Aug 25 2006 - 2:37pm)
- ಮಡಿ ಮಡಿಯಲಿ By: Kamalakar (Aug 23 2006 - 3:42pm)
- ಸಹಜ ಮತ್ತು ಕೃತಕ By: olnswamy (Aug 23 2006 - 5:51pm)
- ಆಡು ಮಾತು By: Kamalakar (Aug 23 2006 - 9:07pm)
- ನುಡಿ ಮತ್ತು ಬರೆಹ By: ismail (Aug 23 2006 - 6:42pm)
- ಸಹಜ ಮತ್ತು ಕೃತಕ By: olnswamy (Aug 23 2006 - 5:51pm)


RSS:
ಪ ಮತ್ತು ಹ ಮತ್ತು ಉ
ಅಡ್ಡಗೋಡೆಯ ದೀಪ ಎರಡೂ ಕಡೆಗೆ ಬೆಳಕು ಚೆಲ್ಲೀತೆಂದು ಮಿಣುಕು ಆಸೆ! ಇರಲಿ. ಹಳಗನ್ನಡದ 'ಪ'ಕಾರಗಳೆಲ್ಲ 'ಹ'ಕಾರಗಳಾಗಿ ಬದಲಾಗಲಿಲ್ಲ. ಉದಾಹರಣೆಗೆ ಪಯಿರು ಪೈರು ಎಂದಾಗಿದೆಯೇ ಹೊರತು ಹಯಿರು, ಹೈರು ಎಂದಾಗಲಿಲ್ಲ. ಯಾವ 'ಪ'ಕಾರ ಮಾತ್ರ 'ಹ' ಆಗಿ ಬದಲಾಯಿತೆಂಬುದು ಭಾಷಾವಿಜ್ಞಾನಿಗಳ ಕುತೂಹಲ ಕೆರಳಿಸಿರುವ ಸಂಗತಿ. 'ಹುಟ್ಟು' 'ಉಟ್ಟು' ಇಂಥ ಪದಗಳಲ್ಲಿರುವ ಅರ್ಥವ್ಯತ್ಯಾಸ ಬರವಣಿಗೆಯಲ್ಲಿ ಸ್ಪಷ್ಟವಾಗುವುದಕ್ಕೆ ಬೇರೆ ಬೇರೆ ಸಂಕೇತಗಳು ಬೇಕು ಅನ್ನುವುದು ನಿಜ. ಆದರೆ ಆಡುಮಾತಿನಲ್ಲಿ 'ಉಟ್ದೋರೆಲ್ಲ ಸಾಯ್ಲೇಬೇಕು' ಅನ್ನುವ ವಾಕ್ಯ ಕೇಳಿದಾಗ ಸಂದರ್ಭಕ್ಕೆ ಅನುಗುಣವಾಗಿ ಜನ ಸರಿಯಾಗಿಯೇ ಅರ್ಥಮಾಡಿಕೊಳ್ಳುತ್ತಾರೆ. ಸುಶಿಕ್ಷಿತರಲ್ಲದ ಜನರ ಬಳಕೆಯಲ್ಲಿ ಮಹಾಪ್ರಾಣಗಳೂ ಕೇಳುವುದಿಲ್ಲ. ಆದರೂ ಕೇಳುಗರು ತಪ್ಪಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಆದ್ದರಿಂದ ಬರವಣಿಗೆಯ ಶುದ್ಧತೆಯೇ ಬೇರೆ, ಆಡುಮಾತಿನ ಶುದ್ಧತೆಯೇ ಬೇರೆ.
ಆಡುಮಾತಿನ ಅರ್ಥವಂತಿಕೆ ಜೀವಂತ ಸಂದರ್ಭದಲ್ಲಿರುತ್ತಾದ್ದರಿಂದ ಅಲ್ಲಿ ಮಡಿ ಮೈಲಿಗೆಯ ಪ್ರಶ್ನೆಯೈ ಇಲ್ಲ. ಬರಹದಲ್ಲಿ ಕೇವಲ ದೃಶ್ಯವಾಗಿ ಭಾಷೆಯನ್ನು ಬಳಸುವುದರಿಂದ ಅಪಾರ್ಥಕ್ಕೆ ಎಡೆಯಾಗದಿರಲೆಂದು ದೃಶ್ಯಸಂಕೇತಗಳ ವ್ಯತ್ಯಾಸ ಉಳಿಸಿಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯ. ಆಡುನುಡಿ ಮತ್ತು ಬರಹಗಳ ವ್ಯವಹಾರವನ್ನು ವಿವರಿಸುವುದು ತೀರ ತಾಂತ್ರಿಕವೆಂದು ಅದಕ್ಕೆ ಕೈ ಹಾಕಿಲ್ಲ. ಆಸಕ್ತಿ ಇರುವವರು ವಾಲ್ಟರ್ ಜೆ ಓಂಗ್ ಎಂಬ ವಿದ್ವಾಂಸ ಬರೆದಿರುವ ಒರಾಲಿಟಿ ಅಂಡ್ ಲಿಟರೆಸಿ ಪುಸ್ತಕವನ್ನು ನೋಡಬಹದು.