ನಮ್ಮಂತವರಿಗೆ ಮಾದರಿ
- ಅವಮಾನ ಮತ್ತು ಬೆಳವಣಿಗೆ By: ಸಂಗನಗೌಡ (Aug 28 2006 - 11:26am)
- ಸಂನ್ಯಾಸಿ ಮತ್ತು ಚೇಳು By: pavanaja (Aug 27 2006 - 10:36pm)
- ಚಿರಋಣಿ By: tvsrinivas41 (Aug 27 2006 - 10:50pm)
- ನಮ್ಮಂತವರಿಗೆ ಮಾದರಿ By: shreeharsha4u (Aug 27 2006 - 11:24am)
- ಯಾಕಿದು ಅತೀವ ವಿಶಾದ? By: ರಘುನಂದನ (Aug 26 2006 - 9:20pm)

RSS:
ನಮ್ಮಂತವರಿಗೆ ಮಾದರಿ
ನಮ್ಮಂತ ಕಿರಿಯರಿಗೆ ಮಾದರಿ ಸರ್ ನೀವು. ನಾನೂ ಬರೆಯಬೇಕು ಅನ್ನುವ ಅಭಿಲಾಷೆ ಬಂದದ್ದು ನಿಮ್ಮ ಲೇಖನಗಳನ್ನು ನೋಡಿದ ಮೇಲೆಯೇ. ತಕ್ಕ ಮಟ್ಟಿಗೆ ಬರೆಯಬಲ್ಲೆ ಅನ್ನುವ ವಿಶ್ವಾಸ ಮೂಡಿದ್ದು ನಿಮ್ಮ ಪ್ರತಿಕ್ರಿಯೆ ದೊರೆತ ಮೇಲೆಯೇ. ನಾನು ಉತ್ಪ್ರೇಕ್ಷೆ ಮಾಡುತ್ತಿಲ್ಲ, ಆದರೆ ನೀವು ಬರೆಯುವುದನ್ನ ನಿಲ್ಲಿಸಿದರೆ ಜೊತೆಗೆ ೧೦-೨೦ ಕೈಗಳು ನಿಲ್ಲಿಸಿದ ಹಾಗೆ ಎಂದೇ ತಿಳಿಯಿರಿ. ನಿಮ್ಮ ಪ್ರತೀ ಲೇಖನಗಳಿಗೂ ಪ್ರತಿಕ್ರಿಯೆ ನೀಡದೇ ಇರಬಹುದು. ಆದರೆ ಒಂದನ್ನೂ ಬಿಡದೆ ಓದುವ ಓದುಗರಲ್ಲಿ ನಾನೂ ಒಬ್ಬ. ಇಷ್ಟು ಕಡಿಮೆ ಸಮಯದಲ್ಲಿ ನೀವು ಏರಿದ ಎತ್ತರ ಅದ್ಭುತವಾದದ್ದು. ಈಗ ಒಮ್ಮೆಲೇ ಎಲ್ಲಾ ನಿಲ್ಲಿಸುವ ಮಾತಾಡುತ್ತಿರುವಿರಿ. ಕುಟುಕುವ ಒಂದೆರಡು ಚೇಳುಗಳಿಗೆ ಹೆದರಿ ಅಭಿಮಾನವಿಟ್ಟುಕೊಂಡ ಸಾವಿರಾರು ಓದುಗರಿಗೆ ನಿಮ್ಮಂತ ಹಿರಿಯರು ನಿರಾಶೆ ಮಾಡಲಾರಿರಿ ಎನ್ನುವ ನಂಬಿಕೆ ನನಗಿದೆ.