ನಿಜವಾಗಿ ಬದಲಾಗಬೇಕಿರುವುದು
- ಉ: ಕನ್ನಡ ದ್ರಾವಿಡ ಭಾಷೆಯಲ್ಲ ; ಕನ್ನಡಿಗರು ದ್ರಾವಿಡರಲ್ಲ. By: smurthygr (Aug 3 2007 - 8:14pm)
- ಉ: ಕನ್ನಡ ದ್ರಾವಿಡ ಭಾಷೆಯಲ್ಲ ; ಕನ್ನಡಿಗರು ದ್ರಾವಿಡರಲ್ಲ. By: kannadakanda (Jun 5 2008 - 10:31am)
- ಅದ್ಭುತವಾಗಿದೆ By: shreeharsha4u (Sep 7 2006 - 9:50am)
- ಕನ್ನಡ ದ್ರಾವಿಡ ಭಾಷೆ ಅಲ್ಲ. By: anant (Sep 6 2006 - 4:11pm)
- ವಿವರವಾಗಿ ಬರೆಯಿರಿ By: ismail (Sep 11 2006 - 6:35pm)
- ಪಂಡಿತರೇ By: ಸಂಗನಗೌಡ (Sep 7 2006 - 8:51am)
- ಉ: ಪಂಡಿತರೇ By: kannadakanda (Jun 5 2008 - 10:25am)
- ಉ: ಪಂಡಿತರೇ By: kannadakanda (Jun 5 2008 - 10:27am)
- ಉ: ಪಂಡಿತರೇ By: kannadakanda (Jun 5 2008 - 10:25am)
- ಜನಪ್ರಿಯ ಸಿದ್ಧ ಮಾದರಿಗಳು ಹಾಗೂ ಜ್ಞಾನಶಿಸ್ತುಗಳು By: ಪ್ರದೀಪ್ ಬೆಳಗಲ್ (Sep 1 2006 - 11:16pm)
- ನಿಜವಾಗಿ ಬದಲಾಗಬೇಕಿರುವುದು By: benaka (Aug 30 2006 - 7:03am)
- ಪಾಪ್ಯುಲರ್ By: ismail (Aug 30 2006 - 7:19pm)
- ಡಾ.ಡಿ.ಎ ಶಂಕರಭಟ್ಟರು By: ಸಂಗನಗೌಡ (Sep 10 2006 - 9:19pm)
- ಬಳಸು By: ಸಂಗನಗೌಡ (Sep 12 2006 - 11:08am)
- ಉ: ಬಳಸು By: kannadakanda (Jun 4 2008 - 2:53pm)
- ಅಭಿವ್ಯಕ್ತಿ ಮತ್ತು ಸಂವಹನ By: ismail (Sep 11 2006 - 6:33pm)
- ಬಳಸು By: ಸಂಗನಗೌಡ (Sep 12 2006 - 11:08am)
- ಡಾ.ಡಿ.ಎ ಶಂಕರಭಟ್ಟರು By: ಸಂಗನಗೌಡ (Sep 10 2006 - 9:19pm)
- ಪಾಪ್ಯುಲರ್ By: ismail (Aug 30 2006 - 7:19pm)
- ತಲೆಬರಹದ ಬರಹ By: ಸಂಗನಗೌಡ (Aug 29 2006 - 1:27pm)
- ಕಾಲ್ಡ್‌ವೆಲ್ ಮಹಾಶಯನ ವರಪ್ರಸಾದ! By: benaka (Aug 29 2006 - 6:38am)
- ಹಿಮಾಲಯದಲ್ಲಿ ಸರವಜ್ಜ By: ಸಂಗನಗೌಡ (Aug 30 2006 - 1:13pm)
- ದ್ವೇಷದಿಂದ ನಾಡನ್ನು ಕಟ್ಟಲು ಅಸಾಧ್ಯ! By: benaka (Aug 30 2006 - 3:13pm)
- ಅಯ್ಯ By: ಸಂಗನಗೌಡ (Aug 30 2006 - 5:32pm)
- ದ್ವೇಷದಿಂದ ನಾಡನ್ನು ಕಟ್ಟಲು ಅಸಾಧ್ಯ! By: benaka (Aug 30 2006 - 3:13pm)
- ಕೀಳರಿಮೆ ಬೇಡ By: ismail (Aug 29 2006 - 8:17pm)
- ಸಕ್ಕದ ಬೇಡ ಅನ್ನುವದಕ್ಕಿಂತ, ಕನ್ನಡ ಬೇಕು By: ಸಂಗನಗೌಡ (Aug 29 2006 - 1:24pm)
- ಸಂಸ್ಕೃತ, "ದ್ರಾವಿಡ" ಭಾಷೆಗಳು By: hpn (Aug 29 2006 - 12:30pm)
- ಹಿಮಾಲಯದಲ್ಲಿ ಸರವಜ್ಜ By: ಸಂಗನಗೌಡ (Aug 30 2006 - 1:13pm)
- ಅಪ್ಪ, ಅಣ್ಣ By: ಸಂಗನಗೌಡ (Aug 28 2006 - 4:07pm)
- ಉ: ಅಪ್ಪ, ಅಣ್ಣ By: kannadakanda (Jun 4 2008 - 2:51pm)
- ನ್ ಸೇರಿಸಿಕೊಂಡರೆ ತಮಿಳಿರವನು :P By: ರಘುನಂದನ (Aug 29 2006 - 5:26pm)
- ಪೇಟ ಸುತ್ತಿದರೆ ಗೌಡ? By: ಸಂಗನಗೌಡ (Sep 7 2006 - 8:35am)
- ;P By: ಸಂಗನಗೌಡ (Aug 30 2006 - 5:24pm)
- :P By: ರಘುನಂದನ (Aug 30 2006 - 10:01pm)
- ಉ: :P By: kannadakanda (Jun 5 2008 - 10:22am)
- ಉ: :P By: kannadakanda (Jun 5 2008 - 10:22am)
- ಉ: :P By: ಸಂಗನಗೌಡ (Jun 5 2008 - 6:01pm)
- :P By: ರಘುನಂದನ (Aug 30 2006 - 10:01pm)
- ರಾಗಣ್ಣವರೇ, By: ಸಂಗನಗೌಡ (Aug 30 2006 - 9:12am)

RSS:
ನಿಜವಾಗಿ ಬದಲಾಗಬೇಕಿರುವುದು
ನಾಡಿಗರೇ,
'ದ್ರಾವಿಡ' ಎಂಬ ಹಣೆಪಟ್ಟಿ ಕಳಚಿದ ಮಾತ್ರಕ್ಕೆ ಕನ್ನಡದ ಹಣೆಬರಹ ಸರಿಹೋಗುವುದಿಲ್ಲ ಅಲ್ಲವೇ? ಹೆಸರಲ್ಲೇನಿದೆ ಎಂದು ಬಿಟ್ಟೇ ಬಿಡಬಹುದಾಗಿತ್ತು; ಆದರೆ ಆ ಹೆಸರನ್ನು 'ಭಾರತದ ಇತರ ಭಾಷೆಗಳಿಗಿಂತ ತೀರಾ ಭಿನ್ನವಾದ', 'ದಕ್ಷಿಣದಲ್ಲಿ ಹುಟ್ಟಿದ', 'ಸಂಸ್ಕೃತದ ಗಾಳಿಯೇ ಸೋಕಿಲ್ಲದ' ಎಂದೆಲ್ಲಾ ಅರ್ಥಗಳಲ್ಲಿ ಬಳಸಲಾಗುತ್ತಿದೆಯಾದ್ದರಿಂದ ಸ್ವಲ್ಪ ಯೋಚಿಸಬೇಕಾದ ವಿಷಯವೇ! ಭಾರತದ ಒಗ್ಗಟ್ಟನ್ನು ಒಡೆದು ನೋಡುವಂತೆ ಬಳಸಲ್ಪಡುವ ಯಾವ ಪದವನ್ನೇ ಆಗಲಿ, ಬದಲಿಸಲು ನನ್ನ ಸಂಪೂರ್ಣ ಬೆಂಬಲವಿದೆ. ಆದರೆ, ನಿಜವಾಗಿ ಬದಲಾಗಬೇಕಿರುವುದು ಹಣೆಪಟ್ಟಿಯಲ್ಲದೆ, ಆ ಹಣೆಪಟ್ಟಿಯಿಂದ ವಿಪರೀತಾರ್ಥ ಕಲ್ಪಿಸುವ ಜನರ ಭಾವನೆಗಳು ಎಂದು ನನ್ನ ಅನಿಸಿಕೆ.
ಇಸ್ಮಾಯಿಲರೇ,
ತುಂಬಾ ಸರಿಯಾಗಿ ಹೇಳಿದ್ದೀರಿ; ದ್ರಾವಿಡವೆಂದರೆ, ಸಕ್ಕದಕ್ಕೆ 'ವಿರುದ್ಧ' ಎಂಬ ಭಾವನೆಗಷ್ಟೇ ನನ್ನ ವಿರೋಧ! 'ದ್ರಾವಿಡ' ಎಂಬ ಪದಕ್ಕಲ್ಲ. ಭಾರತೀಯರಾರೂ ಮಾಡದಿದ್ದ ಕೆಲಸವನ್ನು ಮಾಡಿದ ಕಾಲ್ಡ್‌ವೆಲ್ ಬಗ್ಗೆ ಖಂಡಿತವಾಗಿ ನನಗೆ ಗೌರವವಿದೆ; ಆದರೆ ಅವನಿಟ್ಟ ಹೆಸರು ಮುಂದೆ ರಾಜಕೀಯ ಪ್ರೇರಿತವಾಗಿ ದೇಶವನ್ನು ಭಾಷೆಯಮೇಲೆ ಹಿರಿದಾಗಿ ಇಬ್ಭಾಗ ಮಾಡಲೆತ್ನಿಸಿದ್ದು ಚರಿತ್ರೆಯಲ್ಲವೆ? ಇಂದಿಗೂ ಉತ್ತರದವರಿಗೆಲ್ಲ ನಾವು 'ಮದ್ರಾಸೀ'ಗಳೇ! ಉತ್ತರಪ್ರದೇಶದಲ್ಲಿ ಕನ್ನಡ ಶಾಸನ ದೊರೆತಿದ್ದರೂ ಅದು 'ದಕ್ಷಿಣದ ಭಾಷೆ'ಯೇ! ಇಂತಹ ಪೂರ್ವಾಗ್ರಹಗಳಿಗಷ್ಟೇ ನನ್ನ ವಿರೋಧ.
ಸಂಗನ ಗೌಡರೇ,
'ಸಕ್ಕದ ಬೇಡ ಎನ್ನುವುದಕ್ಕಿಂತ ಕನ್ನಡ ಬೇಕು' ಎಂಬುದು ಹದಿನಾರಾಣೆ ದಿಟ! ಅದಕ್ಕೆಂದೂ ನನ್ನ ಬೆಂಬಲವಿದೆ!
ಕಿಟ್ಟೆಲ್ ನಂತಹ ಮಹಾನ್ ವ್ಯಕ್ತಿತ್ವದ ವಿದೇಶೀಯರು ಬೆರಳೆಣಿಕೆಯಷ್ಟು ಮಾತ್ರ; ಎಲ್ಲ ಕಲ್ಲುಗಳೂ ವಿಗ್ರಹಗಳಾಗಲು ಸಾಧ್ಯವೇ? ಮ್ಯಾಕ್ಸ್ ಮುಲ್ಲರ್ ಕೂಡ ಮಹಾನ್ ವ್ಯಕ್ತಿಯೇ, ಆದರೆ ಭಾರತೀಯರ ಚರಿತ್ರೆಯನ್ನು ಯೂರೋಪಿಯನ್ನರಿಗೆ ಬೇಕಾದಂತೆ ತಿರುಚಲು ಆಂಗ್ಲರ ಕೈಗೊಂಬೆಯಾಗಲಿಲ್ಲವೇ? ಎಲ್ಲರೂ ಕೆಟ್ಟವರಲ್ಲ; ಆದರೆ ಒಳ್ಳೆಯವರು ಬಹಳವಿರಲಿಲ್ಲ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.