ಜನಪ್ರಿಯ ಸಿದ್ಧ ಮಾದರಿಗಳು ಹಾಗೂ ಜ್ಞಾನಶಿಸ್ತುಗಳು
- ಉ: ಕನ್ನಡ ದ್ರಾವಿಡ ಭಾಷೆಯಲ್ಲ ; ಕನ್ನಡಿಗರು ದ್ರಾವಿಡರಲ್ಲ. By: smurthygr (Aug 3 2007 - 8:14pm)
- ಉ: ಕನ್ನಡ ದ್ರಾವಿಡ ಭಾಷೆಯಲ್ಲ ; ಕನ್ನಡಿಗರು ದ್ರಾವಿಡರಲ್ಲ. By: kannadakanda (Jun 5 2008 - 10:31am)
- ಅದ್ಭುತವಾಗಿದೆ By: shreeharsha4u (Sep 7 2006 - 9:50am)
- ಕನ್ನಡ ದ್ರಾವಿಡ ಭಾಷೆ ಅಲ್ಲ. By: anant (Sep 6 2006 - 4:11pm)
- ವಿವರವಾಗಿ ಬರೆಯಿರಿ By: ismail (Sep 11 2006 - 6:35pm)
- ಪಂಡಿತರೇ By: ಸಂಗನಗೌಡ (Sep 7 2006 - 8:51am)
- ಉ: ಪಂಡಿತರೇ By: kannadakanda (Jun 5 2008 - 10:25am)
- ಉ: ಪಂಡಿತರೇ By: kannadakanda (Jun 5 2008 - 10:27am)
- ಉ: ಪಂಡಿತರೇ By: kannadakanda (Jun 5 2008 - 10:25am)
- ಜನಪ್ರಿಯ ಸಿದ್ಧ ಮಾದರಿಗಳು ಹಾಗೂ ಜ್ಞಾನಶಿಸ್ತುಗಳು By: ಪ್ರದೀಪ್ ಬೆಳಗಲ್ (Sep 1 2006 - 11:16pm)
- ನಿಜವಾಗಿ ಬದಲಾಗಬೇಕಿರುವುದು By: benaka (Aug 30 2006 - 7:03am)
- ಪಾಪ್ಯುಲರ್ By: ismail (Aug 30 2006 - 7:19pm)
- ಡಾ.ಡಿ.ಎ ಶಂಕರಭಟ್ಟರು By: ಸಂಗನಗೌಡ (Sep 10 2006 - 9:19pm)
- ಬಳಸು By: ಸಂಗನಗೌಡ (Sep 12 2006 - 11:08am)
- ಉ: ಬಳಸು By: kannadakanda (Jun 4 2008 - 2:53pm)
- ಅಭಿವ್ಯಕ್ತಿ ಮತ್ತು ಸಂವಹನ By: ismail (Sep 11 2006 - 6:33pm)
- ಬಳಸು By: ಸಂಗನಗೌಡ (Sep 12 2006 - 11:08am)
- ಡಾ.ಡಿ.ಎ ಶಂಕರಭಟ್ಟರು By: ಸಂಗನಗೌಡ (Sep 10 2006 - 9:19pm)
- ಪಾಪ್ಯುಲರ್ By: ismail (Aug 30 2006 - 7:19pm)
- ತಲೆಬರಹದ ಬರಹ By: ಸಂಗನಗೌಡ (Aug 29 2006 - 1:27pm)
- ಕಾಲ್ಡ್‌ವೆಲ್ ಮಹಾಶಯನ ವರಪ್ರಸಾದ! By: benaka (Aug 29 2006 - 6:38am)
- ಹಿಮಾಲಯದಲ್ಲಿ ಸರವಜ್ಜ By: ಸಂಗನಗೌಡ (Aug 30 2006 - 1:13pm)
- ದ್ವೇಷದಿಂದ ನಾಡನ್ನು ಕಟ್ಟಲು ಅಸಾಧ್ಯ! By: benaka (Aug 30 2006 - 3:13pm)
- ಅಯ್ಯ By: ಸಂಗನಗೌಡ (Aug 30 2006 - 5:32pm)
- ದ್ವೇಷದಿಂದ ನಾಡನ್ನು ಕಟ್ಟಲು ಅಸಾಧ್ಯ! By: benaka (Aug 30 2006 - 3:13pm)
- ಕೀಳರಿಮೆ ಬೇಡ By: ismail (Aug 29 2006 - 8:17pm)
- ಸಕ್ಕದ ಬೇಡ ಅನ್ನುವದಕ್ಕಿಂತ, ಕನ್ನಡ ಬೇಕು By: ಸಂಗನಗೌಡ (Aug 29 2006 - 1:24pm)
- ಸಂಸ್ಕೃತ, "ದ್ರಾವಿಡ" ಭಾಷೆಗಳು By: hpn (Aug 29 2006 - 12:30pm)
- ಹಿಮಾಲಯದಲ್ಲಿ ಸರವಜ್ಜ By: ಸಂಗನಗೌಡ (Aug 30 2006 - 1:13pm)
- ಅಪ್ಪ, ಅಣ್ಣ By: ಸಂಗನಗೌಡ (Aug 28 2006 - 4:07pm)
- ಉ: ಅಪ್ಪ, ಅಣ್ಣ By: kannadakanda (Jun 4 2008 - 2:51pm)
- ನ್ ಸೇರಿಸಿಕೊಂಡರೆ ತಮಿಳಿರವನು :P By: ರಘುನಂದನ (Aug 29 2006 - 5:26pm)
- ಪೇಟ ಸುತ್ತಿದರೆ ಗೌಡ? By: ಸಂಗನಗೌಡ (Sep 7 2006 - 8:35am)
- ;P By: ಸಂಗನಗೌಡ (Aug 30 2006 - 5:24pm)
- :P By: ರಘುನಂದನ (Aug 30 2006 - 10:01pm)
- ಉ: :P By: kannadakanda (Jun 5 2008 - 10:22am)
- ಉ: :P By: kannadakanda (Jun 5 2008 - 10:22am)
- ಉ: :P By: ಸಂಗನಗೌಡ (Jun 5 2008 - 6:01pm)
- :P By: ರಘುನಂದನ (Aug 30 2006 - 10:01pm)
- ರಾಗಣ್ಣವರೇ, By: ಸಂಗನಗೌಡ (Aug 30 2006 - 9:12am)

RSS:
ಜನಪ್ರಿಯ ಸಿದ್ಧ ಮಾದರಿಗಳು ಹಾಗೂ ಜ್ಞಾನಶಿಸ್ತುಗಳು
ದ್ರಾವಿಡ ಮತ್ತು ಕನ್ನಡದ ಚರ್ಚೆಗೆ ಇಸ್ಮಾಯಲ್ ಅವರು ನಿಜವಾಗಿಯೂ ರಂಗು ಒದಗಿಸಿದ್ದಾರೆ. ಅವರು ಹೇಳುವ `ಪ್ರಸಿದ್ಧ ವಿದ್ವಾಂಸರ` ಅನೌಪಚಾರಿಕ ಮಾತುಕಥೆಯಲ್ಲಿ ಹೇಳಲಾದ `ಆರ್ಯ ಗುರುತಿಸಿಕೊಳ್ಳುವ` ಬಗೆಗೆ ಅದರ ಪರಿಣಾಮಗಳ ಬಗೆಗೂ ಇತಿಹಾಸಕಾರರು ಚರ್ಚಿಸಿದ್ದಾರೆ. (ರೋಮಿಲಾ ಥಾಪರ್ ಅವರ Ancient India Social History Some Interpretations, 1979ನಲ್ಲಿನ ಲೇಖನ Interpretations of Ancient Indian History). ಆಸಕ್ತಿದಾಯಕ ಅಂಶವೆಂದರೆ ಓರಿಯೆಂಟಾಲಿಸ್ಟ್ರು ತಮ್ಮದೇ ಒಂದು ಕವಲು ಇಲ್ಲಿಗೆ ಬಂದು `ಪರ ಚಿಂತನೆಯ` ಬಗೆಗೆ ಹೆಚ್ಚು ಆಸಕ್ತಿ ವಹಿಸಿದರೆ, ಯುರೋಪಿನ ಕವಲು `ಪದಾರ್ಥ ಚಿಂತನೆ`ಯ ಬಗೆಗೆ ಹೆಚ್ಚು ಆಸಕ್ತಿ ವಹಿಸಿತು ಎಂದು ಭಾವಿಸಿದುದು. ಸಹಜವಾಗಿಯೇ ಅಂದಿನ ಹೊರಹೊಮ್ಮುತ್ತಿದ್ದ ಮಧ್ಯಮ ವರ್ಗಕ್ಕೆ ಕಿವಿಗೆ ಅದು ಜೇನಾಗಿ ಬಿದ್ದಿತು ಹಾಗೂ ಇದು ಪ್ರಾರಂಭಿಕ ರಾಷ್ಟ್ರೀಯತೆ ಪರಿಕಲ್ಪನೆ ರೂಪಗೊಳ್ಳುವಿಕೆಗೂ ಸಂಬಂಧಿಸಿದೆ (ಈ ಬಗೆಗಿನ ಸ್ವೀಕೃತಿ ಆ ಮಧ್ಯಮ ವರ್ಗದ ಹಿನ್ನೆಲೆಯೂ ಸಹ ಕಾರಣವಾಯಿತು) . ಬಹುಶಃ ಇಲ್ಲಿಂದಲೇ ಸಿದ್ಧ ಮಾದರಿಯೊಂದು ಪ್ರಾರಂಭವಾಯಿತು. ಇಸ್ಮಾಯಲ್ರು ಸರಿಯಾಗಿಯೇ ಗುರುತಿಸಿದಂತೆ ಇಂತಹ ಹಲವು ಜನಪ್ರಿಯ ಸಿದ್ಧ ಮಾದರಿಗಳು ಚಾಲ್ತಿಯಲ್ಲಿವೆ. ಹೀಗಾಗಿ ಇಲ್ಲಿನ ಇನ್ನೊಂದು ಜನಾಂಗ (ಪ್ರೋಟೋ ಆಸ್ಟ್ರಾಲಾಯ್ಡ್- ಭಾಷಿಕವಾಗಿ ಮುಂಡ) ಸಾಂಸ್ಕೃತಿಕ ಕೊಡುಗೆ ಮರೆತೇ ಬಿಟ್ಟಿದ್ದೇವೆ. ಭಾರತದ ಬಹುತೇಕ ಪುರಾಣಗಳು ನಿಶಾದ ದೊರೆಯಿಂದ ವ್ಯವಸಾಯ ಸ್ಥಾಪಿತವಾಯಿತು ಎಂದು ಹೇಳುತ್ತವೆ. (ಲಿಂಗ ಪದದ ಉತ್ಪತ್ತಿಯು ಮುಂಡಾದ ಲಂಗುಲ-ಬೀಜ ಹಾಕುವ ಮೊದಲು ಕುಣಿ ಮಾಡಲು ಉಪಯೋಗಿಸುವ ಕಡ್ಡಿ ಎಂದು ಹೇಳಲಾಗಿದೆ). ಈಗಿರುವ ಹಲವು ಜನಪ್ರಿಯ ಸಿದ್ಧ ಮಾದರಿಗಳಿಂದ ಹೊರ ಬಂದಾಗಲೇ ಈ ಸಾಂಸ್ಕೃತಿಕ ಮಿಶ್ರಣ (ಹಾಗೂ ಜನಾಂಗೀಯ ಮಿಶ್ರಣ) ಹೇಗೆ ಆಯಿತೆಂದು ಅರಿಯುವ ಪ್ರಯತ್ನದೆಡೆ ಸಾಗಬಹುದು.
ಡಾ.ಡಿ.ಎನ್. ಶಂಕರಭಟ್ಟರನ್ನು ಹೇಗೆ ಸಂಸ್ಕೃತ ವಿರೋಧಿಯೆಂದು ಕರೆಯವುದು ತಪ್ಪು, ಇಂತಹ ತಪ್ಪುಗಳ ಹಲವಿವೆ. ಏಕೆಂದರೆ ಸಂಸ್ಕೃತ-ಕನ್ನಡ, ದ್ರಾವಿಡ-ಆರ್ಯ, ಕನ್ನಡ-ತಮಿಳು ಈ ಪರ-ವಿರೋಧ ನೆಲೆಗಳು ಇಂದಿನ ಗ್ರಹಿಕೆಯಿಂದಲೇ ಪ್ರೇರಿತವಾಗಿರುತ್ತವೆ.
ದ್ರಾವಿಡ ಕಲ್ಪನೆ ಭಾಷಿಕ, ಜನಾಂಗೀಯ ಹಾಗೂ ಪ್ರಾದೇಶಿಕವೂ ಸಹ. ಪ್ರಜಾವಾಣಿಯಲ್ಲಿ ಬಂದ `ಕನ್ನಡ ದ್ರಾವಿಡವಲ್ಲ, ಕನ್ನಡಿಗರು ದ್ರಾವಿಡರಲ್ಲ` ಲೇಖನ ಭಾಷೆಗಳ ವರ್ಗೀಕರಣವನ್ನು ತಿರಸ್ಕರಿಸುವುದಿಲ್ಲ.. ಹಾಗಾದರೆ ಸಮಸ್ಯೆ ಇರುವುದು ಎಲ್ಲಿ. ಅವರ ಪ್ರಕಾರ ತಮಿಳರು ತಮ್ಮದೇ ದ್ರಾವಿಡ ಭಾಷೆ ಎಂದು ಹೇಳಿಕೊಳ್ಳುವುದು. ಇದು ತಮಿಳರ ಹುಚ್ಚುತನವಾದೀತು. ಈ ಕಾರಣಕ್ಕೆ ಆ ಲೇಖನದ ಪ್ರಶ್ನೆಯನ್ನು ಒಂದು ಗಂಭೀರವಾದ ಜ್ಞಾನಶಿಸ್ತಿನ ಪ್ರಶ್ನೆಯಾಗಿ ಸಮಾಜ ವಿಜ್ಞಾನಿಗಳು (ಮುಖ್ಯವಾಗಿ ಭಾಷಾಶಾಸ್ತ್ರಜ್ಞರು) ಸ್ವೀಕರಿಸಲಾರರು ಎಂದು ನಾನು ಭಾವಿಸುತ್ತೇನೆ.
ನಮ್ಮ ಕನ್ನಡ ಸಂಸ್ಕೃತಿಯನ್ನು ವಿಶಿಷ್ಟವಾಗಿ ಕಟ್ಟಿಕೊಳ್ಳಲು `ಅನ್ಯದ ಬಗೆಗಿನ` ತೀವ್ರ ಅಸಮಾಧಾನ ಸಹಾಯಕವಾಗಲಾರದು.