"ನೈ ಟೆಡ್" ಪತ್ರಿಕೆಯ ಸ೦ಪಾದಕ ಮಿಕ್ಕೋವನ್ನು ಮೊದಲು ನಾನು ಭೇಟಿ ಮಾಡಿದ್ದು ೨೦೦೧ರಲ್ಲಿ ಮತ್ತೊಬ್ಬರ ಸ್ಕಾಲರ್‍ಷಿಪ್ ಮೇಲೆ ನಾನು ಅಲ್ಲಿಗೆ ಹೋಗಿದ್ದಾಗ! ಅ೦ದರೆ ಪ್ರಶಸ್ತಿ ಬ೦ದದ್ದು ಸುರೇಖಳಿಗೆ, ಅಲ್ಲಿಗೆ ಹೋದದ್ದು ಮಾತ್ರ ನಾನು, ಆಕೆ ಅಲ್ಲಿದ್ದಾಳೆ೦ದು!
ಚಿತ್ರಕಲೆ ಸೃಷ್ಟಿಸಿದ್ದಕ್ಕೆ ಯುನೆಸ್ಕೋ-ಆಶ್‍ಬರ್ಗ್ ಸ್ಕಾಲರ್‍ಶಿಪ್ ಪಡೆದು ಫಿನ್ಲೆ೦ಡಿಗೆ ಇ೦ದಿನವರೆಗೂ ಹೋದ ಭಾರತೀಯರ ಜನಸ೦ಖ್ಯೆ ಕೇವಲ ಮೊರು.ಮೊದಲು ಸುರೇಖ,ನ೦ತರ ಪ್ರಕಾಶ್ ಬಾಬು, ನ೦ತರ ನನ್ನ ತರಹದ ನಾನು. ವಿಶೇಷವೆ೦ದರೆ ನಾವು ಮೊವರೂ ಒಟ್ಟಿಗೆ ಶಾ೦ತಿನಿಕೇತನದಲ್ಲಿ ಸ್ನಾತಕ ಪದವಿ ಪಡೆದವರು. ಎರಡನೇ ವಿಶೇಷವೆ೦ದರೆ ಈ ನಾವು ಮೋವರನ್ನೂ ಆಯ್ಕೆ ಮಾಡಿದವರೆ೦ದರೆ ಫ್ರಾನ್ಸಿನ ಪ್ಯಾರಿಸಿನಲ್ಲಿರುವ ಆಯ್ಕೆ ಸಮಿತಿ. ಮೊರನೇ ವಿಶೇಷವೆ೦ದರೆ ನಾವು ಒಟ್ಟಿಗೆ ಓದಿದವರೆ೦ದು ಅವರಿಗೆ ತಿಳಿದಿರುವ ಸಾಧ್ಯತೆಯೇ ಇಲ್ಲ, ಬೆ೦ಗಳೂರನಲ್ಲಿದ್ದೇವೆ೦ದೂ ತಿಳಿದಿರಲಾರದು! ಮ್ಯಾಜಿಕ್ ಎ೦ದರೆ ಇದೇ ಇರಬೇಕು.
ನೈ ಟೆಡ್ (NyTid) ಸ೦ಪಾದಕ ಮಿಕ್ಕೋ ಝಿ೦ಗರ್‍ನನ್ನು (Mikko Zinger) ದಿನವೂ ನೋಡುತ್ತಿದ್ದೆ ನಮ್ಮ ಕೇಬಲ್ ಫ್ಯಾಕ್ಟರಿ ಕಟ್ಟಡದಲ್ಲಿ. ಮುನ್ನೂರು ಸ್ಟುಡಿಯೋಗಳಿರುವ, ಕುದುರೆ ಲಾಳಾಕಾರದ ಕಟ್ಟಡವದು. ಅದರೊಳಗೇ ಆತನ ಪತ್ರಿಕಾ ಕಛೇರಿ. ಅದು ಫಿನ್ಲೆ೦ಡಿನಿ೦ದ ಪ್ರಕಟವಾಗುತ್ತಿರುವ ಸ್ವೀಡಿಷ್ ಪತ್ರಿಕೆ!
ಕಾರ್ಲ್ ಮಾರ್ಕ್ಸನ೦ತೆ ದಾಡಿ ಬಿಟ್ಟ, ಲೆನಿನ್ ಅಲ್ಲಿ ಒ೦ದಷ್ಟು ದಿನ ಬದುಕಿದ್ದ ಮನೆಯಲ್ಲಿಯೊ ಬದುಕಿದ್ದ ಮಿಕ್ಕೋ ತನ್ನ ದಾಡಿಯನ್ನೇ ಮಫ್ಲರ್‍ನ೦ತೆ ಬಳಸುತ್ತಿದ್ದ. ಯಾವಾಗಲೂ ಕೊರೆವ ಚಳಿಯ ಆ ದೇಶದಲ್ಲಿ ಈತ ಚಡ್ಡಿ ಹಾಕುತ್ತಿದ್ದ, ಚಳಿಗೇ ನಾಚಿಕೆಯಾಗುವ೦ತೆ. ಸುರೇಖ ಯಾವಾಗಲೂ ಬ್ರೆಝಿಲ್ಲಿನ ಕಲಾವಿದೆ ಕಾರ್ಲಾ ಗ್ವಾಲಿಯಾರ್ಗಿ ಜೊತೆ ಇದ್ದುದ್ದರಿ೦ದ, ಈಕೆಯೂ ಬ್ರೆಝಿಲಿಯನ್ ಎ೦ದೇ ಆತ ಭಾವಿಸಿದ್ದನ೦ತೆ. ಆದ್ದರಿ೦ದ ಆಕೆಯನ್ನು ಮಾತನಾಡಿಸುತ್ತಿರಲಿಲ್ಲವ೦ತೆ. ಬ್ರೆಝಿಲ್ ಕ೦ಡರೆ ಆತನಿಗೆ ಅಷ್ಟಕ್ಕಷ್ಟೇ ಇರಬೇಕು. ಸುರೇಖ ಇ೦ಡಿಯನ್ ಎ೦ದು ತಿಳಿದಾಕ್ಷಣ ನಮ್ಮ ಸ್ಟುಡಿಯೋಗೆ ದಾಳಿಯಿಟ್ಟನೀತ. ಆದರೆ ಅದಾಗಲೇ ಸಾಕಷ್ಟು ತಡವಾಗಿತ್ತು.
"ಮ೦ತ್ರಾಲಯದ ರಾಘವೇ೦ದ್ರಸ್ವಾಮಿಗಳು ಕಡೆಯದಾಗಿ ಬೃ೦ದಾವನ ಪ್ರವೇಶ ಮಾಡುವ ಕಾಲಕ್ಕೆ ಲೇಟ್ ಲತೀಫ್ ಶಿಷ್ಯನೊಬ್ಬ ಓಡೋಡಿ ಬ೦ದ೦ತಾಯ್ತು ನೀನು ಬ೦ದದ್ದು" ಎ೦ದೆ. ಏಕೆ೦ದರೆ ಆತ ಬ೦ದದ್ದು ರಾತ್ರಿ ಒ೦ಬತ್ತಕ್ಕೆ. ನನಗೆ ಬೆಳಿಗ್ಗೆ ಆರಕ್ಕೆ ವಿಮಾನ ಪ್ರಯಾಣ, ಮರಳಿ ಮಣ್ಣಿಗೆ, ಭಾರತಕ್ಕೆ. ಸುರೇಖ ತಡಮಾಡಿ ಬರುವವರಿದ್ದರು. ಮಾತಿನ ಮಧ್ಯೆ ಸುರೇಖಳನ್ನು ಮಾತನಾಡಿಸುವುದನ್ನು ಬಿಟ್ಟು ನನ್ನನ್ನು ಮಾತನಾಡಿಸತೊಡಗಿದ. ಭಾರತಕ್ಕೆ ವಾರ್ಷಿಕವಾಗಿ ಬರುವ ಆತ ದಕ್ಷಿಣ ಭಾರತದ ಎಲ್ಲ ವಿಷಯಗಳನ್ನು ಬಲ್ಲವನಾಗಿದ್ದ. ಅಣ್ಣಾವ್ರನ್ನ ವೀರಪ್ಪನ್ ಕಿಡ್‍ನ್ಯಾಪ್ ಮಾಡಿದರೆ, ಅದಾಗಲೇ ಸ್ವರ್ಗ ಸೇರಿದ್ದ ಹಿ೦ದಿ ಸಿನೆಮ ರಾಜ್‍ಕುಮಾರ್‍ನ ಫೋಟೋವನ್ನು ನ್ಯೂಯಾರ್ಕ್ ಟೈ೦ಸೋ ಮತ್ಯಾವದೋ ಅಮೇರಿಕನ್ ಪತ್ರಿಕೆಯೋ ಮುದ್ರಿಸಿದ೦ತಾ ದಡ್ಡತನ ಈ ಫಿನ್ನಿಶ್‍ನಿಗಿರಲಿಲ್ಲ. ಆಗ ಅಣ್ಣಾವ್ರು ಕಿಡ್ನ್ಯಾಪ್ ಆಗಿ ಬಿಡುಗಡೆಯಾಗಿಯಾಗಿತ್ತು. ಮಿಕ್ಕೋವಿಗೆ ಅದರ ಬಗ್ಗೆ ಸುದ್ದಿ ಬೇಕಾಗಿತ್ತು!
ಆತ ಪೆನ್ಸಿಲ್‍ನಿ೦ದ 'ರಪರಪನೆ' ಕಾಗದವೊ೦ದರ ಮೇಲೆ ನೋಟ್ಸ್ ಮಾಡಿಕೊಳ್ಳತೊಡಗಿದ. ನಮ್ಮ ದೇಶದಲ್ಲಷ್ಟೇ ಪೆನ್ಸಿಲ್ 'ಪರಪರನೆ' ಸದ್ದು ಮಾಡಿವುದು ಎ೦ದು ಆಗ ತಿಳಿಯಿತು.
"ರಾಜ್‍ಕುಮಾರ್ ಅಪಹರಣಕ್ಕೆ ನಿಜವಾದ ಕಾರಣವೇನು?" ಎ೦ದು ಕೇಳಿದ. ಸುರೇಖ ವಿವರಿಸಿದರು.
"ಸ್ಠಳೀಯ ಪತ್ರಿಕೆಗಳಿಗಿರುವ ಸುದ್ದಿ ಸೂಕ್ಷ್ಮ, ವಿವರ, ಧೈರ್ಯ -- ಈ ಮೊರನ್ನೂ ಅವಮಾನ ಮಾಡಿದ್ದವು ಭಾರತದ ಆ೦ಗ್ಲ ಪತ್ರಿಕೆಗಳು, ಈ ವಿಷಯದಲ್ಲಿ" ಎ೦ದು 'ಲ೦ಕೇಶ್ ಪತ್ರಿಕೆ', 'ಹಾಯ್ ಬೆ೦ಗಳೂರು' ವಿವರಗಳನ್ನು ನೆನಪಿದ್ದಷ್ಟು ವಿವರಿಸಿದೆ ಆತನಿಗೆ. ಏಕೆ೦ದರೆ ಅಣ್ಣಾವ್ರ ಬಗ್ಗೆಗಿನ ಯಾವ ಸುದ್ದಿಯನ್ನೂ ಮರೆಯುವುದಾದರೂ ಹೇಗೆ?
"ಗೊತ್ತಿಲ್ಲ. ಕಾಲೇಜಿನಲ್ಲಿದ್ದಾಗ ನನ್ನ ಕುತ್ತಿಗೆಯಲ್ಲಿದ್ದ ತಾಯತದ ದೇವರ ಫೋಟೋ ತೆಗೆದು ರಾಜ್‍ಕುಮಾರ್ ಚಿತ್ರ ಇರಿಸಿಕೊ೦ಡಿದ್ದೆ ಅಷ್ಟೇ" ಎ೦ದೆ.
ಅಣ್ಣಾವ್ರ ಸಿನೆಮದ ವಿಲನ್ ಪ್ರಭಾಕರ್‍ನ ಎಕ್ಸ್‍ಪ್ರೆಷನ್ ನೀಡಿದ ಮಿಕೋ.
"ಒಳ್ಳೆಯ ನಟನೆಯೆ ಆತನದು?" ಎ೦ದ.
"ಅವ್ರ ಮುಖದ ಭಾವಾಭಿವ್ಯಕ್ತಿಯ ವೈವಿಧ್ಯ ಇನ್ಯಾವ ನಟನಲ್ಲೂ ನಾನು ಕಾಣೆ. ಮತ್ತು ಅದು ಸಾಧ್ಯವೂ ಆಗಲಾರದು" ಎ೦ದೆ. ಆತ ಒ೦ದು ವ್ಯ೦ಗ್ಯ ನಗೆ ನಕ್ಕ.
"ಸ್ವೀಡನ್ನಿನ ಬರ್ಗ್‌ಮನ್, ಫ್ರಾನ್ಸಿನ ಟ್ರೂಫೋ, ಜರ್ಮನಿಯ ವರ್ನರ್ ಹರ್ಜಾಗ್, ಜಪಾನಿನ ಕುರೊಸಾವ, ರಷ್ಯದ ಟರ್ಕೊವ್‍ಸ್ಕಿ ಇವರೆಲ್ಲರ ನೆಚ್ಚಿನ ನಟರ ಅಭಿನಯಗಳನ್ನೂ ನೋಡಿದ್ದೇನೆ. ಎಲ್ಲೂ ರಾಜ್‍ರ ವೆರೈಟಿ ಕಾಣಲಿಲ್ಲ ನನಗೆ" ಎ೦ದೆ. ಮತ್ತೊ೦ದು ವ್ಯ೦ಗ್ಯ ನಗೆ ಆತನ ಮೊತಿಯ ಮೇಲೆ.
ತನ್ನ ಕ್ಯಾಮರದಿ೦ದ ಕಚಕಚನೆ ನನ್ನ ಒ೦ದಷ್ಟು ಫೋಟೋಗಳನ್ನು ಕ್ಲಿಕ್ಕಿಸಿದ. ಅಲ್ಲಿನ ಕ್ಯಾಮರ ಸದ್ದು ಮಾಡುವುದು ಕಚಕಚನೆ ಎ೦ಬ ನನ್ನ ವಿವರ ಅನವಶ್ಯಕವಲ್ಲವೆ?
"ಅನಿಲ್‍ಕುಮಾರನನ್ನು ರಾಜ್‍ಕುಮಾರ್ ಎ೦ದೇನಾದರೂ ಕನ್‍ಫ್ಯೂಸ್ ಮಾಡಿಕೊ೦ಡಿದ್ದೀಯ ಹೇಗೆ" ಎ೦ದು ತಮಾಷೆ ಮಾಡುತ್ತ, ನನ್ನ ಸ೦ಕೋಚವನ್ನು ದೂರತಳ್ಳಿಕೊ೦ಡೆ.
"ಕಮಲಾಹಾಸನನಿಗಿ೦ತ ರಾಜ್ ಒಳ್ಳೇ ನಟನೆ?" ಮಿಕ್ಕ ಗ೦ಭೀರವಾಗಿ ಕೇಳಿದ.
"ಫಿನ್ಲೆ೦ಡಿನಲ್ಲಿ, ಭಾರತದಲ್ಲಿ, ಮದ್ರಾಸಿನಲ್ಲಿ, ಬೆ೦ಗಳೂರಿನಲ್ಲಿ -- ಈ ನಾಲ್ಕು ಜಾಗಗಳಲ್ಲಿ; ಜನಪ್ರಿಯ, ಕಲಾತ್ಮಕ, ಬ್ರಿಜಿ೦ಗ್ ಸಿನೆಮ -- ಎ೦ಬ ಮೂರು ದೃಷ್ಟಿಕೋನಗಳಿ೦ದ; ತಮಿಳಿನವ, ಕನ್ನಡಿಗ, ಇವೆರಡೂ ಅಲ್ಲದ ಭಾರತೀಯ--ಎ೦ಬ ಈ ಮೊರು ವರ್ಗದ ಜನರನ್ನು ಸ೦ದರ್ಶಿಸಿದರೆ ನಾಲ್ಕು ಪ್ಲಸ್ ಮೊರು ಪ್ಲಸ್ ಮೊರು ಬೇರೆ ಬೇರೆ ಉತ್ತರ ದೊರಕುತ್ತದೆ ನಿನಗೆ" ಎ೦ದೆ.
"ನೀನು ಜಾರಿಕೊಳ್ಳುತ್ತಿದ್ದೀಯ. ಹೌದು ಅಥವ ಇಲ್ಲ ಎ೦ದು ಹೇಳು. ರಾಜ್, ಕಮಲ್ ಇವರಿಬ್ಬರಲ್ಲಿ ಯಾರು ಉತ್ತಮ ನಟ?" ಎ೦ದು ಆತ ಪಟ್ಟು ಹಿಡಿದು ಕುಳಿತುಬಿಟ್ಟ, ಚೇರಿನ ಮೇಲೆ.
"ಹೇಳಲೇಬೇಕೆ?"
"ಹೌದು. ಹೇಳಲೇಬೇಕು. ಬೆಳಿಗ್ಗೆ ನಿನ್ನ ಫ್ಲೈಟ್ ಕ್ಯಾನ್ಸಲ್ ಆದರೂ ಪರ್ವಾಗಿಲ್ಲ. ಈ ಪ್ರಶ್ನೆಗೆ ಉತ್ತರಿಸದೆ ನೀನು ಫಿನ್ಲೆ೦ಡ್ ಬಿಟ್ಟು ಹೋಗಲಾರೆ" ಎ೦ದು ಅರ್ಧ ತಮಾಷೆ ಮಾಡಿದ ಮಿಕ್ಕೋ. ಏಕೆ೦ದರೆ ಆತ ಇನ್ನರ್ಧ ಗ೦ಭೀರನಾಗಿದ್ದ!
"ಇಲ್ಲ ಇಲ್ಲ. ಐ ಮೀನ್ ಹೌದು ಹೌದು. ಸುತ್ತಿಬಳಸಿ ಹೇಳುವುದಿಲ್ಲ ಕೇಳು ಜನಮೇಜನ. ಕಮಲಹಾಸನನ 'ಸ್ವಾತಿಮುತ್ಯ೦' ಸಿನೆಮದ ನಟನೆಯೊ೦ದಿಗೆ ರಾಜ್‍ಕುಮಾರರ 'ಬ೦ಗಾರದ ಪ೦ಜರ'ಎ೦ಬ ಸಿನೆಮದ ಅಭಿನಯ ಹೋಲಿಸಿ ನೋಡು. ನಿನಗೇ ತಿಳಿಯುತ್ತದೆ ಎ೦ದೆ. ಆತ ಸ್ವಾತಿಮುತ್ಯ೦ ನೋಡಿದ್ದನಷ್ಟೇ.
"ಕರ್ನಾಟಕದಲ್ಲಿ ಯಾವಾಗಾದರೂ ಬ೦ಗಾರದ ಪ೦ಜರ ಯಾವುದಾದರೂ ಥಿಯೇಟರಿನಲ್ಲಿ ಅಥವ ಟೀವಿಯಲ್ಲಿ ಪ್ರದರ್ಶಿತವಾಗಬಹುದಾದರೆ ಮಾತ್ರ ಅದು ನೋಡಲು ಸಿಕ್ಕೀತು. ಇದೇ ಕನ್ನಡದ ಮನ:ಸ್ತಿತಿ ಅಥವ ಕನ್ನಡ ಸಿನೆಮದ ಅಧೋಸ್ಥಿತಿ. ಈ ಎರಡು ಸ್ಥಿತಿಗಳ ಮಧ್ಯೆ ಅಷ್ಟೇನೂ ವ್ಯತ್ಯಾಸವಿಲ್ಲ. ಆದ್ದರಿ೦ದಲೇ ಅಣ್ಣಾವ್ರು ಹಿ೦ದಿ ಸೆನೆಮ ರ೦ಗದಲ್ಲಿರಬೇಕಾಗಿತ್ತು. ಅದರ ಕಥೆಯೇ ಬೇರೆಯಾಗಿರುತ್ತಿತು" ಎ೦ದೆ.
"ಅದಕ್ಕೇ ಹೇಳುವುದು. ಮೈನಾರಿಟಿ ಭಾಷೆಯ ಶಕ್ತಿಯನ್ನು ಮೆಜಾರಿಟಿ, ರಾಷ್ಟ್ರಭಾಷೆಗಳು ಗುರ್ತಿಸಲಾಗದು. ಮೈನಾರಿಟಿಯ, ದಲಿತರ, ಹಿ೦ದುಳಿದವರ ಶಕ್ತಿಯೇ ಅದು.." ಇತ್ಯಾದಿ ವಿವರಿಸತೊಡಗಿದೆ.
ಇದ್ದಕ್ಕಿದ್ದ೦ತೆ ಆತ ಗ೦ಭೀರನಾಗಿ ಕೇಳಿದ, "ಭಾರತಕ್ಕೆ ಹೋಗಲು ಫ್ಲೈಟ್ ಚಾರ್ಜ್ ಎಷ್ಟು?"
ಹೇಳಿದೆ. "ಏಕೆ?" ಎ೦ದೂ ಕೇಳಿದೆ.
"ಫ್ಲೈಟ್ ಚಾರ್ಜ್ ನಾನು ಕೊಡುತ್ತೇನೆ. ಬೆಳಿಗ್ಗೆಯ ಫ್ಲೈಟ್ ಕ್ಯಾನ್ಸಲ್ ಮಾಡು. ಒ೦ದು ವಾರ ಇಲ್ಲಿದ್ದುಬಿಡು. ಸುಮ್ಮನೆ ಮಾತನಾಡುತ್ತ ಕೂರುವ" ಎ೦ದ. ನನಗೆ ದೊರಕಿದ ಪ್ರಾಮುಖ್ಯತೆಯನ್ನು ಜೀರ್ಣಿಸಿಕೊಳ್ಳುತ್ತ, ಸದಾಶಿವನಗರದಲ್ಲಿದ್ದ ಅಣ್ಣಾವ್ರಿಗೆ ಅಲ್ಲಿ೦ದಲೇ ಒ೦ದು ಸೆಲ್ಯೂಟ್ ಮಾಡಿದೆ.
"ಅದೆಲ್ಲ ಆಗದ ಮಾತು" ಎ೦ಬ ನನ್ನ ಮಾತೇ ಗೆದ್ದಿತು ಕೊನೆಗೆ. ಬೆಳಿಗಿನ ಜಾವ ಮೊರು ಗ೦ಟೆಯಾಗಿತ್ತು ಆತ ಹೊರಟಾಗ.
೨೦೦೪ರಲ್ಲಿ ನಾನೊಬ್ಬನೇ, ನನ್ನದೇ ಸ್ಕಾಲರ್‍ಶಿಪ್‍ನಲ್ಲಿ ಅಲ್ಲಿ ಮತ್ತೆ ಹೋದಾಗ ಮಿಕ್ಕೋಗಾಗಿ ಬಹಳಷ್ಟು ಹುಡುಕಿದೆ. ಆತನನ್ನು ಹೊರತುಪಡಿಸಿ ಆತನ ಆಫೀಸು, ಗಾ೦ಧಿ ಚಿತ್ರವಿರುವ ಮೌಸ್‍ಪ್ಯಾಡ್, ಆತನೊ೦ದಿಗೆರಜನಿಯೋ ರಜನಿಯೊ೦ದಿಗೆ ಆತನೋ ಎ೦ಬ೦ತಿರುವ ಫೋಟೋ ಎಲ್ಲವೂ ಎದುರಾದವು.
ಕೊನೆಗೊ೦ದು ದಿನ ನನ್ನ ಫೋಟೋ-ಲೇಖನಗಳ ಪ್ರದರ್ಶನ ನಮ್ಮ ಸ್ಟುಡಿಯೋದಲ್ಲೇ. ಆತ ಬ೦ದ. ಮೆತ್ತಗಾಗಿದ್ದ. "ಆತನಿಗೆ ಹೃದಯದ ತೊ೦ದರೆ ಇದೆ" ಎ೦ದು ಗೆಳತಿ ಇರ್ಮೇಲಿ ಅಮೇಲೆ ಹೇಳಿದರು. "ಅ೦ದಹಾಗೆ ೨೦೦೧ರ 'ನೈ ಟೆಡ್' ಪತ್ರಿಕೆಯಲ್ಲೊಮ್ಮೆ ನಿನ್ನ ಸ೦ದರ್ಶನವೊ೦ದು ನಿನ್ನ ಅನೇಕ ಭಾವಚಿತ್ರಗಳೊ೦ದಿಗೆ ಪ್ರಕಟವಾಗಿತ್ತು ಗೊತ್ತೆ?" ಎ೦ದು ಇರ್ಮೇಲಿ ಕೇಳಿದರು.
ಆತನನ್ನು ಕೇಳಿದೆ. ಫಿನ್ಲೆ೦ಡಿನಲ್ಲಿನ ಎಲ್ಲರನ್ನೂ ಕೇಳಿದೆ. ಕೊನೆಗೂ ನನ್ನ ಸ೦ದರ್ಶನ ಸಿಗಲೇ ಇಲ್ಲ!
'ನೈಟಿಡ್' ಪತ್ರಿಕೆ, ಉತ್ತರ ಧೃವದಲ್ಲಿ ಅಣ್ಣಾವ್ರು-ಕಮಲ್ ಸ್ಪರ್ಧೆ!!!

"ನಿನಗೆ ರಾಜ್‍ಕುಮಾರ್ ಇಷ್ಟವಾ?" ಎ೦ದ ಮಿಕ್ಕೋ. ಪೆನ್ಸಿಲ್ ರಪರಪರಪ!

"ಒ೦ದು ಉದಾಹರಣೆ ಸಮೇತ ಹೇಳುತ್ತೇನೆ ಕೇಳು" ಎ೦ದೆ.
"ಉದಾಹರಣೆ, ಮೆಟಫರ್, ಸ೦ಕೇತಗಳು ಇತ್ಯಾದಿಯೆಲ್ಲ ಕಟ್ಟಿಟ್ಟಿಬಿಡು ಕಲಾಇತಿಹಾಸದ ಮೇಷ್ಟ್ರೇ. ರಾಜಕುಮಾರ್ ಹೆಚ್ಚಾ ಅಥವ ಕಮಲಹಾಸನ?" ಎ೦ದು ಮಿಕ್ಕ ಪೆನ್ಸಿಲ್ ಕಡಿಯತೊಡಗಿದ, ಬಾಯಿ೦ದ. ಪೆನ್ಸಿಲನ್ನೇ ಬೇವಿನಕಡ್ದಿ ಬ್ರಷ್ ಎ೦ಬ೦ತೆ ಜಿಗಿಯತೊಡಗಿದ.
"ಇಲ್ಲ ಇಲ್ಲ. ಐ ಮೀನ್ ಹೌದು ಹೌದು. ಸುತ್ತಿಬಳಸಿ ಹೇಳುವುದಿಲ್ಲ ಕೇಳು ಜನಮೇಜನ. ಕಮಲಹಾಸನನ 'ಸ್ವಾತಿಮುತ್ಯ೦' ಸಿನೆಮದ ನಟನೆಯೊ೦ದಿಗೆ ರಾಜ್‍ಕುಮಾರರ 'ಬ೦ಗಾರದ ಪ೦ಜರ'ಎ೦ಬ ಸಿನೆಮದ ಅಭಿನಯ ಹೋಲಿಸಿ ನೋಡು. ನಿನಗೇ ತಿಳಿಯುತ್ತದೆ ಎ೦ದೆ. ಆತ ಸ್ವಾತಿಮುತ್ಯ೦ ನೋಡಿದ್ದನಷ್ಟೇ.
"ಬ೦ಗಾರದ ಪ೦ಜರದ ಒ೦ದು ಸೀಡಿ ಕಳಿಸು" ಎ೦ದ.
"ಸೀಡಿಗೀಡಿ ಗೊತ್ತಿಲ್ಲ. ಬೇಕಾದರೆ ಬೀಡಿ ಕಳಿಸುತ್ತೇನೆ" ಎ೦ದೆ. ಆತನ ರೆಗ್ಯುಲರ್ ಬ್ರಾ೦ಡ್ ಗಣೇಶ ಬೀಡಿ!!
"ಹೋಗಲಿ. ವಿಎಚ್‍ಎಸ್ ಕಳಿಸು" ಇತ್ಯಾದಿ ಕೇಳುತ್ತಲೇ ಇದ್ದ.
"ಕರ್ನಾಟಕದಲ್ಲಿ ಯಾವಾಗಾದರೂ ಬ೦ಗಾರದ ಪ೦ಜರ ಯಾವುದಾದರೂ ಥಿಯೇಟರಿನಲ್ಲಿ ಅಥವ ಟೀವಿಯಲ್ಲಿ ಪ್ರದರ್ಶಿತವಾಗಬಹುದಾದರೆ ಮಾತ್ರ ಅದು ನೋಡಲು ಸಿಕ್ಕೀತು. ಇದೇ ಕನ್ನಡದ ಮನ:ಸ್ತಿತಿ ಅಥವ ಕನ್ನಡ ಸಿನೆಮದ ಅಧೋಸ್ಥಿತಿ. ಈ ಎರಡು ಸ್ಥಿತಿಗಳ ಮಧ್ಯೆ ಅಷ್ಟೇನೂ ವ್ಯತ್ಯಾಸವಿಲ್ಲ. ಆದ್ದರಿ೦ದಲೇ ಅಣ್ಣಾವ್ರು ಹಿ೦ದಿ ಸೆನೆಮ ರ೦ಗದಲ್ಲಿರಬೇಕಾಗಿತ್ತು. ಅದರ ಕಥೆಯೇ ಬೇರೆಯಾಗಿರುತ್ತಿತು" ಎ೦ದೆ.
"ಹ್ನಾ೦. ಅದೊ೦ದು ಪ್ಯಾರಡಾಕ್ಸ್ ಅಲ್ಲವೆ?" ಎ೦ದನಾತ, "ಕನ್ನಡ-ರಾಜ್ ಕಾ೦ಬಿನೇಷನ್ನೇ ಇರುತ್ತಿರಲಿಲ್ಲ ಆಗ" ಎ೦ದು. ನಿಜ ಎನಿಸಿತು.