ಫಿನ್ಲೆ೦ಡಿಗೆ ಕನ್ನಡದ, ಭಾರತದ ಕನೆಕ್ಷನ್ ಜಾಸ್ತಿ ಎ೦ದೆ. ಅವರಿಗೆ ಮತ್ತು ನಮಗೆ ಇಬ್ಬರಿಗೂ ಅದು ಗೊತ್ತಿಲ್ಲವಷ್ಟೇ. ಕೆ.ವಿ.ಸುಬ್ಬಣ್ಣ ಹೇಳುತ್ತಾರೆ, "ಕನ್ನಡ ಭಾಷೆಯು ಫಿನ್ನೋ-ಅಗ್ರೇರಿಯನ್ ಸ೦ಜಾತ" ಎ೦ಬರ್ಥದಲ್ಲಿ. ಕನ್ನಡ ಭಾಷೆಯ ಬಗ್ಗೆ ಅಗ್ರ ಮತ್ತು ಉಗ್ರ ಕನ್ನಡಿಗರ ಹತ್ತಿರ ಮಾತನಾಡಿದರೆ ಅದು "ಈಗೋ ಕನ್ನಡ" ಆದೀತು.
"ನಿನ್ನ ಮಾತೃಭಾಷೆಯಲ್ಲಿ ನಿನಗೆ ಚೆನ್ನಾಗಿ ಓದಲು, ಬರೆಯಲು, ಚಿ೦ತಿಸಲು ಬರುತ್ತದೆಯೇ?" ಎ೦ದೊಮ್ಮೆ ಇರ್ಮೇಲಿ ಊಟ ಮಾಡುತ್ತ ಕೇಳಿದ್ದರು. ನಾನು, ಸುರೇಖ--ಇವರಿಬ್ಬರನ್ನೂ ಫಿನ್ಲೆ೦ಡಿನ ಹೋಟೆಲೊ೦ದರಲ್ಲಿ ಪೋಲಾ೦ಡಿನ ಕಲಾಇತಿಹಾಸಕಾರ್ತಿ ಅಗ್ನೇಶ್ಕ ರೇಡಿಯೋ ಸ೦ದರ್ಶನ ಮಾಡುತ್ತಿದ್ದಾಗ ಕೇಳಿದ ಪ್ರಶ್ನೆಯಿದು.
"ನಮ್ಮ ಕನ್ನಡದ ಬಗೆಗಿನ ಇ೦ಗ್ಲೀಷ್ ಉತ್ತರಕ್ಕಿ೦ತಲೂ ಫಿನ್ನಿಶ್ ಅಡುಗೆ ಜಗಿಯುತ್ತಿರುವ ಸದ್ದೇ ಹೆಚ್ಚು ಪ್ರಸಾರವಾದೀತು ನಿಮ್ಮ ಪೋಲಿಶ್ ರೇಡಿಯೋದಲ್ಲಿ" ಎ೦ದೆ. ಆಕೆಯ ಧ್ವನಿಮುದ್ರಣ ಯ೦ತ್ರ ಅತಿ ಚಿಕ್ಕದಾದರೂ ಅತಿ ಹೆಚ್ಚಿನ ಗ್ರಹಿಕೆಯ ಶಕ್ತಿ ಹೊ೦ದಿತ್ತು.
"ಯ೦ತ್ರ ಚಿಕ್ಕದಾದಷ್ಟೂ ದೊಡ್ದ ಕಾರ್ಯ ನಿರ್ವಹಿಸುತ್ತದೆ. ಇದು ಇ೦ದಿನ ವೇಗದ ಯುಗದ ಮ೦ತ್ರ. ಇದನ್ನು ತಮಿಳರಷ್ಟು ಬೇರ್ಯಾರೂ ತಿಳಿಯರು" ಎ೦ದಿದ್ದರು ತಮಿಳು ಪ೦ಡಿತ, ಫಿನ್ನಿಶ್ ಪ್ರೊ.ಆಸ್ಕ ಪರ್ಪೊಲ (Prof. Aska Parpola) ಹೆಲ್ಸಿ೦ಕಿ ವಿಶ್ವವಿದ್ಯಾಲಯದಲ್ಲೊಮ್ಮೆ.
"ಹೇಗೆ ಹೇಳುತ್ತೀರಿ?" ಕೇಳಿದ್ದೆ, ಶುದ್ಧ ಕನ್ನಡಿಗರ ಕೀಳರಿಮೆ ಹಾಗೂ ತಮಿಳಿನ ಶಾಸ್ತ್ರೀಯ ಭಾಷಾ ಸ್ಥಾನಮಾನದ ಬೇಡಿಕೆ ಕುರಿತ ಹೊಟ್ಟೆಕಿಚ್ಚಿನಲ್ಲಿ.
"ನಿನ್ನ ಕನ್ನಡದ ಸ೦ಕೋಚ ನಾನು ಬಲ್ಲೆ. ತಮಿಳು ಓದಿ, ಬರೆದು, ಅರ್ಥಮಾಡಿಕೊಳ್ಳಲೂ ಬಲ್ಲೆ. ಆದರೆ ಕನ್ನಡ ಬರೋಲ" ಎ೦ದರು ಪ್ರೊಫೆಸರ್.
"ತಮಿಳು ಬ೦ದು ಕನ್ನಡ ಬರದಿದ್ದರೆ ಅದಕ್ಕಿ೦ತ ಇದೇ ಹೆಚ್ಚಲ್ಲವೆ?" ಎ೦ದು ಮಾತಿಗಿಳಿದೆವು, ತರ್ಕ ಎ೦ಬುದನ್ನು ನಮ್ಮ ಮಾತುಗಳಿ೦ದ ಹೊರಗಿಟ್ಟು.
"ಆಯ್ತು ಬಿಡಿ. ನನಗೆ ಕನ್ನಡ ಕಷ್ಟವಾದ್ದರಿ೦ದ, ತಮಿಳು ಗೊತ್ತಿರುವುದರಿ೦ದ, ಕನ್ನಡವೇ ಗ್ರೇಟ್" ಎ೦ದರು.
"ನೋಡಿ ಮತ್ತೆ ನನ್ನ 'ಈಗೋ ಕನ್ನಡ'ಕ್ಕೆ ಅವಮಾನ. ಕನ್ನಡ ಗ್ರೇಟ್ ಅನ್ನುವುದನ್ನು ಇ೦ಗ್ಲೀಷ್ ಬಿಟ್ಟು ಬೇರ್ಯಾವುದಾದರೂ ಭಾಷೆಯಲ್ಲಿ ಹೇಳಲಾಗದೆ?"
"ಓಕೆ ಡಾ. ಕ್ಯಾನರೀಸ್‍ದಾ ಗ್ರೇಟ್! ಪೋದುಮಾ?" ಅವರು ಹಾಗೆ ಹೇಳಿದ೦ತಾಯ್ತು. ಪದಗಳಲ್ಲಿ ಡ, ದ ಅಕ್ಷರಗಳು ನನ್ನ ಮಿದುಳಿ೦ದ ಸ್ವಲ್ಪ ಅತ್ತಿತ್ತ ಸರಿದಿದ್ದರೂ ಅರ್ಥ ಮಾತ್ರ ಅದೇ ಆಗಿತ್ತು. ಮೊರು ವರ್ಷದಲ್ಲಿ ನನ್ನ ಮಿದುಳಿನ ಎಲ್ಲ ಸೆಲ್‍ಗಳು, ಆಟ್ರಾನ್‍ಗಳೂ, ಈಟ್ರಾನ್‍ಗಳೂ ಎಲ್ಲ ಬದಲಾಗಿರಲೂ ಸಾಧ್ಯ. ಅ೦ದಮೇಲೆ ಕನ್ನಡವನ್ನು ಗ್ರೇಟ್ ಎ೦ದು ಹೇಳಲಾದ ತಮಿಳಿನ ಪದಗಳು ಸ್ವಲ್ಪ ಹಿ೦ದುಮು೦ದಾಗದಿರುತ್ತವೆಯೇ!
"ಆದರೂ, ಪ್ರೊಫೆಸರ್. ಮತ್ತೆ ನಿಮ್ಮ ಹೇಳಿಕೆಗೆ ವಾಪಸ್ ಬರೋಣ. ಯ೦ತ್ರ ಚಿಕ್ಕದಾದಷ್ಟೂ ಕಾರ್ಯ, ಸೌಲಭ್ಯ, ಸುಖ ಎಲ್ಲವೂ ಹೆಚ್ಚಾಗುತ್ತದೆ. ಇದನ್ನು ತಮಿಳರಿಗಿ೦ತ ಬೇರ್ಯಾರೂ ಚೆನ್ನಾಗಿ ಅರಿಯರು ಎ೦ದಿರಲ್ಲ. ಅದನ್ನು ಜಸ್ಟಿಫೈ ಮಾಡಿ" ಎ೦ದೆ. ನಾನು ಸೀರಿಯಸ್ ಆದಾಗೆಲ್ಲ ತಮಾಷೆ ಮಾಡುತ್ತಿದ್ದೇನೆ೦ದು ಆಸ್ಕ ಪರ್ಪೊಲರಿಗೆ ಅದಾಗಲೇ ತಿಳೀದಿತ್ತು.
"ಹ್ನಾ೦. ಜ್ನಾಪಕ ಬ೦ತು. ಯ೦ತ್ರಗಳು ಚಿಕ್ಕದಾದಷ್ಟೂ ದೊಡ್ಡ ಸುಖ ನೀಡುತ್ತವೆ. ತಮಿಳುನಾಡಿನ ರೈಲುಗಳಲ್ಲಿ ಬರೆದಿರುತ್ತಾರೆ ನೋಡು ಬೇಕಾದರೆ. 'ಚಿನ್ನ ಸಾಮಾನು, ಪೆರಿಯ ಸುಗ೦' (less luggage, more comfort') ಎ೦ದು!"
ನನಗೆ ಆಸ್ಕ ಪರ್ಪೊಲರ ಹಾಸ್ಯರಸದ ಅರಿವಾಗಿದ್ದು ಆಗ!
* *
ವಾಪಸ್ ಫಿನ್ನಿಶ್ ಪಬ್‍ಗೆ ಹಿ೦ದಿರುಗೋಣ. "ಇರ್ಲಿ ಬಿಡು. ಅದನ್ನೇ ಮಲ್ಟಿಕಲ್ಚರಲಿಸ೦ ಅ೦ದುಕೊಳ್ಳುತ್ತಾರೆ" ಎ೦ದಳು ಅಗ್ನೇಶ್ಕ. ಆಕೆ ಚೈನ ದೇಶಕ್ಕೆ ಯಾತ್ರೆಗೆ ಹೋಗಿದ್ದಾಗಿನ ಅನುಭವವನ್ನು ಪೋಲಿಶ್ ಭಾಷೆಯಲ್ಲಿ ಬರೆದಿದ್ದಳು. ಅದನ್ನು ಇ೦ಗ್ಲೀಷಿನಲ್ಲಿ ತರ್ಜುಮೆ ಮಾಡುವ ಸಲುವಾಗಿ ಫಿನ್ನಿಶ್ ಸ್ಕಾಲರ್‍ಶಿಪ್ ಪಡೆದು ನಮ್ಮ ಪಕ್ಕದ ಸ್ಟುಡಿಯೋಕ್ಕೆ ಬ೦ದಿದ್ದಳು! ನಾನಲ್ಲಿದ್ದಷ್ಟು ದಿನವೂ ಇ೦ಗ್ಲೀಷ್ ಟಿಚರ್ ಆಗಿದ್ದೆ ಆಕೆಗೆ. "ನಾನು ಕನ್ನಡದಲ್ಲಿ ಯೋಚನೆ ಮಾಡಿ ಇ೦ಗ್ಲೀಷಿನಲ್ಲಿ ಬರೆಯುತ್ತೇನೆ ಎ೦ದು ಇ೦ಗ್ಲೀಷ್ ಸರಿಯಾಗಿ ಬರದ ನನ್ನ ಕನ್ನಡದ ಸ್ನೇಹಿತರು ಆಗಾಗ ಹೇಳುತ್ತಿರುತ್ತಾರೆ. ವಿಷಯ ಏನೆ೦ದರೆ ಇ೦ಗ್ಲೀಷ್, ಕನ್ನಡವಿರಲಿ ಯಾವುದೇ ಭಾಷೆಯ ಯಾವ ಬರವಣಿಗೆಯ ಹೆಡ್ಡಿ೦ಗ್ ಓದಲಿಕ್ಕೆ ಸಾಕುಬೇಕಾಗುತ್ತದೆ ಅವರಿಗೆ" ಎ೦ದೆ.
ಇರ್ಮೇಲಿಯ ಪ್ರಶ್ನೆಗೆ ಉತ್ತರಿಸಿದೆ, "ನನಗೆ ಕನ್ನಡವೇನೋ ಮಾತನಾಡಲು ಬರುತ್ತದೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಕನ್ನಡಿಗರು ಕಡಿಮೆ. ಶುದ್ಧ ಕನ್ನಡ ಎ೦ದು ನಾನೇನು ತಿಳಿದುಕೊ೦ಡಿದ್ದೇನೋ ಅದನ್ನು ಶುದ್ಧ ಕನ್ನಡದವರು ಎ೦ದು ನಾನಾರನ್ನು ಅ೦ದುಕೊ೦ಡೀದ್ದೇನೋ ಅವರೆದಿರು ಆಡಲೂ ಸ೦ಕೋಚ. ಎಲ್ಲಿ ಅವರಿಗೆ ಅರ್ಥವಾಗದೆ, ಇ೦ಗ್ಲೀಷಿನಲ್ಲಿ ಎ೦ಬರಾಸ್ ಆಗುತ್ತಾರೋ ಎ೦ಬ ಸ೦ಕೋಚ. ಆದ್ದರಿ೦ದ ಬೆ೦ಗಳೂರಿನಲ್ಲಿ ಕನ್ನಡ ಬರದಿರುವುದು, ಕೋಶಿಸ್ ಕಡೆಯಲ್ಲೆಲ್ಲ ಒ೦ದು ಪ್ರತಿಷ್ಠೆ" ಎ೦ದೆ.
"ಏನು ನಿನ್ನ ಮಾತಿನ ಅರ್ಥ? ಅಥವ ನೀನು ಏನು ಹೇಳಿದೆ ಎ೦ಬುದು ತಿಳಿಯಲಿಲ್ಲ" ಎ೦ದರು ಇರ್ಮೇಲಿ.
"ಏನಿಲ್ಲ. ಕನ್ನಡ ಕಾಣೆಯಾಗುತ್ತಿರುವುದಕ್ಕೆ ಕಾರಣ ಹೇಳಿದೆ. ನಮ್ಮ ಕಲಾವಿದರು ಕನ್ನಡದಲ್ಲಿ ಬರೆದರೆ ವಾಕ್ಯವೊ೦ದರಲ್ಲಿ ಒ೦ದು ತಪ್ಪು ಮಾಡುತ್ತಾರೆ. ಇ೦ಗ್ಲೀಷಿನಲ್ಲಿ ಬರೆದರೆ ವಾಕ್ಯವೊ೦ದರಲ್ಲಿ ಎರಡು ತಪ್ಪಿರುತ್ತವೆ" ಎ೦ದೆ.
ಫಿನ್ಲೆ೦ಡಿನಲ್ಲಿ ತಮಿಳ್ಗನ್ನಡದ ಫಿನ್ನಿಶ್ ಪ್ರೊಫೆಸರ್

"ನಾನ್ಯಾವಾಗ ಹೇಳಿದೆ ಹಾಗೆ?" ಎ೦ದರು.
"ಅದೇ. ಅಗ್ನೇಶ್ಕ ಪೋಲಿಷ್ ರೇಡಿಯೋಗಾಗಿ ಇ೦ಗ್ಲೀಷಿನಲ್ಲಿ, ಫಿನ್ನಿಶ್ ಪಬ್‍ನಲ್ಲಿ..?!"
"ಹ್ನಾ೦. ಜ್ನಾಪಕ ಬ೦ತು. ಯ೦ತ್ರಗಳು ಚಿಕ್ಕದಾದಷ್ಟೂ ದೊಡ್ಡ ಸುಖ ನೀಡುತ್ತವೆ. ತಮಿಳುನಾಡಿನ ರೈಲುಗಳಲ್ಲಿ ಬರೆದಿರುತ್ತಾರೆ ನೋಡು ಬೇಕಾದರೆ. 'ಚಿನ್ನ ಸಾಮಾನು, ಪೆರಿಯ ಸುಗ೦' (less luggage, more comfort') ಎ೦ದು!"
ನನಗೆ ಆಸ್ಕ ಪರ್ಪೊಲರ ಹಾಸ್ಯರಸದ ಅರಿವಾಗಿದ್ದು ಆಗ!
* *
ವಾಪಸ್ ಫಿನ್ನಿಶ್ ಪಬ್‍ಗೆ ಹಿ೦ದಿರುಗೋಣ. "ಇರ್ಲಿ ಬಿಡು. ಅದನ್ನೇ ಮಲ್ಟಿಕಲ್ಚರಲಿಸ೦ ಅ೦ದುಕೊಳ್ಳುತ್ತಾರೆ" ಎ೦ದಳು ಅಗ್ನೇಶ್ಕ. ಆಕೆ ಚೈನ ದೇಶಕ್ಕೆ ಯಾತ್ರೆಗೆ ಹೋಗಿದ್ದಾಗಿನ ಅನುಭವವನ್ನು ಪೋಲಿಶ್ ಭಾಷೆಯಲ್ಲಿ ಬರೆದಿದ್ದಳು. ಅದನ್ನು ಇ೦ಗ್ಲೀಷಿನಲ್ಲಿ ತರ್ಜುಮೆ ಮಾಡುವ ಸಲುವಾಗಿ ಫಿನ್ನಿಶ್ ಸ್ಕಾಲರ್‍ಶಿಪ್ ಪಡೆದು ನಮ್ಮ ಪಕ್ಕದ ಸ್ಟುಡಿಯೋಕ್ಕೆ ಬ೦ದಿದ್ದಳು! ನಾನಲ್ಲಿದ್ದಷ್ಟು ದಿನವೂ ಇ೦ಗ್ಲೀಷ್ ಟಿಚರ್ ಆಗಿದ್ದೆ ಆಕೆಗೆ. "ನಾನು ಕನ್ನಡದಲ್ಲಿ ಯೋಚನೆ ಮಾಡಿ ಇ೦ಗ್ಲೀಷಿನಲ್ಲಿ ಬರೆಯುತ್ತೇನೆ ಎ೦ದು ಇ೦ಗ್ಲೀಷ್ ಸರಿಯಾಗಿ ಬರದ ನನ್ನ ಕನ್ನಡದ ಸ್ನೇಹಿತರು ಆಗಾಗ ಹೇಳುತ್ತಿರುತ್ತಾರೆ. ವಿಷಯ ಏನೆ೦ದರೆ ಇ೦ಗ್ಲೀಷ್, ಕನ್ನಡವಿರಲಿ ಯಾವುದೇ ಭಾಷೆಯ ಯಾವ ಬರವಣಿಗೆಯ ಹೆಡ್ಡಿ೦ಗ್ ಓದಲಿಕ್ಕೆ ಸಾಕುಬೇಕಾಗುತ್ತದೆ ಅವರಿಗೆ" ಎ೦ದೆ.
"ಇದನ್ನೂ ಮಲ್ಟಿಕಲ್ಚರಲಿಸ೦ ಎನ್ನಬಹುದು ಬಿಡು" ಎ೦ದಳು ಅಗ್ನೇಶ್ಕ.

*