~
ಕೆಲವು ಪ್ರಶ್ನೆಗಳು
- ಉ: ಕನ್ನಡ ಬೇಗರಣ ಕಟ್ಟಳೆ ೨ ( 'ಇಸು' ವಿನ ಬಳಕೆಯ ಬಗ್ಗೆ) By: mahesha (Jun 12 2007 - 6:46pm)
- ಕೆಲವು ಪ್ರಶ್ನೆಗಳು By: tksbhat (Sep 5 2006 - 4:01pm)
- ಬೆಳೆಸಿಸು ಪದದ ಬಳಕೆ By: ಸಂಗನಗೌಡ (Sep 20 2006 - 10:22pm)
- ಮರುಮಾತು By: ಸಂಗನಗೌಡ (Sep 5 2006 - 10:15pm)

RSS:
ಕೆಲವು ಪ್ರಶ್ನೆಗಳು
ಈ ಲೇಖನ ಓದಿದ ಮೇಲೆ ಹುಟ್ಟಿದ ಕೆಲವು ಪ್ರಶ್ನೆಗಳನ್ನು ಇಲ್ಲಿ ಮುಂದಿಟ್ಟಿದ್ದೇನೆ. ಸಂಗನಗೌಡರು ಉತ್ತರಿಸುತ್ತಾರೆ ಎಂಬುದು ನನ್ನ ನಂಬುಗೆ.
1.ಬೇಗರಣ ಎಂಬ ಪದದ ವ್ಯುತ್ಪತ್ತಿ ಅಥವಾ ಅದರ ಮೂಲವನ್ನು ವಿವರಿಸುತ್ತೀರಾ
2.ಮಾಡಿಸಿಸು, ಕೇಳಿಸಿಸು ಎಂಬ ಪ್ರಯೋಗಗಳು ಎಲ್ಲಿವೆ. ಅಂದರೆ ಬರೆಹ/ಆಡು ಮಾತಿನಲ್ಲಿ ಎಲ್ಲಿ ಬಳಕೆಯಲ್ಲಿವೆ. ಇದ್ದರೆ ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿ.
3. ಕನ್ನಡವನ್ನು ಸರಿಯಾಗಿ ಬರೆಯುವುದು ಅಂದರೇನು?
4. ಇದುವೇ ಸರಿಯಾದ ಕನ್ನಡ ಎಂಬುದನ್ನು ಸಂಸ್ಕೃತ, ಕನ್ನಡ ವ್ಯಾಕರಣ ನಿಯಮಗಳನ್ನು ತಿಳಿಯದ ಆದರೆ ಕನ್ನಡದಲ್ಲಿ ಮಾತನಾಡುತ್ತಾ, ಬರೆಯುತ್ತಾ ಇರುವ ನನ್ನಂಥವರು ತಿಳಿದುಕೊಳ್ಳುವುದು ಹೇಗೆ?
5. ಇದನ್ನೆಲ್ಲಾ ತಿಳಿದುಕೊಳ್ಳದೆ ಬರೆಯುವುದು ಇಲ್ಲವೇ ಮಾತನಾಡುವುದು ತಪ್ಪಾಗುತ್ತದೆಯೇ?
6. ತಪ್ಪು ಎಂದಾದರೆ ಕನ್ನಡವನ್ನು ಸರಿಪಡಿಸಿ ಉಳಿಸುವ ನಿಮ್ಮ ಕೆಲಸ ಕನ್ನಡವನ್ನು ಲ್ಯಾಬೊರೇಟರಿಯಲ್ಲಿ, ಮ್ಯೂಸಿಯಂನಲ್ಲಿ ಉಳಿಸುವ ಪ್ರಯತ್ನವಾಗುವುದಿಲ್ಲವೇ?
7. ಭಾಷೆಯನ್ನು ಶುದ್ಧವಾಗಿ ಉಳಿಸಬೇಕೆಂದು ನೀವು ಮಾಡುತ್ತಿರುವ ಪ್ರಯತ್ನಗಳು ಕೇವಲ ಅಭಿವ್ಯಕ್ತಿಯನ್ನು ಮುಖ್ಯವಾಗಿಟ್ಟುಕೊಂಡು ಭಾಷೆಯನ್ನು ಬಳಸುವವರನ್ನು ಬೆದರಿಸಲಾರದೆ.