ಜಪಾನಿನ ಚಕ್ರವರ್ತಿಯ ಎರಡನೇ ಕುಮಾರನ ರಾಣಿ ಕಿಕೊ ಇಂದು (೨೦೦೬/೦೯/೦೬) ಬೆಳಿಗ್ಗೆ ೮:೨೭ ರ ಹೊತ್ತಿಗೆ ಆರೋಗ್ಯವಂತ ಗಂಡು ಮಗುವನ್ನು ಹೆತ್ತಳು. ಇದರೊಂದಿಗೆ ಜಪಾನಿನ ಚಕ್ರವರ್ತಿಯ ವಂಶೋದ್ಧಾರಕನ ಉದಯವಾಗಿ ಎಲ್ಲೆಲ್ಲೂ ಸಂತಸ ತುಂಬಿ ತುಳುಕುತ್ತಿದೆ! ಒಂದು ವಾರದಿಂದಲೇ ಏರುತ್ತಿದ್ದ ಶಿಶುಸಂಬಂಧೀ ಶೇರುಗಳು ಇಂದು 'ಬೇಬೀ ಬೂಮ್' ಅನ್ನು ಬೆಂಬತ್ತಿ ೬ ವರ್ಷಗಳ ನಂತರ ೨.೨% ಏರಿವೆ!
ಶುಭ ಕನ್ಯಾಲಗ್ನ, ಧನಿಷ್ಠಾ ನಕ್ಷತ್ರ - ಮಕರ ರಾಶಿಯಲ್ಲಿ ಜನಿಸಿದ ರಾಜಪುತ್ರ ೨೫೫೮ ಗ್ರಾಂ ತೂಗಿದನೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 'ತೇಯ್‍ಓ ಸೆಕ್ಕಾಯ್'[=ಚಕ್ರವರ್ತಿ ಛೇದಸವನ ಅಂದರೆ ಸಿಝೇರಿಯನ್ ಸೆಕ್ಷನ್] ಶಸ್ತ್ರಕ್ರಿಯೆಗೆ ಒಳಗಾದ ತಾಯಿಯೂ ಆರೋಗ್ಯವಾಗಿರುವಳೆಂದು ವೈದ್ಯರು ತಿಳಿಸಿದ್ದಾರೆ. ಛೇದಸವನ ಚಕ್ರವರ್ತಿಯ ಕುಟುಂಬದಲ್ಲೇ ತೀರಾ ಹೊಸದೆಂದು ಬಲ್ಲವರು ಹೇಳುತ್ತಾರೆ. ಈ ಬಾರಿ ಈ ಶಸ್ತ್ರಕ್ರಿಯೆಗೆ 'ಚಕ್ರವರ್ತಿ ಛೇದಸವನ' ಎಂಬುದು ಅನ್ವರ್ಥವಾಗಿರುವುದೂ ಒಂದು ಅಚ್ಚರಿ!
ಉಘೇ! ಹುಟ್ಟಿದ ಹುಟ್ಟಿದ ಚಕ್ರವರ್ತಿ!

ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.