ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಇದೇ ವಿಷಯ

September 8, 2005 - 4:18pm — nilagriva

ಇದೇ ವಿಷಯ

nilagriva's picture

ಇಸ್ಮಾಯ್ಲ್ ಅವರೇ,
ನಿಮ್ಮ ಮಾತು ನಿಜ. ಆದರೆ ನಿಮ್ಮ ಕರೆಯಿರುವುದು ಈಗ ಬರೆಯದ ಆದರೆ ಚೆನ್ನಾಗಿ ವಿಶ್ಲೇಷಿಸಿ ಬರೆಯಬಲ್ಲವರಿಗೆ. ಆದರೆ ಬಹಳಷ್ಟು ಜನ ನೀವು ಹೇಳಿದ ಹಾಗೆ ತಮ್ಮನ್ನು ತಾವು ಒಳ್ಳೆಯ ವಿಶ್ಲೇಷಕರೆಂದು ಪರಿಗಣಿಸುವುದಿಲ್ಲವಲ್ಲ. ಇವರಲ್ಲಿ ನಾನೂ ಒಬ್ಬ. ಏನೋ ಆಗ ಅನಿಸಿದ್ದನ್ನು ಬರೆಯುತ್ತೇನೆ. ನನ್ನದೇ ಒಂದು ಬ್ಲಾಗ್ ತಾಣವಿದ್ದರೂ ಅಲ್ಲಿ ಬರೆಯುವುದಕ್ಕೆ ಸಮಯ ಈ ನಡುವೆ ಹೆಚ್ಚು ಸಿಗುತ್ತಿಲ್ಲ. ಇದರ ಜೊತೆಗೆ, ಒಳ್ಳೆಯ ಯೋಚನೆಗಳು ಬಂದಾಗ ನಮ್ಮ ಬಳಿ ಕಾಗದವಾಗಲಿ ಗಣಕವಾಗಲಿ ಇರುವುದಿಲ್ಲ. ಇವೆರಡೂ ಇದ್ದಾಗ ವಿಚಾರ ಸ್ಫುರಿಸುವುದಿಲ್ಲ. ಇವು ಮೂರೂ ಇದ್ದಾಗ ಸಮಯವಿರುವುದಿಲ್ಲ. ನನ್ನ ಕಥೆಯಂತೂ ಇದೇ ಆಗಿದೆ.

ಇನ್ನೊಂದು ದೊಡ್ಡ ತೊಂದರೆ (ನನಗೆ ಇದು ಅಷ್ಟು ದೊಡ್ಡ ತೊಂದರೆಯಲ್ಲ, ಆದರೂ...) ಕನ್ನಡ ಲಿಪಿಯಲ್ಲಿ ಉಟ್ಟಂಕಿಸುವುದು. ಬರಹ ತಂತ್ರಾಂಶವಿದ್ದರೂ (ನಿಮ್ಮ ಪ್ರಕಾರ ಅದರ ಹೆಸರು ಬರೆಹ ಎಂದಿರಬೇಕಿತ್ತು ಅಲ್ಲವೇ? ನಿಮ್ಮೊಡನೆ ನಾನೂ ಇದ್ದೇನ, ಇರಲಿ...) ಆಂಗ್ಲ ಕೀಲಿಮಣೆಯಲ್ಲಿ ಕನ್ನಡವನ್ನು ಟೈಪಿಸುವುದು at best ಒಂದು ಪ್ರಯಾಸ. ಸಾಮಾನ್ಯವಾಗಿ ಆಂಗ್ಲದಲ್ಲಿ ಇದಕ್ಕಿಂತ ಐದಾರು ಪಟ್ಟು ಹೆಚ್ಚು ವೇಗದಿಂದ ಕೀಲಿಮಾಡಬಹುದಾಗಿದೆ. ಇದು ನನ್ನ ಪ್ರಕಾರ ಕನ್ನಡದಲ್ಲಿ ಅದೂ ಕನ್ನಡ ಲಿಪಿಯಲ್ಲಿ ಪ್ರತಿಕ್ರಯಿಸುವುದಕ್ಕೆ ಒಂದು ದೊಡ್ಡ ಅಡಚಣೆ. ಆದರೆ ಭಾಷಾಪ್ರೇಮವೆನ್ನುವುದೊಂದಿದೆಯಲ್ಲ! ಅದೇ ತಾನೆ ಸಂಪದಕ್ಕೆ ಕಾರಣ ? ನಮ್ಮ ಭಾಷೆಯ ಅಕ್ಷರಗಳು ಮಾನಿಟರ್ ನಲ್ಲಿ ಮೂಡುವುದನ್ನು ನೋಡುವುದೇ ಒಂದು ಆನಂದ. ಇದೇ high ನಮ್ಮನ್ನು ಕನ್ನಡ ಲಿಪಿಯಲ್ಲಿ ಬರೆಯುವುದಕ್ಕೆ ಉತ್ತೇಜನ ನೀಡುತ್ತದೆ. ಆದ್ದರಿಂದ ಇ-ಕನ್ನಡಿಗರೇ, (ಇಸ್ಮಾಯ್ಲ್ ಅವರ ಪ್ರಯೋಗ) ಕನ್ನಡದಲ್ಲಿ ಉಟ್ಟಂಕಿಸಲು ಸಿದ್ಧರಾಗಿ! ಕಷ್ಟವಾದರೂ ಸರಿ, ಕನ್ನಡ ಲಿಪಿಯಲ್ಲಿಯೇ ಬರೆಯಬೇಕು! ಆರಂಭದಲ್ಲಿ ಕಷ್ಟವಾದರೂ ಅಭ್ಯಾಸದಿಂದ ಬರೆಹದ ಉಟ್ಟಂಕನ ಸುಲಭವಾಗುತ್ತದೆ. ಇಂಗ್ಲೀಷಿನಲ್ಲಿ ಬರೆದಷ್ಟು ಸುಲಭವಲ್ಲದಿದ್ದರೂ ಬಹಳಷ್ಟು ಸುಲಭವಾಗುತ್ತದೆ.

ಏನೋ ನೀವು ಹೇಳಿದ ಹಾಗೆ ಪ್ರತಿಕ್ರಯಿಸಬೇಕೆನ್ನಿಸಿತು. ನಿಮ್ಮ ಕರೆಗೆ ಓಗೊಟ್ಟು ಒಂದಷ್ಟು ಗೀಚಿದ್ದೇನೆ.

ನನ್ನೆರಡು ಪೈಸೆ (ಅಥವಾ ರೂಪಾಯಿ ಎನ್ನಬೇಕೆ?).

-ನೀಲಗ್ರೀವ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡಿಗರ ಅತಿದೊಡ್ಡ ಸಮಸ್ಯೆ By: ismail (14 replies) September 5, 2005 - 11:29pm
  • ಕನ್ನಡಿಗರ ಜಡತನ By: vvdooshaka (Jan 19 2006 - 3:41am)
  • keyboard ಮೇಲೋ? Penನ್ನೇ ಲೇಸೋ? By: ismail (Sep 10 2005 - 2:34pm)
  • ಇದೇ ವಿಷಯ By: nilagriva (Sep 8 2005 - 4:18pm)
    • ಇನ್ಸ್ಕ್ರಿಪ್ಟ್ (Inscript) By: (Sep 8 2005 - 5:18pm)
  • ಜಡ ವಸ್ತು! By: pavanaja (Sep 7 2005 - 12:53pm)
    • ಹಾಳೆ ಕಾಣೆಯಾಗಿದೆ!!! By: ಶ್ರೀನಿಧಿ (Jan 19 2006 - 6:46am)
      • Re: ಹಾಳೆ ಕಾಣೆಯಾಗಿದೆ!!! By: pavanaja (Jan 19 2006 - 9:03am)
        • ಕನ್ನಡ someಶೋಧನೆ By: shreekant.mishrikoti (Jan 19 2006 - 1:33pm)
    • ನಿಜ By: muralihr (Sep 9 2005 - 4:45pm)
  • ಒಳ್ಲೆಯ ವಿಚಾರ By: ನಾ. ರಾ. ಸೋಸಲೆ (Sep 6 2005 - 11:52pm)
    • ಕನ್ನಡಕ್ಕೆ ಕೈ ಎತ್ತು By: ಶ್ರೀನಿಧಿ (Jan 19 2006 - 6:28am)
  • athi dodda samasye.. By: vasista2k (Sep 6 2005 - 11:35pm)
    • ಕನ್ನಡದಲ್ಲಿ ಬರೆಯಿರಿ! By: (Sep 7 2005 - 12:04am)
      • ಗರ್..ರ್ರ್ By: shreekant.mishrikoti (Jan 19 2006 - 12:46pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:27am
  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:17am
  • Ennares
    ಉ: ಕುಮಾರವ್ಯಾಸ ಭಾರತ
    July 24, 2008 - 1:10am
  • srinivasps
    ಉ: ಸಂಗೀತ
    July 23, 2008 - 11:37pm
  • Rajeshwari
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:35pm
  • Rajeshwari
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:34pm
  • hpn
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 23, 2008 - 11:33pm
  • keerthi2kiran
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:31pm
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 23, 2008 - 11:20pm
  • anil.ramesh
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:16pm
ಇನ್ನಷ್ಟು


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator