ಒಪ್ಪಬಹುದಾದಂತಹ ಮಾತು
- ರಾತ್ರಿ ೧೦:೩೦ ಗೆ By: benaka (Sep 19 2006 - 11:37am)
- ಭಾರತೀಯರ ಬೇಜವಾಬ್ದಾರಿ By: hpn (Sep 21 2006 - 12:16am)
- ಯೂ. ಜಿ. ಸಿ. ಕಾರ್ಯಕ್ರಮಗಳು By: gvmt (Sep 18 2006 - 8:08pm)
- ಉ: ಯೂ. ಜಿ. ಸಿ. ಕಾರ್ಯಕ್ರಮಗಳು ಈಗಲೂ ಬೆಳಿಗ್ಗೆ ಇವೆ ; ಜ್ಞಾನವಾಣಿ FM By: shreekant.mishrikoti (Sep 19 2006 - 2:25pm)
- ಒಪ್ಪಬಹುದಾದಂತಹ ಮಾತು By: hpn (Sep 14 2006 - 2:09am)

RSS:
ಒಪ್ಪಬಹುದಾದಂತಹ ಮಾತು
ಭಾರತದಲ್ಲಿ ಇನ್ನೂ ಅತ್ತೆ-ಸೊಸೆಯ ಜಗಳವೇ ಬಂಡವಾಳವಾಗಿರುವ ದೈನಂದಿನ ಧಾರಾವಾಹಿಗಳೇ ಓಡುತ್ತಿವೆ; ಎಲ್ಲಾ ಒಂದೇ ರೀತಿಯ ಕಥೆಗಳು!!! ಸುಮ್ಮನೆ ಐಟಿ ! ಐಟಿ ! ಎಂದು ಕೂಗಿದರೇನು ಬಂತು? ಜನಕ್ಕೆ ಮಾಹಿತಿಯನ್ನು ತಲುಪಿಸಲು ಭಾರತದ ವಾಹಿನಿಗಳಿಗೆ ಬಿಡುವೇ ಇಲ್ಲ!
ಒಪ್ಪಬಹುದಾದಂತಹ ಮಾತು. ಆದರೆ ಅಂತಹ ದಾರಾವಾಹಿಗಳಲ್ಲೇ (ಜನಪ್ರಿಯ ವಾಹಿನಿಯಲ್ಲೇ) ಮಾಹಿತಿ ತಲುಪಿಸುವ ಪ್ರಯತ್ನ ಮಾಡುತ್ತಿರುವ ಟಿ ಎನ್ ಸೀತಾರಾಂ ಮುಂತಾದವರ ಪ್ರಯತ್ನ ಕೂಡ ಮರೆಯಕೂಡದು.
ನಾನು ಪುಟ್ಟವನಿದ್ದಾಗ "ಟರ್ನಿಂಗ್ ಪಾಯಿಂಟ್" ಎಂಬ ಕಾರ್ಯಕ್ರಮ ತಪ್ಪದೇ ನೋಡುತ್ತಿದ್ದ ನೆನಪು. (ಗಿರೀಶ್ ಕರ್ನಾಡ್ ಕೂಡ ಅಗಾಗ ಅದನ್ನು ನಡೆಸಿಕೊಡುತ್ತಿದ್ದರು - he used to anchor the show). ಈಗಲೂ ಅಂತಹ ಒಳ್ಳೆಯ ಪ್ರೋಗ್ರಾಮುಗಳು ಇಲ್ಲದಿಲ್ಲವೆಂದುಕೊಂಡಿದ್ದೇನೆ (ಇತ್ತೀಚೆಗೆ ಟಿ ವಿ ನೋಡೋಕ್ಕೆ ಸಾಧ್ಯವಾಗೋದೇ ಕಷ್ಟವಾಗಿದೆ. ಕಷ್ಟ ಪಟ್ಟು ಸಮಯ ಮಾಡಿಕೊಂಡು ನೋಡಲು ಕುಳಿತರೂ ಬೇಕಾದ ಚ್ಯಾನಲ್ಲು ಸಿಗೋದೇ ಕಷ್ಟ!) ಬರೇ ಕ್ರಿಕೆಟ್ ನೋಡೋದಕ್ಕೆ ಮೂರ್ಖಪೆಟ್ಟಿಗೆ ಶರಣು ಹೋಗೋ ನನ್ನಂತವರಂತೂ ಮನೆಯಲ್ಲಿ ಇತರರ ಆಯ್ಕೆಗಳ ಮೆಜಾರಿಟಿಗೆ ತಲೆ ಬಾಗಿ ಟಿ ವಿ ಬಿಟ್ಟುಕೊಡಲೇಬೇಕು
ದೂರದರ್ಶನದಲ್ಲಿ (ನಮ್ಮ ಸರಕಾರದ ವಾಹಿನಿ) ಸಾಕಷ್ಟು ಒಳ್ಳೆಯ ಪ್ರೋಗ್ರಾಮುಗಳು ಬಂದು ಹೋಗಿವೆ. ಈಗಲೂ ಸಾಕಷ್ಟು ಪ್ರಯತ್ನ ನಡೆಯುತ್ತಿರಬಹುದು. ಶಾಲೆಯಲ್ಲಿದ್ದಾಗ ಪ್ರತಿ ಭಾನುವಾರ "ಗುಚ್ಛಾ" ಎಂಬ ಪ್ರೋಗ್ರಾಂ ಡಿ ಡಿ ನ್ಯಾಶನಲ್ ನಲ್ಲಿ ಬರುತ್ತಿತ್ತು. ಇತ್ತೀಚೆಗೆ ಅದನ್ನು ನಿರ್ದೇಶಿಸಿದವರಲ್ಲಿ ಓಂಕಾರ ಹಾಗೂ ಮಕ್ಬೂಲ್ ಖ್ಯಾತಿಯ "ವಿಶಾಲ್ ಭಾರದ್ವಾಜ್" ಕೂಡ ಒಬ್ಬರೆಂದು ತಿಳಿದುಬಂತು!
***
NHK ಚ್ಯಾನಲ್ಲು ಇಲ್ಲೂ ಬರುತ್ತದೆ ಅನ್ಸತ್ತೆ. ನಾನೊಮ್ಮೆ ಯಾವಾಗಲೋ ಚ್ಯಾನಲ್ಲು ತಿರುವಿ ಹಾಕುವಾಗ ನೋಡಿದ ನೆನಪು. ಜಾಹಿರಾತು ಇಲ್ಲದೆ ದಾರಾವಾಹಿ ಪ್ರಸಾರ ಮಾಡುತ್ತಾರೆಂದು ಕೇಳಿ ಆಶ್ಚರ್ಯವೂ ಸಂತೋಷವೂ ಆಯಿತು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"