ಹೆಮ್ಮೆಯ ವಿಚಾರವಿದು, ಮರೆಯುವಂತಿಲ್ಲ
- ಉ: ಕನ್ನಡದಲ್ಲಿನ ಒತ್ತಕ್ಷರಗಳು By: kannadakanda (May 7 2008 - 12:35am)
- ಆಯಿತು By: ಸಂಗನಗೌಡ (Sep 22 2006 - 9:28pm)
- ವರ್ಣಗಳು ಐವತ್ತೇ By: benaka (Sep 25 2006 - 7:17am)
- ವ್ಯತ್ಯಾಸವಿದೆ By: benaka (Sep 21 2006 - 7:33am)
- ಸಕ್ಕದದ ಹೇರಿಕೆಗೆ ಪುರಾವೆ By: ಸಂಗನಗೌಡ (Sep 21 2006 - 9:22pm)
- ತಳದ ಅಕ್ಕರ ಎಂದರೇನು? By: benaka (Sep 22 2006 - 6:16am)
- ತಳ = ಮೂಲ By: ಸಂಗನಗೌಡ (Sep 22 2006 - 11:08am)
- ಹೇಗಾದೀತು? By: benaka (Sep 22 2006 - 12:07pm)
- ತಳ=ಬುಡು=ಬಡ್ಡಿ By: ಸಂಗನಗೌಡ (Sep 22 2006 - 4:11pm)
- ಕನ್ನಡ ಕಸ್ತೂರಿ.ಕಾಂ By: benaka (Sep 22 2006 - 6:21pm)
- ತಳ=ಬುಡು=ಬಡ್ಡಿ By: ಸಂಗನಗೌಡ (Sep 22 2006 - 4:11pm)
- ಹೇಗಾದೀತು? By: benaka (Sep 22 2006 - 12:07pm)
- ತಳ = ಮೂಲ By: ಸಂಗನಗೌಡ (Sep 22 2006 - 11:08am)
- ತಳದ ಅಕ್ಕರ ಎಂದರೇನು? By: benaka (Sep 22 2006 - 6:16am)
- ಸಕ್ಕದದ ಹೇರಿಕೆಗೆ ಪುರಾವೆ By: ಸಂಗನಗೌಡ (Sep 21 2006 - 9:22pm)
- ಆಸೊಟ್ಟು = ಆಟು By: ಸಂಗನಗೌಡ (Sep 20 2006 - 10:16pm)
- ಸಂಯುಕ್ತಾಕ್ಷರಗಳು By: benaka (Sep 14 2006 - 2:16pm)
- ಹೆಮ್ಮೆಯ ವಿಚಾರವಿದು, ಮರೆಯುವಂತಿಲ್ಲ By: Sunil Jayaprakash (Sep 14 2006 - 6:09pm)
- ಬರಹ ಮತ್ತು ಆಡು ಮಾತು,ಒತ್ತಕ್ಕರ ಮತ್ತು ಸಮ್ಮುಕ್ಕರ By: ಸಂಗನಗೌಡ (Sep 15 2006 - 10:21am)
- ಅಷ್ ಟು != ಅಷ್ಟು By: Sunil Jayaprakash (Sep 18 2006 - 4:35pm)
- ಬರಹ ಮತ್ತು ಆಡು ಮಾತು,ಒತ್ತಕ್ಕರ ಮತ್ತು ಸಮ್ಮುಕ್ಕರ By: ಸಂಗನಗೌಡ (Sep 15 2006 - 10:21am)
- ಹೆಮ್ಮೆಯ ವಿಚಾರವಿದು, ಮರೆಯುವಂತಿಲ್ಲ By: Sunil Jayaprakash (Sep 14 2006 - 6:09pm)
- ಸಬ್ದಸಂಪತ್ತು ಮತ್ತು ಉದಾರದೃಷ್ಟಿ By: shreekant.mishrikoti (Sep 14 2006 - 1:03pm)
- ಪದಸಂಪತ್ತು By: ಸಂಗನಗೌಡ (Sep 15 2006 - 9:39am)
- ಸಬ್ದಸಂಪತ್ತು ಮತ್ತು ಉದಾರದೃಷ್ಟಿ By: shreekant.mishrikoti (Sep 14 2006 - 1:38pm)
- 'ಏಸು' ಕಾಯಂಗಳ By: shreekant.mishrikoti (Sep 14 2006 - 12:22pm)
- ಆಸು, ಈಸು, ಏಸು By: ಸಂಗನಗೌಡ (Sep 14 2006 - 12:06pm)

RSS:
ಹೆಮ್ಮೆಯ ವಿಚಾರವಿದು, ಮರೆಯುವಂತಿಲ್ಲ
ಸವಿಯೊದಗು, ನನ್ನ ಪ್ರಕಾರ ಚರ್ಚೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ನಾನು ಈ ಅಷ್ಟು, ಇಷ್ಟು, ಎಷ್ಟು ಪದಗಳ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿದ್ದೆ ಈ ಕಾರಣಕ್ಕಾಗಿ. ಅವೆಲ್ಲವೂ ಕನ್ನಡ ಪದಗಳೇ.
ಸರಿ, ಈಗ ಸಂಗನಗೌಡರ ಪ್ರಕಾರವೇ ತೆಗೆದುಕೊಳ್ಳೋಣ.
ಆಸು+ಒಟ್ಟು = ಆಸೊಟ್ಟು = ಅಷ್ಟು
ಇಲ್ಲಿ ಎಲ್ಲಿಯೂ ಸಂಸ್ಕೃತದ ಸುಳಿವಿಲ್ಲ, ಅದಾಗಿಯೂ(ಅಥವಾ ಅದಾಗ್ಯೂ..ಮತ್ತೊಂದು ಸಂಯುಕ್ತಾಕ್ಷರ) ಕೂಡ ಸಂಯುಕ್ತಾಕ್ಷರಗಳು ಕನ್ನಡದಲ್ಲಿ ಜಾಗ ಪಡೆದುಕೊಂಡಿದೆ. ಒಂದು ರೀತಿಯಲ್ಲಿ, ಇದನ್ನು, "ಸಂಸ್ಕೃತದ ಹೊರತಾಗಿಯೂ ಕೂಡ ಕನ್ನಡದಲ್ಲಿ ಸಂಯುಕ್ತಾಕ್ಷರಗಳಿವೆ ಹೇಳಬಹುದು".
ಅಷ್ಟೇ ಅಲ್ಲದೆ, ಬೆನಕರವರು ಹೇಳಿದ ಹಾಗೆ ದಾಸರ ಪದಗಳಲ್ಲಿಯೂ ಬಳಸಲ್ಪಟ್ಟಿವೆ.
......ಎಷ್ಟು ಒಯ್ದರೂ ಬೆಲೆರೊಕ್ಕವಿದಕಿಲ್ಲ..(ಕಲ್ಲುಸಕ್ಕರೆ ಕೊಳ್ಳಿರೋ)
ಅಂದರೆ, ಕನ್ನಡವು ತನ್ನ ಸ್ವಂತ ನೆಲೆಯಲ್ಲೇ ಬೆಳೆಯುತ್ತಾ ಮುನ್ನಡೆದಿದೆ. ಹಾಗಾಗಿ, ನಮ್ಮ ಭಾಷೆ ಆರೋಗ್ಯಕರವಾದ ಮತ್ತು ಸರಿಯಾದ ರೀತಿಯಲ್ಲಿ ಕಾಲಕಾಲಕ್ಕೆ ಬೆಳೆಯುತ್ತಲೇ ಇದೆ. ಇದು ನಮಗೆ ಸಂತೋಷವನ್ನು ಉಂಟುಮಾಡಬೇಕಾದ ವಿಷಯವಲ್ಲವೇ ?
ಹಾಗಾಗಿ, ನನಗನ್ನಿಸುವ ಮಟ್ಟಿಗೆ ಕನ್ನಡವು ಈ "ಸಂಯುಕ್ತಾಕ್ಷರದ ಕಟ್ಟಳೆ" ಯನ್ನು ದಾಟಿ ಮುನ್ನಡೆದಿದೆ. ನಾವು ಸಂಯುಕ್ತಾಕ್ಷರಗಳನ್ನು ಬೇಡವೆಂದರೆ ಕನ್ನಡವನ್ನು ಸುಮಾರು ಶತಮಾನಗಳಷ್ಟು ಹಿಂದೆ ತಳ್ಳಿದಂತೆ ಆಗುತ್ತದೆ. ಮತ್ತು ನೆನಪಿರಲಿ, ದಾಸರ ಪದಗಳನ್ನು ದಯಾದಾಕ್ಷಿಣ್ಯವಿಲ್ಲದೆ ಸುಡಬೇಕಾಗುತ್ತದೆ, ಒಂದು ವೇಳೆ ಕನ್ನಡದಲ್ಲಿ ಸಂಯುಕ್ತಾಕ್ಷರಗಳು ಬೇಡವೆಂದರೆ.
ಕಡೆಯದಾಗಿ, ನನ್ನ ಮಾತಿಷ್ಟೇ, ಕನ್ನಡದ ಮಟ್ಟಿಗೆ ಈ ಪದಗಳು ಒಂದು ರೀತಿಯ ಮೈಲಿಗಲ್ಲು. ಕನ್ನಡವು ಸಂಯುಕ್ತಾಕ್ಷರಗಳನ್ನು ಬರಮಾಡಿಕೊಂಡಿಲ್ಲ, ತಾಯಿ ಮಗುವನ್ನು ಹೇರುವು ಹಾಗೆ, "ಸಂಯುಕ್ತಾಕ್ಷರಗಳು" "ಕನ್ನಡ ತಾಯಿಯಲ್ಲಿಯೇ"(ಯೂ) ಹುಟ್ಟಿ ಬೆಳೆದಿವೆ. ಹಾಗಾಗಿ ಕನ್ನಡದಲ್ಲಿ ಸಂಯುಕ್ತಾಕ್ಷರಗಳನ್ನು ನಾವು ಬೇಡವೆನ್ನುವ ಹಾಗಿಲ್ಲ.
ಬನ್ನಿ, ಈ ಸೂತ್ರವನ್ನು ಅನುಸರಿಸಿ, ಮಿಶ್ರಿಕೋಟಿಗಳು ಉದಾಹರಿಸಿದ ಬಿ,ಎಂ,ಶ್ರೀ ಅವರ ವಿಚಾರಗಳನ್ನು ಸಾಕಾರ ಮಾಡುವತ್ತ ಸಾಗೋಣ.
ನನ್ನ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯಗಳೇನು ?