ಜಪಾನಿನಲ್ಲಿ ರಾಜಕುಮಾರನ ಜನನದ ಸಂತಸ ಎಷ್ಟು ಹಬ್ಬಿದೆಯೆಂದರೆ, ಪ್ರತಿದಿನ ಎಲ್ಲೆಲ್ಲಿಯೂ ಅದೇ ಸುದ್ದಿ. ರಾಜಪುತ್ರನ ಮುಖ ನೋಡಲು ಎಲ್ಲರಿಗೂ ಆಸೆ; ಯಾವಾಗ ನೋಡುವೆವೋ ಎಂದೆಲ್ಲ ಕಾದಿದ್ದಾರೆ! ಹೀಗಿರುವಾಗ ನಾನು ಹತ್ತಡಿ ದೂರದಲ್ಲಿ ರಾಜದರ್ಶನ ಮಾಡಿಬಿಟ್ಟೆ! ಇಂದು ಮಧ್ಯಾಹ್ನದ ಊಟ ಮುಗಿಸಿ ಎಂದಿನಂತೆ ಉದ್ಯಾನದಲ್ಲಿ ನಡೆದು ಹಿಂದಿರುಗುತ್ತೇನೆ... ರಸ್ತೆಯ ಇಕ್ಕೆಲಗಳಲ್ಲೂ ಜನವೋ ಜನ! ಪೋಲೀಸರು ದಾಟು ಪಟ್ಟೆಯ ಮುಂದೆ ನಿಂತು ತಡೆಹಾಕಿದ್ದಾರೆ; ಯಾರನ್ನೂ ದಾಟಲು ಬಿಡುತ್ತಿಲ್ಲ! ಸಾಲದ್ದಕ್ಕೆ ಕೈಯಲ್ಲಿ ಎಲ್ಲ ಜಪಾನಿನ ಬಾವುಟ ಹಿಡಿದಿದ್ದಾರೆ; ಕೂಡುರಸ್ತೆಯ ನಾಲ್ಕೂ ಮೂಲೆಯಲ್ಲಿ ದೂರದರ್ಶನದ ಕ್ಯಾಮರಾಗಳು..... ಮೇಲೆ ಹೆಲಿಕಾಪ್ಟರ್ ಸುತ್ತುತ್ತಿದೆ! ಓಹೋ ನವಜಾತ ರಾಜಕುಮಾರ ಆಸ್ಪತ್ರೆಯಿಂದ ಮನೆಗೆ ಬರುತ್ತಾನೆಂದು ತಿಳಿದುಹೋಯಿತು. ನಮ್ಮಲ್ಲಿ ಅಗವ್ಯ ಗಳು
ಬಂದಾಗ ಊರಿನ ರಸ್ತೆಗಳಲ್ಲೆಲ್ಲಾ ಸಂಚಾರ ಅಸ್ತವ್ಯಸ್ತವಾಗುವಂತೆ ಇಲ್ಲಿ ಯಾವ ತೊಂದರೆಯೂ ಆಗಲಿಲ್ಲ; ನೋಡ ನೋಡುತ್ತಿರುವಂತೆಯೇ ಸಂಚಾರೀ ಪಾದಚಾರಿಗಳನ್ನೆಲ್ಲಾ ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಿಸಿದರು; ರಾಜಕುವರನ ರಥ ಬರುವ ದಾರಿಯಲ್ಲಿ ೩೦ ಸೆಕೆಂಡಿನ ಅಂತರದಲ್ಲಿ ಎಲ್ಲ ಕೆಂಪುದೀಪಗಳನ್ನೂ ಬೆಳಗಿಸುತ್ತಾ ಬಂದರು; ರಥ ಸಾಗಿದ ಒಂದು ನಿಮಿಷದ ಅಂತರದಲ್ಲಿ ಒಂದೊಂದನ್ನೇ ಹಸಿರಾಗಿಸಿದರು! ಎಲ್ಲಿಯೂ ಯಾವ ವಾಹನಕ್ಕೂ ೨ನಿಮಿಷಕ್ಕಿಂತ ಹೆಚ್ಚು ತಡೆಯಾಗಲಿಲ್ಲ! ಸಂಚಾರಿ ಸನ್ನೆಯ ದೀಪಗಳನ್ನು ಮೆಲ್ಲನೆ ವಿರಾಮ ಹೆಚ್ಚಿಸಿ, ರಥ ಸಾಗಿದ ನಂತರ ವಿರಾಮ ಕಡಿಮೆಗೊಳಿಸುತ್ತಾ ಸಂಚಾರ ನಿಯಂತ್ರಿಸಿದ ರೀತಿ ಅದ್ಭುತವಾಗಿತ್ತು! ಇಷ್ಟರಲ್ಲಿ ಎರಡನೆಯ ಯುವರಾಜ, ಪತ್ನಿ ಹಾಗೂ ನವಜಾತ ಕುವರನೊಂದಿಗೆ ಸಾಗಿಬಂದು ನಮ್ಮೆಡೆಗೆ ಕೈಬೀಸುತ್ತಾ, ಅರಮನೆಗೆ ಮುನ್ನಡೆದರು. ಅಷ್ಟರಲ್ಲಿ ನಾಲ್ಕು ವಾಹಿನಿಗಳ ದೂ.ದ. ಪರದೆಯಲ್ಲಿ ನಾನೂ ಕಂಡಿರಬಹುದು. ನನ್ನ ಹಿಂದೆ ನಿಂತ ಚಿಟ್ಟೆ ಹಿಡಿವ ಯುವಕರು(ನಿಜವಾಗಿಯೂ ಚಿಟ್ಟೆಯೇ ಸ್ವಾಮಿ, ದ್ವಂದ್ವಾರ್ಥವಿಲ್ಲ) ಚಿಟ್ಟೆಬಲೆ ಹಿಡಿದೆತ್ತಿ 'ಆ! ಕಂಡಿತು ಕಂಡಿತು'(ಮಿಯೆತ! ಮಿಯೆತ ಯೊ!) ಎಂದು ಸಂಭ್ರಮಿಸುತ್ತಿದ್ದುದು ತಮಾಷೆಯಾಗಿತ್ತು! ಅಂತೂ ಅರಮನೆಯ ಹತ್ತಿರ ಕೆಲಸವಿದ್ದುದರಿಂದ ನಾನೂ ರಾಜಕುವರ, ಯುವರಾಜ-ರಾಣಿಯರ ದರುಶನ ಮಾಡಿದಂತಾಯಿತು. ಅದೇಕೋ ಗೊತ್ತಿಲ್ಲ ರಾಜನನ್ನು ಕಂಡರೆ 'ಗುರು-ಶಿಷ್ಯರು' ಚಿತ್ರದಲ್ಲಿ ನಂದಿಕೇಶ್ವರ ಎನ್ನುವಂತೆ ಕೈಯೆತ್ತಿ "ಮಹಾರಾಜ, ನೀನು ಮಹಾರಾಣಿಯನ್ನು ಮದುವೆಯಾಗು!" ಎನ್ನೋಣವೆನಿಸಿ, ದ್ವಾರಕೀಶರನ್ನು ನೆನೆದು ನಕ್ಕು ಸುಮ್ಮನಾದೆ!
(ಹಾಂಜೋಮೊನ್ ಮಹಾದ್ವಾರದ ಬಳಿಯಿಂದ)
ಚಕ್ರವರ್ತಿಯ ದರುಶನ!

ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.