ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಕಂಪ್ಯೂಟರ್‌ನಲ್ಲಿ ಕನ್ನಡದ ಬಳಕೆ

September 19, 2006 - 8:17am — ಪ್ರದೀಪ್ ಬೆಳಗಲ್

ಕಂಪ್ಯೂಟರ್‌ನಲ್ಲಿ ಕನ್ನಡದ ಬಳಕೆ

ಪ್ರದೀಪ್ ಬೆಳಗಲ್'s picture

ಕಂಪ್ಯೂಟರ್‌ನಲ್ಲಿ ಕನ್ನಡ ಬಳಸುವವರು ಹೆಚ್ಚುತ್ತಿದ್ದಾರೆ ಎಂಬುದು ನಿಜವಾದರೂ ಅಗತ್ಯ ಸಂಖ್ಯೆಯಲ್ಲಿ ಹೆಚ್ಚುತ್ತಿಲ್ಲ. ಈ ಮಧ್ಯೆ ನಾವು ಕನ್ನಡ ಬಳಕೆಯನ್ನು ಸಾಧ್ಯತೆಯನ್ನು, ಸುಧಾರಣೆಯನ್ನು ಹಂಚಿಕೊಳ್ಳಬೇಕಿದೆ.
ನಾನು ವಿಂಡೋ ಎಕ್ಸ್‌ಪಿ ಬಳಸುತ್ತಿದ್ದೇನೆ (ಕನ್ನಡದ ಹೊದಿಕೆ). ಇಲ್ಲಿನ ಕೀಬೋರ್ಡ್ (ಇನ್‌ಸ್ಕಿಪ್ಟ್) ನಲ್ಲಿಯೂ ಕೆಲವು ಸಮಸ್ಯೆಗಳಿವೆ. ಕೋಲನ್, ಸೆಮಿಕೋಲನ್, ಪ್ರಶ್ನಾರ್ಥಕ ಚಿನ್ಹೆ, ಉಲ್ಲೇಖ ಚಿನ್ಹೆಗಳಿಗೂ ಇಂಗ್ಲೀಷ್‌ಗೆ ಬರಬೇಕು. ಅಲ್ಲದೆ ಜೀರೋ ವಿಡ್ತ್ ಜಾನಿಯರ್‌ಗೆ ಕಂಟ್ರೋಲ್‌ನೊಂದಿಗೆ ಮೂರು ಕೀ ಬಳಸಬೇಕು.
ಅಕಸ್ಮಿಕವಾಗಿ ನಾನು ಮೈಕ್ರೋಸಾಪ್ಟ್ ಕೀಬೋರ್ಡ್ ಲೇಔಟ್ ಕ್ರಿಯೇಟರ್ ಎಡವಿದೆ. (ಬಹುಶಃ ಕನ್ನಡದ ಲೋಕಲೈಜೇಷನ್‌ನಲ್ಲಿನ ಪವನಜ ಅವರ ಲಿಂಕ್ ಎಂದು ಕಾಣುತ್ತದೆ- ಇದು ಅದಿಕೃತ ವಿಂಡೋ ಎಕ್ಸ್‌ಪಿ ಬಳಸುವವರಿಗೆ ಡೌನ್‌ ಲೋಡ್‌ಗೆ ಲಭ್ಯವಿದೆ). ಇದನ್ನು ಬಳಸಿ ಮೇಲಿನವನ್ನು ಮುಖ್ಯ ಕೀಬೋರ್ಡ್‌ಗೆ ವರ್ಗಾಯಿಸಲು ಸಾಧ್ಯವಾಯಿತು. ಈಗ ಕನ್ನಡ ಟೈಪಿಸುವಾಗ ಇಂಗ್ಲೀಷ್‌ ಕೀಬೋರ್ಡ್‌ಗೆ ಬದಲಾಯಿಸುವ ಅಗತ್ಯವಿಲ್ಲ.
ಆದಾಗ್ಯೂ ಮೈಕ್ರೋಸಾಪ್ಟ್ ಒಂದು ಬಹುರಾಷ್ಟ್ರೀಯ ಕಂಪೆನಿ ಎಂಬುದನ್ನು ನಾವು ಮರೆಯ ಬಾರದು. ಲಾಭವಲ್ಲದೆ  ಯಾವ ಸಾಂಸ್ಕೃತಿ ಜವಾಬುದಾರಿಯನ್ನು ಅದರಿಂದ ನಿರೀಕ್ಷಿಸುವುದು ಸಾಧ್ಯವಾಗುವುದಿಲ್ಲ.

ವಿಂಡೋ ಎಕ್ಸ್‌‌ಪಿ ಕೊಂಡವರಿಗೆ ಹೊಸ ಮಾದರಿಯ ತುಂಗಾ ಪಾಂಟ್ ಕೊಡದಿರುವುದು (ಈ ಬಗೆಗಿನ ಭರವಸೆಯ ನಡುವೆಯೂ) ಅದರ ಕಾಳಜಿಯ ನೆಲೆಗಟ್ಟನ್ನು ಪ್ರದರ್ಶಿಸುತ್ತದೆ. ಹೀಗಾಗಿ ಅಂತ್ಯದಲ್ಲಿ ನಮಗೆ ಏನಿದ್ದರೂ ಓಪನ್ ಸೋರ್ಸ್ ಒಂದೇ ದಾರಿ. ಆದರೆ ಈ ಬಗೆಗಿನ ತಂತ್ರಾಶ ಸುಲಭ ಬಳಕೆ ಸಾಧ್ಯವಾಗುವವರೆಗೂ, ಕನ್ನಡದಲ್ಲಿ ಸುಲಭ ಬಳಕೆ ಅಸಾಧ್ಯ ಎಂಬ ಕಾರಣ ನೀಡಿ ಬಳಸದಿರುವ ಅಧಿಕಾರಶಾಹಿಗಳು (ಇಂಗ್ಲೀಷ್ ಪರ ವಾದಿಗಳು) ಹೆಚ್ಚಾಗಿದ್ದಾರೆ ಎಂಬುದನ್ನು ಸಹ ನಾವು ಮರೆಯಬಾರದು.
ಆಸಕ್ತಿದಾಯಕ ಅಂಶವೆಂದರೆ ಈಗ ಕನ್ನಡದ ಎರಡು ಪತ್ರಿಕೆಗಳು ಇ-ಪೇಪರ್ ಹೊರತಂದಿವೆ. ಆದರೆ ಅಲ್ಲಿ ಪದ ಹುಡುಕುವುದು ಸುಲಭವಲ್ಲ. (ಅವರೆಲ್ಲರೂ ಬೇರೆ ಬೇರೆ ಪಾಂಟ್ ಉಪಯೋಗಿಸುತ್ತಾರೆ) ಭಿನ್ನ ಭಿನ್ನ ಪಾಂಟ್ ಬಳಸುವ ಬದಲು ಯುನಿಕೋಡ್ ಪಾಂಟ್‌ಗಳನ್ನೇ ಅಭಿವೃದ್ಧಿ ಪಡಿಸಿ ಕೊಡಬಹುದಾಗಿತ್ತು. (ವಿಂಡೋ ಎಕ್ಸ್‌ಗಿಂತ ಹಿಂದಿನ ವಿಂಡೋ ಆವೃತ್ತಿಗಳನ್ನು ಬಳಸುತ್ತಿರುವವರ ಬಗೆಗಿನ ಸಮಸ್ಯೆಗೆ ಬೇರೆ ಪರಿಹಾರವಿಲ್ಲವೇ?) ತಕ್ಷಣದ ಪ್ರಜಾವಾಣಿಯ ಬಗೆಗಿನ ಪರಿಹಾರವೆಂದರೆ ವಾಸು ಅವರು ಕೊಡುವ ಕನ್‌ವರ್ಟ್‌ರ್ ಬಳಸಿ ಯುನಿಕೋಡ್‌ನಿಂದ ಬರಹಕ್ಕೂ ನಂತರ ಡೆಕ್ಕ್‌ನ್ ಶ್ರೀ ಪಾಂಟ್‌ಗೂ ಪರಿವರ್ತಿಸಿ ಹುಡುಕುವುದು. ಅದು ಅಷ್ಟು ಸಮಂಜಸವಾಗಿ ಕೆಲಸ ಮಾಡುತ್ತಿದ್ದಂತೆ ಭಾಸವಾಗುವುದಿಲ್ಲವಾದರೂ ಏನು ಇಲ್ಲದಿರುವುದಕ್ಕಿಂತ ಮೇಲು.
ಅದಕ್ಕಿಂತ ಹೆಚ್ಚಾಗಿ ಅಲ್ಲಿ ಬಳಸುವ ಅಡೋಬ್ ರೀಡರ್ (PDF) ಕನ್ನಡ ಯುನಿಕೋಡ್‌ನ್ನಾಗಲಿ, ಹುಡುಕುನಲ್ಲಿ ಪೋಸ್ಟ್‌ಕ್ರಿಪ್ಟ್ ಫಾಂಟ್‌ನ್ನಾಗಲಿ ತೋರಿಸಲಾರದು. ಅಷ್ಟು ವಿಸೃತವಾಗಿ ಅದನ್ನು ಕನ್ನಡಕ್ಕೆ ಬಳಸುತ್ತಿದ್ದಾಗ ಈ ಬಗೆಗಿ ಕಂಪೆನಿಯನ್ನು ಕೇಳಬಹುದಾಗಿತ್ತೇನೋ. ಈ ಕಂಪೆನಿ ಹಲವು ಭಾಷೆಗಳ ಬೆಂಬಲಕ್ಕೆ ಪೂರಕ ತಂತ್ರಾಶ ಬಿಡುಗಡೆ ಮಾಡಿದೆಯಾದರೂ ಅದರಲ್ಲಿ ಕನ್ನಡವಿಲ್ಲ. (ಯಾವುದೇ ಭಾರತೀಯ ಭಾಷೆ ಇಲ್ಲ). ಈ ಬಗೆಗೆ ಕನ್ನಡ ಪತ್ರಿಕೆಗಳಾವುವೂ ತಲೆಕೆಡಿಸಿಕೊಂಡಂತೆಯೂ ಕಾಣುತ್ತಿಲ್ಲ. ವಾಸ್ತವದಲ್ಲಿ ಸಾಂಸ್ಕೃತಿಕ ಜವಾಬುದಾರಿಯೆಂದರೆ ಇದೇ ಎಂದು ನನ್ನ ಗ್ರಹಿಕೆ.
ಇಂತಹ ಪ್ರಶ್ನೆಗಳ ಬಗೆಗೆ ನಾವು ಗಂಭೀರವಾಗಿ ಪರಿಗಣಿಸುವುದು ಯಾವಾಗ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಗಣಕ ಯಂತ್ರದಲ್ಲಿ ಕನ್ನಡ ಅಳವಡಿಕೆ By: nataraj (15 replies) September 6, 2006 - 2:55pm
  • ನೂರಾರು ಫಾಂಟ್‌ಗಳೆಲ್ಲಿ? By: pavanaja (Nov 10 2006 - 3:50pm)
  • ನನಗೊಂದು ನಕಲು By: ಸಂಗನಗೌಡ (Oct 16 2006 - 4:40pm)
  • ಕಂಪ್ಯೂಟರ್‌ನಲ್ಲಿ ಕನ್ನಡದ ಬಳಕೆ By: ಪ್ರದೀಪ್ ಬೆಳಗಲ್ (Sep 19 2006 - 8:17am)
    • ನೂರಾರು ಓಪನ್‌ಟೈಫ್ ಫಾಂಟ್‌ಗಳು By: pavanaja (Oct 16 2006 - 3:21pm)
      • ಉ: ನೂರಾರು ಓಪನ್‌ಟೈಫ್ ಫಾಂಟ್‌ಗಳು By: Sunil Jayaprakash (Nov 10 2006 - 12:50pm)
      • ಫಾಂಟುಗಳ ಮಾಹಿತಿಗಾಗಿ ಸವಿಯೊದಗು By: Sunil Jayaprakash (Oct 16 2006 - 5:27pm)
    • ಸಹಾಯ By: nataraj (Oct 1 2006 - 6:45am)
      • ಒತ್ತಕ್ಷರ ಹಾಗೂ ಅರ್ಧ ಅಕ್ಷರ By: ಪ್ರದೀಪ್ ಬೆಳಗಲ್ (Oct 1 2006 - 12:32pm)
        • ಒತ್ತಕ್ಷರ ಬೇಡವಾದಲ್ಲಿ ... By: pavanaja (Oct 1 2006 - 3:31pm)
    • ಹೊಸ ತುಂಗಾ ಫಾಂಟ್ By: Aravinda (Sep 26 2006 - 6:56pm)
  • ನನಗೆ ಕಳಿಸಿ By: shreekant.mishrikoti (Sep 6 2006 - 3:28pm)
    • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ By: pavanaja (Sep 7 2006 - 10:12am)
      • ನಿಮ್ಮ ಲೇಖನ By: nataraj (Sep 7 2006 - 3:11pm)
        • ಕನ್ನಡದ pdf ನನಗೂ ಕಳಿಸಿ By: Aravinda (Sep 25 2006 - 6:12pm)
  • ನನಗೆ ಕಳಿಸಿ By: shreekant.mishrikoti (Sep 6 2006 - 3:27pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:23am
  • hariharapurasridhar
    ಉ: ಹಂಸನಾದ
    January 9, 2009 - 6:23am
  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:18am
  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:15am
  • hamsanandi
    ಉ: ಹಂಸನಾದ
    January 9, 2009 - 4:27am
  • srivathsajoshi
    ಉ: ಹಂಸನಾದ
    January 9, 2009 - 3:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 1:11am
  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator