ತಲೆಯಿದ್ದವರಿಗೆ ಹೆಲ್ಮೆಟ್ ಬೇಕು. ತಲೆಯಿಲ್ಲದೇ ಬರೀ ಬುರುಡೆ ಇರುವವರಿಗೂ ಹೆಲ್ಮೆಟ್ ಬೇಕು. ಹೇರ್ ಸ್ಟೈಲ್ ಹಾಳಾಗುತ್ತದೆ, ತಲೆನೋವು ಬರುತ್ತದೆ, ಕಳೆದು ಹೋಗುತ್ತದೆ, ಹೊತ್ತು ಕೊಂಡು ಹೋಗಲು ಭಾರ - ಇತ್ಯಾದೆ ಸಬೂಬು ಕೊಡಬಹುದು. ನಮ್ಮ ತುರುಬೇ ಒಂದು ಹೆಲ್ಮೆಟ್ ಹಾಗಿದೆ, ಅದರ ಮೇಲೆ ಇನ್ನೊಂದು ಯಾಕೆ ಎಂದು ಕೆಲವು ನಾರೀಮಣಿಯರು ಉವಾಚಿಸಬಹುದು. ಆದರೆ ಅಪಘಾತರಾಯ ಹೆಲ್ಮೆಟ್ ಇಲ್ಲದವರಿಗೆ ವಿನಾಯತಿಯನ್ನು ಕೊಡುವುಧಿಲ್ಲ. ಇದೊಂದು ರೀತಿ `ಆಲ್ ಆರ್ ನನ್ ಫೆನಾಮಿನ`. ಹಾಗಾಗಿ ರಾಜಕಾರಣಿಗಳ ರಾಜಕೀಯಕ್ಕೆ ಬೆಲೆ ಕೊಡದೆ ಹೆಲ್ಮೆಟ್ ಹಾಕಿಕೊಂಡುಬಿಡಿ.
`ಆಲ್ ಆರ್ ನನ್ ಫೆನಾಮಿನ`