ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ವ್ಯತ್ಯಾಸವಿದೆ

September 21, 2006 - 7:33am — benaka

ವ್ಯತ್ಯಾಸವಿದೆ

benaka's picture

ಸಂಗನಗೌಡರೆ,
ನೀವೆಂದುಕೊಂಡದ್ದಕ್ಕೂ ನಾನು ಬರೆದದ್ದಕ್ಕೂ ಸ್ವಲ್ಪ ವ್ಯತ್ಯಾಸವಿದೆ:
ತಮಿಳಿನ 'ಎತ್ತಣೈ' ಕನ್ನಡದ 'ಎಷ್ಟು' ಎಂಬರ್ಥದಲ್ಲ್ಲಿ ಬಳಸಲ್ಪಡುತ್ತದೆ; ಆದರೆ, 'ಎತ್ತಣೈ' ಕನ್ನಡದ 'ಎತ್ತ'ವಾಗಿ ಉಳಿದಿರಬಹುದಾದ್ದರಿಂದ ದೂರವಾಚಕವಾಗಿ ಬಳಸಲ್ಪಡುತ್ತದೆ ಎಂದು ಹೇಳುವುದು ನನ್ನ ಉದ್ದೇಶ. 'ಎತ್ತ' = 'ಎಷ್ಟು ದೂರ' ಎಂದಲ್ಲ! 'ಎತ್ತ' = 'ಎಲ್ಲಿ' ಎಂದೇ ಬಳಕೆಯಲ್ಲಿರುವುದು! ಇನ್ನೂ ಸರಿಯಾಗಿ ಹೇಳಬೇಕೆಂದರೆ, ಈಗ ಅಷ್ಟೇನೂ ಬಳಕೆಯಲ್ಲಿಲ್ಲದ 'ಎತ್ತಣ' -> 'ಎತ್ತ'ವಾಗಿದೆ.
ಆದ್ದರಿಂದ:


ಎತ್ತಣೈ -> ಎತ್ತಣ -> ಎತ್ತ ಹೀಗಾಗಿರುವ ಸಾಧ್ಯತೆ ಹೆಚ್ಚು. ಆದರೆ ಅರ್ಥ ಮಾತ್ರ ಎಷ್ಟು -> ಯಾವ ಕಡೆ -> ಎಲ್ಲಿ ಎಂದಾಗಿದೆ.
ಹಾಗೆಯೇ,
ಎಣೈತ್ತು -> ಎಣಿತು -> ಎನಿತು ಆಗಿರುವ ಸಾಧ್ಯತೆಯೇ ಹೆಚ್ಚು. ಇಲ್ಲಿ ಅರ್ಥ 'ಎಷ್ಟು' ಎಂದೇ ಉಳಿದುಕೊಂಡಿದೆ.

ಇಲ್ಲಿಂದ ಮುಂದೆ:
ಎನಿತು -> ಎಂತು, ಏಸು, ಎಷ್ಟು ಎಂದೆಲ್ಲಾ ಬದಲಾಗಿರಬಹುದು. ಹಳೆಗನ್ನಡದಲ್ಲಿ 'ಎಷ್ಟು' = ಎನಿತು ಆಗಿತ್ತೆಂಬುದಕ್ಕೆ ಇನ್ನೊಂದು ಪ್ರಸಿದ್ಧ ಉದಾಹರಣೆ ನೋಡಿ:

"ಹದಿಬದೆಯರೆನಿಬರೋ..." = ಹದಿಬದೆಯರು + 'ಎನಿಬರೋ' = ಪತಿವ್ರತೆಯರು + ಎಷ್ಟು ಜನರೋ!
ಓರ್ವ, ಈರ್ವರು, ಮೂವರು, ನಾಲ್ವರು, ಐವರು ಇದ್ದಂತೆ 'ವರು' ಪ್ರತ್ಯಯ ಸೇರಿದ 'ಎನಿತು', 'ಎನಿಬರು' ಆಗಿರುವುದನ್ನು ಗಮನಿಸಿ!

ಅಂದಹಾಗೆ, ನೇರ ಪ್ರಶ್ನೆ: ಕನ್ನಡದ ಮೇಲೆ ಸಂಸ್ಕೃತವನ್ನು ಬಲವಂತವಾಗಿ ಹೇರಲಾಯಿತು ಎಂಬ ನಿಮ್ಮ ಹೇಳಿಕೆಗೆ ಸಾಕ್ಷಿಯೇನಾದರೂ ಇದ್ದರೆ ತೋರಿಸಿ. ತಿಳಿಯಲು ನನಗೂ ಕುತೂಹಲವಿದೆ. ಆಂಗ್ಲರ ಅಭಿಪ್ರಾಯವಾಗಲೀ, ಅವರ ನೆರಳಲ್ಲಿ ಬೆಳೆದ ವಿಚಾರವಾದಿಗಳ ಅಭಿಪ್ರಾಯಗಳಾಗಲೀ, ಅನಿಸಿಕೆಗಳೇ ಹೊರತು ಸಾಕ್ಷಿಗಳಲ್ಲ. 'ಬಲವಂತವಾಗಿ ಹೇರಲಾಯಿತು' ಎಂಬ ನಿಮ್ಮ ವಾದಕ್ಕೆ ಬಲವಾದ ಆಧಾರವೇನೆಂಬುದನ್ನು ನಾನು ತಿಳಿಯಲಿಚ್ಛಿಸುತ್ತೇನೆ.
ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡದಲ್ಲಿನ ಒತ್ತಕ್ಷರಗಳು By: Sunil Jayaprakash (20 replies) September 14, 2006 - 10:02am
  • ಉ: ಕನ್ನಡದಲ್ಲಿನ ಒತ್ತಕ್ಷರಗಳು By: kannadakanda (May 7 2008 - 12:35am)
  • ಆಯಿತು By: ಸಂಗನಗೌಡ (Sep 22 2006 - 9:28pm)
    • ವರ್ಣಗಳು ಐವತ್ತೇ By: benaka (Sep 25 2006 - 7:17am)
  • ವ್ಯತ್ಯಾಸವಿದೆ By: benaka (Sep 21 2006 - 7:33am)
    • ಸಕ್ಕದದ ಹೇರಿಕೆಗೆ ಪುರಾವೆ By: ಸಂಗನಗೌಡ (Sep 21 2006 - 9:22pm)
      • ತಳದ ಅಕ್ಕರ ಎಂದರೇನು? By: benaka (Sep 22 2006 - 6:16am)
        • ತಳ = ಮೂಲ By: ಸಂಗನಗೌಡ (Sep 22 2006 - 11:08am)
          • ಹೇಗಾದೀತು? By: benaka (Sep 22 2006 - 12:07pm)
            • ತಳ=ಬುಡು=ಬಡ್ಡಿ By: ಸಂಗನಗೌಡ (Sep 22 2006 - 4:11pm)
              • ಕನ್ನಡ ಕಸ್ತೂರಿ.ಕಾಂ By: benaka (Sep 22 2006 - 6:21pm)
  • ಆಸೊಟ್ಟು = ಆಟು By: ಸಂಗನಗೌಡ (Sep 20 2006 - 10:16pm)
  • ಸಂಯುಕ್ತಾಕ್ಷರಗಳು By: benaka (Sep 14 2006 - 2:16pm)
    • ಹೆಮ್ಮೆಯ ವಿಚಾರವಿದು, ಮರೆಯುವಂತಿಲ್ಲ By: Sunil Jayaprakash (Sep 14 2006 - 6:09pm)
      • ಬರಹ ಮತ್ತು ಆಡು ಮಾತು,ಒತ್ತಕ್ಕರ ಮತ್ತು ಸಮ್ಮುಕ್ಕರ By: ಸಂಗನಗೌಡ (Sep 15 2006 - 10:21am)
        • ಅಷ್ ಟು != ಅಷ್ಟು By: Sunil Jayaprakash (Sep 18 2006 - 4:35pm)
  • ಸಬ್ದಸಂಪತ್ತು ಮತ್ತು ಉದಾರದೃಷ್ಟಿ By: shreekant.mishrikoti (Sep 14 2006 - 1:03pm)
    • ಪದಸಂಪತ್ತು By: ಸಂಗನಗೌಡ (Sep 15 2006 - 9:39am)
  • ಸಬ್ದಸಂಪತ್ತು ಮತ್ತು ಉದಾರದೃಷ್ಟಿ By: shreekant.mishrikoti (Sep 14 2006 - 1:38pm)
  • 'ಏಸು' ಕಾಯಂಗಳ By: shreekant.mishrikoti (Sep 14 2006 - 12:22pm)
  • ಆಸು, ಈಸು, ಏಸು By: ಸಂಗನಗೌಡ (Sep 14 2006 - 12:06pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
ಇನ್ನಷ್ಟು


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator