ನಿಮ್ಮ ಬರಹ ನೋಡಿ ನಾನು ರಷ್ಯನ್ ಅಭ್ಯಸಿಸುತ್ತಿದ್ದ ಕಾಲ ನೆನಪಾಯಿತು! ಯಾರ್ಗೋ ತಲೆನೋವ್, ಮೈಕೈನೋವ್, ಕೈಕಾಲ್ ಹಿಸ್ಕಿ, ಗುರೂಬಚಾವ್, ಇವನೇನ್ಹೆಚ್ ಇತ್ಯಾದಿ ಪದಗಳನ್ನಾಡಿಕೊಂಡು ನಾವು ನಗಾಡುತ್ತಿದ್ದ ಕಾಲೇಜುದಿನಗಳ ನೆನಪಾಯಿತು. 'ಟೂಂಬ್ ರೈಡರ್' ಚಿತ್ರ ನೋಡುವಾಗ ಸೈಬೀರಿಯದಲ್ಲಿ, ನಾಯಕಿ ಅಂಜಲಿನಾ ಜೂಲಿಗೆ ರಷಿಯನ್ ಹುಡುಗಿಯೊಬ್ಬಳು ಪ್ರತ್ಯಕ್ಷವಾಗಿ ಏನನ್ನೋ ಹೇಳುತ್ತಾ 'ತ್ವಾಯ್ ಅಚ್ಯತ್ಸ್' ಎಂದಾಗ ಪಕ್ಕದಲ್ಲಿದ್ದ ಗೆಳತಿ ನನ್ನನ್ನು ತಿವಿದು ಏನು ಹಾಗೆಂದರೆ ಎಂದು ಕೇಳಿದರೆ ನಾನು "ಅವರಪ್ಪ ಅಚ್ಯುತನಂತೆ" ಎಂದದ್ದು ನೆನಪಿಸಿಕೊಂಡು ಅವಳಿನ್ನೂ ಬಿದ್ದು ಬಿದ್ದು ನಗುತ್ತಾಳೆ. ಅಂದಹಾಗೆ "ತ್ವಾಯ್ ಅಚ್ಯತ್ಸ್" ಎಂದರೆ 'ನಿನ್ನ ತಂದೆ' ಎಂದರ್ಥ.
ಇನ್ನೊಮ್ಮೆ ಜಪಾನಿನಲ್ಲಿ ರಷಿಯನ್ ಹುಡುಗಿಯರೊಡನೆ ರಷಿಯನ್ ಹಾಗೂ ಸಂಸ್ಕೃತದ ಸಾಮ್ಯತೆಗಳ ಬಗ್ಗೆ ಜಪಾನೀಭಾಷೆಯಲ್ಲಿ ಚರ್ಚಿಸುತ್ತಿದ್ದಾಗ ಅವರ ಹೆಸರನ್ನು ಸ್ಪಷ್ಟವಾಗಿ ಉಚ್ಚರಿಸುವ ನನ್ನ ಬಗ್ಗೆ ಅವರಿಗೆ ಅಚ್ಚರಿ! ನಿಮಗೆ ರಷಿಯನ್ ಇಷ್ಟವೇ? ಎಂದಾಗ "ದಾ! ಯಾ ಲೂಬ್ಲ್ಯೂ ರೂಸ್ಕೀ" (ಹೌದು, ರಷಿಯನೆ ಭಾಷೆ ನನಗಿಷ್ಟ) ಎಂದಾಗಲಂತೂ ಅವರ ಸಂತಸ ಹೇಳತೀರದು!
ಅವರಪ್ಪ ಅಚ್ಯುತನಂತೆ!

ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.