ಪದ ಎನ್ನುವುದು ಸಂಸ್ಕೃತದ ಪದ. ಪದಕ್ಕೆ ಸರಿಯಾಗಿ ಬಳಸಬಹುದಾದ ಕನ್ನಡ ಪದ ಒರೆ.
ಹಾಗಾಗಿ, ಸಕ್ಕರೆ(ಸಂಸ್ಕೃತ) ಇಲ್ಲದಿದ್ದರೇನಂತೆ,ಜೇನು(ಕನ್ನಡ)ಎಂದೂ ಕಹಿಯಾಗುವುದಿಲ್ಲ. ಕನ್ನಡ ಎಂದೆಂದಿಗೂ ಸಿಹಿತೊರೆಯೇ ಹೌದು.
ಓ, ಗೆಳತಿ, ನಿನಗೆ ಈ ಸತ್ಯವನ್ನು ಹೇಳುವೆನು ಕೇಳು, ಪದಗಳ(ಸಂಸ್ಕೃತವನ್ನು) ಹುಡುಕಾಟ ಬಿಟ್ಟು, ಒರೆಗಳ ಹಣತೆ ಹಚ್ಚು(ಹಚ್ಚೇವು ಕನ್ನಡದ ದೀಪ). ಆಗ ಬರುವ ಬೆಳಕು ನಿನ್ನನ್ನು (ನಮ್ಮನ್ನು) ಒಲವಿನ ತೋಟಕ್ಕೆ ಕರೆದೊಯ್ಯುವುದು.
ಉ : ಮೌನ
ಯಪ್ಪಾ, ಇದು ಬೆಳದಿಂಗಳ ಬಾಲೆಯನ್ನು ನೆನಪಿಸುತ್ತಿದೆಯಲ್ಲಾ.
ಪದಗಳು ಒದಗುತ್ತಿಲ್ಲ ಮನ ಬಣ್ಣಿಸಲು
ಪದಗಳು ಸಹಕರಿಸುತ್ತಿಲ್ಲ ಮನ ತಣಿಸಲು
ಈ ಪದಬಂಧ ಬಿಡಿಸಿ ಹೇಳು ಗೆಳೆಯ
ಇದಕ್ಕೆ ನನ್ನ ಉತ್ತರ ನೀಡುತ್ತಿದ್ದೇನೆ. ಬೆನಕ ಮುಂತಾದ ಕವಿಗಳಲ್ಲಿ ಕ್ಷಮೆಯನ್ನು ಬೇಡುತ್ತಾ.
ಸಕ್ಕರೆಯು ಸೇರದಿರ್ಪೇನು ಜೇನು ಕಹಿಯೇ,
ಸಿಹಿತೊರೆಯ ತೋರ್ವೆನು ಗೆಳತಿ ಇಲ್ಲಿಯೇ.
ಓ ಗೆಳತಿ ಪದಗಳನು ಅರಸುವೆಯೇಕೆ,
ಹಚ್ಚು ನೀ, ಒರೆಗಳ ಹಣತೆ.
ಕರೆದೊಯ್ವುದದು ನಮ್ಮನು ಒಲವತೋಟಕೆ.
ಹಿನ್ನೆಲೆ
ಪದ ಎನ್ನುವುದು ಸಂಸ್ಕೃತದ ಪದ. ಪದಕ್ಕೆ ಸರಿಯಾಗಿ ಬಳಸಬಹುದಾದ ಕನ್ನಡ ಪದ ಒರೆ.
ಹಾಗಾಗಿ,
ಸಕ್ಕರೆ(ಸಂಸ್ಕೃತ) ಇಲ್ಲದಿದ್ದರೇನಂತೆ, ಜೇನು(ಕನ್ನಡ) ಎಂದೂ ಕಹಿಯಾಗುವುದಿಲ್ಲ. ಕನ್ನಡ ಎಂದೆಂದಿಗೂ ಸಿಹಿತೊರೆಯೇ ಹೌದು.
ಓ, ಗೆಳತಿ, ನಿನಗೆ ಈ ಸತ್ಯವನ್ನು ಹೇಳುವೆನು ಕೇಳು, ಪದಗಳ(ಸಂಸ್ಕೃತವನ್ನು) ಹುಡುಕಾಟ ಬಿಟ್ಟು, ಒರೆಗಳ ಹಣತೆ ಹಚ್ಚು(ಹಚ್ಚೇವು ಕನ್ನಡದ ದೀಪ). ಆಗ ಬರುವ ಬೆಳಕು ನಿನ್ನನ್ನು (ನಮ್ಮನ್ನು) ಒಲವಿನ ತೋಟಕ್ಕೆ ಕರೆದೊಯ್ಯುವುದು.
ಮತ್ತೊಮ್ಮೆ ಕೇಳುತ್ತಿದ್ದೇನೆ, ದಿಟಕಬ್ಬಿಗರು ಕ್ಷಮಿಸಬೇಕು.